Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಎಚ್ಚರ!!! ಚೀನಾದವರು ಸಿಗಡಿ ಒಳಗೆ ಜಿಲೆಟಿನ್ ತುಂಬಿ ಮಾರುವರು!
ಸಾವಯವ ಆಹಾರವು ಆಧುನಿಕ ಯುಗದ ಟ್ರೆಂಡ್ ಆಗಿದೆ. ಆದರೂ ನಾವೆಲ್ಲರೂ ಇಂದು ತಿನ್ನುವಂತಹ ಪ್ರತಿಯೊಂದು ಆಹಾರದಲ್ಲೂ ರಾಸಾಯನಿಕ ಹಾಗೂ ಕೀಟನಾಶಕಗಳು ತುಂಬಿರುವುದು. ಹೀಗಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆದರೆ ಇದೇ ವಿಭಾಗದಲ್ಲಿ ನೀವು ಆಹಾರಗಳಿಗೆ ಕಲಬೆರಕೆ ಮಾಡುವುದನ್ನು ಓದಿರಬಹುದು.
ಕೆಲವೊಂದು ಸಲ ಗ್ರಾಹಕರನ್ನು ಮೋಸ ಮಾಡುತ್ತಿರುವುದು ತಿಳಿಯುತ್ತದೆ. ಈಗ ನಮ್ಮ ಆರೋಗ್ಯಕ್ಕೆ ಓಳ್ಳೆಯದು ಎಂದು ಪರಿಗಣಿಸಲಾಗಿರುವಂತಹ ಸಿಗಡಿಗೆ ಕೂಡ ವಿಷ ಬೆರೆಸಲಾಗುತ್ತಿದೆ. ಚೀನಾದಲ್ಲಿ ಜಿಲೆಟಿನ್ ಇಂಜೆಕ್ಷನ್ ನೀಡಿ ಅದನ್ನು ಮಾರಾಟ ಮಾಡಲಾಗುತ್ತದೆ.

ಜಿಲೆಟಿನ್ ತುಂಬಿರುವ ಸಿಗಡಿಯು ಮಹಿಳೆಗೆ ಸಿಕ್ಕಿದೆ
ಮಹಿಳೆಯು ಮನೆಯಿಂದ ತಂದಿರುವ ಸಿಗಡಿಯ ಸಿಪ್ಪೆ ತೆಗೆದ ವೇಳೆ ಜಿಲೆಟಿನ್ ಪತ್ತೆಯಾಗಿದೆ. ದೊಡ್ಡ ಸಿಗಡಿಯ ತಲೆ ತೆಗೆದ ವೇಳೆ ಆಕೆಗೆ ಅದರಲ್ಲಿ ತುಂಬಾ ಅಪಾಯಕಾರಿ ಜಿಲೆಟಿನ್ ಪತ್ತೆಯಾಗಿದ್ದು, ಅದನ್ನು ಕಂಡು ಆಘಾತಗೊಂಡಿದ್ದಾಳೆ.

ಇದು ಮೊದಲ ಘಟನೆಯಲ್ಲ
ಚೀನಾದಲ್ಲಿ ಜನರಿಗೆ ಸಿಗಡಿಯಲ್ಲಿ ಜೆಲ್ಲಿ ರೂಪದ ವಸ್ತುವು ಸಿಗುತ್ತಿರುವುದು ಇದು ಮೊದಲ ಸಲವಲ್ಲ. 2012ರ ಬಳಿಕ ಚೀನಾದ ಕೆಲವೊಂದು ಪ್ರದೇಶಗಳಲ್ಲಿ ಈ ರೀತಿ ಜಿಲೆಟಿನ್ ಇಂಜೆಕ್ಷನ್ ನೀಡುವುದು ನಡೆಯುತ್ತಿದೆ ಎಂದು ವರದಿಯಾಗಿದೆ.

ಜಿಲೆಟಿನ್ ಇಂಜೆಕ್ಷನ್ ನೀಡುವುದು ಹಲವಾರು ಉದ್ದೇಶಗಳಿಂದ
ಸಿಗಡಿಯನ್ನು ಶೀತಲೀಕರಿಸಿದ ವೇಳೆ ಅದು ತುಂಬಾ ಒಣಗುವುದು ಮತ್ತು ಇದಕ್ಕಾಗಿ ಜಿಲೆಟಿನ್ ನ್ನು ಇಂಜೆಕ್ಷನ್ ಮಾಡಲಾಗುತ್ತದೆ. ಹೀಗೆ ಮಾಡಿದರೆ ಸಿಗಡಿಯು ಆರೋಗ್ಯವಾಗಿ ಮತ್ತು ತಾಜಾವಾಗಿ ಇರುವಂತೆ ಮಾಡುವುದು. ಇಷ್ಟು ಮಾತ್ರವಲ್ಲದೆ ಶೇ.20-30ರಷ್ಟು ತೂಕವು ಹೆಚ್ಚಾಗುವದು. ಇದರಿಂದ ಮಾರುವವರಿಗೆ ಹೆಚ್ಚು ಲಾಭವಾಗುವುದು.

ಭೀತಿ
ಜಿಲೆಟಿನ್ ತುಂಬಿಸಿರುವಂತಹ ಸಿಗಡಿಯನ್ನು ಮಾನವರು ತಿನ್ನಬಹುದೇ ಎಂದು ಪ್ರಶ್ನೆಗಳು ಬರುವುದು. ಯಾಕೆಂದರೆ ತುಂಬಾ ಅಗ್ಗವಾಗಿ ಸಿಗುವಂತಹ ಜಿಲೆಟಿನ್ ಸೇವಿಸಿದರೆ ಅದು ತುಂಬಾ ಹಾನಿಕಾರಕ. ಆಯ್ಕೆಯು ಗ್ರಾಹಕರಿಗೆ ಬಿಟ್ಟ ವಿಚಾರವಾಗಿದೆ. ಜಿಲೆಟಿನ್ ಹಾಕಿರುವಂತಹ ಸಿಗಡಿ ತಿನ್ನುವುದು ಬಿಡುವುದು ಗ್ರಾಹಕರಿಗೆ ಬಿಟ್ಟ ವಿಚಾರ. ಆದರೆ ಇದು ತುಂಬಾ ಹಾನಿಕಾರಕ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
