Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ನೋವು ನಿವಾರಣೆಗೆ ಹಗ್ಗ ಹಾಕಿಕೊಂಡು ನೇತಾಡುವುದು- ಇದು ಚೀನಾದ ಹೊಸ ಟ್ರೆಂಡ್ ಅಂತೆ!!
ದೇಹಕ್ಕೆ ನೋವು ಉಂಟಾದ ವೇಳೆ ಹೇಗಾದರೂ ಮಾಡಿ ಶಮನ ಮಾಡಬೇಕು ಎಂದು ಅನಿಸುವುದು. ನೋವು ನಿವಾರಣೆಗೆ ಹಲವಾರು ಔಷಧಿಗಳು, ಚಿಕಿತ್ಸೆಗಳು ಲಭ್ಯವಿದೆ. ಒದೊಂದು ದೇಶದಲ್ಲಿ ವಿಭಿನ್ನ ರೀತಿಯ ಚಿಕಿತ್ಸಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಅದರಲ್ಲೂ ಚೀನಾದಲ್ಲಿ ಕೆಲವು ಚಿಕಿತ್ಸಾ ಕ್ರಮಗಳು ನಮಗೆ ತುಂಬಾ ವಿಚಿತ್ರ ಎಂದು ಅನಿಸುತ್ತದೆ.
ಆದರೆ ಅದು ಅಲ್ಲಿನ ಜನರಿಗೆ ಮಾತ್ರ ಸಾಮಾನ್ಯ ಎಂದು ಅನಿಸಬಹುದು. ಈಗ ಚೀನಾದಲ್ಲಿ ಜನರು ದೇಹದ ನೋವು ನಿವಾರಣೆ ಮಾಡಿಕೊಳ್ಳಲು ಕೆಲವೊಂದು ವಿಚಿತ್ರ ವಿಧಾನಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಕುತ್ತಿಗೆಯಲ್ಲಿ ಒಂದು ಸಾಧನ ಹಾಕಿಕೊಂಡು ನೇತವಾಡಿ, ನೋವು ನಿವಾರಣೆ ಮಾಡಿಕೊಳ್ಳುವರು. ಇದು ತುಂಬಾ ವಿಚಿತ್ರ ಎಂದು ಅನಿಸುವುದು. ಈ ಬಗ್ಗೆ ನೀವು ವಿವರವಾಗಿ ತಿಳಿಯಿರಿ.

ಹೊಸ ವಿಧಾನವು ಜನಪ್ರಿಯತೆ ಪಡೆಯುತ್ತಿದೆ
ಈ ವಿಚಿತ್ರ ಚಿಕಿತ್ಸಾ ವಿಧಾನವು ಚೀನಾದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇಲ್ಲಿ ಮುಖದ ಭಾಗಕ್ಕ ಹಗ್ಗ ಕಟ್ಟಿಕೊಂಡು ನೇತಾಡುತ್ತಿರುವುದು ಕಂಡುಬಂದಿದೆ.ಇವರು ಜೋಕಾಲಿಯಲ್ಲಿ ನೇತಾಡಿದಂತೆ ಇಲ್ಲಿ ನೇತಾಡುವರು.ಇದರಿಂದಾಗಿ ಅವರ ಈ ಸಾಧನಗಳು ಸುಧಾರಣೆ ಆಗುತ್ತದೆ ಎಂದು ಹೇಳಲಾಗಿದೆ.

ಅವರು ಹೇಳುವಂತೆ…
ಈ ವಿಧಾನವನ್ನು ಅನುಸರಿಸಿಕೊಂಡು ಹೋಗುತ್ತಿರುವ ಜನರ ಪ್ರಕಾರ ಇದನ್ನು ಪ್ರತಿನಿತ್ಯ ಮಾಡುವುದರಿಂದ ಕುತ್ತಿಗೆ ನೋವು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆದರೆ ತಜ್ಞರು ಹೇಳುವ ಪ್ರಕಾರ ಜನರು ಇಂತಹ ವಿಧಾನಗಳನ್ನು ಪ್ರಯೋಗಿಸುವ ಮೊದಲು ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇದರಿಂದ ಗಾಯಾಳುವಾಗುವ ಸಾಧ್ಯತೆಯು ಇದೆ.

ಜನರು ಇದರ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುವರು
ಈ ವಿಧಾನಗಳನ್ನು ಪಾಲಿಸಿಕೊಂಡು ಹೋಗುತ್ತಿರುವಂತಹವರು ಇದರ ಹಲವಾರು ಫೋಟೊಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಈ ವಿಧಾನವು ವಯಸ್ಸಾದವರಲ್ಲಿ ಹೆಚ್ಚು ಜನಪ್ರಿಯ ವಾಗುತ್ತಿದೆ ಮತ್ತು ಇವರು ತಮ್ಮ ದೇಹದ ನೋವು ನಿವಾರಣೆ ಮಾಡಲು ಈ ವಿಧಾನದ ಮೂಲಕ ದೇಹವನ್ನು ನೇತಾಡಿ ಸುತ್ತಿದ್ದಾರೆ.

ಈ ಸಾಧನದ ಬಗ್ಗೆ
ಈ ಸಾಧನವು(ನೆಕ್ ಸಿರ್ವಿಕಲ್ ಟ್ರಾಕ್ಷನ್ ಡಿವೈಸ್) ನರಗಳ ಮೇಲಿನ ಒತ್ತಡ ನಿವಾರಣೆ ಮಾಡಿ, ಅದರಿಂದ ನೋವು ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಸಾಧನ ಹಾಕಿಕೊಂಡು ನೇತಾಡುವ ಮೂಲಕ ಅದು ನರಗಳ ಮೇಲಿನ ಒತ್ತಡ ನಿವಾರಿಸಿ, ನೋವು ಕಡಿಮೆ ಮಾಡುವುದು ಎಂದು ಇದನ್ನು ಬಳಸಿದವರು ಹೇಳಿದ್ದಾರೆ.



Click it and Unblock the Notifications
