Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಹಿಳೆಯರ ವೇಷದಲ್ಲಿ ವಂಚಿಸುತ್ತಿದ್ದ ಪುರುಷ!
ಅಪರಾಧ ಯಾವುದೇ ಆಗಿದ್ದರೂ ಸಿಕ್ಕಿ ಬೀಳುವುದು ಖಚಿತ ಎನ್ನುವುದು ಅದನ್ನು ಮಾಡುವವರಿಗೂ ತಿಳಿದಿರುವುದು. ಆದರೆ ಆದಷ್ಟು ದಿನ ಅದರಿಂದ ಜೀವನ ಸಾಗಿಸಬಹುದು ಎನ್ನುವ ಉದ್ದೇಶದಿಂದಾಗಿ ಅಪರಾಧ ಕೃತ್ಯಗಳನ್ನು ಮಾಡುತ್ತಲಿರುವರು. ಅದರಲ್ಲೂ ಮುಖ್ಯವಾಗಿ ಕೆಲವರು ವಂಚನೆ ಮಾಡುವಲ್ಲಿ ತುಂಬಾ ನಿಸ್ಸೀಮರು ಎಂದು ಭಾವಿಸಿರುವರು. ಆದರೆ ಕಾನೂನಿನ ಕೈಯಿಂದ ಯಾರು ಕೂಡ ಪಾರಾಗಲು ಸಾಧ್ಯವಿಲ್ಲ ಎಂದು ತಿಳಿದಿರಬೇಕು.
ಚೀನಾದ ವ್ಯಕ್ತಿ ಸುಮಾರು 11 ಮಂದಿ ತನ್ನನ್ನು ತಾನು ಹುಡುಗಿ ಎಂದು ಪರಿಚಯಿಸಿಕೊಂಡು ಮೋಸ ಮಾಡಿದ್ದಾನೆ. ದೊಡ್ಡ ಮಟ್ಟದ ಹಣವನ್ನು ಪಡೆದು ಅವರಿಗೆ ಮೋಸ ಮಾಡಿದ್ದಾನೆ. ಆದರೆ ಅಂತಿಮವಾಗಿ ಕಾನೂನಿನ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದರ ಬಗ್ಗೆ ನೀವು ಮುಂದಕ್ಕೆ ಓದುತ್ತಾ ಸಾಗಿ...

ಈ ಪ್ರಕರಣದ ಬಗ್ಗೆ ಒಬ್ಬ ವ್ಯಕ್ತಿ ದೂರು ನೀಡಿದ
ರುಝೌಲ್ ನಗರದ ಯುವಕನೊಬ್ಬ ತನಗೆ ಮಿಯಾವೊ ಕ್ಸಿಯಾಮಿನ್ ಎನ್ನುವ ಮಹಿಳೆಯು ಮೋಸ ಮಾಡಿರುವ ಬಗ್ಗೆ ದೂರು ನೀಡಿದ್ದಾನೆ. ಆತನಿಗೆ ಆಕೆ ಸುಮಾರು 31 ಸಾವಿರ ಯುವಾನ್ ಮೋಸ ಮಾಡಿದ್ದಾಳೆ ಮತ್ತು ಅಲ್ಲಿಂದ ಕಾಲ್ಕಿತ್ತಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಆಕೆ ತನಗೆ ಆನ್ ಲೈನ್ ನಲ್ಲಿ ಪರಿಚಯವಾಗಿದ್ದಳು ಎಂದು ಆತ ಬರೆದುಕೊಂಡಿದ್ದಾನೆ.

ವ್ಯಕ್ತಿಯ ನಿಜ ಮುಖವು ಬಯಲಾಯಿತು
ದೂರಿನ ಆಧಾರದ ಮೇಲೆ ಕ್ಸಿಯಾಮಿನ್ ಎನ್ನುವ ಮಹಿಳೆಯರನ್ನು ಪೊಲೀಸರು ಹುಡುಕಲು ಆರಂಭಿಸಿದ ವೇಳೆ ಆಕೆಯನ್ನು ಇಂಟರ್ನೆಟ್ ಕೆಫೆಗೆ ಬರುವಂತೆ ಪ್ರೇರೇಪಿಸಲಾಯಿತು. ಪೊಲೀಸರ ಯೋಜನೆಯಂತೆ ತುಂಬಾ ಸುಂದರವಾದ ಯುವತಿಯು ಅವರ ಬಲೆಗೆ ಬಿದ್ದಳು. ಆದರೆ ತಾವು ಹಿಡಿದಿರುವ ಮೋಸಗಾರ್ತಿಯು ಪುರುಷ ಎಂದು ತಿಳಿದು ಪೊಲೀಸರು ಕೂಡ ಬೆಚ್ಚಿಬಿದ್ದರು. ಆತ 27ರ ಹರೆಯದ ಮಿಯಾವೋ ಸಾಂಗ್ಟಾವೊ ಆಗಿದ್ದ.

