Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಆತ್ಮಗಳ ವಿವಾಹ ಮಾಡುವುದಕ್ಕೆ ಸ್ಮಶಾನದಿಂದಲೇ ಹುಡುಗಿಯ ಶವ ತಗೊಂಡು ಹೋದರಂತೆ!
ಕೆಲವು ಘಟನೆಗಳು ಹಾಗೂ ಇನ್ನು ಕೆಲವು ಸುದ್ದಿಗಳನ್ನು ಕೇಳಿದರೆ ಹೀಗೂ ಉಂಟೆ ಎನ್ನುವ ಉದ್ಗಾರ ಬರುವುದು. ಪ್ರತಿಯೊಂದು ದಿನವೂ ವಿಶ್ವದ ಯಾವುದಾದರೂ ಒಂದು ಭಾಗದಲ್ಲಿ ಚಿತ್ರ ವಿಚಿತ್ರವಾಗಿರುವ ಘಟನೆಗಳು ನಡೆಯುತ್ತಲೇ ಇರುವುದು. ಇದನ್ನು ನಾವು ಟಿವಿ ಮಾಧ್ಯಮದಲ್ಲೋ ಅಥವಾ ಸುದ್ದಿ ಮಾಧ್ಯಮದಲ್ಲೋ ನೋಡಿ ಅಥವಾ ಓದಿರುತ್ತೇವೆ. ಇದು ನಮಗೆ ತುಂಬಾ ವಿಚಿತ್ರವೆನಿಸುವುದು.

ಇವುಗಳಲ್ಲಿ ನಮ್ಮನ್ನು ಅಚ್ಚರಿಗೀಡು ಮಾಡುವುದು ಈಗಲೂ ವಿಶ್ವದೆಲ್ಲೆಡೆಯಲ್ಲಿ ಇರುವಂತಹ ಕೆಲವೊಂದು ಆಚರಣೆಗಳು. ಇಂತಹ ಆಚರಣೆಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಿರಬಹುದು. ಆದರೆ ನಾವು ಇಲ್ಲಿ ಹೇಳಲು ಹೊರಟಿರುವುದು ಚೀನಾದಲ್ಲಿನ ವಿಚಿತ್ರ ಆಚರಣೆ ಬಗ್ಗೆ. ಇಲ್ಲಿ ಪ್ರೇತಗಳಿಗೂ ಮದುವೆ ಮಾಡುವಂತಹ ಸಂಪ್ರದಾಯವಿದೆ. ವರದಿಯ ಪ್ರಕಾರ ಹುಡುಗಿಯೊಬ್ಬಳ ಶವವು ಸ್ಮಶಾನದಿಂದ ನಾಪತ್ತೆಯಾಗಿರುವುದು ಎಲ್ಲರನ್ನು ದಿಗಿಲುಗೊಳಿಸಿತ್ತು. ಈ ವಿಚಿತ್ರ ಘಟನೆ ಬಗ್ಗೆ ನೀವು ಓದುತ್ತಾ ಸಾಗಿ...

ಗ್ರಾಮಸ್ಥರು ಪಾಲಿಸಿಕೊಂಡು ಹೋಗುವ ವಿಚಿತ್ರ ಸಂಪ್ರದಾಯ
ವರದಿಯ ಪ್ರಕಾರ ಇಲ್ಲಿನ ಗ್ರಾಮವೊಂದು ತುಂಬಾ ವಿಚಿತ್ರ ಸಂಪ್ರದಾಯವೊಂದನ್ನು ಪಾಲಿಸಿಕೊಂಡು ಹೋಗುತ್ತದೆ. ಇದನ್ನು `ಮಿಂಗ್ಹನ್' ಅಥವಾ `ಆತ್ಮಗಳ ವಿವಾಹ'ಎಂದು ಕರೆಯಲಾಗುತ್ತದೆ. ಚೀನಾದಲ್ಲಿ ಇದನ್ನು ಪ್ರೇತಗಳ ಮದುವೆ ಎಂದು ಕರೆಯುತ್ತಾರೆ.

