ಹುಟ್ಟಿದ ದಿನ ನಿಮ್ಮ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುವುದು?

ಜ್ಯೋತಿಷ್ಯವು ನಮ್ಮ ಭವಿಷ್ಯವನ್ನು ತುಂಬಾ ಚೆನ್ನಾಗಿ ಹೇಳಬಲ್ಲದು ಎಂದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಅದೇ ರೀತಿಯಾಗಿ ಜ್ಯೋತಿಷ್ಯದಿಂದ ನಾವು ಮುಂದಿನ ಜೀವನದ ಬಗ್ಗೆ ತಿಳಿದುಕೊಂಡು ಬರುವಂತಹ ಸಮಸ್ಯೆಗಳನ್ನು ಹೇಗೆ ಎದುರಿಸಬಹುದು ಮತ್ತು ಅದಕ್ಕೆ ಪರಿಹಾರವೇನು ಎಂದು ತಿಳಿಯಬಹುದು. ನಾವು ಹುಟ್ಟಿದ ದಿನಾಂಕ ಹಾಗೂ ಸಮಯವು ಜ್ಯೋತಿಷ್ಯದಲ್ಲಿ ಅತೀ ಮುಖ್ಯವಾಗಿರುವುದು. ಅದೇ ರೀತಿಯಾಗಿ ನಾವು ಹುಟ್ಟಿದ ದಿನವು ಮಹತ್ವ ಪಡೆಯುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ನಾವು ಹುಟ್ಟಿದಂತಹ ದಿನವು ನಮ್ಮ ವ್ಯಕ್ತಿತ್ವದ ಮೇಲೆ ಹೆಚ್ಚಿನ ಪರಿಣಾಮ ಬೀರುವುದು ಎಂದು ಹೇಳಲಾಗಿದೆ. ಈ ಲೇಖನದಲ್ಲಿ ನಾವು ಹುಟ್ಟಿದ ದಿನವು ನಮ್ಮ ವ್ಯಕ್ತಿತ್ವದ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂದು ತಿಳಿದುಕೊಳ್ಳುವ.

day of birth

ದಿನಗಳು ಹಾಗೂ ಜ್ಯೋತಿಷ್ಯಕ್ಕೆ ಇರುವಂತಹ ಕೆಲವೊಂದು ಸಂಬಂಧಗಳು ಭಾನುವಾರವು ಸೂರ್ಯನಿಗೆ ಸಂಬಂಧಿಸಿದಾದರೆ, ಅದೇ ಸೋಮವಾರವು ಚಂದ್ರ ಮತ್ತು ಮಂಗಳವಾರವು ಮಂಗಳನಿಗೆ, ಬುಧವಾರವು ಬುಧನಿಗೆ, ಗುರುವಾರವು ಗುರು, ಶುಕ್ರವಾರವು ಶುಕ್ರ ಮತ್ತು ಶನಿವಾರವು ಶನಿಗೆ ಸಂಬಂಧಿಸಿದ್ದಾಗಿದೆ. ಈ ದಿನಗಳನ್ನು ನೋಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು ತಿಳಿಯುವ.

ಸೋಮವಾರ

ಸೋಮವಾರ

ಸೋಮವಾರದಂದು ಹುಟ್ಟಿದಂತಹ ವ್ಯಕ್ತಿಗಳು ಸ್ವಪ್ರೇರಣೆ ಹೊಂದಿರುವರು. ಇವರು ತುಂಬಾ ವಿನಯಶೀಲ ಹಾಗೂ ಮೃಧು ಸ್ವಭಾವದವರು. ಇವರು ಸುಖ ಹಾಗೂ ದುಃಖವನ್ನು ಸಮಾನ ರೀತಿಯಲ್ಲಿ ಸ್ವೀಕರಿಸಬಲ್ಲರು. ಆರಂಭದ ಕೆಲವು ವರ್ಷಗಳಲ್ಲಿ ಇವರಿಗೆ ಶಿಕ್ಷಣವನ್ನು ದ್ವೇಷಿಸುವರು. ಆದರೆ ಇದರ ಬಳಿಕ ಅವರು ತಮ್ಮ ಸ್ವತಂತ್ರದೊಂದಿಗೆ ಮುನ್ನಡೆಗೆ ಬರುವರು.

