Latest Updates
-
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ!
ದೇಹದ ಪ್ರತಿಭಾಗಕ್ಕೂ ಟ್ಯಾಟೂ ಹಾಕಿಸಲು 6.6 ಲಕ್ಷ ವ್ಯಯಿಸಿದ 61 ಹರೆಯದ ವ್ಯಕ್ತಿ!
ಭೂಮಿ ಮೇಲೆ ನಾವು ಹಲವಾರು ವಿಧದ, ಹವ್ಯಾಸ ಹಾಗು ಅಭ್ಯಾಸಗಳನ್ನು ಹೊಂದಿರುವಂತಹ ಜನರನ್ನು ಕಾಣುತ್ತೇವೆ. ಕೆಲವರಿಗೆ ಸಂಗೀತ, ಇನ್ನು ಕೆಲವರಿಗೆ ನಟನೆ, ಪ್ರವಾಸ ಹೋಗುವುದು ಹೀಗೆ ಹಲವಾರು ರೀತಿಯ ಅಭ್ಯಾಸಗಳು ಇರುವುದು. ಇಂದಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಕೂಡ ಒಂದು ರೀತಿಯ ಹವ್ಯಾಸವಾಗಿ ಹೋಗಿದೆ. ಟ್ಯಾಟೂ ಹಾಕಿಕೊಳ್ಳುವ ಹುಚ್ಚು ಕೆಲವರಿಗೆ ಯಾವ ರೀತಿಯಲ್ಲಿ ವ್ಯಾಪಿಸಿಕೊಂಡಿರುತ್ತದೆ ಎಂದರೆ ಅದನ್ನು ಹೇಳಲು ಸಾಧ್ಯವಿಲ್ಲ. ಸಂಪೂರ್ಣ ದೇಹವನ್ನು ವ್ಯಾಪಿಸಿಕೊಂಡಂತೆ ಕೆಲವರು ಟ್ಯಾಟೂ ಹಾಕಿಸಿಕೊಳ್ಳುವರು.
ಇನ್ನು ಕೆಲವರು ಕಣ್ಣಿಗೂ ಟ್ಯಾಟೂ ಹಾಕಿಸಿಕೊಂಡಿರುವ ಬಗ್ಗೆ ನಾವು ಇದೇ ವಿಭಾಗದಲ್ಲಿ ಓದಿದ್ದೇವೆ. ಪ್ರತೀ ಸಲ ಟ್ಯಾಟೂ ಹಾಕಿಕೊಳ್ಳಲು ಸಾವಿರಾರು ರೂ. ಖರ್ಚು ತಗಲುವುದು. ಇದರಿಂದ ಸಂಪೂರ್ಣ ದೇಹದ ಮೇಲೆ ಟ್ಯಾಟೂ ಹಾಕಿಕೊಳ್ಳಬೇಕೆಂದರೆ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ತಮ್ಮ ಹವ್ಯಾಸವನ್ನು ಕೃತಿರೂಪಕ್ಕೆ ಇಳಿಸಲು ಹೆಚ್ಚಿನವರು ಹಣದ ಬಗ್ಗೆ ಆಲೋಚನೆ ಮಾಡುವುದಿಲ್ಲ. ರಾಯ್ ಹೌಟನ್ ಎಂಬಾತ ತನ್ನ ದೇಹದ ಪ್ರತಿಯೊಂದು ಭಾಗದಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅವನ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

