Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕನ್ನಡಿಯಲ್ಲಿ ಮಗುವಿನ ಪ್ರತಿಬಿಂಬವೇ ಬೇರೆ! ಭಯ ಹುಟ್ಟಿಸುವ ವಿಡಿಯೋ ವೈರಲ್
ಕ್ಷಣ ಕ್ಷಣವು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ವಿಡಿಯೋಗಳು ಅಪ್ ಲೋಡ್ ಆಗುತ್ತಲೇ ಇರುತ್ತವೆ. ಇದರಲ್ಲಿ ಕೆಲವು ವೈರಲ್ ಆದರೆ, ಇನ್ನು ಕೆಲವು ಹಾಗೆ ಮೂಲೆ ಸೇರಿ ಬಿಡುತ್ತದೆ. ವಿಡಿಯೋಗಳು ಜನರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವುದು. ಹೀಗಾಗಿ ವಿಡಿಯೋಗಳು ಇಂದು ಜನಪ್ರಿಯವಾಗುತ್ತಿದೆ. ಇನ್ನು ಕೆಲವು ವಿಡಿಯೋಗಳನ್ನು ನಾವು ಚಿತ್ರೀಕರಣ ಮಾಡುತ್ತಿರುವ ವೇಳೆ ಅಲ್ಲಿ ಅದರಲ್ಲಿ ಅಗೋಚರ ಶಕ್ತಿಯು ಕಾಣಿಸಿಕೊಂಡಿರುವುದು ಇದೆ. ಇದು ಮನುಷ್ಯರ ಕಣ್ಣಿಗೆ ಕಾಣಸಿಗುವುದಿಲ್ಲ. ಆದರೆ ಕ್ಯಾಮರಾ ಕಣ್ಣಿನಲ್ಲಿ ಅದರ ಸುಳಿವು ಸಿಗುವುದು.

ಹೀಗೆ ಬಾಲಕನೊಬ್ಬ ಕನ್ನಡಿಯ ಮುಂದೆ ನಿಂತು ನೋಡುತ್ತಿರುವ ವೇಳೆ ತುಂಬಾ ವಿಚಿತ್ರವಾದ ದೃಶ್ಯವು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಇಲ್ಲಿ ಮಗು ಕನ್ನಡಿ ನೋಡುತ್ತಲಿದ್ದರೆ ಕನ್ನಡಿಯಲ್ಲಿ ಬೇರೆ ಚಿತ್ರ ಕಾಣಿಸಿಕೊಂಡಿದೆ. ಇದರಿಂದ ಇದನ್ನು ನೋಡಿದವರು ದಂಗಾಗಿ ಹೋಗಿದ್ದಾರೆ. ಮಗುವಿನ ತಂದೆಯು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಭೀತಿ ಹುಟ್ಟಿಸುತ್ತದೆ. ಈ ಬಗ್ಗೆ ನೀವು ವಿವರ ತಿಳಿಯಿರಿ.

ಇದು ಒಂದು ಸಾಮಾನ್ಯ ವಿಡಿಯೋದಂತೆ ಇರಬೇಕಿತ್ತು
ಮಗುವಿನ ವಿಡಿಯೋವನ್ನು ದಂಪತಿಯು ಚಿತ್ರೀಕರಿಸುತ್ತಿದ್ದ ವೇಳೆ ಮಗುವಿನ ಪ್ರತಿಬಿಂಬದಲ್ಲಿ ಏನೋ ತೊಂದರೆ ಇದೆ ಎಂದು ಅವರಿಗೆ ಅನಿಸಿದೆ ಮತ್ತು ಅವರು ಈ ವಿಡಿಯೋವನ್ನು ಮರು ಪರಿಶೀಲಿಸಲು ಪ್ರಯತ್ನಿಸಿದರು.

ಈ ವಿಡಿಯೋವನ್ನು ಆನ್ ಲೈನ್ ಗೆ ಹಾಕಲಾಯಿತು
ಈ ವಿಡಿಯೋವನ್ನು ಆನ್ ಲೈನ್ ಗೆ ಹಾಕಲಾಯಿತು ಮತ್ತು ಅದರಲ್ಲಿ ಹೀಗೆ ಬರೆಯಲಾಗಿತ್ತು...``ನಾನು ಪಬ್ ಜಿ ಆಡುತ್ತಾ ಆನಂದಿಸುತ್ತಿದ್ದೆ. ಆ ವೇಳೆ ನನ್ನ ಪತ್ನಿಯು ಮಗುವನ್ನು ತರಲು ಹೇಳಿದಳು. ಏನು ಇರಲಿಕ್ಕಿಲ್ಲವೆಂದು ನಾನು ಯೋಚಿಸಿದ್ದೆ. ಆದರೆ ವಿಡಿಯೋ ನೋಡಿದಾಗ ತುಂಬಾ ಭೀತಿ ಉಂಟಾಗಿದೆ!''
ವಿಡಿಯೋದಲ್ಲಿ ಇರುವಂತೆ…
ಮಗುವು ತಾಯಿಯ ಕಡೆಗೆ ನೋಡಿದ ಕೂಡಲೇ ಆಗ ಕನ್ನಡಿಯಲ್ಲಿ ಇರುವಂತಹ ಪ್ರತಿಬಿಂಬ ಕೂಡ ಕ್ಯಾಮರಾ ಕಡೆಗೆ ನೋಡುವುದು. ಕಣ್ಣಿನ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುವುದು ಮತ್ತು ಇದರ ಬಳಿಕ ಸಾಮಾನ್ಯ ಬಣ್ಣಕ್ಕೆ ಬರುವುದು.

ಭೀತಿ ಪಡುತ್ತಿದ್ದೀರಿ…ಈ ವಿಡಿಯೋ ಎಡಿಟ್ ಮಾಡಲಾಗಿದೆ!
ಈ ವಿಡಿಯೋ ಬಗ್ಗೆ ಜನರು ತುಂಬಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಇದರ ಸತ್ಯವನ್ನು ಹೇಳಲೇಬೇಕಾಗಿದೆ. ಈ ವಿಡಿಯೋವನ್ನು ಮಗುವಿನ ತಂದೆ ಎಡಿಟ್ ಮಾಡಿದ್ದಾರೆ. ಆದರೂ ಇದು ತುಂಬಾ ಭೀತಿ ಉಂಟು ಮಾಡುತ್ತಿದೆ.
ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಲು ಮರೆಯಬೇಡಿ.



Click it and Unblock the Notifications
