For Quick Alerts
ALLOW NOTIFICATIONS  
For Daily Alerts

2019ರಲ್ಲಿ 7 ರಾಶಿ ಚಕ್ರದವರು ಪ್ರೀತಿಯ ಜೀವನವನ್ನು ಪಡೆದುಕೊಳ್ಳುವರು

|

ಅಂದುಕೊಂಡ ಪ್ರೀತಿ ಸಿಕ್ಕರೆ ಅಥವಾ ನಾವು ಬಯಸಿದ ವ್ಯಕ್ತಿ ನಮ್ಮ ಪ್ರೀತಿಯನ್ನು ಒಪ್ಪಿಕೊಂಡರೆ ಅದರಲ್ಲಿ ಸಿಗುವ ಸಂತೋಷ ಹಾಗೂ ಸಮಾಧಾನಕ್ಕೆ ಎಲ್ಲೆಯೇ ಇರುವುದಿಲ್ಲ. ಆಗ ಜೀವನವು ರೆಕ್ಕೆಬಂದ ಹಕ್ಕಿಯಂತೆ ಹಾರಾಡಲು ಬಯಸುವುದು. ಸಂತೋಷದ ಅಲೆಯಲ್ಲಿ ತೇಲುವುದು. ಹೌದು, ಪ್ರೀತಿ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಸಂಜೀವಿನಿ ಇದ್ದಂತೆ. ಬದುಕಿನ ಆಸೆಯನ್ನು ಚಿಗುರಿಸುವ ಜೀವ ಸಂಜೀವಿನಿ ಪ್ರೀತಿ. ಒಮ್ಮೆ ವ್ಯಕ್ತಿ ಪ್ರೀತಿಯ ಜೀವನವನ್ನು ಪಡೆದುಕೊಂಡ ಎಂದರೆ ಕುಟುಂಬವನ್ನು ಕಟ್ಟಿಕೊಳ್ಳುತ್ತಾನೆ. ಸಾಕಷ್ಟು ಕಷ್ಟ ಪಟ್ಟು ದುಡಿಯುತ್ತಾನೆ. ತನ್ನವರು ತಮ್ಮವರು ಎನ್ನುವ ಭಾವನೆಯಿಂದ ಎಲ್ಲರೊಂದಿಗೂ ಬೆರೆಯುತ್ತಾನೆ. ಎಲ್ಲದಕ್ಕೂ ಮಿಗಿಲಾಗಿ ಮಾನಸಿಕವಾಗಿ ಸಮಾಧಾನ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವನು.

ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಅಷ್ಟು ಸುಲಭವಾಗಿ ತಾನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಳ್ಳುವುದಿಲ್ಲ. ಬದಲಿಗೆ ತನ್ನ ಪ್ರೀತಿಯ ಗುಟ್ಟನ್ನು ಬಚ್ಚಿಡಲು ಪ್ರಯತ್ನಿಸುತ್ತಾನೆ. ತಮ್ಮ ಪ್ರೀತಿಗೆ ಮನೆ ಮಂದಿಯಿಂದ ಹಾಗೂ ಸಮಾಜದ ದೃಷ್ಟಿಯಿಂದ ಸರಿಯಾಗಿದೆಯೇ? ಇಲ್ಲವೇ? ಎನ್ನುವಂತಹ ಅನೇಕ ಗೊಂದಲಗಳಿರುತ್ತವೆ. ಕೆಲವೊಮ್ಮೆ ನಾವು ಬಯಸಿದ ವ್ಯಕ್ತಿಯು ನಮ್ಮ ಪ್ರೀತಿಯನ್ನು ನಿರಾಕರಿಸಬಹುದು. ವಿವಾಹ ಬಂಧನಕ್ಕೆ ಒಳಗಾಗಲು ಬಯಸದೆ ಹೋಗಬಹುದು ಎನ್ನುವಂತಹ ಆತಂಕಗಳು ಸಹ ಇರುತ್ತವೆ. ಇವೆಲ್ಲದರ ನಡುವೆ ನಮ್ಮ ಪ್ರೀತಿಯು ಗೆದ್ದು ಬಂದಿತು ಅಥವಾ ನಮಗೆ ಸಿಕ್ಕಿತು ಎಂದಾಗ ಅದೊಂದು ಅದೃಷ್ಟ ಹಾಗೂ ದೈವ ಕೃಪೆ ಎನ್ನುವ ಸಮಾಧಾನಕ್ಕೆ ಒಳಗಾಗುತ್ತಾರೆ.

ಬಯಸಿದ ಪ್ರೀತಿ ಸಿಗದಾಗ

ಬಯಸಿದ ಪ್ರೀತಿ ಸಿಗದಾಗ

ಅದೇ ನಾವು ಬಯಸಿದ ಪ್ರೀತಿ ನಮಗೆ ಸಿಗಲಿಲ್ಲ, ಪ್ರೀತಿಸಿದ ವ್ಯಕ್ತಿ ಮೋಸ ಮಾಡಿದ್ದಾರೆ ಎಂದಾಗ ಮಾನಸಿಕವಾಗಿ ಸಾಕಷ್ಟು ಕುಗ್ಗುತ್ತೇವೆ. ಜೀವನವೇ ಬೇಡ ಎನ್ನುವಂತಹ ಭಾವನೆಯನ್ನು ತಳೆಯುತ್ತೇವೆ. ಬದುಕು ಹೈರಾಣ ವಾಗಿದೆ, ಮುಂದಿನ ಗತಿಯೇನು ಎನ್ನುವಂತಹ ಅನೇಕ ಚಿಂತೆಗಳು ಕಾಡುವುದು. ಕೆಲವರು ತಮ್ಮ ಪ್ರೀತಿಗೆ ಮೋಸ ಆಗಿದೆ ಅಥವಾ ಪ್ರೀತಿ ಸೋತು ಹೋಯಿತು ಎಂದಾಗ ಆತ್ಮಹತ್ಯೆಯಂತಹ ಹೇಡಿತನವನ್ನು ಮಾಡುವ ಸಾಧ್ಯತೆಗಳೂ ಇರುತ್ತವೆ. ಮಾನಸಿಕ ಚಿಂತೆಗೆ ಒಳಗಾಗಿ ಜೀವನದಲ್ಲಿ ಉತ್ಸಾಹ ಕಳೆದುಕೊಂಡ ವ್ಯಕ್ತಿಯಾಗಿ ಉಳಿದುಕೊಳ್ಳುವರು.

ಅಂದುಕೊಂಡ ಸಂಗತಿಗಳು ನಮಗೆ ಸಿಗಬೇಕು ಎಂದರೆ...

ಅಂದುಕೊಂಡ ಸಂಗತಿಗಳು ನಮಗೆ ಸಿಗಬೇಕು ಎಂದರೆ...

ನಾವು ಅಂದುಕೊಂಡ ಸಂಗತಿಗಳು ನಮಗೆ ಸಿಗಬೇಕು ಎಂದರೆ ಅದಕ್ಕೆ ನಮ್ಮ ಅದೃಷ್ಟ, ಗ್ರಹಗತಿಗಳ ಸಹಕಾರ ಹಾಗೂ ದೈವ ಕೃಪೆ ಇರಬೇಕು. ಅವೆಲ್ಲವೂ ಇಲ್ಲವೆಂದಾದರೆ ನಾವು ಜೀವನದಲ್ಲಿ ಏನನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಸಾಕಷ್ಟು ನೋವು ಹಾಗೂ ಹತಾಷೆಗೆ ಒಳಗಾಗಬೇಕಾಗುವುದು. ಈ ವರ್ಷದ ಗ್ರಹಗತಿಗಳ ಸಂಚಾರಗಳು ಹಾಗೂ ಪ್ರಭಾವದ ಪ್ರಕಾರ ಕೆಲವು ರಾಶಿಚಕ್ರದವರು ಸಾಕಷ್ಟು ಅದೃಷ್ಟವನ್ನು ಪಡೆದುಕೊಳ್ಳುವರು. ಅದರಲ್ಲೂ ಏಳು ರಾಶಿಚಕ್ರದವರು ತಮ್ಮ ಪ್ರೀತಿಯನ್ನು ಪಡೆದುಕೊಳ್ಳುವರು. ಜೊತೆಗೆ ಸಂತೋಷದ ಗಾಳಿಯಲ್ಲಿ ತೇಲಿಹೋಗುವರು. ಹಾಗಾದರೆ ಆ ರಾಶಿಚಕ್ರದ ವ್ಯಕ್ತಿಗಳು ಯಾರು ಯಾರು? ನೀವು ಗುಟ್ಟಾಗಿ ಪ್ರೀತಿಸುತ್ತಿದ್ದೀರಿ, ನಿಮ್ಮ ಪ್ರೀತಿಯು ನಿಮಗೆ ಸಿಗುವುದೇ? ಬಯಸಿದ ಪ್ರೀತಿಯ ಜೀವನ ಹೇಗೆ ಸಿಗುವುದು? ಪ್ರೀತಿ ದೊರೆಯುವುದರಲ್ಲಿ ಗ್ರಹಗತಿಗಳ ಪ್ರಭಾವ ಎಷ್ಟಿದೆ ಎನ್ನುವಂತಹ ಕುತೂಹಲವಿದ್ದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಸಿಂಹ

ಸಿಂಹ

ಬಹಿರ್ಮುಖಿ ವ್ಯಕ್ತಿತ್ವದವರಾದ ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಎಲ್ಲಾ ಕೆಲಸ ಕಾರ್ಯಗಳಲ್ಲೂ ಯಶಸ್ಸನ್ನು ಬಯಸುತ್ತಾರೆ. ಇವರಿಗೆ 2019ರಲ್ಲಿ ಪ್ರೀತಿಯ ಜೀವನವು ಆಶ್ಚರ್ಯಕರವಾದ ರೀತಿಯಲ್ಲಿ ದೊರೆಯುವುದು. ಆ ಆಶ್ಚರ್ಯವು ಸಾಕಷ್ಟು ಖುಷಿಯನ್ನು ನೀಡುವುದು. 2019ರಲ್ಲಿ ಪ್ರೀತಿ, ವೃತ್ತಿ ಸೇರಿದಂತೆ ಅನೇಕ ಸಂಗತಿಗಳಲ್ಲಿ ವಿವಿಧ ಧನಾತ್ಮಕ ಬದಲಾವಣೆಯನ್ನು ಕಂಡುಕೊಳ್ಳುವರು. ಪ್ರೀತಿಗೆ ಸಂಬಂಧಿಸಿದಂತೆ ಸುರಕ್ಷಿತ ಹಾಗೂ ಧನಾತ್ಮಕ ನಿರ್ಧಾರವನ್ನು ಕೈಗೊಳ್ಳುವರು. ಪ್ರೀತಿ ಎನ್ನುವ ಹೊಸ ದಾರಿಯನ್ನು ಪಡೆದುಕೊಳ್ಳುವುದರ ಮೂಲಕ ತಮ್ಮದೇ ಆದ ಗುರಿ ಹಾಗೂ ಸಾಧನೆಯನ್ನು ಎಸಗುವರು. ಇವರ ನಿರ್ಧಾರಗಳು ಹಾಗೂ ಅದೃಷ್ಟವು ಸಂತೋಷದಲ್ಲಿ ಮುಳುಗುವಂತೆ ಮಾಡುವುದು.

Most Read: ಜಪಾನ್‌ನಲ್ಲಿ ಈ ಮೀನುಗಳು ಕಂಡುಬಂದರೆ ಭೂಕಂಪ ಖಚಿತ!

ಕನ್ಯಾ

ಕನ್ಯಾ

2019ರ ವರ್ಷವು ನಿಮಗೆ ಅನೇಕ ಹೊಸ ಸಂಪರ್ಕಗಳನ್ನು ಕಲ್ಪಿಸಿಕೊಡುವುದು. ಅದರಲ್ಲಿ ಒಂದು ನಿರ್ದಿಷ್ಟ ಹಾಗೂ ಗಮನಾರ್ಹವಾದ ಸಂಪರ್ಕವಾಗಿರುತ್ತದೆ. ಅನ್ನು ನೀವು ನಂಬಲು ನಿಮಗೆ ನೀವೆ ಚಿವುಟಿಕೊಂಡು ಸತ್ಯವೇ ಎನ್ನುವದನ್ನು ಕಂಡುಕೊಳ್ಳುವಿರಿ. ಈ ವರ್ಷ ನೀವು ವಾಸ್ತವಿಕತೆ ಮತ್ತು ದೃಢವಾದ ಚಿಂತನೆಗಳಿಂದ ಪೂರ್ಣಗೊಳ್ಳುವಿರಿ. ಕುಟುಂಬ ಮತ್ತು ನಿಮ್ಮ ಸಂಬಂಧಗಳಲ್ಲಿ ನೀವು ವಿಶೇಷವಾದ ಸ್ಥಾನವನ್ನು ಪಡೆದುಕೊಳ್ಳುವಿರಿ ಮತ್ತು ಅರ್ಥೈಸಿಕೊಳ್ಳುವಿರಿ ಎನ್ನುವುದನ್ನು ತಿಳಿದುಕೊಳ್ಳುವಿರಿ. ಗ್ರಹಗತಿಗಳು ಹಾಗೂ ನಕ್ಷತ್ರಗಳ ಪ್ರಭಾವದಿಂದ ಉತ್ತಮವಾದ ಪ್ರೀತಿಯ ಸಂಪರ್ಕ ಪಡೆದುಕೊಳ್ಳುವಿರಿ. ಅದು ನಿಮ್ಮ ಜೀವನದ ಮಟ್ಟವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು. 2019ರ ವರ್ಷವು ನಿಮಗೆ ಅತ್ಯಂತ ಆಶ್ಚರ್ಯಕರವಾದ ಧನಾತ್ಮಕ ಪ್ರಭಾವವನ್ನು ಹಾಗೂ ಅವಕಾಶಗಳನ್ನು ಕಲ್ಪಿಸಿಕೊಡುವುದು. ನೆಮ್ಮದಿಯ ಪ್ರೀತಿ ಹಾಗೂ ಅನುಕೂಲಕರವಾದ ಸ್ಥಿತಿಯನ್ನು ಅನುಭವಿಸುವಿರಿ.

