Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
2019 ಹೊಸ ವರ್ಷದಲ್ಲಿ ಯಾವ ರಾಶಿಗೆ ಯಾವ ಬಣ್ಣ ಅದೃಷ್ಟ ತರಲಿದೆ?
ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಮುಂದಿನ ವರ್ಷವು ಹೇಗಿರುತ್ತದೆ. ತನ್ನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ. ಹಣದ ಹರಿವು ಇರುತ್ತದೆಯಾ ಅಥವಾ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾ ಎನ್ನುವಂತಹ ಹಲವಾರು ಪ್ರಶ್ನೆಗಳು ಕಾಡುತ್ತಾ ಇರುತ್ತದೆ. ಬಡವನಿಂದ ಹಿಡಿದು ಶ್ರೀಮಂತನ ತನಕ ಪ್ರತಿಯೊಬ್ಬ ಕೂಡ ಹೊಸ ವರ್ಷ ತನಗೆ ಒಳ್ಳೆಯದನ್ನು ಉಂಟು ಮಾಡಲಿ ಎಂದು ಬಯಸುತ್ತಾನೆ. ಹೊಸ ವರ್ಷವು ಎಲ್ಲರಿಗೂ ಒಳ್ಳೆಯದನ್ನು ಉಂಟು ಮಾಡಲಿ ಎನ್ನುವುದು ಕೆಲವರು ಬಯಸವರು.

ಹೊಸ ವರ್ಷದಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಬೇಕು ಮತ್ತು ಯಾವ ಕೆಲಸಗಳನ್ನು ಮಾಡಬಾರದು ಎಂದು ಕೆಲವರು ಪಟ್ಟಿ ಮಾಡಿಕೊಂಡು ಅದರಂತೆ ಮುಂದುವರಿಯುವರು. ಹೊಸ ವರ್ಷದಲ್ಲಿ ಹೆಚ್ಚಿನವರು ತಮ್ಮ ರಾಶಿ ಭವಿಷ್ಯವನ್ನು ನೋಡಿಕೊಂಡು ಮುಂದುವರಿಯುವರು. ಇದು ಒಳ್ಳೆಯದು ಹಾಗೂ ಕೆಟ್ಟದರ ಬಗ್ಗೆ ಹೇಳುತ್ತದೆ. ಅದರಲ್ಲೂ ಭಾರತೀಯರು ರಾಶಿಭವಿಷ್ಯವನ್ನು ಹೆಚ್ಚಾಗಿ ನಂಬುವ ಕಾರಣದಿಂದಾಗಿ ವರ್ಷ ಭವಿಷ್ಯಕ್ಕೆ ಮಹತ್ವ ಕೂಡ ಇದೆ. ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ರಾಶಿ ಭವಿಷ್ಯದ ಬಗ್ಗೆ ಅಲ್ಲ. ಇಲ್ಲಿ ನಾವು ಹೇಳುತ್ತಿರುವುದು ಹೊಸ ವರ್ಷದಲ್ಲಿ ಯಾವ ರಾಶಿಯವರು ಯಾವ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು. ಬಣ್ಣ ಕೂಡ ನಮ್ಮ ಜೀವನದ ನಿರ್ಧಾರ ಹಾಗೂ ಹಾದಿಯಲ್ಲಿ ಮುಖ್ಯ ಪಾತ್ರ ವಹಿಸುವುದು. ಇಂತಹ ಸಂದರ್ಭದಲ್ಲಿ ನಿಮ್ಮ ರಾಶಿಗೆ ಹೊಸ ವರ್ಷದಲ್ಲಿ ಯಾವ ಬಣ್ಣವು ಒಗ್ಗಿಕೊಳ್ಳುತ್ತದೆ ಮತ್ತು ಅದರಿಂದ ನಿಮಗೆ ಆಗುವ ಲಾಭಗಳು ಏನು ಎಂದು ತಿಳಿಯಲು ನೀವು ಈ ಲೇಖನವನ್ನು ಓದಲೇಬೇಕು.