ಮಂಗಳವಾರ

ಮಂಗಳವಾರ

ಮಂಗಳವಾರದಂದು ಹುಟ್ಟಿರುವಂತಹ ವ್ಯಕ್ತಿಗಳು ಬೆಂಕಿ ಉಂಡೆಗಳಂತೆ ಇರುವರು. ಈ ಸಿಟ್ಟಿನ ಗುಣದಿಂದಾಗಿ ಅವರು ತಮ್ಮ ಪ್ರೀತಿಯ ಸಂಬಂಧದಲ್ಲಿ ಯಾವಾಗಲೂ ಸಮಸ್ಯೆಗಳನ್ನು ಎದುರಿಸುತ್ತಾ ಇರುವರು. ಇವರು ತಮ್ಮ ಜೀವನದ ಉದ್ದಕ್ಕೂ ತುಂಬಾ ಅಂಹಕಾರಿಗಳಾಗಿರುವರು.

ಬುಧವಾರ

ಬುಧವಾರ

ಬುಧವಾರದಂದು ಹುಟ್ಟಿರುವಂತಹ ಜನರು ತುಮಬಾ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಇಚ್ಛೆಯನ್ನಿಡುವಂತಹವರು ಆಗಿರುವರು. ಇವರಲ್ಲಿ ಇರುವಂತಹ ಭಯದ ಸ್ವಭಾವದಿಂದಾಗಿ ಯಾವಾಗಲೂ ಇವರು ತುಂಬಾ ಸರಳ ಹಾಗೂ ನಕಾರಾತ್ಮಕವಾಗಿ ಆಲೋಚನೆ ಮತ್ತು ಅಂತಹ ಕೆಲಸ ಮಾಡುವುದರಿಂದ ದೂರವಿರುವರು. ಇವರು ತಮ್ಮ ಬುದ್ಧಿವಂತಿಕೆಯಿಂದ ತುಂಬಾ ಗುರುತಿಸಲ್ಪಡುವರು. ಇದರಿಂದಾಗಿ ಇವರನ್ನು ಮೋಸ ಮಾಡುವುದು ಅಷ್ಟು ಸುಲಭದ ಮಾತಲ್ಲ.

ಗುರುವಾರ

ಗುರುವಾರ

ಗುರುವಾರದಂದು ಹುಟ್ಟಿದಂತಹ ವ್ಯಕ್ತಿಗಳು ತುಂಬಾ ಜಾಣ ಹಾಗೂ ಸಾಹಸ ಪ್ರವೃತ್ತಿ ಹೊಂದಿರುವರು. ಇವರು ತುಂಬಾ ಕಠಿಣ ಪರಿಸ್ಥಿತಿಯನ್ನು ತುಂಬಾ ಸರಳವಾಗಿ ನಿಭಾಯಿಸುವರು. ಈ ವ್ಯಕ್ತಿಗಳಿಗೆ ಯಾವಾಗಲೂ ತಮ್ಮ ಸ್ನೇಹಿತರು ಹಾಗೂ ಸಂಗಾತಿಯಿಂದ ಜೀವನಪೂರ್ತಿ ಪ್ರೀತಿ ಹಾಗೂ ಬೆಂಬಲವು ಸಿಗುವುದು. ಅದೃಷ್ಟವು ಯಾವಾಗಲೂ ಇವರ ಪರವಾಗಿ ಇರುವ ಕಾರಣದಿಂದಾಗಿ ಇವರು ಅದೃಷ್ಟಶಾಲಿಗಳಾಗಿರುವರು.