ತುಲಾ

ತುಲಾ

ಸಾಕಷ್ಟು ಕಠಿಣ ಸ್ಥಿತಿಯಿಂದ ಇದೀಗ ಉತ್ತಮ ಸಮಯಗಳಿಗೆ ನೀವು ಮರಳಿದ್ದೀರಿ. ನಿಮ್ಮ ನಕ್ಷತ್ರಗಳು ಹಾಗೂ ಗ್ರಹಗಳು ನಿಮ್ಮ ಬದುಕಿನ ಬಣ್ಣ, ಅದೃಷ್ಟ ಹಾಗೂ ಅವಕಾಶಗಳನ್ನು ಧನಾತ್ಮಕವಾಗಿ ಒದಗಿಸಿಕೊಡುತ್ತವೆ. ಅತ್ಯುತ್ತಮವಾದ ಪಾಲುದಾರರನ್ನು ಪಡೆದುಕೊಳ್ಳುವುದರ ಮೂಲಕ ಸುಂದರವಾದ ಪ್ರೀತಿಯ ಜೀವನವನ್ನು ಅಪ್ಪಿಕೊಳ್ಳುವಿರಿ. ನಿಮ್ಮ ಅನಿರೀಕ್ಷಿತ ಬದುಕು ಸುಂದರವಾಗಿ ನಿಮ್ಮನ್ನು ಸ್ವಾಗತಿಸಲಿದೆ. ಹಾಗಾಗಿ 2019ರ ವರ್ಷವು ನಿಮಗೆ ಅತ್ಯಂತ ರೋಮಾಂಚಕಾರಿ ವರ್ಷ ಎಂದು ಹೇಳಬಹುದಾಗಿದೆ. ಕುಟುಂಬದ ಜವಾಬ್ದಾರಿಗಳು ಎಚ್ಚಾಗಿದ್ದರೂ ನೀವು ನಿಮ್ಮ ಕೆಲಸದಲ್ಲಿ ಹಾಗೂ ಗುರಿ ಸಾಧನೆಯಲ್ಲಿ ಸಾಕಷ್ಟು ಶ್ರಮವಹಿಸುವಿರಿ. ನೀವು ದೊಡ್ಡ ಬದಲಾವಣೆಯನ್ನು ಬಯಸುತ್ತಿದ್ದರೂ ಅದು ಸಹ ನಿಮ್ಮ ಪರವಾಗಿ ಬದಲಾವಣೆ ತೋರುವುದು. ನಕ್ಷತ್ರಗಳು ಹಾಗೂ ಗ್ರಹಗಳ ಪ್ರಭಾವ ಉತ್ತಮವಾಗಿರುವುದರಿಂದ ನೀವು ಈ ವರ್ಷವು ನಿಮಗೆ ಅದ್ಭುತ ವರ್ಷವಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ವೃಶ್ಚಿಕ

ವೃಶ್ಚಿಕ

2019ರ ವರ್ಷವು ನೀವು ಅಂದುಕೊಂಡ ಪ್ರೀತಿಯ ಜೀವನವನ್ನು ತಂದುಕೊಡುವುದು. ಸಂಬಂಧವನ್ನು ಹೊಂದುವ ಕನಸು ಈ ವರ್ಷ ಯಾವುದೇ ಆತಂಕ ಅಥವಾ ಅಡೆತಡೆಗಳಿಲ್ಲದೆ ನೆರವೇರುವುದು. ನೀವು ನಿಮ್ಮ ಪ್ರೀತಿಯ ಜೀವನದ ಜೊತೆಗೆ ಸಾಕಷ್ಟು ವಿಷಯಗಳಲ್ಲಿ ಧನಾತ್ಮಕ ಹಾಗೂ ಅದೃಷ್ಟವನ್ನು ಅನುಭವಿಸಲಿದ್ದೀರಿ. ನಿಮ್ಮ ಸಂಗಾತಿ ಅಥವಾ ಪಾಲುದಾರರ ಜೊತೆಗೆ ಅದ್ಭುತವಾದ ಪ್ರಣಯದ ಆಶ್ಚರ್ಯವನ್ನು ಪಡೆದುಕೊಳ್ಳುವಿರಿ. ಅದಕ್ಕಾಗಿ ಗ್ರಹಗತಿಗಳ ಹಾಗೂ ನಕ್ಷತ್ರಗಳ ಪ್ರಭಾವವು ಸಕಾರಾತ್ಮಕ ರೀತಿಯಲ್ಲಿ ಪ್ರಭಾವ ಬೀರುತ್ತವೆ. 2019ರ ವರ್ಷವನ್ನು ವೃಶ್ಚಿಕ ರಾಶಿಯವರಿಗೆ ಹಣ್ಣುಗಳಂತಹ ಸಿಹಿಯಾದ ವರ್ಷವಾಗಲಿದೆ. ಇವರು ಸಾಮಾನ್ಯವಾಗಿ ಎಲ್ಲಾ ಕೆಲಸ ಕಾರ್ಯಗಳಲ್ಲೂ ಮುಂದೆ ಸಾಗಲು ಪ್ರಯತ್ನಿಸುತ್ತಿರುತ್ತಾರೆ. ಸಾಧನೆಗೆ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದುಕೊಳ್ಳುವಿರಿ. ನೀವು ನಿಮ್ಮ ಸಂಗಾತಿ ಅಥವಾ ಪ್ರೇಯಸಿಗೆ ಸಾಕಷ್ಟು ಸಮಯವನ್ನು ನೀಡುವಿರಿ. ಜೊತೆಗೆ ಅವರ ಪ್ರೀತಿಯ ಪರಿಯನ್ನು ಆನಂದಿಸುವಿರಿ. ವರ್ಷಾಂತ್ಯದ ವರೆಗೂ ಅದ್ಭುತ ಅನುಭವಗಳನ್ನು ಪಡೆದುಕೊಳ್ಳುವುದರ ಮೂಲಕ ಸಂತೋಷಕರವಾದ ಜೀವನವನ್ನು ಅನುಭವಿಸುವಿರಿ.