ಮೇಷ ರಾಶಿಗೆ 2019ರಲ್ಲಿ ಅದೃಷ್ಟದ ಬಣ್ಣ(ಮಾ.21-ಎ.19)
ಮಂಗಳನ ಅಧಿಪತ್ಯ ಹೊಂದಿರುವಂತಹ ಈ ರಾಶಿಯು ಯಾವಾಗಲೂ ತುಂಬಾ ಪ್ರಜ್ವಲಿಸುವ ಮತ್ತು ಚಲಿಸುತ್ತಿರುವ ಕಾರಣ ಇವರಿಗೆ ಸರಿಯಾಗಿ ಹೊಂದಿಕೊಳ್ಳುವ ಬಣ್ಣ ಗುಲಾಬಿ. ಗುಲಾಬಿ ಬಣ್ಣವು ಪ್ರೀತಿಯ ಸಂಕೇತವಾಗಿದೆ. ಇದು ತನ್ನನ್ನು ಮತ್ತು ಇತರರನ್ನು ಪ್ರೀತಿಸುವಂತಹ ಸಂಕೇತವಾಗಿರುವುದು. ಗುಲಾಬಿ ಬಣ್ಣದ ಹೊರತಾಗಿ ಮೇಷ ರಾಶಿಯವರು ಕೆಂಪು ಬಣ್ಣ ಆಯ್ಕೆ ಮಾಡಿಕೊಳ್ಳಬಹುದು. ಕೆಂಪು ಬಣ್ಣವು ಶಕ್ತಿ ಮತ್ತು ಪರಿಶುದ್ಧತೆಯ ಪ್ರತೀಕವಾಗಿರುವುದು. ನೀವು ಕಡು ಬಣ್ಣಗಳಾಗಿರುವಂತಹ ಕಂದು ಅಥವಾ ಕಪ್ಪು ಬಣ್ಣವನ್ನು ತ್ಯಜಿಸಬೇಕು. ಇದರಿಂದ ನಿಮಗೆ ಒಳ್ಳೆಯದಾಗುವ ಬದಲು ಹೆಚ್ಚು ಕೆಟ್ಟದಾಗುವಂತಹ ಸಂಭವವು ಇದೆ.

ವೃಷಭ ರಾಶಿಯವರಿಗೆ 2019ರಲ್ಲಿ ಅದೃಷ್ಟದ ಬಣ್ಣ(ಎ.20-ಮೇ20)
ವೃಷಭ ರಾಶಿಯ ಅಧಿಪತಿ ಶಕ್ರ ಗ್ರಹವಾಗಿದೆ. ವೃಷಭ ರಾಶಿಯವರಿಗೆ ಯಾವಾಗಲೂ ಹಸಿರು ಬಣ್ಣ ಒಳ್ಳೆಯದು. ಮುಂಬರುವ ವರ್ಷವು ನಿಮಗೆ ಸ್ವಲ್ಪ ಮಟ್ಟಿನ ಅದೃಷ್ಟವನ್ನು ತಂದುಕೊಡಲಿದೆ ಮತ್ತು ನಿಮಗೆ ಏನಾದರೂ ಮಾಡಬೇಕೆಂದು ಇದ್ದರೆ ಆಗ ನೀವು ಹಸಿರು ಬಣ್ಣಕ್ಕೆ ಹೊಂದಿಕೊಂಡು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿ. ಹಸಿರು ಬಣ್ಣದ ಬಟ್ಟೆ ಖರೀದಿಸಿ ಅಥವಾ ಈ ಬಣ್ಣವನ್ನು ನೀವು ಯಾವುದೇ ರೂಪದಲ್ಲಿ ಇಟ್ಟುಕೊಂಡರೆ ಆಗ ನಿಮಗೆ ಧನಾತ್ಮಕತೆಯು ಬರುವುದು. ನೀವು ಪ್ರಮುಖವಾಗಿ ಕಡೆಗಣಿಸಬೇಕಾಗಿರುವ ಬಣ್ಣವೆಂದರೆ ಹಳದಿ ಬಣ್ಣ. ಇದು ದ್ರೋಹ ಮತ್ತು ವಂಚನೆಯ ನಕಾರಾತ್ಮಕವಾದ ಸಂಕೇತವಾಗಿರುವುದು.

ಮಿಥುನ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ(ಮೇ21-ಜೂನ್ 20)
ಮಿಥುನ ರಾಶಿಗೆ ಬುಧ ಗ್ರಹವು ಅಧಿಪತಿಯಾಗಿರುವುದು. ಮುಂದಿನ ವರ್ಷದಲ್ಲಿ ಇವರಿಗೆ ಕೆಲವೊಂದು ಶ್ರೇಷ್ಠ ಸುದ್ದಿಗಳು ಕೇಳಿಬರುವುದು. ಆದರೆ ಇವರು ನೀಲಿ ಬಣ್ಣದಿಂದ ಹೆಚ್ಚಿನ ಪ್ರೇರಣೆ ಪಡೆಯುವುದು ಅತೀ ಅಗತ್ಯವಾಗಿದೆ. ನೀಲಿ, ಸಯಾನ್ ಮತ್ತು ಬೆಳಕಿನ ವೈಢೂರ್ಯವು ನಿಮ್ಮನ್ನು ಶಾಂತವಾಗಿಡಲಿದೆ. ಒತ್ತಡದಿಂದ ದೂರವಾಗಲು ನೀವು ಮೇಲಿನ ಬಣ್ಣಗಳನ್ನು ಬಳಕೆ ಮಾಡಿಕೊಳ್ಳಬಹುದು ಮತ್ತು ನೀವು ತುಂಬಾ ಸಂತೋಷದಿಂದ ಇರುವುದನ್ನು ಕಾಣಬಹುದು.

ಕರ್ಕಾಟಕ ರಾಶಿಯವರಿಗೆ 2019ರ ಅದೃಷ್ಟದ ಬಣ್ಣ(ಜೂನ್ 21-ಜುಲೈ 22)
ಚಂದ್ರನ ಚಿಹ್ನೆಯಾಗಿರುವ ಕರ್ಕಾಟಕ ರಾಶಿಯವರಿಗೆ ಮುಂಬರುವ ವರ್ಷದಲ್ಲಿ ಅದೃಷ್ಟದ ಬಣ್ಣವೆಂದರೆ ಅದು ಕೆಂಪು. ಇದು ಅತ್ಯುತ್ಸಾಹದ ಸಂಕೇತವು ಹೌದು. ಆಕಾಂಕ್ಷೆ ಮತ್ತು ಉಗ್ರತೆಯ ಶಕ್ತಿ ಪಡೆದುಕೊಂಡಿರುವ ಈ ರಾಶಿಯವರು ಇದನ್ನೇ ಬಳಸಿಕೊಂಡು ಜೀವನ ಹಾಗೂ ವೃತ್ತಿ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತಂದುಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ಜೀವನದ ಸಂಗಾತಿಯಾಗುವವರು ನಿಮ್ಮ ಹತ್ತಿರವೇ ಇರಲೂ ಬಹುದು. ನೀವು ಕಡೆಗಣಿಸಬೇಕಾಗಿರುವ ಬಣ್ಣವೆಂದರೆ ಅದು ಹಸಿರು ಮತ್ತು ಕಿತ್ತಳೆ. ಈ ಬಣ್ಣಗಳು ನಿಮ್ಮ ಬಾಗಿಲು ಬಡಿಯುತ್ತಿರುವ ಅದೃಷ್ಟ ದೂರ ಮಾಡಬಹುದು.

ಸಿಂಹ ರಾಶಿಯವರಿಗೆ 2019ರಲ್ಲಿ ಅದೃಷ್ಟದ ಬಣ್ಣ(ಜುಲೈ 23- ಆಗಸ್ಟ್ 22)
ಸೂರ್ಯನ ಅಧಿಪತ್ಯಕ್ಕೆ ಒಳಗಾಗಿರುವ ಸಿಂಹ ರಾಶಿಗೆ 2019ರಲ್ಲಿ ಹೊಂದಿಕೊಳ್ಳುವ ಬಣ್ಣವೆಂದರೆ ಅದು ಹಳದಿ. ಇದಕ್ಕೆ ಹೊರತಾಗಿಯೂ ಈ ರಾಶಿಯವರು ಕೆಲವು ಕಡು ಬಣ್ಣವಾಗಿರುವಂತಹ ಬಂಗಾರ, ಕೆಂಪು ಮತ್ತು ಹಸಿರು ಬಣ್ಣವನ್ನು ಪರಿಗಣಿಸಬಹುದು. ಇದು ಕೂಡ ಇವರಿಗೆ ಒಳ್ಳೆಯದನ್ನು ಉಂಟು ಮಾಡಲಿದೆ. ನೀವು ಒಂದು ಕೆಂಪು ಬಟ್ಟೆ ಖರೀದಿ ಮಾಡಿಕೊಳ್ಳಿ ಮತ್ತು ಇದರಿಂದ ನಿಮ್ಮ ಅದೃಷ್ಟ ಮತ್ತು ಎಲ್ಲರ ಆಕರ್ಷಣೆಗೂ ಒಳಗಾಗುವಿರಿ. ಪುರುಷರು ಹಳದಿ ಅಥವಾ ಕೆಂಪು ಬಣ್ಣವನ್ನು ತಮ್ಮ ಜೀವನದಲ್ಲಿ ಬಳಸಿಕೊಳ್ಳುವ ಮೂಲಕ ಕಳೆದುಕೊಂಡಿರುವ ಆತ್ಮವಿಶ್ವಾಸ ಮರಳಿ ಪಡೆಯಬಹುದು.

ಕನ್ಯಾ ರಾಶಿಯವರಿಗೆ 2019ರಲ್ಲಿ ಅದೃಷ್ಟದ ಬಣ್ಣ(ಆ.23-ಸೆ.22)
ಕನ್ಯಾ ರಾಶಿಯು ಭೂಮಿಯ ಸಂಕೇತವಾಗಿದೆ. ಭೂಮಿ ತಾಯಿ ಗುಣವನ್ನು ಹೊಂದಿರುವಂತಹ ಕನ್ಯಾ ರಾಶಿಯವರಿಗೆ 2019ರಲ್ಲಿ ಹೊಂದಿಕೊಳ್ಳುವ ಬಣ್ಣವೆಂದರೆ ಅದು ನೇರಳೆ. ಅದೇ ರೀತಿಯಾಗಿ ನೇರಳೆ ಬಣ್ಣದಲ್ಲಿ ಇವರಿಗೆ ಅದೃಷ್ಟವು ಅಡಗಿದೆ. ಕೆನ್ನೇರಳೆ ಮತ್ತು ರೆಡ್ ವೈನ್ ಬಣ್ಣವು ಇವರಿಗೆ ಒಳ್ಳೆಯದು. ಇಂತಹ ಬಣ್ಣಗಳು ಕನ್ಯಾ ರಾಶಿಯವರನ್ನು ಸುತ್ತವರಿದುಕೊಂಡಿದ್ದರೆ ಆಗ ವೃತ್ತಿಪರ ಹಾಗೂ ವೈಯಕ್ತಿಕ ಬದುಕಿನಲ್ಲಿ ತುಂಬಾ ಆಶಾವಾದಿಯಾಗಿರುವಿರಿ. ಕಪ್ಪು ಹಾಗೂ ಹಸಿರು ಬಣ್ಣದಿಂದ ಕನ್ಯಾ ರಾಶಿಯವರು ದೂರವಿರುವುದು ಒಲಿತು.

ತುಲಾ ರಾಶಿಯವರಿಗೆ 2019ರಲ್ಲಿ ಅದೃಷ್ಟ ತರುವ ಬಣ್ಣ( ಸೆ.23-ಅ.22)
ಶುಕ್ರ ಗ್ರಹವು ತುಲಾ ರಾಶಿಯ ಅಧಿಪತಿಯಾಗಿದೆ. ಸಮತೋಲನ ಮತ್ತು ನ್ಯಾಯಕ್ಕೆ ಹೆಸರಾಗಿರುವ ಈ ರಾಶಿಯವರಿಗೆ ಅದೃಷ್ಟ ತಂದುಕೊಡುವಂತಹ ಬಣ್ಣವೆಂದರೆ ಅದು ತಿಳಿ ನೀಲಿ. ನೀವು ಇದೇ ರೀತಿಯಲ್ಲಿ ಸಮುದ್ರ ಹಸಿರು, ಗುಲಾಬಿ ಮತ್ತು ಕೆಂಗಂದು ಬಣ್ಣವು ಇದೇ ರೀತಿಯ ಪರಿಣಾಮವನ್ನು ಉಂಟು ಮಾಡುವುದು. ನೀವು ಈ ಬಣ್ಣದ ವಸ್ತುಗಳು ಅಥವಾ ಇದೇ ರೀತಿಯ ಬಣ್ಣದ ಬಟ್ಟೆಗಳನ್ನು ಧಿರಿಸಿ. ಸಾಧ್ಯವಾದರೆ ಮನೆಗೆ ಮತ್ತು ಉದ್ಯೋಗದ ಕಡೆ ಇದೇ ಬಣ್ಣ ಹಚ್ಚಿ. ಕಿತ್ತಳೆ ಮತ್ತು ಹಳದಿ ಬಣ್ಣವನ್ನು ನೀವು ಕಡೆಗಣಿಸಬೇಕು.

