Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
2019ರಲ್ಲಿ ಯಾವ್ಯಾವ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ಯಾವುದು ಗೊತ್ತಾ?
ಅದೃಷ್ಟ ಎನ್ನುವುದು ನಮ್ಮ ಭವಿಷ್ಯವನ್ನು ಸುಲಭವಾಗಿ ಬದಲಿಸುವುದು. ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಸಂಗತಿಯನ್ನು ಪಡೆದುಕೊಳ್ಳುವೆವು. ಅದೇ ದುರಾದೃಷ್ಟವಾಗಿದ್ದರೆ ಅನಿರೀಕ್ಷಿತವಾಗಿ ಬರುವ ಸಂಗತಿಯಿಂದ ಸಾಕಷ್ಟು ನೋವು ಹಾಗೂ ಮಾನಸಿಕ ನೆಮ್ಮದಿ ಹಾಳಾಗುವುದು. ಒಟ್ಟಿನಲ್ಲಿ ಅನಿರೀಕ್ಷಿತವಾಗಿ ಬಂದು ನಮ್ಮ ನಿರೀಕ್ಷೆಗೂ ನಿಲುಕದಂತಹ ಸಂಗತಿ ನಡೆದುಹೋಗುವುದು. ನಾಳೆ ಎನ್ನುವುದನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏನು ಸಂಭವಿಸುವುದು ಎನ್ನುವುದು ನಮಗೆ ತಿಳಿದಿಲ್ಲ. ಕೇವಲ ದೈವ ಶಕ್ತಿಯ ಮೇಲೆ ನಂಬಿಕೆಯಿಟ್ಟು ನಡೆಯಬೇಕು ಅಷ್ಟೆ.
ಬಹುತೇಕ ಮಂದಿ ಅದೃಷ್ಟ ಇದ್ದರೆ ತಾನಾಗಿಯೇ ಎಲ್ಲವೂ ದೊರೆಯುವುದು. ಅದಕ್ಕಾಗಿ ನಾವೇನು ಮಾಡಬೇಕೆಂದಿಲ್ಲ ಎಂದು ಸುಮ್ಮನಾಗುತ್ತಾರೆ. ಕೇವಲ ಅದೃಷ್ಟವೊಂದೇ ನಮ್ಮ ಕೈ ಹಿಡಿಯುವುದಿಲ್ಲ. ನಾವು ತೋರುವ ಶ್ರಮ ಹಾಗೂ ತಲ್ಲೀನತೆಯು ಎಷ್ಟರ ಮಟ್ಟಿಗೆ ಇದೆ ಎನ್ನುವುದರ ಮೇಲೆ ಜೀವನವು ನಿರ್ಧಾರವಾಗುವುದು. ಅದೃಷ್ಟವು ನಮ್ಮ ಕೈಹಿಡಿಯುವುದು. ಅದೃಷ್ಟವನ್ನು ನಮ್ಮ ಕಡೆ ತಿರುಗಿಸಿಕೊಳ್ಳುವ ಸಲುವಾಗಿಯಾದರೂ ಒಂದಿಷ್ಟು ಪ್ರಯತ್ನಗಳು ಹಾಗೂ ಶ್ರಮವನ್ನು ವಹಿಸಬೇಕು. ಆಗ ಎಲ್ಲವೂ ಸುಲಭವಾಗಿ ದೊರೆಯುವುದು.