61ರ ಹರೆಯದ ಯುವಕ!
ರಾಯ್ ಹೌಟನ್ ಮ್ಯಾಂಚೆಸ್ಟರ್ ನಿವಾಸಿಯಾಗಿದ್ದು, ಅವರಿಗೆ ಈಗ 61ರ ಹರೆಯ. ತನ್ನ ದೇಹದ ಪ್ರತಿಯೊಂದು ಭಾಗದಲ್ಲೂ ಟ್ಯಾಟೂ ಹಾಕಿಸಿಕೊಳ್ಳುವುದಾಗಿ ಅವರು ಹೆಳಿದ್ದಾರೆ. ಅವರು ಈಗಾಗಲೇ ತನ್ನ ಜನನೇಂದ್ರಿಯ ಮತ್ತು ಕಣ್ಣಿಗೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಈಗಾಗಲೇ ತನ್ನ ಟ್ಯಾಟೂಗಳಿಗಾಗಿ ಅವರು ಸುಮಾರು 6.6 ಲಕ್ಷ ರೂ. ವ್ಯಯಿಸಿರುವರು
ಅವರು ಟ್ಯಾಟೂಗಾಗಿ ಸುಮಾರು 6.6 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ ಮತ್ತು ಇದಕ್ಕಾಗಿ 240 ಗಂಟೆಗಳನ್ನು ವ್ಯಯಿಸಲಾಗಿದೆ. ಮ್ಯಾಂಚೆಸ್ಟರ್ ನ ದೇಹದಾರ್ಢ್ಯ ಪಟುವಾಗಿರುವ ಹೌಟನ್ ಅವರು ತನ್ನ ಜನನೇಂದ್ರಿಯಗಳಿಗೆ ಸ್ಪೇನ್ ನಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹೌಟನ್ ಈಗಲೂ ಕೂಡ 20ರ ಹರೆಯದವರಂತೆ ಕಾಣಿಸುತ್ತಾರೆ ಎಂದು ಅವರನ್ನು ಹತ್ತಿರದಿಂದ ನೋಡಿದವರು ಹೇಳುತ್ತಾರೆ.

ಟ್ಯಾಟೂ ಬಗ್ಗೆ ಅವರ ಹುಚ್ಚು ಆರಂಭವಾಗಿರುವುದು ಹೀಗೆ…
ತುಂಬಾ ಮುಜುಗರ ಉಂಟು ಮಾಡುವಂತಹ ಎಂಟು ಟ್ಯಾಟೂಗಳನ್ನು ಮುಚ್ಚುವ ಸಲುವಾಗಿ ಅವರು ಒಂದೊಂದೇ ಟ್ಯಾಟೂ ಹಾಕಿಸಿಕೊಳ್ಳಲು ಆರಂಭಿಸಿದರು. ಟ್ಯಾಟೂ ಹುಚ್ಚಿನೊಂದಿಗೆ ಹೌಟನ್ ಅವರಿಗೆ ದೇಹವನ್ನು ಬೆಳೆಸುವಂತಹ ಹವ್ಯಾಸವು ಇದೆ. ಇದರಿಂದ ಅವರು ತನ್ನದೇ ಆಗಿರುವ ಜಿಮ್ ಕೂಡ ಹೊಂದಿದ್ದಾರೆ.

ಅವರ ವೃಷಣವು 4 ಪಟ್ಟು ಊದಿಕೊಂಡಿತ್ತು!
ತನ್ನ ಜನನೇಂದ್ರೀಯ ಮತ್ತು ವೃಷಣದ ಮೇಲೆ ಟ್ಯಾಟೂ ಹಾಕಿಸಿಕೊಂಡ ವೇಳೆ ರೋಲಿಂಗ್ ಪಿನ್ ಬಳಸಿದ ಪರಿಣಾಮವಾಗಿ ವೃಷಣವು ಸುಮಾರು ನಾಲ್ಕು ಪಟ್ಟು ಊದಿಕೊಂಡಿತ್ತು. ಹೌಟನ್ ಈಗ ತನ್ನ ದೇಹವನ್ನು ನೋಡಿ ತುಂಬಾ ಪ್ರೀತಿಸುವರು ಮತ್ತು ನಗ್ನರಾಗಿ ತನ್ನನ್ನು ನೋಡಿಕೊಂಡಾಗ ಅವರಲ್ಲಿ ಒಂದು ಸಂಪೂರ್ಣತೆಯ ಭಾವವು ಮೂಡುವುದು. ಊದಿಕೊಂಡಿದ್ದ ವೃಷಣವು ಮತ್ತೆ ತನ್ನ ಸಾಮಾನ್ಯ ಸ್ಥಿತಿಗೆ ಬಂದಿದೆ ಮತ್ತು ನಗ್ನವಾಗಿ ಸುತ್ತಾಡುವ ಬೀಚ್ ಗೆ ತೆರಳಲು ಅವರಿಗೆ ಯಾವುದೇ ರೀತಿಯ ಹಿಂಜರಿಕೆಯು ಆಗುವುದಿಲ್ಲವಂತೆ. ಇದು ಚಟವೆಂದು ನಿಮಗೆ ಅನಿಸುತ್ತಿದೆಯಾ? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications
