Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನಿಮಗೆ ಗೊತ್ತೇ? ಈ 6 ರಾಶಿಚಕ್ರದ ಮಹಿಳೆಯರು ಪುರುಷರನ್ನು ಬಹುಬೇಗ ಆಕರ್ಷಿಸುತ್ತಾರಂತೆ!
ಪ್ರಪಂಚದಲ್ಲಿ ಸಾಮಾನ್ಯವಾಗಿ ಗಂಡಸರಿಗೆ ಹೆಂಗಸರು ಮತ್ತು ಹೆಂಗಸರಿಗೆ ಗಂಡಸರು ಇಷ್ಟವಾಗುತ್ತಾರೆ. ಇದು ಪ್ರಕೃತಿಯ ನಿಯಮ . ಇದೆ ಮುಂದೆ ಪ್ರೇಮಾಂಕುರವಾಗಿ ಸಂಬಂಧವಾಗಿ ಬದಲಾಗುತ್ತದೆ . ಆದರೆ ಎಲ್ಲರಿಗೂ ಎಲ್ಲರೂ ಇಷ್ಟವಾಗುವುದಿಲ್ಲ. ಅವರವರ ಅಭಿರುಚಿಗೆ ತಕ್ಕಂತೆ ಒಬ್ಬರನ್ನೊಬ್ಬರು ನೋಡಿ ಆಕರ್ಷಿತರಾಗುತ್ತಾರೆ . ಇದು ಯಾರ ಬಲವಂತದಿಂದಲೂ ನಡೆಯುವ ವಿಚಾರವಲ್ಲ. ಅಪ್ಪಿ ತಪ್ಪಿ ಅದು ಬಲವಂತದ್ದೇ ಆದರೆ ಅಂತಹ ಸಂಬಂಧ ಮುಂದುವರೆಯುವುದಿಲ್ಲ ಮತ್ತು ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ .
ಹಾಗಾದರೆ ಹೆಂಗಸರು ಗಂಡಸರಿಗೆ ಯಾವ ವಿಷಯದಲ್ಲಿ ಇಷ್ಟವಾಗುತ್ತಾರೆ? ಅವರ ವೈಯ್ಯಾರದಿಂದ ಅಥವಾ ಅವರ ನಡವಳಿಕೆಯಿಂದ ಇಷ್ಟವಾಗುತ್ತಾರೆಯೇ ? ಇಲ್ಲ ಸುಮ್ಮನೆ ಹುಡುಗಿಯರಿಗೆ ಹುಡುಗರು ಬಿದ್ದು ಬಿಡುತ್ತಾರೆಯೇ? ಸುಮ್ಮನೆ ಹಾಗೆ ಯೋಚನೆ ಮಾಡುತ್ತಾ ಕುಳಿತರೆ ಈ ಎಲ್ಲ ರೀತಿಯ ಆಲೋಚನೆಗಳು ತಲೆಯಲ್ಲಿ ಹಾಗೆ ಬಂದು ಹೋಗುತ್ತವೆ ಅಲ್ಲವೇ. ಚಿಂತೆ ಬೇಡ . ಇದಕ್ಕೆಲ್ಲಾ ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ತರವಿದೆ . ಅಂದರೆ ಯಾವ ರಾಶಿಗೆ ಸೇರಿದ ಹೆಂಗಸರು ಅಥವಾ ಹುಡುಗಿಯರು ಹುಡುಗರನ್ನು ತಮ್ಮ ಬಲೆಗೆ ಸುಲಭವಾಗಿ ಬೀಳಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇಲ್ಲಿ ಕೆಳಗೆ ತಿಳಿಸಿರುವ ರಾಶಿಗಳ ಹುಡುಗಿಯರು ಹುಡುಗರನ್ನು ತಮ್ಮ ಕಡೆ ಸೆಳೆಯಲು ಹೆಚ್ಚು ಕಷ್ಟ ಪಡಲೇಬೇಕಿಲ್ಲ. ಇವರನ್ನು ನೋಡಿ ಹುಡುಗರೇ ಹಿಂದೆ ಹೋಗುತ್ತಾರೆ . ಅಂತಹ ಗುಣವಿರುತ್ತದೆ ಈ ರಾಶಿಯ ಹೆಣ್ಣು ಮಕ್ಕಳಿಗೆ . ಇಲ್ಲಿ ರಾಶಿ ಮತ್ತು ಹುಟ್ಟಿದ ದಿನಾಂಕಗಳ ಶ್ರೇಣಿಗಳನ್ನು ಕೊಟ್ಟು ಆಯಾ ರಾಶಿಗೆ ಸೇರಿದ ಹೆಣ್ಣು ಮಕ್ಕಳ ಗುಣ ಲಕ್ಷಣಗಳನ್ನು ಕೊಡಲಾಗಿದೆ .