2019ರ ವರ್ಷ
2019ರ ವರ್ಷವು ವಿಶೇಷ ಬಗೆಯ ಗ್ರಹಗಳ ಸಂಚಾರವನ್ನು ಒಳಗೊಂಡಿದೆ. ಗ್ರಹಗಳ ಪರಿವರ್ತನೆ ಹಾಗೂ ರಾಶಿಚಕ್ರಗಳ ವಿಶೇಷ ಮನೆಯ ಆಳ್ವಿಕೆಯ ಪ್ರಭಾವ ನಮ್ಮ ಮೇಲೆ ನೇರ ಪರಿಣಾಮವನ್ನುಂಟುಮಾಡುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರು ಅವರವರ ರಾಶಿಚಕ್ರಗಳಿಗೆ ಅನುಗುಣವಾಗಿ ಒಂದು ವಿಶೇಷವಾದ ಅದೃಷ್ಟದ ಬಣ್ಣಗಳನ್ನು ಒಳಗೊಂಡಿರುತ್ತಾರೆ. ಅವು ಆಯಾ ರಾಶಿಚಕ್ರವನ್ನು ಆಳುವ ಗ್ರಹಗಳ ಬಣ್ಣಗಳಾಗಿರುತ್ತವೆ ಎಂದು ಹೇಳಲಾಗುವುದು. ಆ ಬಣ್ಣದ ವಸ್ತು ಅಥವಾ ಉಡುಗೆಯನ್ನು ವ್ಯಕ್ತಿ ತೊಟ್ಟಿದ್ದರೆ ಅಥವಾ ಹೊಂದಿದ್ದರೆ ಸಾಕಷ್ಟು ಅದೃಷ್ಟಗಳು ನಿಮ್ಮ ಪರವಾಗಿ ಓಡಿ ಬರುವುದು ಎಂದು ಹೇಳಲಾಗುವುದು.

ಬೆಲೆಬಾಳುವ ಉಡುಗೆಯೇ ಆಗಿರಬೇಕು ಎಂದೇನು ಇಲ್ಲ!
ಅದೃಷ್ಟ ಉಡುಗೆ ಎಂದಾಕ್ಷಣ ಅದು ಬೆಲೆಬಾಳುವ ಉಡುಗೆಯೇ ಆಗಿರಬೇಕು ಎಂದೇನು ಇಲ್ಲ. ನೀವು ಹಿಡಿದಿರುವ ಕರ ವಸ್ತ್ರ, ಒಳುಡುಗೆ ಅಥವಾ ಹೊರ ಉಡುಗೆ, ನೀವು ಹೊಂದಿರುವ ಬ್ಯಾಗ್ ಅಥವಾ ಇನ್ಯಾವುದೇ ವಸ್ತುಗಳು ಅದೃಷ್ಟದ ಬಣ್ಣವನ್ನು ಹೊಂದಿದ್ದರೆ ಆಯಿತು. ಎಲ್ಲವೂ ಶುಭಕರವಾಗಿ ತಿರುಗುವುದು. ನಿಮ್ಮ ಶ್ರಮ ಅಲ್ಪವಾಗಿದ್ದರೂ ಫಲಿತಾಂಶದಲ್ಲಿ ಉತ್ತಮ ಹಾಗೂ ಅದೃಷ್ಟವು ನಿಮ್ಮ ಪರವಾಗಿ ನಿಲ್ಲುವುದು ಎನ್ನಲಾಗುತ್ತದೆ. ಹಾಗಾಗಿ ನೀವು ಏನೇ ಶುಭಕರವಾದ ಕೆಲಸಕ್ಕೆ ಮುಂದಾಗುವಾಗ ನಿಮ್ಮ ಅದೃಷ್ಟದ ಬಣ್ಣ ಯಾವುದು? ಆ ಬಣ್ಣದ ಉಡುಗೆ ಅಥವಾ ವಸ್ತುವನ್ನು ನೀವು ಹೊಂದಿದ್ದೀರೆ? ಎನ್ನುವುದನ್ನು ತಿಳಿದು ಹೆಜ್ಜೆ ಇಡಿ.

ರಾಶಿಚಕ್ರಗಳಿಗೆ ಅನುಗುಣವಾಗಿ ಯಾವ ಬಗೆಯ ಅದೃಷ್ಟದ ಬಣ್ಣ ನಿಮ್ಮದು?
