Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರಾಣಿಗಳು ಮನುಷ್ಯರಂತೆ ತಮ್ಮ ಸಂಗಾತಿಯ ಅಂತ್ಯಕ್ರಿಯೆ ನಡೆಸುವುದು
ಮನುಷ್ಯರಿಗೆ ತಮ್ಮ ಆಪ್ತೇಷ್ಟರನ್ನು ಕಳಕೊಂಡರೆ ಭಾವನಾತ್ಮಕವಾಗಿ ಮನಸ್ಸಿಗೆ ತುಂಬಾ ನೋವಾಗುವುದು. ಈ ವೆಳೆ ಅವರ ಅಂತ್ಯಕ್ರಿಯೆ ವೇಳೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತೇವೆ. ಇದೇ ವೇಳೆ ಪ್ರಾಣಿಗಳಿಗೂ ಕೂಡ ಭಾವನೆಗಳು ಇದೆ ಎಂದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಹೌದು, ಹಲವಾರು ಅಧ್ಯಯನಗಳು ಮತ್ತು ಪರಿಶೀಲನೆಗಳು ಪ್ರಾಣಿಗಳು ಕೂಡ ತಮ್ಮ ಹತ್ತಿರದವರನ್ನು ಕಳೆದುಕೊಂಡಾಗ ತುಂಬಾ ರೋಧಿಸುತ್ತದೆ ಎಂದು ತಿಳಿದುಬಂದಿದೆ. ಆರಂಭಿಕ ಅಧ್ಯಯನದಲ್ಲಿ ಮಂಗಗಳು ಮತ್ತು ಆನೆಗಳು ತಮ್ಮ ಸಂಗಾತಿಯನ್ನು ಕಳಕೊಂಡ ವೇಳೆ ತುಂಬಾ ದುಃಖಿಸುತ್ತವೆ ಎಂದು ತಿಳಿದುಬಂದಿದೆ.

ಆದರೆ ಸಾವಿಗೆ ದುಃಖ ವ್ಯಕ್ತಪಡಿಸುವಂತಹ ಸಂಪ್ರದಾಯವು ಹಲವಾರು ವಿಧದ ಪ್ರಾಣಿಗಳಲ್ಲಿ ಕಂಡುಬಂದಿದೆ ಎಂದು ಅಧ್ಯಯನಗಳು ಹೇಳಿವೆ. ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ಕೆಲವು ಪ್ರಾಣಿಗಳು ಕೇವಲ ದುಃಖಿಸುವುದು ಮಾತ್ರವಲ್ಲದೆ, ಅದು ಅಂತ್ಯಕ್ರಿಯೆ ನಡೆಸುತ್ತವೆ ಎಂದು ಹೇಳಿವೆ. ಇದರಿಂದಾಗಿ ಅವುಗಳು ತಮ್ಮ ಆಪ್ತರ ಸಾವಿಗೆ ಅಂತಿಮ ಗೌರವ ಸಲ್ಲಿಸುತ್ತವೆ. ವಿವಿಧ ಪ್ರಾಣಿಗಳು ತಮ್ಮ ಸಂಗಾತಿಯ ಸಾವಿಗೆ ಯಾವ ರೀತಿ ದುಃಖಿಸುತ್ತದೆ ಎಂದು ನೋಡಿ...
ಪ್ರಾಣಿಗಳು ಮನುಷ್ಯರಂತೆ ತಮ್ಮ ಸಂಗಾತಿಯ ಅಂತ್ಯಕ್ರಿಯೆ ನಡೆಸುವುದು
ಯುವ ಸಂಗಾತಿಯ ಕಳಕೊಂಡ ಚಿಂಪಾಜಿಗಳು ಸಾವಿಗೆ ವಾರಗಳ ಕಾಲ ದುಃಖಿಸುತ್ತಿರುವುದು
ಚಿಂಪಾಜಿಗಳು ಮತ್ತು ಗೋರಿಲ್ಲಾಗಳ ಗುಣನಡತೆಗಳು ಒಂದೇ ರೀತಿಯಾಗಿ ಇರುವುದು. ಅವುಗಳ ಕುಟುಂಬದಲ್ಲಿ ಯಾವುದೇ ಸಾವು ಸಂಭವಿಸಿದರೆ ಆಗ ತುಂಬಾ ದುಃಖ ವ್ಯಕ್ತಪಡಿಸುತ್ತವೆ. ಇವುಗಳು ಕಿರುಚುವುದು, ದುಃಖಿಸುವುದು ಮತ್ತು ದೇಹವನ್ನು ಎಲ್ಲಾ ರೀತಿಯಿಂದಲೂ ಅವುಗಳು ಪರೀಕ್ಷೆ ಮಾಡುವುದು. ತಾಯಿ ಚಿಂಪಾಜಿಯು ಮಗುವಿನ ದೇಹವನ್ನು ವಾರಗಳ ಕಾಲ ಹಾಗೆ ಎತ್ತಿಕೊಂಡು ಓಡಾಡುವುದು. ಇನ್ನು ಕೆಲವು ಸಂದರ್ಭಗಳಲ್ಲಿ ತಿಂಗಳುಗಳ ಕಾಲ ಹೀಗೆ ಮಾಡುವುದು.
