Latest Updates
-
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ
ಎಣ್ಣೆ ಇಂಜೆಕ್ಷನ್ ಚುಚ್ಚಿ ದೇಹ ಬೆಳೆಸಿರುವ ಬಾಡಿ ಬಿಲ್ಡರ್ !
ದೇಹದಾರ್ಢ್ಯ ಪಟುಗಳನ್ನು ನೀವು ನೋಡಿರಬಹುದು. ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ತುಂಬಾ ದೈಹಿಕ ಶ್ರಮ ವಹಿಸುವರು. ಇದಕ್ಕಾಗಿ ಅವರು ಗಂಟೆಗಟ್ಟಲೆ ಕಾಲ ಜಿಮ್ ನಲ್ಲಿ ಕಸರತ್ತು ನಡೆಸುವರು. ಇನ್ನು ಕೆಲವು ಮಂದಿ ಜಿಮ್ ನಲ್ಲಿ ಕಾಲ ಕಳೆಯುವ ಜತೆಗೆ ಸ್ವಲ್ಪ ಅಡ್ಡದಾರಿಯನ್ನು ಹಿಡಿದುಕೊಂಡು ತಮ್ಮ ಸ್ನಾಯುಗಳು ಕಟ್ಟುಮಸ್ತಾಗಿ ಬೆಳೆಯಲು ಬೇರೆ ವಿಧಾನಗಳನ್ನು ಬಳಸಿಕೊಳ್ಳುವರು.
ಇದು ಹಲವಾರು ರೀತಿಯ ಅಡ್ಡ ಪರಿಣಾಮಗಳನ್ನು ಕೂಡ ಉಂಟು ಮಾಡಬಹುದು. ಆದರೂ ದೇಹದಾರ್ಢ್ಯ ಪಟುಗಳು ಮಾತ್ರ ಇಂತಹ ಕೆಲವು ವಿಧಾನಗಳ ಹಿಂದೆ ಬಿದ್ದಿರುವರು. ಕೆಲವು ಮಂದಿ ದೇಹ ಬೆಳೆಸಲು ಸ್ಟಿರಾಯ್ಡ್ ಬಳಸಿದರೆ, ಇನ್ನು ಕೆಲವರು ದೇಹಕ್ಕೆ ಎಣ್ಣೆಯ ಇಂಜೆಕ್ಷನ್ ಚುಚ್ಚಿಸಿಕೊಳ್ಳುವರು. ತಾನು ಹಲವಾರು ವರ್ಷಗಳಿಂದ ದೇಹಕ್ಕೆ ಎಣ್ಣೆಯ ಇಂಜೆಕ್ಷನ್ ಚುಚ್ಚಿಕೊಳ್ಳುತ್ತಿರುವುದಾಗಿ ಈ ವ್ಯಕ್ತಿ ಹೇಳಿಕೊಂಡಿದ್ದಾನೆ.

ಈ ಘಟನೆ ಬಗ್ಗೆ ನೀವು ತಿಳಿಯಿರಿ
ಬ್ರೆಜಿಲಿನ ದೇಹದಾರ್ಢ್ಯ ಪಟು ವಲ್ಡಿರ್ ಸೆಗಾಟೊ ಎಂಬವರು ಈ ತಂತ್ರವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. 50ರ ಹರೆಯದ ಇವರು ತನ್ನ ದೇಹದ ಸ್ನಾಯುಗಳನ್ನು ಬಲಗೊಳಿಸಲು ಎಣ್ಣೆಯ ಇಂಜೆಕ್ಷನ್ ನ್ನು ಚುಚ್ಚಿಕೊಳ್ಳುತ್ತಿದ್ದಾರೆ. ಇಂತಹ ಇಂಜೆಕ್ಷನ್ ಚುಚ್ಚಿಕೊಂಡಿರುವ ಪರಿಣಾಮವಾಗಿ ಅವರ ಕೈಗಳು ಮತ್ತು ಎದೆಯು ಬಲೂನಿನಂತೆ ಕಾಣಿಸುತ್ತಿದೆ.
