Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕುಡಿದ ಮತ್ತಿನಲ್ಲಿ ಟೂಥ್ ಪಿಕ್‌ನ್ನೇ ನುಂಗಿದ! ಅದು ಹೃದಯದಲ್ಲಿ ಸಿಲುಕಿತು!
ಕುಡಿದಾಗ ಜನರು ಯಾವ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಕೆಲವರು ಸಿಕ್ಕಾಪಟ್ಟೆ ಕುಡಿದ ಬಳಿಕ ಏನಾದರೂ ಕೃತ್ಯದಲ್ಲಿ ತೊಡಗಿಕೊಳ್ಳುವರು. ಆದರೆ ಇನ್ನು ಕೆಲವರಿಗೆ ಕುಡಿಯುವ ವೇಳೆ ಏನಾದರೂ ಮಾಡುವಂತಹ ಚಟವು ಅಂಟಿಕೊಂಡಿರುವುದು. ಇಂತಹ ವ್ಯಕ್ತಿಗಳು ಸ್ವತಃ ಅಪಾಯವನ್ನು ಆಹ್ವಾನಿಸುವರು ಎನ್ನುವುದರಲ್ಲಿ ಯಾವುದೇ ಮಾತಿಲ್ಲ. ಯಾಕೆಂದರೆ ಕುಡಿದ ಮತ್ತಿನಲ್ಲಿ ಆಗುವಂತಹ ಅನಾಹುತವು ಪ್ರಾಣಹಾನಿಗೂ ಕಾರಣವಾಗಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಮದ್ಯಪಾನದ ವೇಳೆ ತನ್ನ ಗ್ಲಾಸ್ ಗೆ ಟೂಥ್ ಪಿಕ್ ನ್ನು ಹಾಕಿಕೊಂಡಿದ್ದಾನೆ.
ಯಾಕೆಂದರೆ ಪಾರ್ಟಿ ವೇಳೆ ತನ್ನ ಗ್ಲಾಸ್ ನ ಗುರುತು ಸಿಗಲಿ ಎನ್ನುವುದು ಅವನ ಆಲೋಚನೆ. ಆದರೆ ಇದೇ ಆಲೋಚನೆಯು ಆತನ ಪ್ರಾಣಹಾನಿಗೂ ಕಾರಣವಾಗಬಹುದಿತ್ತು. ಆತ ಟೂಥ್ ಪಿಕ್ ಹಾಕಿದ ಗ್ಲಾಸ್ ನಲ್ಲಿದ್ದ ಮದ್ಯವನ್ನು ಸೇವನೆ ಮಾಡುವ ವೇಳೆ ಅದು ಕೂಡ ಒಳಗೆ ಹೋಗಿದೆ. ಇದು ಒಳಗೆ ಹೋಗಿ ಹೃದಯದಲ್ಲಿ ಸಿಲುಕೊಂಡಿದೆ. ಚೀನಾದಲ್ಲಿ ನಡೆದಿರುವಂತಹ ಘಟನೆಯ ಬಗ್ಗೆ ನಿಮಗೆ ಇಲ್ಲಿ ತಿಳಿಸಿಕೊಡಲಾಗುವುದು. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯು ಟೂಥ್ ಪಿಕ್ ನ್ನು ಕೂಡ ಮದ್ಯದ ಜತೆಗೆ ಒಳಗೆ ಸೇರಿಸಿಕೊಂಡಿದ್ದಾನೆ. ಮುಂದೆ ಏನಾಯಿತು ಎಂದು ನೀವು ತಿಳಿಯಿರಿ...

