Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ದಂಪತಿಗಳು ಈಜುಕೊಳದ ಅಂಚಿನಲ್ಲಿ ನಿಂತುಕೊಂಡು ಚುಂಬಿಸುತ್ತಿರುವ ಫೋಟೋ ನೆಟ್ಟಿಗರನ್ನು ರೊಚ್ಚಿಗೆಬ್ಬಿಸಿದೆ!
ಇಂದಿನ ದಿನಗಳಲ್ಲಿ ಜನಪ್ರಿಯತೆ ಅನ್ನುವುದು ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತ ಆಗಿಲ್ಲ. ಯಾಕೆಂದರೆ ಮುಂದುವರಿದಿರುವಂತಹ ತಂತ್ರಜ್ಞಾನದಿಂದ ನೀವು ಕೆಲವೇ ಗಂಟೆಗಳಲ್ಲಿ ವಿಶ್ವ ಮಟ್ಟದಲ್ಲಿ ಜನಪ್ರಿಯರಾಗಬಹುದು. ಇದಕ್ಕಾಗಿಯೇ ಕೆಲವೊಂದು ಆಪ್ ಗಳು ಕೂಡ ಬಂದಿದೆ. ಇದನ್ನು ಬಳಸಿಕೊಂಡು ನಿಮ್ಮಲ್ಲಿ ಇರುವಂತಹ ಯಾವುದೇ ಪ್ರತಿಭೆಯನ್ನು ಅನಾವರಣ ಮಾಡಬಹುದು. ಹೀಗೆ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಸಾಕು. ಅಲ್ಲಿ ನಿಮಗೆ ಬೇಕಾದಷ್ಟು ಲೈಕ್ ಹಾಗೂ ಕಮೆಂಟ್ ಗಳು ಸಿಗುವುದು. ಹೀಗೆ ಇಲ್ಲೊಂದು ದಂಪತಿಯು ಎತ್ತರವಾದ ಈಜುಕೊಳವೊಂದರ ಅಂಚಿನಲ್ಲಿ ನಿಂತುಕೊಂಡು ತೆಗೆಸಿಕೊಂಡಿರುವ ಫೋಟೋ ತುಂಬಾ ವೈರಲ್ ಆಗಿದೆ.
ಈ ಫೋಟೋವನ್ನು ನೋಡಿದರೆ ಜನರು ಜನಪ್ರಿಯತೆಗಾಗಿ ಹೀಗೆ ಕೂಡ ಮಾಡುತ್ತಾರೆಯಾ ಎಂದು ನಮಗೆ ಅನಿಸುವುದು ಇದೆ. ದಂಪತಿಯು ಎತ್ತರದ ಈಜುಕೊಳದ ಅಂಚಿನಲ್ಲಿ ನಿಂತುಕೊಂಡು ಚುಂಬಿಸುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಬಂದಿದೆ ಎಂದರೆ ಅದನ್ನು ಊಹಿಸಲು ಸಾಧ್ಯವಿಲ್ಲ. ಹೆಚ್ಚಿನ ನೆಟ್ಟಿಗರು ಈ ದಂಪತಿಯ ಕ್ರಮವನ್ನು ಕಟುವಾಗಿ ಟೀಕಿಸಿರುವರು. ಈ ಫೋಟೊ ಮತ್ತು ನಿಜವಾದ ಫೋಟೋಗೆ ಏನಾದರೂ ವ್ಯತ್ಯಾಸ ಇದೆಯಾ ಎಂದು ನೀವು ಮುಂದೆ ಓದುತ್ತಾ ತಿಳಿಯಿರಿ.

ಈ ಫೋಟೊವನ್ನು ಅವರು ಸಾಮಾಜಿಕ ಜಾಲತಾಣಗಳಿಗೆ ಹಾಕಿದರು
ಇನ್ ಸ್ಟಾಗ್ರಾಮ್ ನಲ್ಲಿ ತುಂಬಾ ಜನಪ್ರಿಯವಾಗಿರುವಂತಹ ಕೆಲ್ಲಿ ಕಾಸ್ಟಿಲ್ಲೆ ಮತ್ತು ಕೊಡಿ ವರ್ಕ್ ಮ್ಯಾನ್ ಎತ್ತರದ ಈಜುಕೊಳದ ಅಂಚಿನಲ್ಲಿ ತೆಗೆದಿರುವಂತ ಫೋಟೊವನ್ನು ಆನ್ ಲೈನ್ ನಲ್ಲಿ ಹರಿಯಬಿಟ್ಟರು. ಈ ಎತ್ತರದ ಈಜುಕೊಳದಲ್ಲಿ ಕೆಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ ಮತ್ತು ಕೊಡಿ ಆಕೆಯನ್ನು ಹಿಡಿದುಕೊಂಡಿದ್ದಾನೆ ಮತ್ತು ನೀರಿನ ಭಾಗದಲ್ಲಿ ಆತ ನಿಂತುಕೊಂಡಿದ್ದಾನೆ. ಉಬುಡ್ ನ ಕಯೊನ್ ಜಂಗಲ್ ರೆಸಾರ್ಟ್ ನಲ್ಲಿ ಈ ಫೋಟೊ ತೆಗೆಯಲಾಗಿದೆ.
