Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೋಳು ತಲೆ ನಿವಾರಣೆ ಮಾಡಲು ಕೆಲವು ವಿಲಕ್ಷಣ ವಿಧಾನಗಳು!
ಕೂದಲು ಉದುರುವ ಸಮಸ್ಯೆ ಕಾಣಿಸಿಕೊಂಡರೆ ಆಗ ಆತ್ಮವಿಶ್ವಾಸವೇ ಕಳೆದುಹೋಗುವುದು. ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಕೂದಲು ಉದುರುವ ಸಮಸ್ಯೆಗೆ ಸಿಲುಕುವರು. ಇಂತಹ ಸಮಸ್ಯೆ ನಿವಾರಣೆ ಮಾಡಲು ಕೆಲವೊಂದು ಪರಿಹಾರಗಳು ಇದ್ದರೂ ಅದು ಇನ್ನಷ್ಟು ಹಾನಿ ಉಂಟು ಮಾಡುವುದು. ಹೀಗಾಗಿ ಪುರುಷರು ಬೋಳು ತಲೆ ಸಮಸ್ಯೆಗೆ ಸಿಲುಕುವರು. ಬೋಳು ತಲೆ ಉಂಟಾದರೆ ಆಗ ಪುರುಷರಲ್ಲಿ ಆತ್ಮವಿಶ್ವಾಸವೇ ಕುಗ್ಗಿ ಹೋಗುವುದು. ಇಷ್ಟು ಮಾತ್ರವಲ್ಲದೆ ಬೋಳು ತಲೆಯಲ್ಲಿ ಕೂದಲು ಬೆಳೆಯಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡುವರು.
ಇದಕ್ಕಾಗಿ ಅವರು ತಮ್ಮ ಸಂಪಾದನೆ ದೊಡ್ಡ ಮೊತ್ತವನ್ನೇ ಮೀಸಲಿಡುವರು. ಆದರೆ ಹಿಂದಿನ ಕಾಲದಲ್ಲಿ ಬೋಳು ತಲೆ ನಿವಾರಣೆ ಮಾಡಲು ಕೆಲವೊಂದು ವಿಚಿತ್ರ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಇತಿಹಾಸವು ಹೇಳುತ್ತದೆ. ರೋಮನ್ನರು ಮತ್ತು ಈಜಿಪ್ಟಿಯನ್ನರು ಇಂತಹ ವಿಚಿತ್ರ ವಿಧಾನಗಳನ್ನು ಬಳಸುತ್ತಿದ್ದರು. ಅದು ಯಾವುದು ಎಂದು ನಾವು ಕೂಡ ಇಂದು ತಿಳಿದುಕೊಳ್ಳುವ...

ಪ್ರಾಣಿಗಳ ಕೊಬ್ಬು ಬಳಸುವುದು
ಇತಿಹಾಸಜ್ಞರ ಪ್ರಕಾರ ಹಿಂದಿನ ಕಾಲದಲ್ಲಿ ಈಜಿಪ್ಟಿಯನ್ನರು ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತುಂಬಾ ಒದ್ದಾಡುತ್ತಿದ್ದರು. ಜನರು ಹಲವಾರು ವಿಧದ ತಂತ್ರಗಳನ್ನು ಬಳಸಿಕೊಳ್ಳುತ್ತಿರುವಂತೆ ಪ್ರಾಣಿಯ ಕೊಬ್ಬು ತುಂಬಾ ಜನಪ್ರಿಯವಾಯಿತು. ಈ ಮದ್ದಿಗೆ ಬಳಸುತ್ತಿದ್ದ ಕೆಲವೊಂದು ಮಿಶ್ರಣಗಳೆಂದರೆ ಸಿಂಹ, ಬೆಕ್ಕು, ಸರ್ಪ, ಹಿಪ್ಪೋ ಮತ್ತು ಹೆಬ್ಬೆಕ್ಕಿನ ಕೊಬ್ಬು. ಅಂದಿನ ದಿನಗಳಲ್ಲಿ ಸೌಂದರ್ಯವೆನ್ನುವುದು ತುಂಬಾ ಪ್ರಾಮುಖ್ಯತೆ ಪಡೆದಿದ್ದ ಕಾರಣದಿಂದಾಗಿ ಈಜಿಪ್ಟಿನ ಪುರುಷರು ಯಾವುದೇ ರೀತಿಯ ಔಷಧಿಯನ್ನು ಬಳಸಲು ಹಿಂಜರಿಯುತ್ತಿರಲಿಲ್ಲ.

