Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕಣ್ಣ ರೆಪ್ಪೆ ಗುಂಗುರು ಮಾಡುವ ಟ್ರೆಂಡ್ ನ ಅಪಾಯಗಳು
ಹದಿಹರೆಯದವರು ಏನಾದರೂ ಹೊಸತನ ಅಥವಾ ಶ್ರೇಷ್ಠವಾಗಿರುವುದನ್ನು ಮಾಡಲು ಸಾಮಾಜಿಕ ಜಾಲತಾಣಗಳಿಂದ ಪ್ರೇರಣೆ ಪಡೆಯುವರು. ಆದರೆ ನಾವು ಇಂದು ಆನ್ ಲೈನ್ ನಲ್ಲಿ ನೋಡುವಂತಹ ಪ್ರತಿಯೊಂದು ಕೂಡ ಹೊಸ ಟ್ರೆಂಡ್ ಆಗಿದೆ ಎಂದು ನಾವು ಮರೆಯಬಾರದು.

ಸಾಮಾಜಿಕ ಜಾಲತಾಣಗಳಲ್ಲಿ ಇಂದು ಜನರು ಏನಾದರೊಂದು ಹೊಸತನ ಸೃಷ್ಟಿಸಿ, ಅದರಿಂದ ವಿವಾದವಾಗುವಂತೆ ಅಥವಾ ಜನರ ಗಮನ ಆಕರ್ಷಿಸುವಂತೆ ಮಾಡುವರು. ಇದರಲ್ಲಿ ಒಂದು ಟ್ರೆಂಡ್ ಎಂದರೆ ಅದು ಕಣ್ಣ ರೆಪ್ಪೆಗಳನ್ನು ಗುಂಗುರು ಮಾಡುವುದು. ಈ ವಿಚಿತ್ರ ಟ್ರೆಂಡ್ ನ್ನು ಇನ್ ಸ್ಟಾಗ್ರಾಮರ್ ಸೋಫಿ ಪೀಟರ್ಸನ್ ಎಂಬವರು ಆರಂಭಿಸಿದರು. ತನ್ನ ಕಣ್ಣಿನ ರೆಪ್ಪೆಗಳನ್ನು ಗುಂಗುರು ಮಾಡಿ, ಸೌಂದರ್ಯವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲು ಅವರು ಇಲ್ಲಿ ಪ್ರಯತ್ನಿಸಿರುವರು.
ಇವರು ಸೌಂದರ್ಯದಲ್ಲಿ ಏನಾದರೂ ಹೊಸತನ ಪ್ರಯೋಗ ಮಾಡುವ ಮೂಲಕವಾಗಿ ಸಾವಿರಾರು ಮಂದಿ ಫಾಲೋವರ್ಸ್ ಗಳನ್ನು ಹೊಂದಿರುವರು. ಇವರ ಇನ್ ಸ್ಟಾಗ್ರಾಮ್ ಖಾತೆಗೆ ಸುಮಾರು 28000 ಮಂದಿ ಫಾಲೋವರ್ ಗಳಿದ್ದಾರೆ. ತನ್ನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಆಕೆ ವಿವಿಧ ರೀತಿಯ ವಿಭಿನ್ನ ಸೌಂದರ್ಯದ ಬಗ್ಗೆ ಫೋಟೊಗಳನ್ನು ಅಪ್ ಲೋಡ್ ಮಾಡಿರುವರು.
ಇದು ಸಾಮಾನ್ಯವಾದ ಕಣ್ಣಿನ ರೆಪ್ಪೆಗಳೇ ಆಗಿದೆ. ಆದರೆ ಪ್ರಮಾಣ ಮಾತ್ರ ಜಾಸ್ತಿ ಇದೆ. ಇದು ತುಂಬಾ ದಪ್ಪ, ಕಡುಕಪ್ಪ ಮತ್ತು ಗುಂಗುರು ಆಗಿದೆ. ಇದರಿಂದ ಇದು ತುಂಬಾ ಅನೈಸರ್ಗಿಕವಾಗಿ ಕಾರಣದಿಂದಾಗಿ ಇದು ನೈಜವಾದ ಕಣ್ಣಿನ ರೆಪ್ಪೆಗಳು ಅಲ್ಲ ಎಂದು ನಾವು ತಿಳಿಯಬಹುದು. ಇನ್ನು ಭೀತಿ ಮೂಡಿಸುವ ವಿಚಾರವೆಂದರೆ ಗುಂಗುರು ಕಣ್ಣ ರೆಪ್ಪೆಗಳಿಂದ ಕೂಡಿರುವಂತಹ ಫೋಟೊಗಳು ಈಗ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ.
ಈ ಟ್ರೆಂಡ್ ಈಗ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಆದರೆ ಈ ಟ್ರೆಂಡ್‌ನ್ನು ಪಾಲಿಸುವ ಮೊದಲು ಕಣ್ಣಿಗೆ ಆಗುವ ಹಾನಿಯ ಬಗ್ಗೆ ಜನರು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಕಣ್ಣಿನ ರೆಪ್ಪೆಗಳನ್ನು ಗುಂಗುರುವ ಮಾಡುವ ಪ್ರಕ್ರಿಯೆಯಿಂದಾಗಿ ಕಣ್ಣಿನಲ್ಲಿ ಅದರ ಕೆಲವೊಂದು ಲೋಹಗಳು ತುಂಬಿಕೊಳ್ಳಬಹುದು. ನಕಲಿ ಕಣ್ಣಿನ ರೆಪ್ಪೆಗಳನ್ನು ಕೂಡ ಕಣ್ಣಿಗೆ ಜೋಡಿಸಲಾಗುತ್ತದೆ. ಇದು ನಿಮ್ಮ ನೈಸರ್ಗಿಕ ಕಣ್ಣ ರೆಪ್ಪೆ ಮೇಲೆ ಪರಿಣಾಮ ಬೀರಬಹುದು. ಇದರಿಂದ ನೀವು ಇಂತಹ ಹುಚ್ಚು ಟ್ರೆಂಡ್ ನ್ನು ಪಾಲಿಸಬೇಡಿ ಎಂದು ನಾವು ಕೇಳಿಕೊಳ್ಳುತ್ತೇವೆ.



Click it and Unblock the Notifications