ಆತನಿಗೆ ಅದೊಂದು ಖಯಾಲಿ ಆಗಿತ್ತು
ಝೊಯು ಎನ್ನುವ ಅಡ್ಡ ನಾಮದ ಹೆಸರಿನ ವ್ಯಕ್ತಿಯು ತನ್ನ ಮದ್ಯದ ಗ್ಲಾಸ್ ಗೆ ಟೂಥ್ ಪಿಕ್ ನ್ನು ಹಾಕುವಂತಹ ಖಯಾಲಿಯನ್ನು ಬೆಳೆಸಿಕೊಂಡಿದ್ದ. ಪಾರ್ಟಿಗಳಲ್ಲಿ ಹೆಚ್ಚಿನ ಜನರು ಮದ್ಯದ ಗ್ಲಾಸ್ ಗಳನ್ನು ಇಟ್ಟುಕೊಂಡಿರುವ ಕಾರಣ ತನ್ನ ಗ್ಲಾಸ್ ನ ಗುರುತು ಸಿಗಲಿ ಎನ್ನುವುದೇ ಆತನ ಉದ್ದೇಶವಾಗಿತ್ತು.

ಆತ ಟೂಥ್ ಪಿಕ್ ನ್ನು ಆಕಸ್ಮಿಕವಾಗಿ ನುಂಗಿ ಬಿಟ್ಟ
ಒಂದು ದಿನ ಆತನ ಖಯಾಲಿಯಿಂದಾಗಿ ದೊಡ್ಡ ಅಪಾಯವೇ ಎದುರಾಯಿತು. ಆತ ಮದ್ಯದೊಂದಿಗೆ ಟೂಥ್ ಪಿಕ್ ನ್ನು ಕೂಡ ಕುಡಿದುಬಿಟ್ಟ. ಇದು ಕೆಲವು ವರ್ಷಗಳ ಹಿಂದೆ ನಡೆದಿರುವ ಘಟನೆ ಮತ್ತು ಇದು ಆತನ ಹೃದಯದಲ್ಲಿ ಹೋಗಿ ಕುಳಿತುಕೊಂಡಿತು.

ಎದೆಯಲ್ಲಿ ನೋವು ಕಾಣಿಸಿಕೊಂಡ ವೇಳೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು
ಸುಮಾರು ಆರು ಸೆ.ಮೀ.ಉದ್ದವಿದ್ದ ಟೂಥ್ ಪಿಕ್ ಝೊಯು ಹೃತ್ಕರ್ಣದಲ್ಲಿ ಸಿಲುಕಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಟೂಥ್ ಪಿಕ್ ಶ್ವಾಸನಾಳದ ಮೂಲಕವಾಗಿ ನೇರವಾಗಿ ಹೋಗಿ ಆ ವ್ಯಕ್ತಿಯ ಬಲಭಾಗದ ಶ್ವಾಸಕೋಶದ ಮೂಲಕ ಹಾದು ಹೋಗಿ ಹೃದಯದಲ್ಲಿ ಸಿಲುಕಿಕೊಂಡಿದೆ ಎನ್ನುವುದು ವೈದ್ಯರ ಹೇಳಿಕೆ.

ಆತ ಟೂಥ್ ಪಿಕ್ ನ್ನು ನುಂಗಿರುವುದು ಇದು ಮೊದಲ ಸಲವಲ್ಲ
ಟೂಥ್ ಪಿಕ್ ನ್ನು ಯಾವಾಗ ನುಂಗಿದೆ ಎಂದು ನನಗೆ ನೆನಪಿಲ್ಲ ಮತ್ತು ಹಲವಾರು ಸಲ ಟೂಥ್ ಪಿಕ್ ನ್ನು ನಾನು ನುಂಗಿರುವೆ ಮತ್ತು ಅದನ್ನು ಸಮಯಕ್ಕೆ ಸರಿಯಾಗಿ ಹಿಡಿದು ಹೊರ ಹಾಕಿರುವೆ ಎಂದು ಆ ವ್ಯಕ್ತಿಯು ಹೇಳಿರುವನು. ಯಾವುದೇ ದೊಡ್ಡ ಅಪಾಯವು ಆಗದೆ ವ್ಯಕ್ತಿಯು ಬದುಕುಳಿದಿರುವುದು ದೊಡ್ಡ ಅದೃಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಲು ಮರೆಯಬೇಡಿ.



Click it and Unblock the Notifications