ನಿಮಗೂ ಈ ಸಂಗತಿ ಒಂದು ಬಗೆಯಲ್ಲಿ ಹೊಸತು ಹಾಗೂ ಕುತೂಹಲವನ್ನು ಮೂಡಿಸುತ್ತಿದೆ, ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವ ಬಗೆಯ ಅದೃಷ್ಟದ ಬಣ್ಣ ನಿಮ್ಮದು? ಅದರಿಂದ ಯಾವ ಬಗೆಯಲ್ಲಿ ಒಳಿತನ್ನು ಅನುಭವಿಸುವಿರಿ? ಅದಕ್ಕಾಗಿ ನಿಮ್ಮ ಪ್ರಯತ್ನ ಹೇಗಿರಬೇಕು? ಕಾಳಜಿಯ ಕುರಿತು ಹೇಗಿರಬೇಕು? ನಿಮ್ಮವರ ಅದೃಷ್ಟದ ಬಣ್ಣದ ಬಗ್ಗೆಯೂ ನೀವು ತಿಳಿಯಬೇಕು, ಎನ್ನುವಂತಹ ಅನೇಕ ಮನದಿಂಗಿತಗಳನ್ನು ಹೊಂದಿದ್ದೀರಿ ಎಂದಾದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಮೇಷ ರಾಶಿಯವರು ಸಾಮಾನ್ಯವಾಗಿ ಧೈರ್ಯವಂತರು ಹಾಗೂ ಉತ್ಸಾಹಿಗಳು ಎಂದು ಹೇಳಲಾಗುವುದು. ಬೆಂಕಿಯ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರದವರು ಇವರು. ಎಲ್ಲಾ ವಿಷಯದಲ್ಲೂ ತಕ್ಷಣ ಹಾಗೂ ಶ್ರಮವನ್ನು ಅನುಸರಿಸುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ 2019ರಲ್ಲಿ ಅದೃಷ್ಟದ ಬಣ್ಣ ಎಂದರೆ ಸಮುದ್ರ ಬಣ್ಣದ ನೀಲಿ ಬಣ್ಣ ನಿಮಗೆ ಈ ವರ್ಷ ಹೆಚ್ಚಿನ ಅದೃಷ್ಟ ತಂದುಕೊಡುವುದು. ಈ ಹಿಂದಿನಿಂದ ಅನುಭವಿಸಿಕೊಂಡು ಬರುತ್ತಿದ್ದ ಸಮಸ್ಯೆಗಳು ನಿಮ್ಮನ್ನು ಇನ್ನೂ ಕಾಡುತ್ತಿದೆ ಎಂದಾದರೆ ನೀವು ಸಮುದ್ರ ನೀಲಿ ಬಣ್ಣದ ವಸ್ತ್ರವನ್ನು ಕೈಗೆ ಕಟ್ಟಿಕೊಳ್ಳಿ ಅಥವಾ ಆ ಬಣ್ಣದ ಉಡುಗೆಯನ್ನು ಧರಿಸಿ. ಆಗ ಎಲ್ಲಾ ಸಂಗತಿಯು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ವರ್ಷದ ದ್ವಿತೀಯಾರ್ಧದಲ್ಲಿ ನಿಧಾನವಾಗಿ ಅಚ್ಚನೀಲಿ/ರಾಯಲ್ ಬ್ಲೂ ಬಣ್ಣಕ್ಕೆ ಬದಲಾಗುವುದು. ಆಗ ನಿಮ್ಮ ಆಯ್ಕೆ ಹಾಗೂ ವಸ್ತ್ರದ ಪೆಟ್ಟಿಗೆಯಲ್ಲಿ ಈ ಬಣ್ಣದ ಉಡುಗೆಯನ್ನು ಹೊಂದಿರಿ. ಅದೃಷ್ಟವು ವರ್ಷ ಪೂರ್ತಿ ನಿಮ್ಮ ಪರವಾಗಿ ನಿಲ್ಲುವುದು.

ವೃಷಭ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಭೂಮಿಯ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರ ವೃಷಭ ರಾಶಿ. ಈ ರಾಶಿಯ ವ್ಯಕ್ತಿಗಳು ಅತ್ಯಂತ ಮೃದು ಹಾಗೂ ಸಹನಾ ಶೀಲರಾಗಿರುತ್ತಾರೆ. ಸ್ಥಿರ ಬುದ್ಧಿಯನ್ನು ಹೊಂದಿರುತ್ತಾರೆ. ಇವರಿಗೆ 2019ರ ಅದೃಷ್ಟ ಬಣ್ಣವೆಂದರೆ ಬಿಳಿ ಬಣ್ಣ. ಶುದ್ಧ ಹಾಗೂ ಶಾಂತಿಯ ಪ್ರತೀಕವಾದ ಈ ಬಣ್ಣ ಈ ವರ್ಷ ನಿಮಗೆ ಆಶ್ಚರ್ಯಕರ ರೀತಿಯಲ್ಲಿ ಅದೃಷ್ಟವನ್ನು ತಂದುಕೊಡುವುದು. ನೀವು ಗಂಭೀರವಾಗಿ ಒಂದು ಸಂಬಂಧವನ್ನು ಹೊಂದಿದ್ದರೆ ಅದನ್ನು ನಿಮ್ಮ ಜೀವನದ ಸಂಗಾತಿಯನ್ನಾಗಿ ಪಡೆಯಬಹುದು. ಅದಕ್ಕೆ ಮೂರು ತಿಂಗಳುಗಳ ಕಾಲ ಬಿಳಿ ಉಡುಗೆ ಅಥವಾ ಬಿಳಿ ಬಣ್ಣದ ಹೂವನ್ನು ಧರಿಸಿ. ನಿಮ್ಮ ಅನಸುಗಳು ಹಾಗೂ ಗುರಿಗಳು ಸುಲಭವಾಗಿ ನೆರವೇರುವುದು.

ಮಿಥುನ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಗಾಳಿಯ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರಗಳಲ್ಲಿ ಮಿಥುನ ರಾಶಿಯು ಒಂದು. ಬುಧ ಗ್ರಹದಿಂದ ಆಳಲ್ಪಡುವ ರಾಶಿಚಕ್ರ ಆಗಿರುವುದರಿಂದ ಈ ರಾಶಿಯ ವ್ಯಕ್ತಿಗಳು ಅತ್ಯಂತ ಬುದ್ಧಿವಂತರು ಹಾಗೂ ಕುತೂಹಲಕಾರಿ ವ್ಯಕ್ತಿಗಳು ಆಗಿರುತ್ತಾರೆ. 2019ರ ಅದೃಷ್ಟದ ಬಣ್ಣ ಎಂದರೆ ಇವರಿಗೆ ಕೆಂಪು ಬಣ್ಣ ಎಂದು ಹೇಳಲಾಗುವುದು. ತೀವ್ರವಾದ ಕೆಂಪು ಬಣ್ಣವು ಈ ವರ್ಷ ನಿಮಗೆ ಉಲ್ಲಾಸ ಹಾಗೂ ಉತ್ಸಾಹವನ್ನು ನೀಡುವುದು. ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಶ್ರೇಷ್ಠತೆಯನ್ನು ಕಲ್ಪಿಸಿಕೊಡುವನು. ಈ ಬಣ್ಣದ ಉಡುಗೆ ಹಾಗೂ ವಸ್ತುವನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ನಿಮ್ಮ ಜೀವನವು ನೀವು ಅಂದುಕೊಂಡಂತೆಯೇ ನಡೆಯುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಕರ್ಕ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಕರ್ಕ ರಾಶಿಯನ್ನು ಚಂದ್ರನು ಆಳುವನು. ಭಾವನಾತ್ಮಕ ಹಾಗೂ ಸೂಕ್ಷ್ಮ ಸ್ವಭಾವವನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುತ್ತಾರೆ. ಇವರು ತಮ್ಮ ಕುಟುಂಬ ಹಾಗೂ ನಿಕಟ ಸಂಬಂಧಗಳ ಬಗ್ಗೆ ಕಾಳಜಿ ಹಾಗೂ ಪ್ರೀತಿಯನ್ನು ಹೊಂದಿರುತ್ತಾರೆ. 2019ರಲ್ಲಿ ಇವರಿಗೆ ಅದೃಷ್ಟದ ಬಣ್ಣ ಎಂದರೆ ಹಸಿರು. ಹಸಿರು ಬಣ್ಣವು ಈ ವರ್ಷ ಅವರಿಗೆ ಜೀವನದಲ್ಲಿ ತಾಜಾತನ ಹಾಗೂ ಫಲವತ್ತತೆಯನ್ನು ಸೂಚಿಸುವುದು. ಹಸಿರು ಬಣ್ಣದ ಉಡುಗೆ ಹಾಗೂ ವಸ್ತುಗಳನ್ನು ಸದಾ ಬಳಿಯಲ್ಲಿ ಇಟ್ಟುಕೊಳ್ಳುವುದು ಅಥವಾ ಧರಿಸುವುದರಿಂದ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ಕಂಡುಕೊಳ್ಳುವರು. ಅದೃಷ್ಟ ಬಣ್ಣದಿಂದ ನೀವು ನಿರೀಕ್ಷಿಸುತ್ತಿರುವ ವಿಷಯಗಳು ನಿಮಗೆ ಸುವಾರ್ತೆಯ ರೀತಿಯಲ್ಲಿ ಒದಗಿ ಬರುವುದು.

ಸಿಂಹ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಸೂರ್ಯನ ಆಳ್ವಿಕೆಯನ್ನು ಹೊಂದಿರುವ ರಾಶಿಚಕ್ರ ಎಂದು ಹೇಳಲಾಗುವುದು. ಇವರು ತಮಗೆ ಇಷ್ಟವಾದ ಅಥವಾ ತಾವು ಬಯಸಿದ ಕೆಲಸ ಮತ್ತು ಗುರಿಯ ಸಾಧನೆಗೆ ಸದಾ ಸಿದ್ಧರಾಗಿರುತ್ತಾರೆ. ಹೆಚ್ಚು ಆಕರ್ಷಣೆಗೆ ಒಳಗಾಗಲು ಬಯಸುವ ವ್ಯಕ್ತಿಗಳು ಇವರಾಗಿರುತ್ತಾರೆ. ಇವರಿಗೆ 2019ರ ಅದೃಷ್ಟ ಬಣ್ಣ ಕಿತ್ತಳೆ. ಈ ಬಣ್ಣದ ಉಡುಗೆಯನ್ನು ನೀವು ತೊಡುವುದರಿಂದ ವರ್ಷ ಪೂರ್ತಿ ಉತ್ಸಾಹದಿಂದ ಕೂಡಿರುವಿರಿ. ಸಾಕಷ್ಟು ವಿಷಯದಲ್ಲಿ ಪ್ರಕಾಶವನ್ನು ಅನುಭವಿಸುವಿರಿ. ಯಾವುದಾದರೂ ವಿಶೇಷವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೀರಿ ಎಂದಾದರೆ ಈ ಬಣ್ಣದ ಉಡುಗೆಯನ್ನು ಧರಿಸಿ. ಚಿನ್ನದ ಬ್ರೇಸ್‍ಲೈಟ್ ಅಥವಾ ಬಳೆಯನ್ನು ಧರಿಸುವುದರಿಂದಲೂ ನಿಮ್ಮ ಅದೃಷ್ಟ ನಿಮ್ಮ ಪರವಾಗಿ ನಿಲ್ಲುವುದು.

