Latest Updates
-
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ! -
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ!
ಅಯ್ಯೋ! ಆಕೆ ಆತ್ಯಹತ್ಯೆ ಮಾಡಿಕೊಂಡಳೇ? ತಾಳಿ, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದು ನಮ್ಮ ಹಿರಿಯರು ಸುಮ್ಮಸುಮ್ಮನೇ ಹೇಳಿಲ್ಲ. ಎಷ್ಟೋ ಬಾರಿ ನಮ್ಮ ಕಣ್ಣಿಗೆ ಕಾಣುವ ಎಷ್ಟೋ ಸಂಗತಿಗಳು ಸತ್ಯಕ್ಕೆ ಬಹಳ ದೂರವಾಗಿರುತ್ತವೆ. ಇವನ್ನೇ illusions ಎಂದು ಕರೆಯುತ್ತಾರೆ. ಇಂತಹ ಕಣ್ಣುಕಟ್ಟುಗಳನ್ನು ನಿಜವಾಗಿರುವ ಭ್ರಮೆ ಮೂಡಿಸುವ ವಸ್ತುಗಳ ಸಂಗ್ರಹಾಲಯವೇ ವಿಶ್ವದ ಹಲವೆಡೆ ಇವೆ. (illusion museum).ಆದರೆ ವಾಸ್ತವಜಗತ್ತಿನಲ್ಲಿಯೂ ಆಗಾಗ ಸಂಭವಿಸುವ ಎಷ್ಟೋ ಘಟನೆಗಳು ಇದರ ಬಗ್ಗೆ ಮಾಹಿತಿ ನೀಡುವವರ ಉತ್ಪ್ರೇಕ್ಷೆಯಿಂದಾಗಿ ತಪ್ಪು ಸಂಗತಿಯಾಗಿ ಮಾರ್ಪಟ್ಟಿದೆ. ಹಲವು ಅಮೂಲ್ಯ ಜೀವಗಳೂ ಬಲಿಯಾಗಿವೆ.
ಇಂತಹ ಇನ್ನೊಂದು ಪ್ರಕರಣ ಇತ್ತೀಚೆಗೆ ವರದಿಯಾಗಿದ್ದು ನಮ್ಮ ಹಿರಿಯರು ಹೇಳಿದ ಮಾತು ಎಂದೆಂದಿಗೂ ಸತ್ಯ ಎಂಬುದು ಖಚಿತವಾಗುತ್ತದೆ. ಓರ್ವ ಪುರುಷ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಈ ಚಿತ್ರವನ್ನು ಮೊದಲು ಗಮನಿಸಿದರೆ ಓರ್ವ ಮಹಿಳೆ ನೆಲದಲ್ಲಿ ಬಿದ್ದಿರುವುದನ್ನು ಗಮನಿಸಬಹುದು. ಸಿಂಗಾಪುರದ ಹೌಸಿಂಗ್ ಕಾಲೋನಿಯೊಂದರ ಕಟ್ಟಡಗಳ ನಡುವಣ ನೆಲದ ಮೇಲೆ ಈಕೆ ಬಿದ್ದಿರುವ ಪರಿಯನ್ನು ಗಮನಿಸಿದರೆ ಆಕೆ ಆ ಕಟ್ಟಡದ ಮೇಲಿನಿಂದ ಬಿದ್ದು ಸತ್ತಿರಬಹುದು ಎಂಬ ಅಭಿಪ್ರಾಯಕ್ಕೆ ಬಹುತೇಕ ಎಲ್ಲರೂ ಬಂದುಬಿಡುತ್ತಾರೆ. ಆದರೆ ಹಿರಿಯರ ಮಾತನ್ನು ಮೀರುವುದುಂಟೇ? ಬನ್ನಿ, ನೋಡೋಣ....

ಮೊದಲಿಗೆ ಈಕೆ ಸತ್ತಿರಬಹುದು ಎಂದೇ ಎಲ್ಲರೂ ಭಾವಿಸಿದ್ದರು!
ಈಕೆ ಹೀಗೆ ಬಿದ್ದಿರುವುದನ್ನು ನೋಡಿದ ಪುರುಷನೊಬ್ಬನಿಗೆ ಮೊದಲಿಗೆ ಈಕೆ ಸತ್ತಿರಬಹುದು ಎಂದೇ ಅನುಮಾನ ಮೂಡಿ ಗಾಬರಿಯಾಗಿತ್ತು. ಕೆಂಪು ಸೀರೆಯನ್ನುಟ್ಟ ಈ ಮಹಿಳೆ ಅಂಗಾತ ಬಿದ್ದಿರುವ ಪರಿ ಯಾರಿಗಾದರೂ ಆಕೆ ಪಕ್ಕದಲ್ಲಿದ್ದ ಹೌಸಿಂಗ್ ಡೆವಲಪ್ ಮೆಂಟ್ ಬೋರ್ಡ್ ಸಂಸ್ಥೆಯ ಬ್ಲಾಕ್ ಒಂದರ ಫ್ಲ್ಯಾಟ್ ಒಂದರಿಂದ ಬಿದ್ದಿರುವ ಅನುಮಾನ ಬಂದೇ ಬರುತ್ತದೆ. ಈ ಪುರುಷ ಆಕೆಯ ಚಿತ್ರವನ್ನು ತೆಗೆದು ಜಾಲತಾಣದಲ್ಲಿ ಪ್ರಕಟಿಸಿ ಈ ರೀತಿಯಾಗಿ ಬರೆದ: "ಈ ಆಂಟಿ ಆತ್ಮಹತ್ಯೆ ಮಾಡಿ ಕೊಂಡಿರ ಬಹುದು ಎಂದು ನನಗೆ ಅನ್ನಿಸುತ್ತದೆ, ಏಕೆಂದರೆ ಅದುವರೆಗೂ ಆಕೆ ಬಟ್ಟೆ ಒಣಗಿಸುತ್ತಿದ್ದುದನ್ನು ನಾನು ಗಮನಿಸಿದ್ದೆ" ಆದರೆ ಯಾವುದೋ ಕಾರಣಕ್ಕೆ ಈ ಪ್ರಕಟಣೆಯನ್ನು ಹಿಂದೆ ತೆಗೆದುಕೊಳ್ಳಲಾಯ್ತು. ಆದರೆ ಅಷ್ಟರಲ್ಲಿಯೇ ಈ ವಾರ್ತೆಯನ್ನು ಗಮನಿಸಿದ ಕೆಲವರು ತಮ್ಮ ಬೆರಳುಗಳಿಂದ ಈ ವಾರ್ತೆಯನ್ನು ಹಲವರಿಗೆ, ಅವರಿಂದ ಇನ್ನೂ ಹಲವರಿಗೆ ದಾಟಿಸಿ ಆಗಿತ್ತು.

ಈ ಬಗ್ಗೆ ಜನರ ಪ್ರತಿಕ್ರಿಯೆ
ಯಾವಾಗ ಈ ಪ್ರಕಟಣೆ ವ್ಯಾಪಕವಾಯ್ತೋ, ಆಗ ಈ ಮಹಿಳೆಯ ಆತ್ಮಹತ್ಯೆಯ ಬಗ್ಗೆ ಭಾರೀ ಚರ್ಚೆ ಪ್ರಾರಂಭವಾಯ್ತು. ಒಬ್ಬರಾದರೂ ಇದು ಆತ್ಮಹತ್ಯೆ ಇರಲಿಕ್ಕಿಲ್ಲ, ಹೋಗಿ ನೋಡಿ ಎಂದು ಚಕಾರವೆತ್ತಲಿಲ್ಲ. ಪ್ರತಿಯೊಬ್ಬರೂ ಈಕೆ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು ಎಂದು ತಮಗೆ ಬಂದ ವಾರ್ತೆಯನ್ನೇ ನಂಬಿ ಮುಂದಿನವರಿಗೆ ತಲುಪಿಸುವುದು ತಮ್ಮ ಕರ್ತವ್ಯವೆಂಬಂತೆ ಅತ್ಯಂತ ತನ್ಮಯತೆಯಿಂದ ತಮ್ಮ ಕೆಲಸ ನಿರ್ವಹಿಸಿದ್ದರು. ಆದರೆ ನಿಜಾಂಶವೇನೆಂದರೆ, ಬಟ್ಟೆ ಒಗೆದು, ಒಣಗಿಸಿ ಸುಸ್ತಾಗಿದ್ದ ಆಕೆ, ಆ ಬಳಿಕ ನೆಲದ ಮೇಲೆ ಸಂಡಿಗೆಯನ್ನೋ ಹಪ್ಪಳವನ್ನೋ ಒಣಗಿಸಿದ ಬಳಿಕ ಹೈರಾಣಾಗಿ ಅಲ್ಲಿಯೇ ಕೊಂಚ ಹೊತ್ತು ವಿಶ್ರಮಿಸಲು ಪವಡಿಸಿದ್ದಳಷ್ಟೇ!

ಇದೇ ಮೊದಲ ಸಲವಲ್ಲ
ತಪ್ಪು ಕಲ್ಪನೆಗೆ ಗ್ರಾಸವಾಗಿಸುವ ಚಿತ್ರಗಳು ಪ್ರಕಟಗೊಂಡಿರುವುದು ಇದೇನೂ ಮೊದಲ ಸಲವಲ್ಲ. ಆದರೆ ಇಂತಹ ಚಿತ್ರಗಳು ಅಥವಾ ಬೇರಾವುದಾದರೂ ಸಂಗತಿ ಎದುರಾದರೆ ಮಾತ್ರ ಜನರು ಹುಚ್ಚೆದ್ದವರಂತೆ ಈ ಸಂಗತಿಯನ್ನು ಕಾಳ್ಗಿಚ್ಚಿನಂತೆ ಹಬ್ಬಿಸಿ ಎಲ್ಲರಲ್ಲಿಯೂ ದಿಗಿಲು ಹುಟ್ಟಿಸುತ್ತಾರೆ. ಹಿಂದೊಮ್ಮೆ, ರಕ್ತದ ಮಡುವಿನ ನಡುವೆ ಮಲಗಿದ್ದ ಬೆಕ್ಕಿನ ಚಿತ್ರವೂ ಹೀಗೇ ಸಂಚಲನೆ ಮೂಡಿಸಿತ್ತು. ಬೆಕ್ಕು ಬಿದ್ದಿದ್ದ ಪರಿ, ಪಕ್ಕದಲ್ಲಿ ಚೆಲ್ಲಿದ್ದ ರಕ್ತ ನೋಡಿದವರು ಯಾರೋ ಬೆಕ್ಕಿನ ಕೊಲೆ ಮಾಡಿದ್ದಾರೆಂದೇ ಈ ನೆಟಿಜನ್ನರು ಪ್ರಕಟಿಸಿಬಿಟ್ಟಿದ್ದರು

ಇದೇ ಮೊದಲ ಸಲವಲ್ಲ
ವಾಸ್ತವವಾಗಿ ಅಲ್ಲಿ ಬಿದ್ದಿದ್ದ ಕೆಂಪು ಬಣ್ಣದ ದ್ರವ ರಕ್ತ ಅಲ್ಲವೇ ಬಲ್ಲ, ಬದಲಿಗೆ ಹಿಂದೆಂದೋ ಯಾರೋ ಚೆಲ್ಲಿದ್ದ ಕೆಂಪು ಬಣ್ಣದ ಪೇಂಟ್ ಆಗಿತ್ತು. ನಿಮ್ಮ ಅನುಭವದಲ್ಲಿ ಇಂತಹ ಪ್ರಸಂಗಗಳಾವುದಾದರೂ ಸಂಭವಿಸಿವೆಯೇ? ಹೌದೆಂದಾದರೆ ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ಇತರರೊಂದಿಗೆ ನೀವೇಕೆ ಹಂಚಿಕೊಳ್ಳಬಾರದು?



Click it and Unblock the Notifications