Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮಹಿಳೆಯ ಗಂಟಲಿನಲ್ಲಿತ್ತು ಎರಡು ಇಂಚಿನ ಜೀವಂತ ಜಿಗಣೆ! ವಿಡಿಯೋ ನೋಡಿ...
ಮನುಷ್ಯನ ದೇಹದ ಒಳಗೆ ಹಲವಾರು ರೀತಿಯ ಕೀಟಗಳು ಹೋಗಿ ಅದು ಅಲ್ಲೇ ಜೀವಂತವಾಗಿದ್ದ ಬಗ್ಗೆ ನಾವು ಎಷ್ಟೋ ಘಟನೆಗಳನ್ನು ಓದಿಕೊಂಡಿದ್ದೇವೆ. ಕೀಟಗಳು ಸದ್ದಿಲ್ಲದೆ ಕೆಲವೊಂದು ಸಲ ಮನುಷ್ಯನ ದೇಹದೊಳಗೆ ಪ್ರವೇಶ ಮಾಡಿ ಹಾನಿಯುಂಟು ಮಾಡುವುದು. ಅವುಗಳು ದೇಹದ ಯಾವುದಾದರೂ ಒಂದು ಭಾಗದಲ್ಲಿ ಮಾಡಿರುವ ಹಾನಿಯು ಬೇರೆ ರೀತಿಯಿಂದ ನಮಗೆ ಕಾಣಿಸುವುದು. ಇಂತಹ ಸಮಯದಲ್ಲಿ ಅದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಹೋದರೆ ಪ್ರಾಣಹಾನಿ ಅಥವಾ ಯಾವುದಾದರೂ ಬೇರೆ ಸಮಸ್ಯೆಯು ಜೀವಮಾನವಿಡಿ ಕಾಡಬಹುದು.
ಇಂತಹ ಒಂದು ಘಟನೆಯು ವಿಯೆಟ್ನಾಂನಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಓದಿದಾಗ ಖಂಡಿತವಾಗಿಯೂ ನಮಗೆ ಆತಂಕವಾಗುವುದು. ಈ ಲೇಖನದಲ್ಲಿನ ವಿಡಿಯೋ ಕೂಡ ನೀವು ನೋಡಬಹುದು. ಮಹಿಳೆಯ ಗಂಟಲಿನ ಭಾಗದಲ್ಲಿ ಜಿಗಣೆಯೊಂದು ಕಂಡುಬಂದಿದೆ. ಇದನ್ನು ವೈದ್ಯರು ಹೊರಗೆ ತೆಗೆದು ಆಕೆಗೆ ಆಗುವಂತಹ ಅಪಾಯವನ್ನು ತಪ್ಪಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ನೀವು ಮುಂದಕ್ಕೆ ಓದಿ...

ಈ ವಿಚಿತ್ರ ಘಟನೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ
ಮಹಿಳೆಯ ಗಂಟಲಿನ ಭಾಗದಿಂದ ಜಿಗಣೆ ತೆಗೆದಿರುವುದು ತುಂಬಾ ವಿಚಿತ್ರ ಘಟನೆ. ವೈದ್ಯಕೀಯ ಅಧ್ಯಯನಕ್ಕಾಗಿ ಈ ಶಸ್ತ್ರಚಿಕಿತ್ಸೆಯನ್ನು ವಿಡಿಯೋ ಮಾಡಲಾಗಿದೆ.

ಘಟನೆಯು ವಿಯೆಟ್ನಾಂನಲ್ಲಿ ನಡೆದಿದೆ
ವಿಯೆಟ್ನಾಂನ ಹಾ ಗಿಯಾಂಗ್ ಪ್ರಾಂತ್ಯದ 63ರ ಹರೆಯದ ಮಹಿಳೆಯ ಗಂಟಲಿನಲ್ಲಿಯೇ ಜಿಗಣೆ ಇದ್ದದ್ದು. ಆಕೆ ಆಸ್ಪತ್ರೆಗೆ ದಾಖಲಾಗಿ ತನಗೆ ಪದೇ ಪದೇ ಮೈಗ್ರೇನ್ ಬರುತ್ತಿದೆ ಮತ್ತು ಕಳೆದ ಮೂರು ತಿಂಗಳಿಂದ ನನಗೆ ಹೀಗೆ ಆಗುತ್ತಿದೆ ಎಂದು ಆಕೆ ಹೇಳಿದ್ದಾರೆ.

ಮಹಿಳೆಯ ಗಂಟಲಿನಲ್ಲಿ ಗಡ್ಡೆಯು ಕಾಣಿಸಿಕೊಂಡಿತು!
ಹೆಚ್ಚಿನ ಪರೀಕ್ಷೆ ಮಾಡಿಸಿದ ವೇಳೆ ಮಹಿಳೆಯ ಗಂಟಲಿನ ಭಾಗದಲ್ಲಿ ಗಡ್ಡೆಯು ಕಾಣಿಸಿಕೊಂಡಿದೆ ಮತ್ತು ವೈದ್ಯರು ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಬೆಚ್ಚಿಬಿದ್ದರು. ಯಾಕೆಂದರೆ ಮಹಿಳೆಯ ಗಂಟಲಿನ ಭಾಗದಲ್ಲಿ ಎರಡು ಇಂಚು ಉದ್ದದ ಜಿಗಣೆಯು ಕಾಣಿಸಿಕೊಂಡಿದೆ. ಅದು ಕೂಡ ಜೀವಂತವಾಗಿತ್ತು.
ಮಹಿಳೆಯ ಗಂಟಲಿನಿಂದ ಜಿಗಣೆ ಹೊರತೆಗೆಯಲಾಯಿತು
ಮಹಿಳೆಯ ಗಂಟಲಿನಿಂದ ಜಿಗಣೆಯನ್ನು ಹೊರಗೆ ತೆಗೆಯಲಾಯಿತು. ಅದರಲ್ಲೂ ತುಂಬಾ ಅಚ್ಚರಿ ಮೂಡಿಸುವಂತಹ ವಿಚಾರವೇನೆಂದರೆ ಜಿಗಣೆಯು ಹೊರಗೆ ತೆಗೆದು ಅದನ್ನು ಒಂದು ಟ್ರೇಗೆ ಹಾಕುವ ತನಕವೂ ಅದು ಜೀವಂತವಾಗಿತ್ತು.

ಜಿಗಣೆ ಗಂಟಲಿನ ಭಾಗಕ್ಕೆ ಹೇಗೆ ಹೋಯಿತು?
ಸಮಯಕ್ಕೆ ಸರಿಯಾಗಿ ಮಹಿಳೆಯ ಗಂಟಲಿನ ಭಾಗದಿಂದ ಜಿಗಣೆಯನ್ನು ಹೊರಗೆ ತೆಗೆಯಲಾಗಿದೆ. ಒಂದು ವೇಳೆ ಇದು ವಿಳಂಬವಾಗುತ್ತಿದ್ದರೆ ಆಗ ಮಹಿಲೆಯ ಸೈನಸ್ ಗೆ ಇದು ಹಾನಿ ಉಂಟು ಮಾಡುತ್ತಲಿತ್ತು. ಮಹಿಳೆಯು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಆಗಾಗ ಜಲಪಾತಗಳಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಜಿಗಣೆಯು ಬಾಯಿಯೊಳಗೆ ಹೋಗಿರಬಹುದು ಎಂದು ವೈದ್ಯರು ನಂಬಿದ್ದಾರೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications
