For Quick Alerts
ALLOW NOTIFICATIONS  
For Daily Alerts

ಈತ ಇದುವರೆಗೆ ತನ್ನ ಶಿಶ್ನವನ್ನು ಸ್ವಚ್ಛ ಮಾಡಿಯೇ ಇಲ್ಲವಂತೆ! ಅಲ್ಲದೆ 40 ಹುಡುಗಿಯರ ಜತೆಗೆ ಹಾಸಿಗೆ ಹಂಚಿಕೊಂಡಿದ್ದಾನೆ

|

ಲೈಂಗಿಕ ಶಿಕ್ಷಣವೆನ್ನುವುದು ಪ್ರತಿಯೊಬ್ಬರಿಗೂ ಅತೀ ಅಗತ್ಯವಾಗಿರುವುದು. ಯಾಕೆಂದರೆ ಜೀವನದಲ್ಲಿ ಲೈಂಗಿಕ ಶಿಕ್ಷಣ ಇಲ್ಲದೆ ಇದ್ದರೆ ಆಗ ಅನಾಹುತಗಳು ಸಂಭವಿಸಬಹುದು. ಯಾಕೆಂದರೆ ಲೈಂಗಿಕ ರೋಗಗಳು ಬರಬಹುದು ಹಾಗೂ ಇದರಿಂದ ಪ್ರಾಣಹಾನಿಯೂ ಆಗಬಹುದು. ಕೆಲವರು ಸ್ನೇಹಿತರು ಹಾಗೂ ಪರಿಚಯಸ್ಥರು ಹೇಳಿರುವಂತಹ ಮಾತನ್ನು ಕೇಳಿಕೊಂಡು ಲೈಂಗಿಕ ವಿಚಾರದ ಬಗ್ಗೆ ತಪ್ಪುಗಳನ್ನು ಎಸಗುವರು. ಕೆಲವೊಂದು ಸಲ ನಮಗೆ ಯಾವುದು ತಪ್ಪು ಮತ್ತು ಯಾವುದು ಸರಿ ಎನ್ನುವ ಬಗ್ಗೆ ಗೊಂದಲವು ಉಂಟಾಗುವುದು. ಇಲ್ಲೊಬ್ಬ ವ್ಯಕ್ತಿಯು ಇದೇ ರೀತಿಯಾಗಿ ಗೊಂದಲಕ್ಕೆ ಸಿಲುಕಿದ್ದಾನೆ.

ಸ್ವಚ್ಛತೆಯು ಲೈಂಗಿಕ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಈ ವ್ಯಕ್ತಿಗೆ ತಿಳಿದೇ ಇರಲಿಲ್ಲ. ಈ ವ್ಯಕ್ತಿಯು ತನ್ನ ಜನನೇಂದ್ರೀಯವನ್ನು ತೊಳೆದುಕೊಳ್ಳುತ್ತಲೇ ಇರಲಿಲ್ಲ. ಅದು ತುಂಬಾ ಸೂಕ್ಷ್ಮ ಭಾಗವಾಗಿರುವ ಕಾರಣದಿಂದ ಸೋಪ್ ಹಾಕಿಕೊಂಡು ತೊಳೆಯುವುದು ಸರಿಯಲ್ಲವೆಂದು ಆತನು ಹಾಗೆ ಬಿಟ್ಟುಬಿಟ್ಟಿದ್ದ. ಈ ಬಗ್ಗೆ ನೀವು ಮತ್ತಷ್ಟು ಓದಿಕೊಂಡು ಹೋಗಿ...

40 ಹುಡುಗಿಯರ ಜತೆಗೆ ಹಾಸಿಗೆ ಹಂಚಿ ಕೊಂಡಿದ್ದ!

40 ಹುಡುಗಿಯರ ಜತೆಗೆ ಹಾಸಿಗೆ ಹಂಚಿ ಕೊಂಡಿದ್ದ!

