Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈತ ಬೆನ್ನು ನೋವು ಕಡಿಮೆ ಮಾಡಿಕೊಳ್ಳುವುದಕ್ಕೆ ವೀರ್ಯ ಚುಚ್ಚಿಕೊಳ್ಳುತ್ತಾನಂತೆ!!
ದೇಹದಲ್ಲಿ ಏನಾದರೂ ಅನಾರೋಗ್ಯವು ಕಾಣಿಸಿಕೊಂಡಾಗ ಮೊದಲಿಗೆ ಸ್ವಯಂಚಿಕಿತ್ಸೆ ಮಾಡಿಸಿಕೊಳ್ಳತ್ತಾರೆ. ಇನ್ನು ಕೆಲವು ಮಂದಿ ನೇರವಾಗಿ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಸ್ವಯಂ ಚಿಕಿತ್ಸೆ ಎನ್ನುವುದು ತುಂಬಾ ಅಪಾಯಕಾರಿ. ಇಂತಹ ಚಿಕಿತ್ಸೆಯಲ್ಲಿ ಕೆಲವೊಂದು ವಿಚಿತ್ರ ಚಿಕಿತ್ಸೆಗಳೂ ಇವೆ. ವೈದ್ಯಕೀಯ ಲೋಕದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ.
ಇದನ್ನು ನಾವು ಕೇಳಿ ತಿಳಿದುಕೊಂಡಿದ್ದೇವೆ ಮತ್ತು ಕೆಲವನ್ನು ನಾವು ಓದಿದ್ದೇವೆ. ಇದು ನಮಗೆ ತುಂಬಾ ಅಚ್ಚರಿಯನ್ನು ತರುತ್ತಿದೆ. ಆದರೆ ಇಲ್ಲೊಬ್ಬ ತನ್ನ ಮುಂಗೈಗೆ ವೀರ್ಯವನ್ನು ಚುಚ್ಚಿಕೊಂಡಿದ್ದಾನೆ. ಇದು ಯಾಕೆಂದು ನೀವು ಪ್ರಶ್ನಿಸಬಹುದು. ಆತ ತನ್ನ ಬೆನ್ನು ನೋವಿನ ಸಮಸ್ಯೆಯಿಂದ ಪಾರಾಗಲು ಕಳೆದ 18 ತಿಂಗಳಿಂದ ಈ ರೀತಿ ಮಾಡಿಕೊಳ್ಳುತ್ತಿದ್ದಾನೆ! ಈ ವಿಚಿತ್ರ ಘಟನೆ ಬಗ್ಗೆ ನೀವು ಮುಂದೆ ಓದಿಕೊಳ್ಳಿ.

ತೀವ್ರ ನೋವಿನೊಂದಿಗೆ ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾದ!
ಡುಬ್ಲಿನ್ ಆಸ್ಪತ್ರೆಗೆ ಐರ್ಲೆಂಡ್ 33 ಹರೆಯದ ಪ್ರಜೆಯೊಬ್ಬ ಸೊಂಟದ ಕೆಳಭಾಗದಲ್ಲಿ ತೀವ್ರ ನೋವಿದೆ ಎಂದು ಹೇಳಿಕೊಂಡು ದಾಖಲಾಗಿದ್ದ. ಆದರೆ ವೈದ್ಯರು ಆತನ ಮುಂಗೈ ಕೆಂಪಾಗಿರುವುದು ಮತ್ತು ಊತ ಕಾಣಿಸಿಕೊಂಡಿರುವುದು ಕಾಣಿಸಿದೆ.

ತನ್ನ ವಿಚಿತ್ರ ವೈದ್ಯಕೀಯ ಕ್ರಮದಿಂದ ಆತ ಚಿಕಿತ್ಸೆ ನೀಡುತ್ತಿದ್ದ!
ದೀರ್ಘ ಸಮಯದಿಂದ ಕಾಡುತ್ತಿದ್ದಂತಹ ಬೆನ್ನು ನೋವಿನ ನಿವಾರಣೆ ಮಾಡಿಕೊಳ್ಳಲು ಈ ವ್ಯಕ್ತಿಯು ತುಂಬಾ ವಿಚಿತ್ರವಾದ ಕ್ರಮವನ್ನು ಅನುಸರಿಸಿದ್ದ. ಆತ ತನ್ನ ಮುಂಗೈಗೆ ವೀರ್ಯವನ್ನು ಚುಚ್ಚುವಂತಹ ವಿಚಿತ್ರ ಚಿಕಿತ್ಸಾ ಪದ್ಧತಿ ಅನುಸರಿಸಿದ್ದ. ಬೆನ್ನು ನೋವಿನ ನಿವಾರಣೆ ಮಾಡುವ ಸಲುವಾಗಿ ಕಳೆದ 18 ತಿಂಗಳಿಂದ ಆತ ತನ್ನದೇ ವೀರ್ಯವನ್ನು ಮುಂಗೈಗೆ ಚುಚ್ಚಿಕೊಳ್ಳುತ್ತಲಿದ್ದ.

ವೈದ್ಯರು ಎಕ್ಸ್ ರೇ ತೆಗೆದರು
ವೈದ್ಯರು ಇದನ್ನು ನೋಡಿದ ಬಳಿಕ ಎಕ್ಸ್ ರೇ ಮಾಡಿಸಲು ಸೂಚಿಸಿದರು. ವೀರ್ಯವು ತುಂಬಾ ಮೃಧು ಅಂಗಾಂಶಗಳಿಗೆ ಸೋರಿಕೆಯಾದ ಪರಿಣಾಮ ಸೋಂಕು ಉಂಟಾಗಿತ್ತು. ತಿಂಗಳಿಗೊಮ್ಮೆ ಆತ ತನ್ನದೇ ವೀರ್ಯದ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದ ಕಾರಣದಿಂದ ವೀರ್ಯವು ಸೂಕ್ಷ್ಮ ಅಂಗಾಂಶಗಳಿಗೆ ತಲುಪಿ, ಅದರಿಂದ ಸೋಂಕು ಕಾಣಿಸಿಕೊಂಡಿತ್ತು. ಇದರ ಪರಿಣಾಮವಾಗಿ ಚರ್ಮದ ಸೋಂಕು ಸೆಲ್ಯುಲೈಟಿಸ್ ಕಾಣಿಸಿಕೊಂಡಿತ್ತು.

ದುರಾದೃಷ್ಟದಿಂದ ಆ ವ್ಯಕ್ತಿಯು ವೈದ್ಯರ ಚಿಕಿತ್ಸೆ ಪಡೆಯಲು ನಿರಾಕರಿಸಿದ!
ವೈದ್ಯರು ಎಕ್ಸ್ ರೇ ತೆಗೆದ ಬಳಿಕ ಚಿಕಿತ್ಸೆಗೆ ಮುಂದಾಗುತ್ತಿದ್ದರೆ, ತಾನು ಚುಚ್ಚಿಕೊಂಡಿರುವಂತಹ ವೀರ್ಯವನ್ನು ವೈದ್ಯರಿಗೆ ತೆಗೆಯಲು ಆತ ಅವಕಾಶ ನೀಡಲಿಲ್ಲ.

ಇದು ವಿಶ್ವದ ಅತೀ ವಿಚಿತ್ರ ಚಿಕಿತ್ಸೆಗಳಲ್ಲಿ ಒಂದಾಗಿದೆ
ವರದಿಗಳ ಪ್ರಕಾರ ಈ ವಿಚಿತ್ರ ಚಿಕಿತ್ಸೆಯು ವಿಶ್ವದ ಅತೀ ವಿಚಿತ್ರ ಚಿಕಿತ್ಸೆ ಎಂದು ನಂಬಲಾಗಿದೆ ಎಂದು ಹೇಳಲಾಗುತ್ತಿದೆ. ಐರಿಷ್ ಮೆಡಿಕಲ್ ಜರ್ನಲ್ ನಲ್ಲಿ ಈ ವಿಚಿತ್ರ ಚಿಕಿತ್ಸೆ ಬಗ್ಗೆ ಸವಿಸ್ತಾರವಾದ ವರದಿ ಪ್ರಕಟವಾಗಿದೆ.



Click it and Unblock the Notifications
