Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮಗೆ ನೀಲಿಚಿತ್ರಗಳ ಚಟ ಅಂಟಿಕೊಂಡಿದೆ ಎನ್ನುವುದಕ್ಕೆ ಇದೇ ಸಾಕ್ಷಿ!!
ಕೆಲವು ಒಳ್ಳೆಯ ಅಭ್ಯಾಸಗಳು ನಮ್ಮ ಆರೋಗ್ಯ ಹಾಗೂ ದೇಹಕ್ಕೆ ತುಂಬಾ ಒಳ್ಳೆಯದು. ಇನ್ನು ಕೆಲವು ಕೆಟ್ಟ ಅಭ್ಯಾಸಗಳು ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುವುದು. ಇದು ಮಾನಸಿಕವಾಗಿಯೂ ನಮ್ಮ ಮೇಲೆ ಅಗಾಧ ಪರಿಣಾಮ ಬೀರುವುದು. ಇಂತಹವುಗಳಲ್ಲಿ ಕೆಲವು ಕೆಟ್ಟ ಅಭ್ಯಾಸಗಳೆಂದರೆ ಅದು ಮದ್ಯಪಾನ, ಧೂಮಪಾನ, ಮಾದಕ ದ್ರವ್ಯ ಸೇವನೆ ಇತ್ಯಾದಿಗಳು. ಇದು ಸಾಮಾಜಿಕವಾಗಿ ನಮ್ಮನ್ನು ಮೂಲೆಗುಂಪು ಮಾಡುವುದರ ಜತೆಗೆ ಹಲವಾರು ರೀತಿಯ ಸಮಸ್ಯೆ ಉಂಟು ಮಾಡುವುದು. ಇಂತಹ ಸಂದರ್ಭದಲ್ಲಿ ಮುಖ್ಯವಾಗಿ ಇಂತಹ ಚಟಗಳಿಂದ ಮುಕ್ತರಾಗಿ ಒಳ್ಳೆಯ ಜೀವನ ಸಾಗಿಸುವತ್ತ ಗಮನಹರಿಸಬೇಕು. ಇಂತಹ ಒಂದು ಚಟವೆಂದರೆ ಅದು ನೀಲಿ ಚಿತ್ರಗಳ ವೀಕ್ಷಣೆ.
ಇದು ಬಹಿರಂಗವಾಗಿ ಯಾರಿಗೂ ತಿಳಿಯದೆ ಇದ್ದರೂ ಮಾನಸಿಕ ಹಾಗೂ ಕೆಲವೊಮ್ಮೆ ದೈಹಿಕವಾಗಿಯೂ ಇದರಿಂದ ಹಾನಿಯಾಗುವುದು. ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಎನ್ನುವುದು ತುಂಬಾ ಅಗ್ಗವಾಗಿ ಸಿಗುವ ಕಾರಣದಿಂದ ಇಂತಹ ನೀಲಿ ಚಿತ್ರಗಳ ವೀಕ್ಷಣೆ ಮಾಡುವುದು ಬಲು ಸುಲಭವಾಗಿದೆ. ಇದರಿಂದಾಗಿಯೇ ಇಂದಿನ ಯುವ ಜನತೆಯು ಇಂತಹ ಚಟಗಳಿಗೆ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ. ಆದರೆ ಯಾವುದೇ ಅಭ್ಯಾಸವು ಹಿತಮಿತವಾಗಿದ್ದರೆ ಒಳ್ಳೆಯದು.
ಅದೇ ಅದು ಒಂದು ಹಂತ ದಾಟಿದರೆ ಅದರಿಂದ ಅಪಾಯ ಎನ್ನುವುದು ಕಟ್ಟಿಟ್ಟ ಬುತ್ತಿ. ಅದೇ ರೀತಿಯಾಗಿ ನೀಲಿ ಚಿತ್ರ ವೀಕ್ಷಣೆ ಕೂಡ ಮಿತವಾಗಿ, ಯಾವಾಗಲೊಮ್ಮೆ ನೋಡುತ್ತಲಿದ್ದರೆ ಯಾವುದೇ ಚಿಂತೆಯಿಲ್ಲ. ಆದರೆ ಅದನ್ನು ಪದೇ ಪದೇ ವೀಕ್ಷಣೆ ಮಾಡಿ, ಅದೇ ಒಂದು ಗೀಳಾಗಿದ್ದರೆ ಅದರಿಂದ ವೈವಾಹಿಕ ಸಂಬಂಧದ ಮೇಲೂ ಪರಿಣಾಮ ಬೀರುವುದು ಮತ್ತು ಮಾನಸಿಕವಾಗಿಯು ಕೆಲವೊಂದು ಸಮಸ್ಯೆಗಳು ಕಂಡುಬರುವುದು. ನೀಲಿ ಚಿತ್ರಗಳ ಚಟವು ನಿಮಗೆ ಅಂಟಿಕೊಂಡಿದೆ ಎನ್ನುವುದರ ಐದು ಲಕ್ಷಣಗಳನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ನೀಲಿ ಚಿತ್ರಗಳ ಬಯಕೆ ನಿಮಗೆ ಕಾಡುವುದು
ಯಾವುದೇ ರೀತಿಯ ಸಿಹಿ ಅಥವಾ ತಿಂಡಿ ತಿನ್ನಬೇಕೆಂಬ ಬಯಕೆಯು ನಮ್ಮನ್ನು ಕೆಲವೊಂದು ಸಲ ಕಾಡುವುದು ಇದೆ. ಅದೇ ರೀತಿಯಾಗಿ ದಂಪತಿಯು ಚುಂಬನ ಮಾಡುತ್ತಿರುವುದು ಅಥವಾ ನಿಮ್ಮ ಸಂಗಾತಿಯು ಯಾವುದೇ ರೀತಿಯ ಸೆಕ್ಸಿಯಾಗಿರುವ ಸಂದೇಶವು ಬಂದರೆ ಆಗ ನಿಮಗೆ ಕೂಡ ನೀಲಿ ಚಿತ್ರಗಳನ್ನು ನೋಡಬೇಕು ಎನ್ನುವ ಬಯಕೆ ಆಗುವುದು.

ಈ ಅಭ್ಯಾಸದ ಬಗ್ಗೆ ತಪ್ಪಿತಸ್ಥ ಅಥವಾ ನಾಚಿಕೆಯಾಗುವುದು
ಈ ಅಭ್ಯಾಸದ ಬಗ್ಗೆ ನಿಮಗೆ ತುಂಬಾ ನಿರಾಶೆ ಹಾಗೂ ಗೊಂದಲವು ಉಂಟಾಗುವುದು. ಆದರೆ ನೀವು ಎಷ್ಟೇ ಕಷ್ಟಪಟ್ಟು ಪ್ರಯತ್ನ ಮಾಡಿದರೂ ಈ ಅಭ್ಯಾಸದಿಂದ ದೂರ ಉಳಿಯಲು ನಿಮ್ಮಿಂದ ಆಗದು. ನೀಲಿ ಚಿತ್ರಗಳಿಗೆ ಗೀಳು ಅಂಟಿಕೊಂಡಿರುವ ಕಾರಣದಿಂದಾಗಿ ಜೀವನದ ಬೇರೆ ಬೇರೆ ಹಂತಗಳ ಮೇಲೂ ಅದರ ಪರಿಣಾಮ ಬೀರುವುದು ಮತ್ತು ನೀವು ಸಮಾಜ ವಿರೋಧಿ ಅಥವಾ ಬೇರೆ ಕೃತ್ಯಗಳಲ್ಲಿ ತೊಡಗಬಹುದು.

ಭಿನ್ನ ರೀತಿಯ ನೀಲಿ ಚಿತ್ರಕ್ಕಾಗಿ ಹುಡುಕಾಡುತ್ತಿರುತ್ತೀರಿ
ನಿಮಗೆ ಒಂದೇ ರೀತಿಯ ನೀಲಿ ಚಿತ್ರಗಳನ್ನು ನೋಡಿ ನೋಡಿ ಬೇಸರ ಮೂಡಿರುವುದು. ಇದರಿಂದಾಗಿ ನೀವು ಮತ್ತಷ್ಟು ಸಾಹಸಮಯವಾಗಿರುವಂತಹ ನೀಲಿಚಿತ್ರ ನೋಡಲು ಬಯಸುತ್ತೀರಿ. ತುಂಬಾ ವಿಚಿತ್ರ, ವಿಲಕ್ಷಣವಾಗಿರುವಂತಹ ನೀಲಿ ಚಿತ್ರಗಳನ್ನು ನೋಡಲು ಬಯಸುವಿರಿ. ನೀವು ಕಾನೂನನ್ನು ಉಲ್ಲಂಘನೆ ಮಾಡುವಿರಿ ಮತ್ತು ಕಾನೂನು ಬಾಹಿರವಾಗಿ ಇದನ್ನು ಪಡೆಯಲು ಬಯಸುವಿರಿ.