ಕನ್ಯಾ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಬುಧ ಗ್ರಹದಿಂದ ಆಳ್ವಿಕೆಗೆ ಒಳಗಾಗುವ ರಾಶಿ ಕನ್ಯಾ ರಾಶಿ. 2019ರ ಅದೃಷ್ಟದ ಬಣ್ಣ ಇವರಿಗೆ ಗುಲಾಬಿ ಬಣ್ಣವಾಗಿರುತ್ತದೆ. ಈ ಅದೃಷ್ಟ ಬಣ್ಣವನ್ನು ನೀವು ಹೊಂದುವುದು ಅಥವಾ ಉಡುಗೆಯನ್ನು ಧರಿಸುವುದರ ಮೂಲಕ ಪ್ರಣಯದ ಜೀವನವನ್ನು ಪಡೆದುಕೊಳ್ಳುವಿರಿ. ನಿಮ್ಮ ಆಸೆಯಂತೆ ವಿವಾಹವು ನಡೆಯುವುದು. ನಿಮ್ಮ ಪ್ರಣಯವು ಹೂ ಬಿಡಬೇಕು ಎಂದಾದರೆ ನೀವು ತಪ್ಪದೆ ಗುಲಾಬಿ ಬಣ್ಣದ ಉಡುಗೆಯನ್ನು ಧರಿಸಬೇಕು. ನೀಲಕ ಅಥವಾ ನೇರಳೆ ಬಣ್ಣವು ಸಹ ನಿಮಗೆ ಅದೃಷ್ಟವನ್ನು ತಂದುಕೊಡುವುದು. ಪುರುಷರು ಗುಲಾಬಿ ಬಣ್ಣದ ಉಡುಗೆ ಧರಿಸುವುದರಿಂದ ಸಂಪೂರ್ಣವಾದ ಆತ್ಮವಿಶ್ವಾಸವನ್ನು ಹೊಂದುವರು. ಯಾವುದೇ ಕೆಲಸವನ್ನು ನಿರ್ವಹಿಸುವ ಪೂರ್ವದಲ್ಲಿ ಹಿಂಜರಿಕೆಯು ಉಂಟಾಗದು.

ತುಲಾ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ತುಲಾ ರಾಶಿಯವರು ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಬಯಸುವ ವ್ಯಕ್ತಿಗಳು. ಈ ರಾಶಿಯನ್ನು ಶುಕ್ರ ಗ್ರಹವು ಆಳುತ್ತದೆ. ಇವರು ಸೌಂದರ್ಯ, ಪ್ರೀತಿ, ನಂಬಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಶಾಂತಿಯುತವಾದ ಸಾಮರಸ್ಯದ ಜೀವನವನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯವರಿಗೆ 2019ರ ಅದೃಷ್ಟದ ಬಣ್ಣವೆಂದರೆ ಕಡುಗೆಂಪು. ಕಡುಗೆಂಪು ಬಣ್ಣದ ಉಡುಗೆ ತೊಡುವುದು ಅಥವಾ ವಸ್ತುಗಳನ್ನು ಹೊಂದುವುದರ ಮೂಲಕ ನೀವು ನಿಮ್ಮ ಅದೃಷ್ಟವನ್ನು ನಿಮ್ಮಕಡೆ ತಿರುಗಿಸಬಹುದು. ಈ ಬಣ್ಣವು ನಿಮ್ಮ ಜೀವನದಲ್ಲಿ ಸಾಕಷ್ಟು ಧನಾತ್ಮಕ ಅನುಕೂಲವನ್ನು ಸೃಷ್ಟಿಸಿಕೊಡುವುದು. ಹಣದ ವಿಷಯದಲ್ಲಿ ಆರ್ಥಿಕವಾಗಿ ಸ್ಥಿರತೆಯನ್ನು ತಂದುಕೊಳ್ಳಲಿದ್ದೀರಿ. ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಹಗುರವಾದ ನೆರಳು ಚಲನೆಯಾಗಲಿದೆ. ಹೆಚ್ಚಿನ ಸಂತೋಷವನ್ನು ಅನುಭವಿಸುವಿರಿ.

