Latest Updates
-
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ?
ಈ 5 ರಾಶಿಚಕ್ರದವರು 'ಐ ಲವ್ ಯು' ಅಂತ ಹೇಳಲು ತುಂಬಾನೇ ಕಷ್ಟ ಪಡುತ್ತಾರಂತೆ!
ಪ್ರೀತಿ ಅನ್ನುವುದು ಮನಸ್ಸಿನ ಆಳದಲ್ಲಿ ಮೂಡಬೇಕು. ಆಗ ಮಾತ್ರ ಅದು ಶಾಶ್ವತವಾಗಿ ಇರುವುದು. ಪ್ರೀತಿಸುವುದು ತುಂಬಾ ಕಷ್ಟದ ವಿಚಾರ ಎನ್ನುವ ಮಾತಿದೆ. ಆದರೆ ಪ್ರೀತಿಸುವುದಕ್ಕಿಂತಲೂ ತುಂಬಾ ಕಠಿಣವಾಗಿರುವುದು ಆ ಮೊದಲ ಮಾತು ಅಂದರೆ ಐ ಲವ್ ಯು(ನಾನು ನಿನ್ನ ಪ್ರೀತಿಸುತ್ತೇನೆ) ಎನ್ನುವುದು. ಯಾಕೆಂದರೆ ಹೆಚ್ಚಿನ ಜನರಿಗೆ ಮೊದಲ ಸಲ ಪ್ರೀತಿಸುತ್ತೇನೆ ಎಂದು ಹೇಳುವಾಗ ತಿರಸ್ಕಾರದ ಭೀತಿಯು ಹೆಚ್ಚಾಗಿ ಇರುವುದು. ಇದರಿಂದಾಗಿ ಪ್ರೀತಿಯನ್ನು ಹೃದಯದಲ್ಲೇ ಇಟ್ಟುಕೊಂಡು ಅದನ್ನು ಹೇಳಿಕೊಳ್ಳದೆ ಒದ್ದಾಡುವಂತಹ ಜನರು ತುಂಬಾ ಇದ್ದಾರೆ. ಆದರೆ ನಾನಿನ್ನ ಪ್ರೀತಿಸುತ್ತೇನೆ ಎಂದು ಹೇಳಿದ ಬಳಿಕ ಸಂಬಂಧವು ಮುಂದುವರಿಯಬಹುದು. ಇನ್ನು ಕೆಲವು ಸಲ ಅಲ್ಲೇ ಕಮರಿ ಹೋಗಬಹುದು.

ಇಂತಹ ಸಂದರ್ಭದಲ್ಲಿ ಮನಸ್ಸಿಗೆ ನೋವಾದರೂ ಒಂದು ಯಶಸ್ಸು ಸಿಕ್ಕೇ ಸಿಗುತ್ತದೆ. ನೀವು ಎಲ್ಲವನ್ನು ಮರೆತು ಮುಂದುವರಿಯಬಹುದು. ಇನ್ನು ಕೆಲವು ಸಲ ನೀವು ಇದರಲ್ಲಿ ಯಶಸ್ವಿಯಾಗಿ ಜೀವನ ಕಟ್ಟಿಕೊಳ್ಳಬಹುದು. ಆದರೆ ಕೆಲವು ರಾಶಿಯಲ್ಲಿ ಹುಟ್ಟಿದವರಿಗೆ ಪ್ರೀತಿಸುತ್ತೇನೆ ಎನ್ನುವಂತಹ ಮೂರು ಶಬ್ದಗಳನ್ನು ಹೇಳಲು ತುಂಬಾ ಕಷ್ಟವಾಗುವುದು. ಇಂತಹ ರಾಶಿಗಳು ಯಾವುದು ಎಂದು ನಾವು ಲೇಖನದ ಮೂಲಕ ತಿಳಿದುಕೊಳ್ಳುವ.... ಆದರೆ ಈ ಆಧುನಿಕ ಯುಗದಲ್ಲೂ ಇಂತಹ ಜನರು ಇದ್ದಾರೆಯಾ ಎಂದು ನಿಮಗೆ ಅಚ್ಚರಿಯಾಗಬಹುದು. ಇದು ಅವರ ಸಮಸ್ಯೆಯಲ್ಲ. ರಾಶಿ ಚಕ್ರದಿಂದಗಿಯೇ ಅವರಿಗೆ ಇಂತಹ ಪರಿಸ್ಥಿತಿ ಬಂದಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಐದು ರಾಶಿಯವರಿಗೆ ಈ ಶಬ್ದ ಹೇಳಲು ತುಂಬಾ ಕಠಿಣವಾಗುವುದು. ಇಂತಹ ರಾಶಿಗಳು ಯಾವುದು ಎಂದು ತಿಳಿಯಿರಿ.