24 ಹರೆಯದ ಕೇವಲ ಜಾಕ್ ಎಂದು ಗುರುತಿಸಲ್ಪಡುತ್ತಿದ್ದ, ವೃತ್ತಿಯಲ್ಲಿ ಬಾರ್ ತೆಂಡರ್ ಆಗಿದ್ದ ವ್ಯಕ್ತಿಯೊಬ್ಬ ತನ್ನ ಶಿಶ್ನವನ್ನು ಇದುವರೆಗೆ ಸ್ವಚ್ಛ ಮಾಡಿಯೇ ಇಲ್ಲ. ಕೆಲವು ಹುಡುಗಿಯರು ಆತನತ್ತ ಆಕರ್ಷಿತರಾಗಿ ಬರುತ್ತಿದ್ದರು ಮತ್ತು ಇದುವರೆಗೆ ಸುಮಾರು 40 ಹುಡುಗಿಯರ ಜತೆಗೆ ಹಾಸಿಗೆ ಹಂಚಿ ಕೊಂಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ಆತನ ಲೈಂಗಿಕ ಜೀವನ ಚೆನ್ನಾಗಿತ್ತು

ಆತನ ಲೈಂಗಿಕ ಜೀವನ ಚೆನ್ನಾಗಿತ್ತು

ಹಲವಾರು ವರ್ಷಗಳ ಕಾಲ ಜಾಕ್ ಸೆಕ್ಸ್ ತಜ್ಞೆಯಾಗಿರುವ ನಯೊಮಿ ಸುಟ್ಟನ್ ಅವರನ್ನು ಇ4ನ ಜನಪ್ರಿಯ ಕಾರ್ಯಕ್ರಮ ಸೆಕ್ಸ್ ಕ್ಲಿನಿಕ್ ನಲ್ಲಿ ಭೇಟಿಯಾದ. ತನಗೆ ಶಿಶ್ನದಲ್ಲಿ ನೋವು ಕಾಣಿಸಿಕೊಂಡಿದೆ ಮತ್ತು ಇದರಿಂದಾಗಿ ತಾನು ವಿಫಲವಾಗಿದ್ದೇನೆ ಮತ್ತು ತನಗೆ ಪರಾಕಾಷ್ಠೆ ತಲುಪಲು ಆಗುತ್ತಿಲ್ಲ ಮತ್ತು ಮುಂದೊಗಲು ತುಂಬಾ ಬಿಗಿಯಾಗಿದೆ ಎಂದು ಆತ ಹೇಳಿದ್ದಾನೆ.

Most Read: ಜಪಾನ್‌ನಲ್ಲಿ ಈ ಮೀನುಗಳು ಕಂಡುಬಂದರೆ ಭೂಕಂಪ ಖಚಿತ!

ಲೈಂಗಿಕ ರೋಗಗಳಿಗೆ ಆತ ದೊಡ್ಡ ತಾಣವಾಗಿದ್ದ…

ಲೈಂಗಿಕ ರೋಗಗಳಿಗೆ ಆತ ದೊಡ್ಡ ತಾಣವಾಗಿದ್ದ…

ಲೈಂಗಿಕ ರೋಗಗಳಿಗೆ ತಾನು ವಾಸ ತಾಣವಾಗಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ. ಸೊಂಟದ ಕೆಳಗಿನ ಭಾಗವನ್ನು ಸ್ವಚ್ಛಗೊಳಿಸಬೇಕು ಎನ್ನುವ ಬಗ್ಗೆ ತನಗೆ ತಿಳಿದೇ ಇರಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ಶಿಶ್ನದ ತುದಿ ಭಾಗದಲ್ಲಿ ಕಿರಿಕಿರಿ ಮತ್ತು ನೋವಿನ ಹೊರತಾಗಿ ಒಂದು ರೀತಿಯ ವಾಸನೆಯು ಬರುತ್ತಲಿತ್ತು. ಕಳೆದ ಆರರಿಂದ 9 ತಿಂಗಳಿನಿಂದ ಆತನಿಗೆ ಈ ರೀತಿಯ ಸಮಸ್ಯೆಯು ಕಾಣಿಸಿಕೊಂಡಿತ್ತು.

ವೈದ್ಯರು ಆತನ ಪರಿಸ್ಥಿತಿ ಬಗ್ಗೆ ಹೀಗೆ ಹೇಳುತ್ತಾರೆ….

