For Quick Alerts
ALLOW NOTIFICATIONS  
For Daily Alerts

ಒಂಬತ್ತು ವರ್ಷಗಳಿಂದ ಔಷಧಿಯೊಂದರ ಚಟಕ್ಕೆ ಬಿದ್ದ ವೈದ್ಯರ ಸ್ಟೋರಿ ಇದು!

|

ನಶೆಗಾಗಿ ಬೇರೆ ಬೇರೆ ರೀತಿಯ ಮಾದಕ ದ್ರವ್ಯ ಹಾಗೂ ಔಷಧಿಗಳನ್ನು ಬಳಸಿಕೊಳ್ಳುವುದು ಮೊದಲಿಗೆ ಕೇವಲ ತಮಾಷೆಗೋ ಅಥವಾ ಖುಷಿಗೋ ಎನ್ನುವಂತಿರುತ್ತದೆ. ಆದರೆ ಇದು ಯಾವಾಗ ಚಟವಾಗಿ ಪರಿವರ್ತನೆ ಆಗುವುದು ಎಂದು ತಿಳಿಯುವುದೇ ಇಲ್ಲ. ಇಲ್ಲೊಬ್ಬರು ವೈದ್ಯರು ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ದೀರ್ಘಕಾಲ ಕೆಲಸ ಮಾಡಲು ತುಂಬಾ ಶಕ್ತಿಯನ್ನು ಪಡೆಯಲು ಒಂದು ಮಿಥ್ಯವನ್ನು ಪಾಲಿಸಿಕೊಂಡು ಹೋಗಿರುವ ಬಗ್ಗೆ ತಿಳಿಸಲಿದ್ದೇವೆ.

ಈ ಮಿಥ್ಯವು ತನಗೆ ಚಟವಾಗಿದೆ ಎಂದು ಅರಿತುಕೊಂಡ ಬಳಿಕ ಇದರಿಂದ ಹೊರಗೆ ಬರಲು ಹಲವಾರು ವರ್ಷಗಳೇ ಹಿಡಿದವು. ವೈದ್ಯರು ಈ ಬಗ್ಗೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾರೆ ಮತ್ತು ಮಾದಕ ದ್ರವ್ಯವು ಎಷ್ಟು ಅಪಾಯಕಾರಿ ಎಂದು ಅವರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

A Doctor Was Addicted To Meth For 9 Long Years!

ಮಲೇಶಿಯಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ 39ರ ಹರೆಯದ ಡಾ. ಸಾಸಿಥರನ್ ಆಯನೈ ಎಂಬವರೇ ಈ ವೈದ್ಯರು. ಇವರು 9 ವರ್ಷಗಳ ಮೊದಲು ಮಾದಕ ದ್ರವ್ಯದ ಚಟಕ್ಕೆ ಅಂಟಿಕೊಂಡಿದ್ದರು. ಈ ವೇಳೆ ಅವರು ದೀರ್ಘ ಪಾಳಿಗಳಲ್ಲಿ ಕೆಲಸ ಮಾಡುತ್ತಲಿದ್ದರು. ಕೆಲವೊಂದು ಸಲ ಅವರು 48 ಗಂಟೆಗಳ ಪಾಳಿಯಲ್ಲೂ ಕೆಲಸ ಮಾಡಬೇಕಾಗಿ ಬರುತ್ತಿತ್ತು. ಇದರಿಂದಾಗಿ ಅವರಿಗೆ ಸರಿಯಾಗಿ ವಿಶ್ರಾಂತಿ ಕೂಡ ಸಿಗುತ್ತಿರಲಿಲ್ಲ.

ಮಿಥ್ಯ

ಎಡೆಬಿಡದೆ ಕೆಲಸ ಮಾಡುವುದರಿಂದ ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಏನಾದರೂ ಮಾಡಬೇಕು ಎಂದು ಬಯಸಿದರು. ಈ ವೇಳೆ ಅವರು ಮೆಥಾಂಫೆಟಮೈನ್ ತೆಗೆದುಕೊಳ್ಳಲು ಆರಂಭಿಸಿದರು ಮತ್ತು ಇದರ ಸೇವನೆಯನ್ನು ಅವರು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಭಾವಿಸಿದ್ದರು. ಇದರಿಂದ ಚಟಕ್ಕೆ ಬೀಳುವುದು ತಪ್ಪುತ್ತದೆ ಎಂದು ಭಾವಿಸಿದ್ದರು. ಆದರೆ ದುರಾದೃಷ್ಟದಿಂದ ಅವರ ಲೆಕ್ಕಾಚಾರವು ಉಲ್ಟಾ ಆಗಿದೆ.