Most Read: ರಾಶಿಚಕ್ರಗಳ ಅನುಸಾರ ಯಾವ ರೀತಿಯ ಅಪರಾಧಿ ಭಾವನೆ ಕಾಡುವುದು ನೋಡಿ...

ಧನು

ಧನು

ಈ ವರ್ಷದ ಗ್ರಹಗಳ ಸಂಚಾರ ಹಾಗೂ ನಕ್ಷತ್ರದ ಪ್ರಭಾವದಿಂದಾಗಿ ನೀವು ಈ ವರ್ಷ ಉತ್ತಮ ಫಲಗಳನ್ನು ಅನುಭವಿಸುವಿರಿ. ಅದರಲ್ಲೂ ಪ್ರೀತಿಯ ವಿಷಯದಲ್ಲಿ ಅದೃಷ್ಟವನ್ನು ಪಡೆದುಕೊಳ್ಳುವಿರಿ. ಪ್ರೀತಿಗಾಗಿ ನೀವು ಹುಡುಕಾಡುವ ಅಗತ್ಯ ಇರುವುದಿಲ್ಲ. ಪ್ರೀತಿಯೇ ನಿಮ್ಮ ಬಳಿ ಬಂದು ನಿಮ್ಮ ಹೃದಯದ ಬಾಗಿಲನ್ನು ತಟ್ಟುವುದು. 2019ರ ವರ್ಷ ನಿಮಗೆ ಒಂದು ಸಕಾರಾತ್ಮಕವಾದ ವರ್ಷವಾಗಿದೆ. ನಿಮ್ಮ ಶ್ರಮದಾಯಕವಾದ ಕೆಲಸಗಳಿಗೆ ಉತ್ತಮ ಪ್ರತಿಫಲ ದೊರೆಯುವುದು. ಸಮಸ್ಯೆಗಳನ್ನು ನಿವಾರಿಸಲು ಹಾಗೂ ಎದುರಿಸಲು ಸುಸಜ್ಜಿತವಾಗಿರುತ್ತೀರಿ. ಪ್ರೀತಿಯ ಜೀವನದಲ್ಲಿ ಮರೆಯಲಾಗದ ಕ್ಷಣಗಳನ್ನು ಪಡೆದುಕೊಳ್ಳುವರು. ಅವಿವಾಹಿತರು ಸಂಗಾತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವರು.

