Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಾಜಿ ಪ್ರಿಯತಮೆಯ ಮನೆ ಮುಂದೆ ಕಾರಿನಲ್ಲೇ ಒಂದು ತಿಂಗಳು ಕಳೆದ!
ಪ್ರೀತಿಯಲ್ಲಿ ಬಿದ್ದ ಬಳಿಕ ಅದರಿಂದ ದೂರವಾಗುವುದು ತುಂಬಾ ಕಠಿಣ ಕೆಲಸ. ಯಾಕೆಂದರೆ ನಾವು ಯಾರನ್ನು ಪ್ರೀತಿ ಮಾಡುತ್ತಿರುತ್ತೇವೋ ಅವರನ್ನು ದೂರ ಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲ್ಲ. ಹೀಗಾಗಿ ಕೆಲವೊಂದು ಸಲ ಹುಡುಗ ಅಥವಾ ಹುಡುಗ ತಮ್ಮ ಪ್ರೀತಿ ಪಾತ್ರರನ್ನು ಪಡೆಯಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲರು. ಇಂತಹ ಒಂದು ಘಟನೆ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ.
ಇಲ್ಲಿ ವ್ಯಕ್ತಿಯೊಬ್ಬರು ತನ್ನ ಪ್ರಿಯತಮೆಯನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ಆಕೆ ಮಾತ್ರ ಆತನಿಂದ ದೂರವಾಗಿ ಹೋದಳು. ಆದರೆ ಆ ವ್ಯಕ್ತಿ ಮಾತ್ರ ವಿರಹ ವೇದನೆ ತಾಳಲಾರದೆ ತನ್ನ ಕಾರನ್ನು ಮಾಜಿ ಪ್ರಿಯತಮೆಯ ಮನೆಯ ಹೊರಗಡೆ ನಿಲ್ಲಿ ಒಂದು ತಿಂಗಳ ಕಾಲ ಅದರಲ್ಲೇ ಕಾಲ ಕಳೆದಿದ್ದಾರೆ. ಇದರ ಬಗ್ಗೆ ನೀವು ತಿಳಿಯಿರಿ.

ಲಿಯು ಎಂಬ ವ್ಯಕ್ತಿ ತನ್ನ ಮಾಜಿ ಪ್ರಿಯತಮೆಯನ್ನು ಭೇಟಿ ಮಾಡಿದ ವೇಳೆ ಆತನಿಗೆ ಅದಾಗಲೇ ಮದುವೆಯಾಗಿತ್ತು. ಈತನಿಗೆ ಮದುವೆಯಾಗಿದೆ ಎಂದು ತಿಳಿದ ಬಳಿಕ ಆಕೆ ಈತನಿಗೆ ಕೈಕೊಟ್ಟಿದ್ದಳು. ಇದರ ಬಳಿಕ ಆ ವ್ಯಕ್ತಿ ತನ್ನ ಪತ್ನಿಗೆ ಡೈವೋರ್ಸ್ ನೀಡಿ ಮಾಜಿ ಪ್ರೇಯಸಿಯನ್ನು ಮರಳಿ ಪಡೆಯಲು ಬಯಸಿದ. ಆನ್ ಲೈನ್ ಗೇಮ್ ಮೂಲಕ ಇವರಿಬ್ಬರ ಪರಿಚಯವಾಗಿತ್ತು ಮತ್ತು ಒಂದುವರೆ ವರ್ಷಗಳ ಕಾಲ ಹಾಗೆ ಪ್ರೀತಿಸುತ್ತಿದ್ದರು ಮತ್ತು ಒಂದು ದಿನ ಇದು ಕೊನೆಯಾಯಿತು.