ಈ ಸಂಪ್ರದಾಯದ ಬಗ್ಗೆ..
ಈ ಸಂಪ್ರದಾಯದಲ್ಲಿ ಶವಗಳಿಗೆ ಮದುವೆ ಮಾಡಿಕೊಡಲಾಗುತ್ತದೆ. ಇದರಿಂದ ಸಾವಿನ ಬಳಿಕದ ಜೀವನದಲ್ಲಿ ಅವರು ಶಾಂತಿಯಿಂದ ಇರುವರು ಎಂದು ನಂಬಲಾಗುತ್ತದೆ. ಈ ರೀತಿಯ ಸಂಪ್ರದಾಯವನ್ನು ಮದುವೆ ಮೊದಲೇ ಹಠಾತ್ ಆಗಿ ವಧು ಅಥವಾ ವರನು ಸಾವನ್ನಪ್ಪಿದರೆ ಆಗ ನೆರವೇರಿಸಲಾಗುತ್ತದೆ ಅಥವಾ ಮಕ್ಕಳು ಸಾವನ್ನಪ್ಪಿದರೆ ಆಗ ಅವರಿಗೆ ಈ ರೀತಿಯಲ್ಲಿ ಮದುವೆ ಮಾಡಿಕೊಡಲಾಗುತ್ತದೆ.

ಸಮೀಕ್ಷೆಯು ಹೇಳುವ ಪ್ರಕಾರ..
ಶವವು ನಾಪತ್ತೆಯಾಗಿರುವುದು ಇದು ಮೊದಲ ಸಲವಲ್ಲ. ಇದಕ್ಕೆ ಮೊದಲು 2015ರಲ್ಲಿ ಕೂಡ ಇದೇ ರೀತಿಯಲ್ಲಿ ಶವ ನಾಪತ್ತೆಯಾಗಿತ್ತು ಎಂದು ವರದಿಗಳು ಹೇಳಿವೆ. 2015ರಲ್ಲಿ ಸುಮಾರು 14 ಮಹಿಳೆಯರ ಶವಗಳು ನಾಪತ್ತೆಯಾಗಿದ್ದವು. ಇದೆಲ್ಲವೂ ನಡೆದಿರುವುದು ಶಾಂಕ್ಸಿ ಎನ್ನುವ ಗ್ರಾಮದಲ್ಲಿ.

ಹುಡುಗಿಯ ಶವವು ಎರಡು ದಶಕ ಹಳೆಯದಾಗಿತ್ತು!
ಹುಡುಗಿಯ ಶವವು ಸುಮಾರು ಎರಡು ದಶಕ ಹಳೆಯದಾಗಿತ್ತು ಮತ್ತು ಇದನ್ನು ತುಂಬಾ ಸಾಧಾರಣವಾಗಿ ದಫನ ಮಾಡಲಾಗಿತ್ತು ಮತ್ತು ಶವ ಇಟ್ಟಿದ್ದ ಶವಪೆಟ್ಟಿಗೆಗೆ ಯಾವುದೇ ಮೌಲ್ಯವು ಇರಲಿಲ್ಲ. ಆದರೆ ಆಕೆಯ ಶವವಿರುವ ಜಾಗಕ್ಕೆ ಕುಟುಂಬದವರು ಭೇಟಿ ನೀಡಿದಾಗ ಅಲ್ಲಿ ಅಗೆದಿರುವುದು ಕಂಡು ಬಂದಿದೆ ಮತ್ತು ಪೊಲೀಸರು ಈ ಜಾಗದಲ್ಲಿ ಗ್ಲೌಸ್ ಪತ್ತೆ ಹಚ್ಚಿದ್ದಾರೆ. ಇದರಿಂದಾಗಿ ಅವರು ನಾಪತ್ತೆಯಾಗಿರುವಂತಹ ಶವದ ರಹಸ್ಯವನ್ನು ಭೇದಿಸಲು ಸಾಧ್ಯವಾಗಬಹುದು.

ಶವದ ಮದುವೆ ಮಾಡುವಂತೆ ಕುಟುಂಬಕ್ಕೆ ಆರಂಭದಲ್ಲಿ ಪ್ರಸ್ತಾವ ಬಂದಿತ್ತು
ವರದಿಗಳ ಪ್ರಕಾರ ಅಜ್ಞಾತ ವ್ಯಕ್ತಿಗಳು ಈ ಕುಟುಂಬದ ನೆಲೆಸಿರುವ ಮನೆಗೆ ಭೇಟಿ ನೀಡಿ ಪ್ರೇತಗಳ ಮದುವೆ ಮಾಡಿಕೊಡುವಂತೆ ಕೇಳಿಕೊಂಡಿತ್ತು ಮತ್ತು ಪೇತಗಳ ಮದುವೆ ಮಾಡಲು ಹುಡುಗಿಯ ಶವವನ್ನು ಖರೀದಿಸುವುದಾಗಿ ಅವರು ಹೇಳಿದ್ದರು. ಆದರೆ ಈ ಕುಟುಂಬದವರು ಪ್ರಸ್ತಾವ ನಿರಾಕರಿಸಿದ್ದರು. ಈ ವಿಚಿತ್ರ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಬರೆದು ನಮಗೆ ತಿಳಿಸಿ.



Click it and Unblock the Notifications
