Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಬಾಲಕಿಯ ಸೊಂಟ ಮುಟ್ಟಿದ ಬಾಲಕನನ್ನು ರಸ್ತೆಯಲ್ಲೇ ನಗ್ನವಾಗಿಸಿದ ತಾಯಿ!
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎನ್ನುವ ಮಾತಿದೆ. ಹೀಗಾಗಿ ಮಕ್ಕಳು ಎಲ್ಲವನ್ನು ಮನೆಯಲ್ಲಿ ಕಲಿಯುವುದು. ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಹಾಗೂ ನಡತೆ ಕಲಿಸುವುದು ತುಂಬಾ ಅಗತ್ಯ. ಅದು ಮನೆಯಿಂದಲೇ ಆರಂಭವಾಗಬೇಕು. ಸಣ್ಣ ವಯಸ್ಸಿನಲ್ಲಿ ಕಲಿಸುವಂತಹ ಶಿಸ್ತು, ನೀತಿಪಾಠಗಳು ಜೀವನ ಪೂರ್ತಿ ನೆರವಾಗುವುದು. ಆದರೆ ಬಾಲಕನೊಬ್ಬ ಉದ್ದೇಶಪೂರ್ವಕವಾಗಿ ಮಾಡದೆ ತಪ್ಪಿಗೆ ಶಿಕ್ಷೆ ನೀಡಿದರೆ ಆಗ ಏನಾಗಬಹುದು.
ಚೀನಾದಲ್ಲಿ ಏಳು ವರ್ಷದ ಬಾಲಕನು ತನ್ನ ತಾಯಿಯಿಂದ ಇಂತಹ ಶಿಕ್ಷೆಗೆ ಗುರಿಯಾಗಿದ್ದಾನೆ. ತನ್ನ ಸಹಪಾಠಿಯ ಸೊಂಟವನ್ನು ಮುಟ್ಟಿದ ಬಾಲಕನನ್ನು ಆಕೆ ರಸ್ತೆ ಮಧ್ಯೆ ನಗ್ನವಾಗಿಸಿದ್ದಾಳೆ. ತಾಯಿ ತನ್ನ ಮಗನಿಗೆ ಕಠಿಣವಾಗಿ ಬುದ್ಧಿ ಕಲಿಸುತ್ತಿರುವ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.

ಶಿಕ್ಷಕಿ ಆತನ ತಾಯಿಗೆ ದೂರು ನೀಡಿದ್ದರು
ಏಳು ವರ್ಷದ ಬಾಲಕನ ತಾಯಿಗೆ ಶಾಲೆಯಿಂದ ಕರೆ ಬಂದಿತ್ತು. ಕರೆ ಮಾಡಿದ್ದ ಶಿಕ್ಷಕಿಯು ತರಗತಿಯಲ್ಲಿ ಮಹಿಳೆಯ ಮಗ ಸಹಪಾಠಿ ಹುಡುಗಿಯ ಸೊಂಟದ ಹಿಂಭಾಗವನ್ನು ಮುಟ್ಟಿದ್ದಾಗಿ ದೂರಿದರು.

ತಾಯಿ ಮಗನಿಗೆ ಶಿಕ್ಷೆ ನೀಡಲು ನಿರ್ಧರಿಸಿದಳು
ಮಗನಿಗೆ ತನ್ನ ಬಟ್ಟೆ ತೆಗೆದು ಜನನಿಬಿಡ ರಸ್ತೆಯಲ್ಲಿ ನಿಲ್ಲುವಂತೆ ಶಿಸ್ತುಬದ್ಧ ತಾಯಿಯು ಹೇಳಿದರೂ. ಈ ಘಟನೆಯು ಚೀನಾದ ಗುಯಿಯಾಂಗ್ ನಲ್ಲಿ ನಡೆದಿದೆ.

ಈ ವಿಡಿಯೋ ವೈರಲ್ ಆಯಿತು
ಈ ಘಟನೆಯ ಸಂಪೂರ್ಣ ವಿಡಿಯೋ ಚಿತ್ರೀಕರಿಸಲಾಯಿತು ಮತ್ತು ಇದನ್ನು ಆನ್ ಲೈನ್ ನಲ್ಲಿ ಹಾಕಲಾಯಿತು. ಇದರ ಬಗ್ಗೆ ನೆಟ್ಟಿಗರು ತುಂಬಾ ಮಿಶ್ರ ಪತ್ರಿಕ್ರಿಯೆ ನೀಡಿದ್ದಾರೆ. ಇಂತಹ ಕಠಿಣ ಶಿಕ್ಷೆಯಿಂದಾಗಿ ಬಾಲಕ ಪಾಠ ಕಲಿತಿದ್ದಾನೆ ಎಂದು ಕೆಲವರು ಅಭಿಪ್ರಾಯಿಸಿದರೆ, ಇನ್ನು ಕೆಲವರು ಬಾಲಕ ತುಂಬಾ ಸಣ್ಣ ವಯಸ್ಸಿನವನಾಗಿರುವ ಕಾರಣದಿಂದಾಗಿ ಇಷ್ಟು ಕಠಿಣ ಶಿಕ್ಷೆ ನೀಡಬಾರದಿತ್ತು ಎಂದು ಅಭಿಪ್ರಾಯಿಸಿದರು.
ಬಾಲಕನ ತಾಯಿ ಹುಡುಗಿಯ ಪೋಷಕರಲ್ಲೂ ಕ್ಷಮೆ ಯಾಚಿಸಿದರು
ಬಾಲಕನನ್ನು ಈ ಪರಿಸ್ಥಿತಿಯಲ್ಲಿ ಎಷ್ಟು ಹೊತ್ತು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿಲ್ಲ. ಆದರೆ ವರದಿಗಳು ಹೇಳುವ ಪ್ರಕಾರ, ಮಗನಿಗೆ ಶಿಕ್ಷೆ ನೀಡಿದ ಬಳಿಕ ಬಾಲಕನ ತಾಯಿ ಆತನ ಸಹಪಾಠಿ ಪೋಷಕರಿಗೆ ಕರೆ ಮಾಡಿ ಕ್ಷಮೆ ಯಾಚಿಸಿದ್ದಾರೆ.ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಯನ್ನು ಬರೆಯಿರಿ.



Click it and Unblock the Notifications