ವೃಶ್ಚಿಕ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ವೃಶ್ಚಿಕ ರಾಶಿಯು ನೀರಿನ ಚಿಹ್ನೆಯನ್ನು ಹೊಂದಿರುವ ರಾಶಿ. ಮಂಗಳ ಮತ್ತು ಪ್ಲುಟೊ ಗ್ರಹಗಳಿಂದ ಆಳಲ್ಪಡುವ ರಾಶಿಚಕ್ರವಾಗಿದೆ. ಇವರು ಅತ್ಯಂತ ಶ್ರಮ ಜೀವಿಗಳು ಹಾಗೂ ಗುರಿ ಸಾಧನೆಯ ವ್ಯಕ್ತಿತ್ವದವರಾಗಿರುತ್ತಾರೆ. 2019ರಲ್ಲಿ ಇವರಿಗೆ ಅದೃಷ್ಟವನ್ನು ತರುವ ಬಣ್ಣವೆಂದರೆ ಆಕಾಶ ನೀಲಿ. ಈ ಬಣ್ಣದ ಉಡುಗೆ, ಆಭರಣ ಅಥವಾ ನೀಲಿ ಬಣ್ಣದ ವಸ್ತುಗಳನ್ನು ನಿಮ್ಮ ಬಳಿ ಸದಾ ಇಟ್ಟುಕೊಳ್ಳುವುರಿಂದ ಸಾಕಷ್ಟು ಧನಾತ್ಮಕ ಕಂಪನಗಳನ್ನು ಮತ್ತು ಬದಲಾವಣೆಯನ್ನು ವರ್ಷ ಪೂರ್ತಿ ಅನುಭವಿಸುವಿರಿ. ನಿಮ್ಮ ಕೆಲವು ಬಯಕೆಗಳು ಸುಲಭವಾಗಿ ನೆರವೇರುವುದು.

ಧನು ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಈ ರಾಶಿಯು ಬೆಂಕಿಯ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರ. ಈ ರಾಶಿಯನ್ನು ಗುರು ಗ್ರಹವು ಆಳುವುದು. ಸದಾ ಉತ್ಸಾಹಿಗಳು ಹಾಗೂ ಸಾಹಸ ಕೆಲಸಗಳಿಗೆ ಮುಂದಾಗುವ ವ್ಯಕ್ತಿತ್ವದವರು ಇವರು. ಇವರಿಗೆ 2019ರ ವರ್ಷವು ಹಳದಿ ಬಣ್ಣದ ಮೂಲಕ ಹೆಚ್ಚಿನ ಅದೃಷ್ಟವನ್ನು ತಂದುಕೊಡುವುದು. ನೀವು ಈ ವರ್ಷ ಉತ್ತಮ ಸುದ್ದಿಯನ್ನು ಕೇಳಲು ಬಯಸುತ್ತೀರಿ ಅಥವಾ ನೀವು ಅಂದುಕೊಂಡ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಬೇಕು ಎಂದರೆ ಮೊದಲು ಹಳದಿ ಬಣ್ಣದ ದಾರವನ್ನು ಕೈಗೆ ಕಟ್ಟಿಕೊಳ್ಳಿ. ಇಲ್ಲವೇ ಹಳದಿ ಬಣ್ಣದ ಉಡುಗೆಯನ್ನು ಧರಿಸಿ. ಹಳದಿ ಬಣ್ಣದ ಟೈ, ಒಳ ಉಡುಪು ಅಥವಾ ಯಾವುದಾದರೂ ವಸ್ತುಗಳನ್ನು ಸಹ ಹೊಂದಬಹುದು. ಅದು ಹೆಚ್ಚಿನ ಅದೃಷ್ಟವನ್ನು ನಿಮಗೆ ತಂದುಕೊಡುವುದು.