ವೃಶ್ಚಿಕ ರಾಶಿ ( ಅಕ್ಟೋಬರ್ 24 ರಿಂದ ನವೆಂಬರ್ 22 )
ಈ ರಾಶಿಗೆ ಸೇರಿದ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಯಾರ ಮೇಲೂ ತಾವು ಇದ್ದಕ್ಕಿದ್ದಂತೆ ಆಕರ್ಷಿತರಾಗುವುದಿಲ್ಲ . ಒಂದು ವೇಳೆ ಯಾರನ್ನಾದರೂ ಇಷ್ಟ ಪಟ್ಟರೆಂದರೆ ಅವರನ್ನು ತಮ್ಮ ಜೀವ ಇರುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿ ಕೊಳ್ಳುತ್ತಾರೆ . ಇದು ವೃಶ್ಚಿಕ ರಾಶಿಯಲ್ಲಿ ಹುಟ್ಟಿರುವ ಹೆಣ್ಣುಮಕ್ಕಳ ಹುಟ್ಟುಗುಣ . ಈ ಕಾರಣದಿಂದ ಹುಡುಗರಿಗೆ ಇವರು ಇಷ್ಟವಾಗುತ್ತಾರೆ . ಇವರ ಮುಂದಿನ ಜೀವನವೂ ಕೂಡ ಬಹಳ ಚೆನ್ನಾಗಿರುತ್ತದೆ . ಇವರು ಸದಾ ಚೈತನ್ಯದಿಂದ ತುಂಬಿರುತ್ತಾರೆ ಮತ್ತು ತಾವೂ ಖುಷಿಯಾಗಿದ್ದು ಇತರರನ್ನೂ ಕೂಡ ಖುಷಿಯಾಗಿಡಲು ಪ್ರಯತ್ನ ಪಡುತ್ತಾರೆ . ಇದು ಗಂಡಸರಿಗೆ ಬಹಳ ಇಷ್ಟವಾದ ಗುಣ .

ಸಿಂಹ ರಾಶಿ ( ಜೂಲೈ 23 ರಿಂದ ಆಗಸ್ಟ್ 23 )
ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಗಂಡು ಹುಡುಗರನ್ನು ಆಕರ್ಷಿಸಿಕೊಳ್ಳುವುದು ಕಷ್ಟದ ಕೆಲಸವೇ ಅಲ್ಲ . ಇವರು ಅದಕ್ಕಾಗಿ ಹೆಚ್ಚಿನ ಶ್ರಮ ಕೂಡ ಪಡಬೇಕಾಗಿಲ್ಲ . ಇದರಲ್ಲೆಲ್ಲಾ ಅವರಿಗೆ ಹೆಚ್ಚಿನ ಆತ್ಮ ವಿಶ್ವಾಸವನ್ನು ಭಗವಂತ ಕೊಟ್ಟಿದ್ದಾನೆ . ಹುಡುಗರಿಗೂ ಅಷ್ಟೇ ಇವರ ಮೇಲೆ ಎಲ್ಲಿಲ್ಲದ ಪ್ರೀತಿ . ಬಹಳ ಬೇಗನೆ ಇವರ ಕಡೆ ಆಕರ್ಷಿತರಾಗುತ್ತಾರೆ . ಒಂದು ಬಾರಿ ಇವರಿಗೆ ಮನ್ನಸ್ಸು ಕೊಟ್ಟರೆಂದರೆ ಮತ್ತೆ ಅವರನ್ನು ಮರೆಯುವ ಮಾತೇ ಇಲ್ಲ . ಅಷ್ಟು ಗಟ್ಟಿಯಾಗಿರುತ್ತದೆ ಸಿಂಹ ರಾಶಿ ಯ ಹುಡುಗಿಯ ಮತ್ತು ಪ್ರೀತಿಯಲ್ಲಿ ಬಿದ್ದ ಹುಡುಗನ ಸಂಬಂಧ .