ವೈದ್ಯರು ಆತನ ಪರಿಸ್ಥಿತಿ ಬಗ್ಗೆ ಹೀಗೆ ಹೇಳುತ್ತಾರೆ….

ಡಾ. ನಯೊಮಿ ಅವರು ಜಾಕ್ ಶಿಶ್ನವನ್ನು ಪರೀಕ್ಷೆ ಮಾಡಿದ ವೇಳೆ ಆತ ಸ್ಮೆಗ್ಮಾ ಎನ್ನುವ ಪರಿಸ್ಥಿತಿಯು ಆತನಿಗೆ ಕಾಡುತ್ತಲಿತ್ತು. ಇದು ಸತ್ತ ಚರ್ಮದ ಕೋಶಗಳು, ಎಣ್ಣೆ ಮತ್ತು ಮೊಶ್ಚಿರೈಸರ್ ನಿಂದಾಗಿ ಉಂಟಾಗುವ ಪರಿಸ್ಥಿತಿಯಾಗಿದೆ. ಈ ಕಾರಣದಿಂದಾಗಿ ಆತನ ಮುಂದೊಗಲು ತುಂಬಾ ಸೂಕ್ಷ್ಮವಾಗಿ ಅದನ್ನು ಹಿಂದಕ್ಕೆ ಎಳೆಯಲು ಸಾಧ್ಯವಾಗುತ್ತಿರಲಿಲ್ಲ.

Most Read: ಮೆದುಳೇ ಇಲ್ಲದೆ ಹುಟ್ಟಿದ ಹುಡುಗ! ಆದರೆ ಇವನ ಜೀವನದಲ್ಲಿ ನಡೆಯಿತು ಪವಾಡ!

ವೈದ್ಯರು ಆತನಿಗೆ ಸಲಹೆ ನೀಡಿದರು

ವೈದ್ಯರು ಆತನಿಗೆ ಸಲಹೆ ನೀಡಿದರು

ಶಿಶ್ನದ ಮೇಲ್ಭಾಗವನ್ನು ಮಾತ್ರ ತಾನು ತೊಳೆಯುತ್ತಿದೆ ಮತ್ತು ವೃಷಣ ಸ್ವಚ್ಛ ಮಾಡುತ್ತಿದ್ದೆ. ಆದರೆ ಮುಂದೊಗಲನ್ನು ಸ್ವಚ್ಛ ಮಾಡಲು ತನಗೆ ತುಂಬಾ ಚಿಂತೆಯಾಗುತ್ತಿತ್ತು. ಯಾಕೆಂದರೆ ಇದು ತುಂಬಾ ಸೂಕ್ಷ್ಮವಾಗಿತ್ತು. ಇದರಿಂದಾಗಿ ಅಲ್ಲಿ ಸ್ಕ್ರಬ್ ಮಾಡುವುದು ಮತ್ತು ಸೋಪ್ ಹಾಕುವುದು ಸರಿಯೆಂದು ನನಗೆ ಭಾವಿಸಿರಲಿಲ್ಲ ಎಂದು ಜಾಕ್ ಹೇಳಿದ್ದಾನೆ. ಶಿಶ್ನವನ್ನು ಸರಿಯಾಗಿ ತೊಳೆದುಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಲು ಆತನಿಗೆ ವೈದ್ಯರು ಸೂಚಿಸಿದ್ದಾರೆ. ಇದರಿಂದ ಆತ ಮತ್ತು ಆತನೊಂದಿಗೆ ದೈಹಿಕ ಸಂಪರ್ಕ ನಡೆಸುವ ಮಹಿಳೆಯರಿಗೆ ಕೂಡ ಒಳ್ಳೆಯದು ಎಂದು ವೈದ್ಯರು ಸೂಚಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

Read more about: life fact
English summary

He Never Washed His Penis, And He Had Slept With Over 40 Women!

A man who was only known as Zach has claimed to have slept with around 40 women. The man had visited 'The Sex Clinic' as he felt his penis 'failed him' when he could not 'finish.' On examination, it was found that he had a severe case of smegma which was a build-up of cells and oil on his penis shaft.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X