ತನ್ನನ್ನು ಪ್ರೇಯಸಿಯು ಬಿಟ್ಟು ಹೋಗಿದ್ದಾಳೆ ಎನ್ನುವುದನ್ನು ಲಿಯುಗೆ ಅರಗಿಸಿಕೊಳ್ಳಲು ಆಗಲಿಲ್ಲ. ಎರಡು ವರ್ಷಗಳ ಕಾಲ ಆತ ಆ ಮಹಿಳೆಯ ಬೆನ್ನು ಬಿದ್ದಿದ್ದ. ಒಮ್ಮೆ ಆಕೆಯನ್ನು ತನ್ನ ಕಾರಿನೊಳಗೆ ಎಳೆದು ಕೂರಿಸಿಕೊಳ್ಳಲು ಪ್ರಯತ್ನಿಸಿದ್ದ ಮತ್ತು ಇದರಿಂದಾಗಿ ಅಪಘಾತವಾಗಿತ್ತು. ಈ ವ್ಯಕ್ತಿಯಿಂದ ಆಗುತ್ತಿದ್ದ ಕಿರುಕುಳ ತಪ್ಪಿಸಿಕೊಳ್ಳಲು ಆ ಮಹಿಳೆಯು ನೇರವಾಗಿ ತನ್ನ ಗ್ರಾಮಕ್ಕೆ ತೆರಳಿದರು. ಇದರ ಬಳಿಕ ನಿಜವಾದ ಕಿರುಕುಳವು ಆರಂಭವಾಯಿತು ಮತ್ತು ಆತ ಆ ಮಹಿಳೆಯನ್ನು ಅಲ್ಲಿಯೂ ಪತ್ತೆ ಮಾಡಿದ.
ಈ ಸ್ಥಳಕ್ಕೆ ಹೊಸದಾಗಿದ್ದ ಕಾರಣದಿಂದಾಗಿ ಆತ ಕಾರಿನಲ್ಲಿ ಕುಳಿತು ಕಾಯುತ್ತಾ ಆಕೆಗೆ ಅಚ್ಚರಿ ನೀಡಲು ಅವಕಾಶಕ್ಕಾಗಿ ಕಾಯುತ್ತಲಿದ್ದ. ಒಂದು ದಿನ ಮಧ್ಯರಾತ್ರಿ ಆ ಮಹಿಳೆಯ ಮನೆಯೊಳಗೆ ಹೋದ ಲಿಯೂ ಕುತ್ತಿಗೆ ಹಿಸುಕಲು ಪ್ರಯತ್ನ ಕೂಡ ಮಾಡಿದ್ದ. ಘಟನೆ ಬಳಿಕ ಲಿಯೂ ಅಲ್ಲಿಂದ ಓಡಿ ಹೋಗಿದ್ದ. ಮಾಜಿ ಪ್ರೇಯಸಿಗೆ ಈತನ ವರ್ತನೆಯಿಂದಾಗಿ ತುಂಬಾ ನೋವಾಗಿತ್ತು ಮತ್ತು ಆತನ ಈ ಕಿರುಕುಳ ಸಹಿಸಲು ಕೂಡ ಆಗುತ್ತಿರಲಿಲ್ಲ. ಲಿಯು ಸಂಪೂರ್ಣ ಒಂದು ತಿಂಗಳ ಕಾಲ ಆಕೆಯ ಮನೆಯ ಹೊರಗೆ ಕಾರಿನಲ್ಲಿ ದಿನ ಕಳೆದಿದ್ದ. ಈ ವೇಳೆ ಆತ ಸ್ನಾನ ಕೂಡ ಮಾಡಿರಲಿಲ್ಲ.
ಈ ಭಗ್ನ ಪ್ರೇಮಿಯನ್ನು ಪೊಲೀಸರು ಕರೆದುಕೊಂಡು ಹೋದ ವೇಳೆ ಆತ ಅಲ್ಲಿ ತನ್ನನ್ನು ರಕ್ಷಣೆ ಮಾಡುವ ಸಲುವಾಗಿ, ನಾನು ಆ ಹುಡುಗಿಯನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಆ ವ್ಯಕ್ತಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಕಾರಣದಿಂದಾಗಿ ಈಗ ಆ ಹುಡುಗಿ ತುಂಬಾ ಶಾಂತಿಯಿಂದ ಇರಬಹುದು ಎಂದು ನಾವು ಭಾವಿಸಿದ್ದೇವೆ.



Click it and Unblock the Notifications