ಧನಸ್ಸು ರಾಶಿ ( ನವೆಂಬರ್ 23 ರಿಂದ ಡಿಸೆಂಬರ್ 22 )
ಈ ರಾಶಿಯ ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ . ಏಕೆಂದರೆ ಇವರು ಅಷ್ಟು ಮೃದು ಸ್ವಭಾವದವರು ಮತ್ತು ತಮ್ಮ ಜೊತೆ ಇರುವವರನ್ನು ಬಹಳ ಪ್ರೀತಿ ಯಿಂದ ಕಾಣುತ್ತಾರೆ . ಈ ಗುಣ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ . ಹುಡುಗರಂತೂ ಇವರ ಈ ಗುಣಲಕ್ಷಣಗಳಿಗೆ ಮಾರು ಹೋಗಿ ಇವರನ್ನು ನೆಲದ ಮೇಲೆ ನಡೆಯಲು ಕೂಡ ಬಿಡುವುದಿಲ್ಲ . ಅಷ್ಟು ಪ್ರೀತಿಸುತ್ತಾರೆ ಇವರನ್ನು . ಇವರೂ ಅಷ್ಟೇ ಹುಡುಗರ ಹೃದಯವನ್ನು ಬಹಳ ಬೇಗನೆ ಕದಿಯುತ್ತಾರೆ .

ಮಕರ ರಾಶಿ ( ಡಿಸೆಂಬರ್ 23 ರಿಂದ ಜನವರಿ 20 )
ಇವರು ಸಾಮಾನ್ಯವಾಗಿ ಮೇಲೆ ಒರಟಾಗಿದ್ದರೂ ಒಳಗಿನ ಮನಸ್ಸು ಮಾತ್ರ ಬೆಣ್ಣೆಯಂತೆ . ಇವರು ಸಾಮಾನ್ಯವಾಗಿ ಯಾರ ಜೊತೆಯೂ ಅಷ್ಟು ಬೇಗನೆ ಬೆರೆಯುವುದಿಲ್ಲ . ಆದರೆ ಮನಸ್ಸು ಕೊಟ್ಟ ಹುಡುಗನ ಜೊತೆ ಮಾತ್ರ ತುಂಬಾ ಖುಷಿಯಾಗಿದ್ದು ಅವನನ್ನು ಕೂಡ ಸಂತೋಷವಾಗಿಡಲು ಸದಾ ಪ್ರಯತ್ನಿಸುತ್ತಾರೆ . ಹುಡುಗರಿಗೆ ಇಷ್ಟವಾಗಲು ಇನ್ನೇನು ಬೇಕು ? ಇವರ ಜೊತೆ ಒಳ್ಳೆಯ ಜೋಡಿಯಾಗಬಹುದು .

ಕುಂಭ ರಾಶಿ (ಜನವರಿ 21 ರಿಂದ ಫೆಬ್ರವರಿ 18 )
ಈ ರಾಶಿಯಲ್ಲಿ ಹುಟ್ಟಿದ ಹೆಂಗಸರು ಬಹಳ ನೈಜ ಸ್ವಭಾವ ಮತ್ತು ನೈಜ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರಾಗಿರುತ್ತಾರೆ . ಇವರನ್ನು ಯಾರು ಬೇಕಾದರೂ ನಂಬಬಹುದು . ಇದೇ ಗುಣ ಗಂಡಸರಿಗೆ ಇವರಲ್ಲಿ ಬಹಳ ಇಷ್ಟವಾಗುತ್ತದೆ . ಇನ್ನು ಇವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮುಂದಾದರೆ ಬೇರೆ ಯಾವ ರಾಶಿಯವರಿಗೂ ಕಡಿಮೆಯಿಲ್ಲದಂತೆ ತಮ್ಮ ಮೋಹದಿಂದಲೇ ಹುಡುಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ .

ಮೀನಾ ರಾಶಿ ( ಫೆಬ್ರವರಿ 19 ರಿಂದ ಮಾರ್ಚ 20 )
ಇವರು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಸಂಸ್ಕೃತಿಯವರಾಗಿದ್ದು, ಬೇರೆ ರೀತಿಯ ಅಂತೇ ಕಂತೆಗಳಿಗೆ ಬೆಲೆ ಕೊಡುವವರೇ ಅಲ್ಲ . ಇವರು ತುಂಬಾ ರೋಮ್ಯಾಂಟಿಕ್ ಆಗಿದ್ದು ಪ್ರೀತಿಸಿದವರನ್ನು ಬಹಳ ಖುಷಿಯಾಗಿ ನೋಡಿಕೊಳ್ಳುತ್ತಾರೆ . ಭಾವನೆಗಳೇ ಇವರ ಬಂಡವಾಳವಾಗಿದ್ದು ಗಂಡಸರನ್ನು ಇದರಿಂದಲೇ ಮನ ಗೆಲ್ಲುತ್ತಾರೆ. ನಿಮ್ಮ ಹುಡುಗಿಯ ರಾಶಿ ಇಲ್ಲಿದೆಯೇ ? ಇದ್ದರೆ ಕಾಮೆಂಟ್ಸ್ ಮೂಲಕ ತಿಳಿಸಿ .



Click it and Unblock the Notifications