ವೃಶ್ಚಿಕ ರಾಶಿಯವರು 2019ರಲ್ಲಿ ಅದೃಷ್ಟದ ಬಣ್ಣ(ಅ. 23-ನ.21)
ವೃಶ್ಚಿಕ ರಾಶಿಯವರು ತುಂಬಾ ಉತ್ಸಾಹಿಗಳು ಮತ್ತು ಮಂಗಳ ಗ್ರಹವು ಈ ರಾಶಿಗೆ ಅಧಿಪತಿಯಾಗಿರುವ ಕಾರಣದಿಂದಾಗಿ ಮುಂಬರುವ ವರ್ಷವು ನಿಮಗೆ ತುಂಬಾ ಶುಭವಾಗಿರುವುದು ಮತ್ತು ನೀವು ಕಪ್ಪು ಬಣ್ಣವನ್ನು ನೆಚ್ಚಿಕೊಂಡಿಬೇಕು. ಹೆಚ್ಚಿನವರು ಕಪ್ಪು ಬಣ್ಣವು ಅಶುಭ ಎಂದು ಭಾವಿಸಿರುವರು. ಆದರೆ ಈ ಬಣ್ಣವು ಬಲ, ಗಂಭೀರತೆ ಮತ್ತು ಶಕ್ತಿಯನ್ನು ನೀಡುವುದು. ನೀವು ಹಸಿರು ಮತ್ತು ಹಳದಿ ಬಣ್ಣದಿಂದ ದೂರವಿರಬೇಕೆಂದು ಹೇಳಲಾಗಿದೆ.

ಧನು ರಾಶಿಯವರಿಗೆ 2019ರಲ್ಲಿ ಅದೃಷ್ಟದ ಬಣ್ಣ(ನ.22-ಡಿ.21)
ಹಸಿರು ಬಣ್ಣವನ್ನು ಧನು ರಾಶಿಯವರು ಇಟ್ಟುಕೊಂಡರೆ ಅದರಿಂದ ಅವರಿಗೆ ಹೊಸ ವರ್ಷದಲ್ಲಿ ಹೆಚ್ಚಿನ ಸಮೃದ್ಧಿ ಹಾಗೂ ಸುಖವು ಸಿಗುವುದು. ನಿಯಾನ್ ಬ್ಯಾಗ್ ಅಥವಾ ಹಸಿರು ಬಣ್ಣದ ಯಾವುದೇ ಬಟ್ಟೆಯನ್ನು ಧರಿಸಿದರೂ ಇದರಿಂದ ನಿಮಗೆ ಹೊಸ ವರ್ಷದಲ್ಲಿ ಒಳ್ಳೆಯದಾಗಲಿದೆ. ಕೆಂಪು ಬಣ್ಣ ಕೂಡ ನಿಮ್ಮ ಪ್ರೀತಿಯ ಜೀವನದಲ್ಲಿ ತುಂಬಾ ಅದ್ಭುತವನ್ನು ಉಂಟು ಮಾಡಲಿದೆ. ನೀಲಿ ಮತ್ತು ಹಳದಿ ಬಣ್ಣವನ್ನು ನೀವು ಕಡೆಗಣಿಸಬೇಕು. ಯಾಕೆಂದರೆ ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗದು.