ಮಿಥುನ
ಮಿಥುನ ರಾಶಿಯವರಲ್ಲಿ ಎರಡು ವಿಚಾರಗಳು ತುಂಬಾ ಸಾಮಾನ್ಯವಾಗಿ ಇರುವುದು. ಒಂದು ಅವರು ತುಂಬಾ ಪ್ರಯೋಗವನ್ನು ಇಷ್ಟಪಡುವರು. ಇದರರ್ಥ ಅವರು ಹೆಚ್ಚು ಜನರನ್ನು ಭೇಟಿ ಮಾಡುವರು ಮತ್ತು ತಮಗೆ ಯಾವುದು ಹೊಂದಾಣಿಕೆ ಆಗುವುದು ಎಂದು ನೋಡುವರು. ಎರಡನೇಯದಾಗಿ, ಸ್ನೇಹಿತರ ಬಗ್ಗೆ ಕೆಲವೊಂದು ಪೂರ್ವಾಪೇಕ್ಷಿತಗಳು ಇರುವುದು. ಕೆಲವೊಂದು ಸಲ ಇಂತಹ ಪೂರ್ವಾಪೇಕ್ಷಿತವನ್ನು ಹುಡುಕುವುದು ತುಂಬಾ ಕಠಿಣವಾಗಿರುವುದು. ಇವರು ಒಂದು ರೀತಿಯಲ್ಲಿ ಸ್ಪಷ್ಟತೆಗೆ ಬರುವ ಪ್ರೀತಿ ಅನ್ನುವ ಪದವನ್ನು ಬಳಸುವುದು ತುಂಬಾ ಕಡಿಮೆ.

ಕನ್ಯಾ
ಹೌದು, ಕನ್ಯಾ ರಾಶಿಯವರು ಯಾವಾಗಲೂ ಪರಿಪೂರ್ಣತೆ ಬಯಸುವವರು. ಅವರು ಒಂದು ಹಾಡನ್ನು ಸಂಯೋಜನೆ ಮಾಡಬಹುದು ಮತ್ತು ಅದು ಪರಿಪೂರ್ಣವಾಗಿದೆ ಎನ್ನುವ ತನಕ ಅದನ್ನು ಯಾರಿಗೂ ಹೇಳಲ್ಲ. ಅವರು ಒಂದು ಪ್ಯಾಂಟ್ ತೆಗೆದುಕೊಂಡರೂ ಅದಕ್ಕೆ ಹೊಂದಾಣಿಕೆ ಆಗುವಂತಹ ಶರ್ಟ್ ಸಿಗುವ ತನಕ ಅವರು ಅದನ್ನು ಧರಿಸದೆ ಇರಬಹುದು. ಸಂಬಂಧದಲ್ಲಿ ಕೂಡ ಅವರು ಇದೇ ರೀತಿಯಾಗಿ ವರ್ತಿಸುವರು. ಅವರು ಸಂಪೂರ್ಣ ಹೃದಯದಿಂದ ಬದ್ಧತೆಯಲ್ಲಿ ಇಲ್ಲದೆ ಇದ್ದರೆ ಆಗ ಅವರು ಐ ಲವ್ ಯು ಎಂದು ಹೇಳುವುದೇ ಇಲ್ಲ.