ನಾಯಿಗಳು ದುಃಖಿಸುವುದು ಮತ್ತು ಶವದ ರಕ್ಷಣೆ ಮಾಡುವುದು
ನಾಯಿಗಳು ತುಂಬಾ ಭಾವನಾತ್ಮಕವಾದ ಪ್ರಾಣಿಗಳಾಗಿರುವ ಕಾರಣದಿಂದಾಗಿ ಹಾಗೂ ಮನುಷ್ಯನಿಗೆ ತುಂಬಾ ಹತ್ತಿರವಾದ ಕಾರಣದಿಂದಾಗಿ ಅವುಗಳು ದುಃಖಿಸುವುದನ್ನು ನೋಡಲು ತುಂಬಾ ಭಾವನಾತ್ಮಕವಾಗಿ ಇರುವುದು. ತಮ್ಮ ಸಂಗಾತಿಯನ್ನು ಕಳಕೊಂಡ ವೇಳೆ ಅವುಗಳು ರೋಧಿಸುತ್ತದೆ. ಈ ವೇಳೆ ಸತ್ತ ನಾಯಿಯ ಶವವನ್ನು ಅವುಗಳು ರಕ್ಷಣೆ ಮಾಡುವುದು. ಗಂಟೆಗಳ ಕಾಲ ಅವುಗಳು ಅದರ ಸುತ್ತಲೂ ಓಡಾಡುತ್ತಾ ಇರುತ್ತದೆ ಮತ್ತು ಅದನ್ನು ರಕ್ಷಿಸುತ್ತದೆ.
ಕುದುರೆಗಳು ಕೂಡ ಸಾವಿಗೀಡಾದ ಸಂಗಾತಿಗೆ ಗೌರವ ಸೂಚಿಸುವುದು
ಕುದುರೆಗಳು ತಮ್ಮ ಸಂಗಾತಿಯನ್ನು ಕಳಕೊಂಡ ವೇಳೆ ಅವುಗಳು ಶವದ ಬದಿಯಲ್ಲಿ ಮೌನವಾಗಿ ನಿಂತುಕೊಂಡು ಗೌರವ ಸೂಚಿಸುತ್ತವೆ. ಅವುಗಳು ತಮ್ಮ ತಲೆಯನ್ನು ಕೆಳಗೆ ಮತ್ತು ಕಣ್ಣುಗಳನ್ನು ಅದರತ್ತಲೇ ನೆಟ್ಟಿರುತ್ತವೆ. ಇವುಗಳು ತುಂಬಾ ಗೊಂದಲದಲ್ಲಿ ಓಡುತ್ತಾ, ಬೊಬ್ಬೆ ಹಾಕುತ್ತಾ ತನ್ನ ಸಂಗಾತಿಯನ್ನು ಕರೆಯುತ್ತಿರುತ್ತವೆ. ಕುದುರೆಯು ಸತ್ತ ವೇಳೆ ಮತ್ತೊಂದು ಕುದುರೆಯು ಅದಕ್ಕೆ ಅಂತಿಮ ಗೌರವ ಸೂಚಿಸಲು ಅದರ ಯಜಮಾನರು ಅವಕಾಶ ಮಾಡಿಕೊಡುವರು. ಇದರಿಂದ ಅವುಗಳು ಅಂತ್ಯಕ್ರಿಯೆಗೆ ಮೊದಲು ಅದರ ದೇಹವನ್ನು ನೋಡುತ್ತವೆ.
ಡಾಲ್ಫಿನ್ ಗಳು ಸತ್ತಿರುವ ಸಂಗಾತಿಯ ಎಬ್ಬಿಸಲು ಪ್ರಯತ್ನಿಸುವುದು
ಯಾವುದಾದರೂ ಡಾಲ್ಫಿನ್ ಸತ್ತ ವೇಳೆ ಸಂಪೂರ್ಣ ಬಳಗವು ತುಂಬಾ ಭಾವನಾತ್ಮಕವಾಗಿ ಇರುತ್ತವೆ. ಈ ವೇಳೆ ಡಾಲ್ಫಿನ್ ಗಳು ಸತ್ತಿರುವಂತಹ ತಮ್ಮ ಸಂಗಾತಿಯನ್ನು ತಮ್ಮದೇ ಆಗಿರುವಂತ ರೀತಿಯಲ್ಲಿ ಎಬ್ಬಿಸಲು ಪ್ರಯತ್ನಿಸುತ್ತವೆ ಮತ್ತು ಬೇರೆಯವರು ಇದರ ಹತ್ತಿರ ಬರದಂತೆ ತುಂಬಾ ಆಕ್ರಮಣಕಾರಿಯಾಗಿ ರಕ್ಷಣೆ ಮಾಡುತ್ತವೆ.



Click it and Unblock the Notifications