ಮಕರ ರಾಶಿಯವರಿಗೆ 2019ರಲ್ಲಿ ಅದೃಷ್ಟದ ಬಣ್ಣ(ಡಿ.22-ಜ.19)
ಭೂಮಿಯ ಅಂಶವಾಗಿರುವ ಮಕರ ರಾಶಿಗೆ ಶನಿಯು ಅಧಿಪತಿ. ಮಕರ ರಾಶಿಯವರಿಗೆ ಹೊಸ ವರ್ಷದಲ್ಲಿ ಅದೃಷ್ಟ ತರುವಂತಹ ಬಣ್ಣವೆಂದರೆ ತಿಳಿ ನೀಲಿ ಮತ್ತು ಸಮುದ್ರ ಹಸಿರು. ಇನ್ನೊಂದು ಬಣ್ಣ ನಿಮಗೆ ಅದೃಷ್ಟವನ್ನು ಉಂಟು ಮಾಡುವುದಿದ್ದರೆ ಅದು ಬಿಳಿ ಬಣ್ಣ. ಇದರಿಂದ ಬಿಳಿ ಬಟ್ಟೆ ಹೆಚ್ಚಾಗಿ ಧರಿಸಿ. ಇದು ಮಹಿಳೆಯರು ಹಾಗೂ ಪುರುಷರಿಗೆ ಒಳ್ಳೆಯ ವಿಚಾರವಾಗಿದೆ. ಕೆಂಪು ಮತ್ತು ಹಸಿರು ಬಣ್ಣವು ನಿಮಗೆ ಅದೃಷ್ಟದ ಬಣ್ಣವಾಗಿಲ್ಲ.

ಕುಂಭ ರಾಶಿಯವರಿಗೆ 2019ರಲ್ಲಿ ಅದೃಷ್ಟದ ಬಣ್ಣ(ಜ.20-ಫೆ.18)
ಶನಿ ಗ್ರಹದ ಅಧಿಪತ್ಯದಲ್ಲಿ ಇರುವಂತಹ ಕುಂಭ ರಾಶಿಯವರಿಗೆ ಮುಂದಿನ ವರ್ಷದಲ್ಲಿ ತುಂಬಾ ಅದೃಷ್ಟದ ಬಣ್ಣವೆಂದರೆ ಕಿತ್ತಳೆ. ಸಮುದ್ರ ನೀಲಿ ಬಣ್ಣ ಕೂಡ ಇವರಿಗೆ ಅದೃಷ್ಟವನ್ನು ತರಲಿದೆ. ಇದು ನಿಮಗೆ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ತುಂಬಾ ಒಳ್ಳೆಯದನ್ನು ಉಂಟು ಮಾಡುವುದು. ನಿಮ್ಮ ಜೀವನದಲ್ಲಿ ಸಮತೋಲನ ಉಂಟು ಮಾಡುವಂತಹ ಕೆಂಪು ಬಣ್ಣದಿಂದ ನೀವು ದೂರವಿರುವುದು ತುಂಬಾ ಒಳ್ಳೆಯದು. ಇದು ನಿಮ್ಮ ಪರವಾಗಿ ಕೆಲಸ ಮಾಡುವ ತನಕ ಕಾಯಬೇಕು.

ಮೀನ ರಾಶಿಯವರಿಗೆ 2019ರಲ್ಲಿ ಅದೃಷ್ಟದ ಬಣ್ಣ(ಫೆ.19-ಮಾ.20)
ರಾಶಿ ಚಕ್ರಗಳಲ್ಲಿ ಕೊನೆಯ ರಾಶಿಯಾಗಿರುವಂತಹ ಮೀನ ರಾಶಿಗೆ ಗುರು ಮತ್ತು ನೆಪ್ಚೂನ್ ಅಧಿಪತಿಯಾಗಿದೆ. ಮುಂದಿನ ವರ್ಷದಲ್ಲಿ ಹಳದಿ ಮತ್ತು ಹಸಿರು ಬಣ್ಣವು ಮೀನ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ಎಂದು ಹೇಳಲಾಗುತ್ತದೆ. ತಿಳಿ ಹಸಿರು ಬಣ್ಣವು ಪ್ರೇರಣೆ ಹಾಗೂ ಪ್ರಕೃತಿಯ ಸಂಕೇತವಾಗಿರುವ ಕಾರಣದಿಂದಾಗಿ ಇದು ನಿಮ್ಮ ಜೀವನ ಹಾಗೂ ವೃತ್ತಿ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಆದರೆ ನೀವು ಕಪ್ಪು ಹಾಗೂ ಕಂದು ಬಣ್ಣದಿಂದ ದೂರವಿರುವುದು ಒಲಿತು. ಇದರಿಂದ ನಿಮಗೆ ನಕಾರಾತ್ಮಕ ಪರಿಣಾಮ ಉಂಟಾಗುವುದು.



Click it and Unblock the Notifications











