Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆ ನಿಂತುಕೊಂಡು ಪತ್ನಿಯ ಪ್ರೀತಿ ಪರೀಕ್ಷಿಸಿದ ಪತಿ!
ಕುಡಿದ ಮತ್ತಿನಲ್ಲಿ ಜನರು ಏನು ಮಾಡುತ್ತಾರೆ ಎಂದೇ ಕೆಲವೊಮ್ಮೆ ತಿಳಿಯುವುದಿಲ್ಲ. ಯಾಕೆಂದರೆ ನಶೆ ತಲೆಗೆ ಏರಿದ ಬಳಿಕ ಜನರಿಗೆ ತನ್ನ ಸುತ್ತಲಿನ ಜಗತ್ತಿನ ಅರಿವು ಇರುವುದಿಲ್ಲ. ಹೀಗಾಗಿ ಕೆಲವೊಂದು ಸಲ ಮದ್ಯ ಹೊಟ್ಟೆಗೆ ಇಳಿದ ಬಳಿಕ ಕೋತಿ ಚೇಷ್ಠೆಗಳು ಶುರುವಾಗುವುದು. ಇದು ಕೆಲವೊಮ್ಮೆ ತುಂಬಾ ಅಪಾಯಕಾರಿ ಹಾಗೂ ಜೀವಕ್ಕೆ ಹಾನಿ ಉಂಟು ಮಾಡಬಹುದು. ಕುಡಿದ ವೇಳೆ ಭಾವನೆಗಳು ಕೂಡ ತಮ್ಮ ಉನ್ನತ ಮಟ್ಟದಲ್ಲಿ ಇರುವುದು ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಇಲ್ಲೊಂದು ಘಟನೆಯು ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರೀತಿಯನ್ನೇ ಪ್ರಶ್ನಿಸಲು ಹೊರಟಿದ್ದಾನೆ. ಅದು ಕೂಡ ತುಂಬಾ ವಾಹನ ಸಂಚಾರವಿರುವಂತಹ ರಸ್ತೆಯ ಮಧ್ಯ ಭಾಗದಲ್ಲಿ ನಿಂತುಕೊಂಡು. ದುರಾದೃಷ್ಟವೆಂದರೆ ಆ ವ್ಯಕ್ತಿಗೆ ವಾಹನವೊಂದು ಬಡಿಯಿತು. ಮುಂದೇನಾಯಿತು ಎಂದು ನೀವು ತಿಳಿಯಲು ಓದುತ್ತಾ ಸಾಗಿರಿ...

ಆ ವ್ಯಕ್ತಿಯು ರಸ್ತೆ ಮಧ್ಯದಲ್ಲಿ ಜಗಳ ಮಾಡಲು ಶುರು ಮಾಡಿದ!
ತುಂಬಾ ವಾಹನ ಸಂಚಾರವಿರುಂತಹ ರಸ್ತೆ ಮಧ್ಯದಲ್ಲಿ ನಿಂತ 30ರ ಹರೆಯದ ವ್ಯಕ್ತಿಯೊಬ್ಬ ತನ್ನ ಪತ್ನಿ ಜತೆಗೆ ಜಗಳವಾಡಲು ಆರಂಭ ಮಾಡಿದ. ಕೆಲವೊಂದು ಕಾರಿನವರು ಈತನನ್ನು ತಪ್ಪಿಸಿಕೊಂಡು ಮುಂದಕ್ಕೆ ಹೋದರು. ರಸ್ತೆ ಮಧ್ಯೆ ನಿಂತಿರುವ ವ್ಯಕ್ತಿಯನ್ನು ಮಹಿಳೆಯು ಎಳೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

40 ನಿಮಿಷ ಕಾಲ ಜಗಳವು ಮುಂದುವರಿಯಿತು!
ರಸ್ತೆ ಮಧ್ಯದಲ್ಲಿ ನಿಂತಿದ್ದ ತನ್ನ ಪತ್ನಿಯನ್ನು ಸುರಕ್ಷಿತವಾಗಿ ಬದಿಗೆ ಸರಿಸಲು ಮಹಿಳೆಯು ತುಂಬಾ ಪ್ರಯತ್ನಿಸುತ್ತಿದ್ದಳು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. 40 ನಿಮಿಷ ದಂಪತಿಯು ಜಗಳವಾಡಿ ಬಳಿಕ ಈ ದುರ್ಘಟನೆಯು ನಡೆದೇ ಹೋಯಿತು.

ವ್ಯಾನ್ ಒಂದು ಆ ವ್ಯಕ್ತಿಗೆ ಬಡಿಯಿತು
ಕುಡಿದ ಮತ್ತಿನಲ್ಲಿದ್ದ ಆ ವ್ಯಕ್ತಿಯ ಮನವೊಲಿಸಲು ಮಹಿಳೆಯು ತುಂಬಾ ಪ್ರಯತ್ನ ಮಾಡುತ್ತಲಿದ್ದರು. ಆಕೆ ತನ್ನ ಪತಿಯನ್ನು ಎಳೆಯುತ್ತಾ ಮಾತನಾಡುತ್ತಿರುವುದು ಕಾಣಿಸುತ್ತಿದೆ. ಆದರೆ ಇದೇ ವೇಳೆ ವೇಗವಾಗಿ ಬಂದ ವ್ಯಾನ್ ಒಂದು ಆ ವ್ಯಕ್ತಿಗೆ ಬಡಿದಿದೆ. ಅಪಘಾತದ ರಭಸಕ್ಕೆ ಆತ ಒಮ್ಮೆ ಗಾಳಿಯಲ್ಲಿ ಮೇಲಕ್ಕೇರಿ ನೆಲಕ್ಕುರುಳಿದ್ದಾನೆ. ಇದರಿಂದ ಆತನಿಗೆ ಗಂಭೀರವಾದ ಗಾಯಗಳು ಆಗಿವೆ.
ಈ ಜಗಳಕ್ಕೆ ಕಾರಣ…
ಆ ವ್ಯಕ್ತಿ ತನ್ನ ಪತ್ನಿಯ ನಿಜವಾದ ಪ್ರೀತಿಯನ್ನು ಪರೀಕ್ಷೆ ಮಾಡಲು ಬಯಸಿದ್ದ. ಇದಕ್ಕಾಗಿ ಆತ ರಸ್ತೆ ಮಧ್ಯದಲ್ಲಿ ನಿಂತುಕೊಂಡು, ತನ್ನನ್ನು ರಕ್ಷಿಸಿದರೆ ಮಾತ್ರ ನಿನಗೆ ನನ್ನ ಮೇಲೆ ಪ್ರೀತಿ ಎಂದು ಅರ್ಥ ಎಂದು ಹೇಳುತ್ತಲಿದ್ದ. ಆತನನ್ನು ಪ್ರೀತಿಸುತ್ತಿದ್ದೇನೆ ಎಂದು ಆಕೆ ಹೇಳಿದರೂ ಅದನ್ನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಆತನಿರಲಿಲ್ಲ. ವ್ಯಾನ್ ಬಡಿಯುವ ತನಕವೂ ಆಕೆ ಆತನ ಮನವೊಲಿಕೆಗೆ ಪ್ರಯತ್ನ ಮಾಡುತ್ತಲೇ ಇದ್ದಳು. ಈ ಘಟನೆಯ ವಿಡಿಯೋ ನೋಡಿ-ಆ ವ್ಯಕ್ತಿ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ಮರೆಯಲು ಮರೆಯಬೇಡಿ.



Click it and Unblock the Notifications