ಶುಕ್ರವಾರ

ಶುಕ್ರವಾರ

ಯಾವಾಗಲೂ ನಗುಮುಖ, ಸಂತೋಷ ಮತ್ತು ಆರಾಮವಾಗಿರುವಂತಹ ವ್ಯಕ್ತಿತ್ವ ಹೊಂದಿರುವಂತಹ ಶುಕ್ರವಾರ ಹುಟ್ಟಿದ ವ್ಯಕ್ತಿಗಳನ್ನು ಯಾವುದೇ ಗುಂಪಿನಲ್ಲಿಯೂ ಗುರುತಿಸಬಹುದು. ಈ ವ್ಯಕ್ತಿಗಳು ಯಾವಾಗಲೂ ತಮ್ಮ ಸುತ್ತಲು ಇರುವಂತಹ ಜನರ ಮೇಲೆ ಪರಿಣಾಮ ಬೀರುವರು. ಇನ್ನೊಂದು ಬದಿಯಲ್ಲಿ ಈ ವ್ಯಕ್ತಿಗಳು ಕಠಿಣ ಸಮಯವನ್ನು ಎದುರಿಸುವಾಗ ತುಂಬಾ ತಾಳ್ಮೆ ವಹಿಸುವರು. ಇದರ ಪರಿಣಾಮವಾಗಿ ಅವರು ತುಂಬಾ ಕಠಿಣ ವ್ಯಕ್ತಿಗಳಾಗಿರುವರು.

ಶನಿವಾರ

ಶನಿವಾರ

ಶನಿವಾರ ಹುಟ್ಟಿರುವಂತಹ ವ್ಯಕ್ತಿಗಳಿಗೆ ಕೃಷಿ, ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು. ಹದಿಹರೆಯದಲ್ಲಿ ಇವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿರುವರು. ಆದರೆ ವರ್ಷ ಕಳೆದಂತೆ ಇವರು ತಮ್ಮ ಸುತ್ತಲು ಇರುವಂತಹ ಜನರ ಬಗ್ಗೆ ಎಚ್ಚರಿಕೆ ವಹಿಸುವರು. ಇನ್ನೊಂದು ಕಡೆಯಲ್ಲಿ ಈ ವ್ಯಕ್ತಿಗಳ ವೈವಾಹಿಕ ಜೀವನ, ಪೋಷಕರು ಮತ್ತು ಸೋದರ, ಸೋದರಿಯರ ಜತೆಗಿನ ಸಂಬಂಧವು ಯಾವಾಗಲೂ ಒತ್ತಡದಿಂದ ಕೂಡಿರುವುದು.

ಭಾನುವಾರ

ಭಾನುವಾರ

ಭಾನುವಾರದಂತು ಹುಟ್ಟಿರುವಂತಹ ವ್ಯಕ್ತಿಗಳು ಜನ್ಮತಃ ವಿಶ್ರಮಿಸಿಕೊಳ್ಳುವಂತಹ ಗುಣ ಹೊಂದಿರುವರು. ಈ ವ್ಯಕ್ತಿಗಳು ಜೀವನದಲ್ಲಿ ತುಂಬಾ ವಿಳಂಬವಾಗಿ ಪ್ರಜ್ವಲಿಸುವವರು ಮತ್ತು ಇವರ ಪರವಾಗಿ ಯಾವಾಗಲೂ ಅದೃಷ್ಟವು ಇರುವುದು. ಇದರ ಹೊರತಾಗಿ ಇವರು ಸಾಮಾಜಿಕವಾಗಿ ಬೆರೆಯುವ ವ್ಯಕ್ತಿಗಳಾಗಿರುವರು.

English summary

How Is The 'Day Of Your Birth' Influencing Your Life?

According to astrology the date and time of birth are not the only things that are important while predicting the future of the person. It is said that even the day has a huge influence on our lives. The day that we were born is supposed to have a significant impact on our personalities.
X
Desktop Bottom Promotion