ಸಂಗಾತಿ ಕಡೆಗೆ ನಿಮಗೆ ಹೆಚ್ಚಿನ ಆಕರ್ಷಣೆ ಉಳಿದಿಲ್ಲ
ಸಂಗಾತಿ ಜತೆಗಿನ ಸೆಕ್ಸ್ ತುಂಬಾ ವಿರಳವಾಗಿದೆ ಮತ್ತು ಇದರಲ್ಲಿ ತೊಡಗಿಕೊಂಡರೂ ನಿಮಗೆ ಯಾವುದೇ ರೀತಿಯ ಸಂಭ್ರಮವು ಸಿಗುವುದೇ ಇಲ್ಲ. ನಿಮ್ಮಿಬ್ಬರ ನಡುವಿನ ಆಕರ್ಷಣೆಯು ಕಳೆದುಹೋಗಿದೆ ಮತ್ತು ನೀವು ಮತ್ತಷ್ಟು ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡಿ ಅದರಿಂದ ಸಂತೋಷ ಪಡೆಯಲು ಬಯಸುವಿರಿ.

ಸೆಕ್ಸ್ ಅಂದರೆ ನೀಲಿ ಚಿತ್ರ, ಇದು ನಿಜ ಜೀವನದಲ್ಲೂ ಆಗಬೇಕು
ಸಂಗಾತಿಯ ಕಡೆಗೆ ನಿಮ್ಮ ಆಕರ್ಷಣೆಯು ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ನಿಮ್ಮ ಪ್ರಕಾರ ಆಕೆ/ಆತ ಲೈಂಗಿಕ ವಿಭಾಗದಲ್ಲಿ ಕೊರತೆ ಅನುಭವಿಸುತ್ತಿದ್ದಾರೆ. ನೀಲಿ ಚಿತ್ರದಲ್ಲಿ ಇರುವಂತೆ ನಿಮ್ಮ ಲೈಂಗಿಕ ಜೀವನವು ಇರಬೇಕೆಂದು ನೀವು ಬಯಸುವಿರಿ. ಅನ್ಯೋನ್ಯತೆ ಬಗ್ಗೆ ನಿಮಗಿರುವಂತಹ ನಿರೀಕ್ಷೆಯು ಬದಲಾಗಿರುವುದು.

ಸಂಬಂಧದಿಂದ ದೂರವಾಗುವಿರಿ
ನೀಲಿ ಚಿತ್ರಗಳ ಚಟ ಅಂಟಿಸಿಕೊಂಡಿರುವ ಪರಿಣಾಮವಾಗಿ ಸಂಬಂಧವು ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನೀವು ಸಮಾಜವಿರೋಧಿಯಾಗುವಿರಿ ಮತ್ತು ಈ ಚಟದಿಂದ ಹೊರಗೆ ಬರಲು ನಿಮಗೆ ಸಾಧ್ಯವಾಗದೆ ಇರಬಹುದು. ಈ ಕಾರಣದಿಂಧಾಗಿ ನಿಮ್ಮ ಸಂಬಂಧ, ಅನ್ಯೋನ್ಯತೆ ಮತ್ತು ಇತರ ಎಲ್ಲವೂ ಪರಿಣಾಮವನ್ನು ಎದುರಿಸಲಿದೆ.

ಲೈಂಗಿಕ ಜೀವನವು ಹಾಳಾಗಿ ಹೋಗಬಹುದು
ನಿಮಗೆ ಸೆಕ್ಸ್ ನಲ್ಲಿ ಆಸಕ್ತಿಯೇ ಕಡಿಮೆಯಾಗಬಹುದು. ನೀವು ಮಾಡುವಂತಹ ಮುಖ್ಯ ಕೆಲಸವೆಂದರೆ ಯಾವಾಗಲೂ ನೀಲಿ ಚಿತ್ರಗಳಿಗೆ ಹತ್ತಿರ ಬರುವುದು. ನೀವು ಡೇಟ್ ಗೆ ಹೋಗುವುದು ಅಥವಾ ಬೇರೆ ವ್ಯಕ್ತಿಯ ಜತೆಗೆ ಯಾವುದೇ ರೀತಿಯ ಸಂಬಂಧ ಬೆಳೆಸುವುದನ್ನು ಇಷ್ಟಪಡುವುದಿಲ್ಲ.



Click it and Unblock the Notifications