ವೃಶ್ಚಿಕ
ಇವರು ಬದಲಾವಣೆಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವವರು ಅಲ್ಲ. ಮೊದಲಿಗೆ ಇವರು ಪರಿಸ್ಥಿತಿ ನೋಡುವರು, ಇದರ ಬಳಿಕ ತಮ್ಮದೇ ಆದ ವಿಧಾನದಲ್ಲಿ ಮಧ್ಯಪ್ರವೇಶ ಮಾಡುವರು. ಇವರು ತಮ್ಮ ನಿರ್ಧಾರ ಮಾಡಲು ತಮ್ಮದೇ ಆದ ಸಮಯ ತೆಗೆದುಕೊಳ್ಳುವರು ಮತ್ತು ಅಲ್ಲಿಯ ತನಕ ಅವರು ಶರಣಾಗುವುದೇ ಇಲ್ಲ. ಪ್ರೀತಿಯ ವಿಚಾರದಲ್ಲೂ ಹಾಗೆ ಮಾಡುವರು. ಇವರು ಸಮಯ ತೆಗೆದುಕೊಂಡು, ನಿರ್ಧಾರ ಮಾಡಿದ ಬಳಿಕ ಐ ಲವ್ ಯು ಹೇಳುವರು.

ಮಕರ
ಪ್ರಾಯೋಗಿಕ, ಮಹತ್ವಾಕಾಂಕ್ಷಿ ಮತ್ತು ಗುರಿ ಕೇಂದ್ರಿತವಾಗಿರುವಂತಹ ಮಕರ ರಾಶಿಯವರು ಯಾವಾಗಲೂ ವ್ಯಾಪಾರ ಮತ್ತು ವ್ಯಾಪಾರ ಎಂದು ಹೇಳುತ್ತಿರುವರು. ಇವರು ತಮ್ಮ ದೇಹಭಾಷೆ, ನಡವಳಿಕೆ ಮತ್ತು ಕೆಲಸದಿಂದ ಜನರಿಗೆ ಪ್ರೇರಣೆಯಾಗುವರು. ಇವರು ತಮ್ಮ ಹೃದಯದಲ್ಲಿ ಪ್ರೀತಿ ಇಟ್ಟುಕೊಳ್ಳುವರು. ಆದರೆ ಇವರು ಯಾವುದೇ ರೀತಿಯ ಗಂಭೀರ ಸಂಬಂಧದಲ್ಲಿ ತೊಡಗಿಕೊಳ್ಳುವುದು ತುಂಬಾ ಕಡಿಮೆ.

ಕುಂಭ
ಈ ರಾಶಿಯವರಿಗೆ ಯಾವಾಗಲೂ ಸ್ವಾತಂತ್ರ್ಯ ಬೇಕಾಗಿರುವುದು. ಆದರೆ ಸಂಬಂಧವೆಂದ ಮೇಲೆ ಸ್ವಾತಂತ್ರ್ಯವೆಲ್ಲಿದೆ ಹೇಳಿ? ಸುರಕ್ಷಿತ ವಲಯದಲ್ಲಿ ಇರಲು ಇವರು ಯಾವತ್ತೂ ಕೂಡ ಈ ಮೂರು ಅಮೂಲ್ಯವಾದ ಪದವನ್ನು ಉಪಯೋಗಿಸುವುದಿಲ್ಲ. ತಮ್ಮ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲವೆಂದು ತಿಳಿದಾಗ ಅಥವಾ ತಮ್ಮನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಗಾಗಿ ತಮ್ಮ ಸ್ವಾತಂತ್ರ್ಯವನ್ನು ಕೊಡಲು ತಯಾರಾಗಿ ಇರುವ ವೇಳೆ ಮಾತ್ರ ಇವರು ಈ ಮೂರು ಪದಗಳನ್ನು ಹೇಳುವರು. ಕುಂಭ ರಾಶಿಯವರು ಐ ಲವ್ ಯು ಹೇಳುವುದು ತೀರ ಅಪರೂಪ.



Click it and Unblock the Notifications