ಈ ಫೋಟ ವೈರಲ್ ಆಯಿತು
ಈ ಫೋಟೊವನ್ನು ಆನ್ ಲೈನ್ ನಲ್ಲಿ ಹರಿಯಬಿಟ್ಟ ಬಳಿಕ ಇದು ತುಂಬಾ ವೈರಲ್ ಆಗಿದೆ ಮತ್ತು ಇದಕ್ಕೆ ನೆಟ್ಟಿಗರು ತುಂಬಾ ಖಾರವಾಗಿ ಪ್ರತಿಕ್ರಿಯೆ ಕೂಡ ನೀಡಿರುವರು. ತಮ್ಮ ಸುರಕ್ಷತೆಯ ಬಗ್ಗೆ ಚಿಂತೆ ಮಾಡುವ ಬದಲು ಇನ್ ಸ್ಟಾ ಗ್ರಾಮ್ ನಲ್ಲಿ ಸಿಗುವ ಲೈಕ್ ಗೆ ಹಪಹಪಿಸಿರುವುದು ಸರಿಯಲ್ಲ ಎಂದು ಕೆಲವು ನೆಟ್ಟಿಗರು ನೇರವಾಗಿ ಹೇಳಿದ್ದಾರೆ. ಇನ್ನು ಕೆಲವು ಮಂದಿ ಈ ದಂಪತಿಯನ್ನು ಬೇಜವಾಬ್ದಾರಿಯವರು ಮತ್ತು ಸಾಹಸ ಮಾಡಲು ಬೇರೆಯವರಿಗೆ ಪ್ರೇರೇಪಿಸುತ್ತಿದ್ದಾರೆ ಎಂದು ಆರೋಪ ಕೂಡ ಮಾಡಿರುವರು.
ದಂಪತಿಯು ನಿಜ ಸಂಗತಿ ಹೇಳಬೇಕಾಯಿತು
ಈ ಫೋಟೊಗೆ ಅತಿಯಾಗಿ ಕಮೆಂಟ್ ಬರಲು ಆರಂಭಿಸಿದ ಬಳಿಕ ದಂಪತಿಯು ಇದಕ್ಕೆ ಸ್ಪಷ್ಟನೆ ನೀಡಬೇಕಾಯಿತು. ಈ ಫೋಟೊವನ್ನು ಎಡಿಟ್ ಮಾಡಲಾಗಿದೆ ಮತ್ತು ಅದು ಚಿತ್ರದಲ್ಲಿ ಕಾಣಿಸುತ್ತಿರುವಂತೆ ಎತ್ತರವಾಗಿ ಇಲ್ಲ ಎಂದು ಹೇಳಿರುವರು. ಇದರ ಬಳಿಕ ಅವರು ಎಡಿಟ್ ಮಾಡದೆ ಇರುವಂತಹ ಫೋಟೊ ಕೂಡ ಶೇರ್ ಮಾಡಿದರು. ನಾಟಕೀಯವಾಗಿರುವಂತಹ ಫೋಟೊವನ್ನು ನಾವು ಹಾಕಿದ್ದೆವು ಎಂದು ದಂಪತಿ ಹೇಳಿದೆ.
ಇದು ಮೊದಲ ಸಲವಲ್ಲ
ವರದಿಗಳು ಹೇಳುವ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆಯಲು ಈ ರೀತಿಯ ಸ್ಟಂಟ್ ಮಾಡುವುದು ಇದು ಮೊದಲ ಸಲವಲ್ಲ. ಕೆಲವು ಜನರು ನಕಲಿ ಫೋಟೊಗಳನ್ನು ಹಾಕಿ ತಮ್ಮ ಬೆಂಬಲಿಗರನ್ನು ಮೋಸ ಮಾಡುವುದು ಇದೆ ಎಂದು ಹೇಳಲಾಗುತ್ತದೆ.
ಈ ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