ಡ್ರಗ್ಸ್ ನ ಚಟವನ್ನು ಬೆಳೆಸಿಕೊಂಡಿದ್ದ ವಲ್ಡಿರ್ ಅವರು ತನ್ನ ದೇಹದ ತೂಕವನ್ನು ತುಂಬಾ ಕಳೆದುಕೊಂಡಿದ್ದರು ಮತ್ತು ಇದರಿಂದ ಅವರನ್ನು ಸ್ನೇಹಿತರು ಸಪೂರ ನಾಯಿ ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ತನ್ನ ಗೆಳೆಯರು ಅವರನ್ನು ನಡೆಸಿಕೊಳ್ಳುತ್ತಿದ್ದ ರೀತಿಯಿಂದ ತುಂಬಾ ಬೇಸರಗೊಂಡಿದ್ದರು. ಇದರ ಬಳಿಕ ಅವರು ಜಿಮ್ ಗೆ ಹೋಗಲು ನಿರ್ಧರಿಸಿದರು. ವಲ್ಡಿರ್ ಅವರು ಜಿಮ್ ಗೆ ಹೋದರೂ ಫಲಿತಾಂಶದಿಂದ ಮಾತ್ರ ಹೆಚ್ಚು ಸಂತೋಷವಾಗಿರಲಿಲ್ಲ. ಇದರ ಬಳಿಕ ಅವರು ಸ್ನಾಯುಗಳನ್ನು ಉಬ್ಬಿಸುವಂತಹ ಔಷಧಿಯಾಗಿರುವಂತಹ ಸೈನಥಾಲ್ ತೆಗೆದುಕೊಳ್ಳಲು ಆರಂಭಿಸಿದರು.
ಅವರು ಸೈನಥಾಲ್ ಗೆ ಅಂಟಿಕೊಂಡು ಬಿಟ್ಟರು ಮತ್ತು ಕೆಲವೇ ಸಮಯದಲ್ಲಿ ಅವರು ಇದನ್ನು ನಿಯಮಿತವಾಗಿ ಚುಚ್ಚಿಕೊಳ್ಳಲು ಆರಂಭಿಸಿದರು. ಇದರಿಂದಾಗಿ ಅವರು ಭುಜ ಮತ್ತು ಎದೆಯ ಸ್ನಾಯುಗಳನ್ನು ಉಬ್ಬಿಕೊಂಡವು. ನಿಯಮಿತವಾಗಿ ಸೈನಥಾಲ್ ಬಳಸುವುದರಿಂದ ಆಗುವಂತಹ ಹಾನಿಯ ಬಗ್ಗೆ ಅವರಿಗೆ ತಿಳಿಸಲಾಯಿತು. ಈ ಔಷಧಿಯನ್ನು ನಿಯಮಿತವಾಗಿ ಬಳಕೆ ಮಾಡಿದರೆ ಅದರಿಂದ ಕಾಲುಗಳಿಗೆ ಇದರಿಂದ ಹಾನಿಯಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರು ಎಚ್ಚರಿಕೆ ನೀಡಿದರೂ ಸಹಿತ ಇದನ್ನು ಸೇವಿಸುವುದನ್ನು ಮಾತ್ರ ವಲ್ಡಿರ್ ಅವರು ಬಿಡಲೇ ಇಲ್ಲ. ಈಗ ಅವರನ್ನು ಜನರು ಹಲ್ಕ್ ಎಂದು ಕರೆಯುತ್ತಿರುವ ಕಾರಣದಿಂದಾಗಿ ತುಂಬಾ ಸಂತೋಷವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ತನ್ನ ಭುಜಗಳು ಈಗ ಎರಡು ಪಟ್ಟು ದೊಡ್ಡದಾಗಿದೆ. ಅದರೆ ಇಲ್ಲಿಗೆ ಅದನ್ನು ನಿಲ್ಲಿಸುವುದಿಲ್ಲ ಮತ್ತು ಇನ್ನಷ್ಟು ದೊಡ್ಡದಾಗಿಸಬೇಕು ಎಂದು ಅವರು ಹೇಳಿರುವರು. ವಲ್ಡಿರ್ ಅವರು ತನ್ನ ಭುಜಗಳು ಇನ್ನು ದೊಡ್ಡದಾಗಬೇಕು ಮತ್ತು ಅದನ್ನು ಜನರು ಗಮನಿಸಬೇಕು ಎಂದು ಬಯಸಿರುವರು. ವಲ್ಡಿರ್ ಅವರು ನಿಯಮಿತವಾಗಿ ತನ್ನ ಫೋಟೊ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವರು. ಅವರು ಸಾಮಾಜಿಕ ಜಾಲತಾಣದಲ್ಲಿ ವಲ್ಡಿರ್ ಸೈನಥಾಲ್ ಎಂದು ಬರೆದುಕೊಂಡಿದ್ದಾರೆ.



Click it and Unblock the Notifications











