Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪತ್ನಿಯ ಜನನಾಂಗದೊಳಗೆ ಬೈಕ್‌ನ ಹ್ಯಾಂಡ್‌ಗ್ರಿಪ್ ತುರುಕಿದ ಪತಿ!
ಪುರುಷರು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿರುವುದು ಹೊಸತೇನಲ್ಲ. ಅದರಲ್ಲೂ ಕೆಲವೊಂದು ಸಲ ತುಂಬಾ ಕ್ರೂರವಾಗಿ ಇಂತಹ ಶೋಷಣೆ ನಡೆಯುತ್ತಿದೆ. ಇಂತಹ ಕೃತ್ಯಗಳನ್ನು ವಿಕೃತರು ಮಾತ್ರ ಮಾಡಲು ಸಾಧ್ಯ. ಕೆಲವು ವರ್ಷಗಳ ಮೊದಲು ದೆಹಲಿಯಲ್ಲಿ ನಡೆದಿರುವಂತಹ ನಿರ್ಭಯ ಪ್ರಕರಣದಲ್ಲಿ ನೋಡಿದರೆ, ಆ ಯುವತಿಯ ಮೇಲೆ ಅತೀ ಕ್ರೂರವಾಗಿ ದಾಳಿ ಮಾಡಲಾಗಿತ್ತು. ಅತ್ಯಾಚಾರದ ಬಗ್ಗೆ ಮಾತನಾಡುತ್ತಾ ಹೋದರೆ ದೇಶದಲ್ಲಿ ಪ್ರತೀ ದಿನವೂ ಅತ್ಯಾಚಾರದ ಸಂಖ್ಯೆಯು ಹೆಚ್ಚುತ್ತಲೇ ಹೋಗುತ್ತಿದೆ ಮತ್ತು ತುಂಬಾ ಕ್ರೂರವಾಗಿ ಅತ್ಯಾಚಾರ ಮಾಡುತ್ತಿರುವ ಘಟನೆಗಳ ಬಗ್ಗೆ ಕೇಳುತ್ತೇವೆ.

ಇಲ್ಲಿ ಮಹಿಳೆಯ ಮೇಲೆ ಪತಿಯೇ ಲೈಂಗಿಕ ಕ್ರೂರತೆ ಪ್ರದರ್ಶಿಸಿರುವ ಘಟನೆಯು ನಡೆದಿದೆ. ಯಾಕೆಂದರೆ ಆ ಮಹಿಳೆಯು ಆತನ ನಿಷ್ಠೆಯನ್ನು ಪ್ರದರ್ಶಿಸಿರುವುದು ಇದಕ್ಕೆ ಕಾರಣವಾಗಿದೆ. ಇದಕ್ಕೆ ಆತ ತುಂಬಾ ಕ್ರೂರವಾಗಿ ಪ್ರತಿಕ್ರಿಯಿಸಿದ್ದಾನೆ. ಬೈಕ್‌ನ ಹ್ಯಾಂಡಲ್ ಗ್ರಿಪ್ ನ್ನು ಆಕೆಯ ಜನನಾಂಗದೊಳಗಡೆ ತುರುಕಿದ್ದಾನೆ!
ಈ ಘಟನೆಯು ಇಂದೋರ್ ನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದೆ. ಆದರೆ ಪತ್ನಿಯು ತುಂಬಾ ಹೆದರಿದ್ದ ಕಾರಣ ಮತ್ತು ತನ್ನ ಪತಿಯ ಬಗ್ಗೆ ದೂರು ನೀಡಿದರೆ ಆಗ ಕೊಲ್ಲುತ್ತಾನೆ ಎನ್ನುವ ಭೀತಿಯಿಂದಾಗಿ ಆಕೆ ಯಾರೊಂದಿಗೂ ಈ ವಿಚಾರವನ್ನು ಹೇಳಿರಲಿಲ್ಲ. ಈ ಘಟನೆಯ ಬಗ್ಗೆ ದೂರು ಕೂಡ ನೀಡಲಿಲ್ಲ. ಆದರೆ ಆಕೆಯ ಆರೋಗ್ಯ ಕೆಡುತ್ತಾ ಹೋದ ವೇಳೆ ವೈದ್ಯರ ಬಳಿಗೆ ಹೋದಾಗ ವೈದ್ಯರು ಆಕೆಯ ಹೊಟ್ಟೆಯಲ್ಲಿ ಹ್ಯಾಂಡಲ್ ಗ್ರಿಪ್ ನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಮಹಿಳೆಯ ಗರ್ಭಕಂಠ, ಮೂತ್ರನಾಳದ ಮೂಲಕ ಹೋಗಿದ್ದ ಹ್ಯಾಂಡ್ ಗ್ರಿಪ್ ಅಂತಿಮವಾಗಿ ಸಣ್ಣ ಕರುಳಿನಲ್ಲಿತ್ತು. ಇದನ್ನು ತಕ್ಷಣವೇ ವೈದ್ಯರು ಹೊರಗೆ ತೆಗೆದಿದ್ದಾರೆ. ಈ ಪ್ರಕರಣವು ಬೆಳಕಿಗೆ ಬರುತ್ತಿದ್ದಂತೆ ಪತಿಯನ್ನು ಪೊಲೀಸರು ಬಂಧಿಸಿ, ದೂರು ದಾಖಲಿಸಿಕೊಂಡಿದ್ದಾರೆ. ಈ ಘಟನೆಯು ಖಂಡಿತವಾಗಿಯೂ ಮಹಿಳೆಯರಿಗೆ ತುಂಬಾ ಆಘಾತವನ್ನು ಉಂಟು ಮಾಡುವುದು. ಇಂತಹ ಘಟನೆಗಳು ನಡೆಯುತ್ತಲೇ ಇರಬಹುದು. ಆದರೆ ಇದರ ಬಗ್ಗೆ ಮಹಿಳೆಯರು ದೂರು ನೀಡಲು ಮುಂದೆ ಬರದೇ ಇರಬಹುದು. ಈ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಕಮೆಂಟ್ ಬಾಕ್ಸ್ ಗೆ ಕ್ಲಿಕ್ ಮಾಡಿ.



Click it and Unblock the Notifications


