Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇಯರ್ ಫೋನ್ ಕಚ್ಚಿ ತುಂಡು ಮಾಡಿದ ಬೆಕ್ಕು ಕ್ಷಮೆಯಾಚಿಸಿದ್ದು ಹೀಗೆ…
ಮನೆಯಲ್ಲಿ ಸಾಕು ಪ್ರಾಣಿಗಳು ಅವುಗಳು ಮಾಡುವ ತುಂಟಾಟದಿಂದಾಗಿ ನಮಗೆ ತುಂಬಾ ಖುಷಿ ಆಗುವುದು. ಕೆಲವೊಂದು ಸಲ ಬೆಕ್ಕು ಅಥವಾ ನಾಯಿ ಮಾಡುವ ಕೀಟಲೆಗಳಿಂದ ನಮಗೆ ತೊಂದರೆ ಕೂಡ ಆಗುವುದು. ಆದರೂ ನಾವು ಇದನ್ನು ಸಹಿಸಿಕೊಳ್ಳಬೇಕಾಗುತ್ತದೆ. ಸಾಕು ಪ್ರಾಣಿಗಳ ಆರೈಕೆಗೆ ತುಂಬಾ ಎಚ್ಚರಿಕೆ ಹಾಗೂ ಜವಾಬ್ದಾರಿ ವಹಿಸಬೇಕು. ಆದರೆ ಇಲ್ಲೊಂದು ಬೆಕ್ಕು ತನ್ನ ಯಜಮಾನನ ಇಯರ್ ಪೋನ್ ನ್ನು ತಿಂದು ಹಾಕಿದೆ. ಅದು ಕ್ಷಮೆ ಕೇಳಲು ಏನು ಮಾಡಿದೆ ಎಂದು ತಿಳಿಯಿರಿ.

ಬೆಕ್ಕು ಇಯರ್ ಫೋನ್ ಕಚ್ಚಿಹಾಕಿದೆ
ಆಕಸ್ಮಿಕವಾಗಿ ಬೆಕ್ಕು ಇಯರ್ ಫೋನ್ ನ್ನು ಕಚ್ಚಿ ಹಾಕಿದೆ ಮತ್ತು ಅದಕ್ಕೆ ತಾನು ಹೊಡೆದೆ ಎಂದು ಮಾಲಕ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾನೆ.

ಆತನ ಪೋಸ್ಟ್ ಈ ರೀತಿಯಾಗಿದೆ
ಇಂಡೋನೇಶಿಯಾದ ಫೆರ್ವಹಿರ್ರಾ ರಾಮಧಾನಿ ಎಂಬಾತ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಇದರ ಸಂಪೂರ್ಣ ಕಥೆ ಬರೆದಿದ್ದಾನೆ. ಇಂದು ಬೆಳಗ್ಗೆ ಬೆಕ್ಕು ನನ್ನ ಇಯರ್ ಫೋನ್ ಜತೆಗೆ ಆಡುತ್ತಲಿತ್ತು. ಆಕಸ್ಮಿಕವಾಗಿ ಅದು ಕಚ್ಚಿ ಅದನ್ನು ಎರಡು ತುಂಡು ಮಾಡಿ. ನಾನು ಬೆಕ್ಕಿಗೆ ಹೊಡೆದೆ ಮತ್ತು ಇದರ ಬಳಿಕ ಅದು ಮನೆ ಬಿಟ್ಟು ಹೋಯಿತು. ಒಂದು ಗಂಟೆ ಬಿಟ್ಟು ಅದು ಮನೆಗೆ ಬಂದ ವೇಳೆ ನನಗೆ ಒಂದು ಉಡುಗೊರೆ ತಂದಿತ್ತು.

ಕ್ಷಮೆ ಕೇಳಲು ಉಡುಗೊರೆ ತಂದಿತ್ತು
ಕ್ಷಮೆ ಕೇಳಬೇಕಾಗಿದ್ದ ಬೆಕ್ಕು ಒಂದು ಸಣ್ಣ ಮತ್ತು ದಪ್ಪದ ಹಾವನ್ನು ತಂದು ಮಾಲಕನ ಮುಂದೆ ಹಾಕಿದೆ. ಬೆಕ್ಕಿನ ಈ ಉಡುಗೊರೆಯಿಂದ ನೆಟ್ಟಿಗರು ತುಂಬಾ ಆಘಾತಗೊಂಡಿದ್ದಾರೆ ಮತ್ತು ಹಾವು ಕ್ಷಮೆ ಕೇಳಲು ನೀಡಿದ ಒಳ್ಳೆಯ ಉಡುಗೊರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪೋಸ್ಟ್ ತುಂಬಾ ವೈರಲ್ ಆಗಿದೆ
ಮಾಲಕನು ಬೆಕ್ಕಿನ ನಡವಳಿಕೆ ಬಗ್ಗೆ ತನ್ನ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ ಮತ್ತು ಇದು ತುಂಬಾ ವೈರಲ್ ಆಗಿದೆ ಮತ್ತು 6600 ಶೇರ್ ಆಗಿದೆ. ಈ ಬೆಕ್ಕಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆ ಕಮೆಂಟ್ ಬಾಕ್ಸ್ ಗೆ ಹಾಕಲು ಬರೆಯಬೇಡಿ.



Click it and Unblock the Notifications