ಮಕರ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಮಕರ ರಾಶಿಯು ಶನಿ ಗ್ರಹದಿಂದ ಆಳಲ್ಪಡುತ್ತದೆ. ಹೆಚ್ಚು ಶ್ರಮ ಜೀವಿಗಳು ಹಾಗೂ ಉತ್ಸಾಹಿಗಳು ಆಗಿರುತ್ತಾರೆ. ಈ ಹಿಂದೆ ಕೈಗೂಡಿ ಬರದ ಕೆಲಸವನ್ನು ಅಥವಾ ಸಂಗತಿಯು ನಿಮ್ಮ ಪರವಾಗಿ ನಿಲ್ಲಬೇಕು ಎಂದರೆ ನೀವು ನಿಮ್ಮ ಅದೃಷ್ಟ ಬಣ್ಣದ ಮೊರ ಹೋಗಬೇಕು. 2019ರಲ್ಲಿ ನಿಮಗೆ ಅದೃಷ್ಟವನ್ನು ನೀಡುವ ಬಣ್ಣ ಎಂದರೆ ಗಾಢವಾದ ನೀಲಿ. ಈ ಬಣ್ಣದ ಉಡುಗೆ ಅಥವಾ ವಸ್ತುಗಳನ್ನು ಹೊಂದುವುದರಿಂದ ವೈಯಕ್ತಿಕ ಜೀವನದಲ್ಲಿ ಧನಾತ್ಮಕ ಬದಲಾವಣೆ ಉಂಟಾಗುವುದು. ಬಹುತೇಕ ವಿಷಯದಲ್ಲಿ ಅದೃಷ್ಟವನ್ನು ಅನುಭವಿಸುವಿರಿ.

ಕುಂಭ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಸ್ವತಂತ್ರವನ್ನು ಹೆಚ್ಚು ಆಶಿಸುವ ವ್ಯಕ್ತಿಗಳು ಇವರಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ವಾಯು ಚಿಹ್ನೆಯನ್ನು ಹೊಂದಿರುತ್ತಾರೆ. ಇವರಿಗೆ 2019ರ ವರ್ಷದಲ್ಲಿ ಅದೃಷ್ಟವನ್ನು ತರುವ ಬಣ್ಣ ಕಪ್ಪು. ಮಂಗಳಕರ ಅಥವಾ ಶುಭ ಕಾರ್ಯದ ಸಂದರ್ಭದಲ್ಲೂ ಕಪ್ಪು ಬಣ್ಣವನ್ನು ಧರಿಸಬೇಕು ಎಂದಿಲ್ಲ. ಕಪ್ಪು ವಸ್ತುಗಳಾದ ಪರ್ಸ್, ಆಭರಣ, ಒಳ ಉಡುಪುಗಳನ್ನು ಧರಿಸಬಹುದು. ಕಪ್ಪು ಬಣ್ಣವು ಸದಾ ನಿಮ್ಮ ಬಳಿ ಇದ್ದರೆ ಅದೃಷ್ಟವು ನಿಮ್ಮ ಜೊತೆಯಲ್ಲಿ ಇರುವುದು.

ಮೀನ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ
ಸೂಕ್ಷ್ಮ ಮತ್ತು ಭಾವನಾತ್ಮಕ ವ್ಯಕ್ತಿಗಳು ಮೀನ ರಾಶಿಯ ವ್ಯಕ್ತಿಗಳು. ಇವರು ಗುರು ಗ್ರಹದ ಆಳ್ವಿಕೆಗೆ ಒಳಗಾಗುವರು. ಇವರಿಗೆ 2019ರಲ್ಲಿ ಅದೃಷ್ಟವನ್ನು ತರುವ ಬಣ್ಣ ಎಂದರೆ ಕಂದು ಬಣ್ಣ. ನೀವು ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸುಧಾರಣೆ ಹಾಗೂ ಧನಾತ್ಮಕ ಅದೃಷ್ಟವನ್ನು ಪಡೆಯಬೇಕು ಎಂದಾದರೆ ಕಂದು ಬಣ್ಣದ ಉಡುಗೆ ಅಥವಾ ವಸ್ತುವನ್ನು ಹೊಂದುವುದನ್ನು ಮರೆಯಬಾರದು.



Click it and Unblock the Notifications