ತನ್ನ ಚಟದ ಬಗ್ಗೆ ಒಪ್ಪಿಕೊಂಡಿರು ಅಯನೈ ಅವರು ತಾನು ಈಗಲೂ ಇದರಿಂದ ಸಂಪೂರ್ಣವಾಗಿ ಹೊರಗೆ ಬಂದಿದ್ದೇನೆ ಎಂದು ಹೇಳುವುದು ಕಷ್ಟವಾಗುತ್ತದೆ. ಕೆಲಸದ ಆರಂಭಿಕ ದಿನಗಳಲ್ಲಿ ಹೆಚ್ಚಿನ ಒತ್ತಡವಿದ್ದ ಕಾರಣದಿಂದಾಗಿ ಮೆಥಾಂಫೆಟಮೈನ್ ತೆಗೆದುಕೊಳ್ಳುತ್ತಿದ್ದೆ. ಹಲವಾರು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಕಾರಣದಿಂದಾಗಿ ಇದು ದೇಹಕ್ಕೆ ಶಕ್ತಿ ನೀಡುತ್ತಲಿತ್ತು.

ಆರು ವರ್ಷಗಳ ಬಳಿಕ ನನಗೆ ಇದು ಚಟವಾಗಿದೆ ಮತ್ತು ಎಷ್ಟು ಕೆಟ್ಟದು ಎಂದು ತಿಳಿದುಬಂತು. ಇದರ ಬಳಿಕ ಮಾದಕದ್ರವ್ಯ ಮುಕ್ತಗೊಳಿಸುವ ಕೇಂದ್ರಕ್ಕೆ ಸೇರಿದೆ. ತಾನು ಅಲ್ಲಿ ಚಿಕಿತ್ಸೆ ಪಡೆಯುವ ವೇಳೆ ಅಲ್ಲಿ ಕೂಡ ವೈದ್ಯನಾಗಿದ್ದೆ. ಆಸ್ಪತ್ರೆಯಲ್ಲಿ ಇರುವ ವೇಳೆ ಅವರು ಮೆಥಾಂಫೆಟಮೈನ್ ನಿಂದ ದೂರವಿರುತ್ತಾಋಎ. ಆದರೆ ಈ ಮಾದಕ ದ್ರವ್ಯದಿಂದ ಈಗಲೂ ದೂರವಾಗಲು ಕಷ್ಟವಾಗುತ್ತಿದೆ ಮತ್ತು ಅವರ ಸಮಸ್ಯೆಯು ಮುಂದುವರಿದಿದೆ.

ಈ ಮಾದಕ ದ್ರವ್ಯವು ದೇಹಕ್ಕೆ ಶಕ್ತಿ ನೀಡಿ ದಣಿವರಿಯದಂತೆ ಕೆಲಸ ಮಾಡದಲು ಸಾಧ್ಯವಾಗಿದ್ದರೂ ಅದರ ಅಡ್ಡಪರಿಣಾಮಗಳು ನೇರವಾಗಿ ಅವರ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಿದೆ. ಹಠಾತ್ ಆಗಿ ಕೋಪಕ್ಕೆ ಒಳಗಾಗುವುದು ಮತ್ತು ಕೆಲವೊಂದು ಸಲ ಮನಸ್ಥಿತಿ ಥಟ್ಟನೆ ಬದಲಾಗುವಂತಹದು ಕಾಣಿಸಿಕೊಂಡಿದೆ. ಈ ಔಷಧಿಯ ಪರಿಣಾಮ ಎಷ್ಟು ಪ್ರಮಾಣದಲ್ಲಿ ಇತ್ತೆಂದರೆ ಅವರು ತನ್ನ ಮದುವೆ ನಡೆಯಬೇಕಿದ್ದ 20 ದಿನಗಳ ಮೊದಲು ಅದನ್ನು ರದ್ದುಪಡಿಸಿದರು. ವೈದ್ಯರು ತನ್ನ ಕರ್ತವ್ಯಕ್ಕಾಗಿ ಇಂತಹ ಔಷಧಿ ಸೇವನೆ ಆರಂಭಿಸಿದ್ದರು. ಆದರೆ ಅವರು ಇದರಿಂದ ಮೇಲೆದ್ದು ಬಂದು ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹಾರೈಸುವ.

English summary

A Doctor Was Addicted To Meth For 9 Long Years!

A Malaysian doctor named Dr Sasitharan Ayanai, confessed that he had got addicted to meth nine years ago. The long-hour shifts that sometimes lasted up to 48 hours took a toll on his health. He wanted to stay energised through the shifts and that is when he got addicted to meth. He thought that he could control the drug intake, but he was wrong.
X
Desktop Bottom Promotion