ಆ ವ್ಯಕ್ತಿಯ ಮನೆಗೆ ದಾಳಿ ಮಾಡಲಾಯಿತು
ಪೊಲೀಸರು ಆ ಯುವಕನನ್ನು ಬಂಧಿಸಿದ ಬಳಿಕ ಮನೆಯನ್ನು ಪರಿಶೀಲಿಸಲಾಯಿತು ಮತ್ತು ಪೊಲೀಸರಿಗೆ ಅಲ್ಲಿ ಎಲ್ಲವೂ ತಿಳಿದುಬಂತು. ಪೊಲೀಸರಿಗೆ ಅಲ್ಲಿ ಸ್ಕರ್ಟ್, ವಿಗ್, ಹೈಹೀಲ್ಡ್ ಚಪ್ಪಲಿ ಮತ್ತು ಕಾಸ್ಮೆಟಿಕ್ ಸಾಮಗ್ರಿಗಳು ಮತ್ತು ಮಹಿಳೆಯರು ಧರಿಸುವಂತಹ ಒಳ ಉಡುಪುಗಳು ಕೂಡ ಕಂಡುಬಂದವು. ತನಗೆ ಮಹಿಳೆಯರ ಒಳ ಉಡುಪುಗಳಲ್ಲಿ ತುಂಬಾ ಆಸಕ್ತಿ ಎಂದು ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಪುರುಷನಾ ಅಥವಾ ಮಹಿಳೆಯಾ ಎನ್ನುವ ಬಗ್ಗೆ ತನಗೆ ಸ್ಪಷ್ಟತೆ ಇಲ್ಲಎಂದು ಆತ ಹೇಳಿಕೊಂಡಿದ್ದಾನೆ.

ವಂಚಕನ ನಿಜಬಣ್ಣವನ್ನು ಪೊಲೀಸರು ಬಯಲು ಮಾಡಿದರು
ಮೋಸ ಹೋಗಿರುವ 11 ಮಂದಿಯಲ್ಲಿ ಒಬ್ಬನಾಗಿದ್ದಂತಹ ವಾಂಗ್ ಎನ್ನುವ ವ್ಯಕ್ತಿಗೆ ಜೀವನದ ದೊಡ್ಡ ಆಘಾತವು ಈ ಘಟನೆಯಿಂದ ಆಯಿತು. ಆತನ ಗರ್ಭಿಣಿ ವಧು ಓಡಿಹೋಗಿರುವುದು ಬೇರೆ ಯಾರೂ ಅಲ್ಲ, ಮಹಿಳೆಯರಂತೆ ಬಟ್ಟೆ ಧರಿಸಿರುವ ಪುರುಷ ಎಂದು ಪೊಲೀಸರು ಹೇಳಿದರು. ಇದರಿಂದ ವಾಂಗ್ ತೀವ್ರ ಆಘಾತಕ್ಕೆ ಒಳಗಾದ. ವಾಂಗ್ ಕೂಡ ಆನ್ ಲೈನ್ ನಲ್ಲಿ ತನ್ನ ಕನಸಿನ ಹುಡುಗಿಯನ್ನು ಭೇಟಿ ಮಾಡಿದ್ದ. ತಾನು ಗರ್ಭಿಣಿ ಎಂದು ಕೂಡ ಆಕೆ ಹೇಳಿದ್ದಳು.

ವಂಚಕನ ನಿಜಬಣ್ಣವನ್ನು ಪೊಲೀಸರು ಬಯಲು ಮಾಡಿದರು
ಇದರಿಂದ ಕುಟುಂಬವು ತುಂಬಾ ಸಂತೋಷಗೊಂಡು ಮದುವೆಗೆ ಬೇಕಾಗಿರುವಂತಹ ಎಲ್ಲಾ ತಯಾರಿಗಳನ್ನು ಮಾಡಲು ಮುಂದಾಗಿದ್ದರು. ಆತ ಮೋಸಗಾ ವಧುವಾಗಿದ್ದ ಮತ್ತು ಮಹಿಳೆಯರಂತೆ ಬಟ್ಟೆ ಹಾಕಿಕೊಂಡಿದ್ದ. ತನಗೆ ಬಂದಿದ್ದ ಉಡುಗೊರೆ ಮತ್ತು ಹತ್ತು ಸಾವಿರ ಚೀನಾದ ಯುವಾನ್ ನ್ನು ದೋಚಿ ಪರಾರಿ ಆಗಿದ್ದ. ವಾಂಗ್ ಗೆ ತನ್ನ ವಧು ಓಡಿ ಹೋಗಿರುವ ಕಾರಣದಿಂದಾಗಿ ತುಂಬಾ ನೋವಾಗಿತ್ತು ಮತ್ತು ಇದರ ಬಗ್ಗೆ ಆತ ದೂರು ನೀಡಲು ಕೂಡ ಹೋಗಿರಲಿಲ್ಲ.



Click it and Unblock the Notifications