ಇಲಿ
ಜೂಲಿಯಸ್ ಸೀಸರ್ ಗೆ ಕ್ಲಿಯೋಪಾಟ್ರ ಸಲಹೆ ನೀಡಿರುವ ಪ್ರಕಾರ ಇಲಿ ಮತ್ತು ಕುದುರೆ ಹಲ್ಲನ್ನು ತಲೆಗೆ ಉಜ್ಜಿಕೊಂಡರೆ ಅದರಿಂದ ಬೋಳು ತಲೆ ಸಮಸ್ಯೆಯು ನಿವಾರಣೆ ಆಗುವುದು. ರೋಮನ್ ಸಾಮ್ರಾಜ್ಯದಲ್ಲಿ ಬೋಳು ತಲೆಯನ್ನು ತುಂಬಾ ಕೊಳಕು ಎಂದು ಪರಗಣಿಸಲಾಗುತ್ತಿತ್ತು. ಇದರಿಂದಾಗಿ ಸೀಸರ್ ಕೂಡ ತನ್ನ ಬೋಳು ತಲೆ ನಿವಾರಣೆ ಮಾಡಲು ಏನಾದರೂ ಚಿಕಿತ್ಸೆ ಮಾಡಲೇಬೇಕಿತ್ತು. ಆದರೆ ದುರಾದೃಷ್ಟದಿಂದಾಗಿ ಈ ಮದ್ದು ಫಲಿಸಲಿಲ್ಲ. ಇದರಿಂದಾಗಿ ಸೀಸರ್ ತಲೆಗೆ ಲಾರೆಲ್ ಮಾಲೆ ಧರಿಸಲು ನಿರ್ಧರಿಸಿದ.

ಎತ್ತಿನ ವೀರ್ಯ
ಬೋಳು ತಲೆ ನಿವಾರಣೆ ಮಾಡಲು ಜನರು ಕಂಡುಕೊಂಡಿರುವ ಅತ್ಯಂತ ವಿಚಿತ್ರ ಔಷಧಿಯು ಇದಾಗಿದೆ. ವಿಜ್ಞಾನಿಗಳು ಕಂಡುಕೊಂಡಿರುವ ಪ್ರಕಾರ ಎತ್ತಿನ ವೀರ್ಯದಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇದೆ ಮತ್ತು ಇದು ಕೂದಲಿನ ಬೆಳವಣಿಗೆಗೆ ತುಂಬಾ ನೆರವಾಗಲಿದೆ ಎಂದು ಪರಿಗಣಿಸಲಾಗಿದೆ. ಉತ್ತಮ ಫಲಿತಾಂಶ ಬರಲು ತಲೆಗೆ ಸಾಕಷ್ಟು ಮಟ್ಟದಲ್ಲಿ ಎತ್ತಿನ ವೀರ್ಯವನ್ನು ತಲೆಗೆ ಉಜ್ಜಬೇಕಿತ್ತು.

ಶಿರ್ಸಾಸನ
ಯೋಗದಿಂದ ಇದನ್ನು ಪಡೆಯಲಾಗಿದೆ. ಶಿರ್ಸಾಸನ ಮಾಡಿದರೆ ಆಗ ಕೂದಲಿನ ಬೆಳವಣಿಗೆಗೆ ಇದು ನೆರವಾಗುವುದು. ಇದನ್ನು ಶತಮಾನಗಳ ಹಿಂದೆಯೇ ಯೋಗವು ಕಲಿಸಿಕೊಟ್ಟಿದೆ. ಕೂದಲು ಉದುರುವಿಕೆ ತಡೆಯಲು ಕೂಡ ಇದು ನೆರವಾಗುವುದು ಎಂದು ಪರಿಗಣಿಸಲಾಗಿದೆ.



Click it and Unblock the Notifications