ಮಕರ

ಮಕರ

2019ರ ವರ್ಷವು ನಿಮಗೆ ಅದ್ಭುತ ಪ್ರೀತಿಯ ಜೀವನವನ್ನು ಕಲ್ಪಿಸಿಕೊಡುವುದು. ಮೊದಲ ನೋಟದಲ್ಲಿಯೇ ಸುಂದರವಾದ ಪ್ರೀತಿಯು ನಿಮಗೆ ಒಲಿದು ಬರುವುದು. ನಿಮ್ಮ ಹೃದಯವು ಪ್ರೀತಿಗಾಗಿ ಹಂಬಲಿಸುವುದು. ಜೊತೆಗೆ ಉತ್ತಮ ಪ್ರೀತಿಯನ್ನು ಪಡೆದುಕೊಳ್ಳುವುದರ ಮೂಲಕ ಸಂತೋಷದಲ್ಲಿ ಮುಳುಗುವುದು. 2019ರ ವರ್ಷದಲ್ಲಿ ನೀವು ನಿಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಸಾಕಷ್ಟು ಧನಾತ್ಮಕ ಅವಕಾಶಗಳು ದೊರೆಯುವುದು. ಕೆಲವೊಮ್ಮೆ ಭಾವನಾತ್ಮಕ ಒತ್ತಡಕ್ಕೆ ಒಳಗಾಗಬಹುದು. ಆದರೆ ಅದನ್ನು ಬಹುಬೇಗ ನಿವಾರಿಸಿಕೊಳ್ಳುವುದರ ಮೂಲಕ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಿರಿ. ಧೈರ್ಯಶಾಲಿಯಾದ ನಿಮಗೆ ಈ ವರ್ಷದಲ್ಲಿ ಪ್ರೀತಿಯ ಜೀವನವು ಹೆಚ್ಚಿನ ಸಂತೋಷ ನೀಡುವುದು. ಉತ್ತಮ ಸಂಬಂಧ ಹಾಗೂ ಕುಟುಂಬದ ಸಂತೋಷವನ್ನು ಸಂಪೂರ್ಣವಾಗಿ ಅನುಭವಿಸುವಿರಿ.

Most Read: ಈ ಮಹಿಳೆ ಏನು ಮಾಡಿದಳು ಗೊತ್ತೇ? ನಿದ್ರೆಯಲ್ಲಿ ಮಾತ್ರೆಗಳ ಪ್ಯಾಕೆಟ್‌ನ್ನೇ ನುಂಗಿದಳು!!

ಮೀನ

ಮೀನ

2019ರಲ್ಲಿ ನೀವು ಅದ್ಭುತವಾದ ಪ್ರೀತಿಯ ಜೀವನ ಪಡೆದುಕೊಳ್ಳುವುದರ ಮೂಲಕ ಆಶ್ಚರ್ಯವನ್ನು ಪಡೆದುಕೊಳ್ಳುವಿರಿ. ನಿಮ್ಮ ನಿರೀಕ್ಷೆಗಳಿಗೂ ಮಿಗಿಲಾದ ಅದ್ಭುತ ಪ್ರೀತಿಯು ನಿಮಗೆ ದೊರೆಯುವುದರಿಂದ ಪ್ರೀತಿಯ ಗಾಳಿಯಲ್ಲಿ ತೇಲುವಿರಿ. 2019ರ ವರ್ಷದಲ್ಲಿ ನೀವು ಸಂಪೂರ್ಣವಾಗಿ ಬದಲಾದ ಜೀವನವನ್ನು ಅನುಭವಿಸುವಿರಿ. ನೀವು ಕಂಡ ಕನಸುಗಳು ಎಲ್ಲವೂ ಕೈಗೂಡಿ ಬರುತ್ತವೆ. ನಿಮ್ಮ ಗುರಿ ಸಾಧನೆಯ ಹಾದಿಯು ನಿಮಗೆ ಸುಲಭವಾಗುವುದು. ಉತ್ತಮ ಸಂಬಂಧ ಹಾಗೂ ಆನಂದಕರವಾದ ಸಂಸಾರ ನಡೆಸುವುದರ ಮೂಲಕ ತೃಪ್ತ ಜೀವನ ನಿಮ್ಮದಾಗುವುದು. ನಿಮ್ಮ ಸಂಗಾತಿ ಅಥವಾ ಪ್ರೇಯಸಿಯ ನಡುವೆ ಅದ್ಭುತವಾದ ಬಾಂಧವ್ಯ ಬೆಸೆಯುವುದು. ಅದನ್ನು ಬೇರ್ಪಡಿಸಲು ಯಾರಿದಂಲೂ ಸಾಧ್ಯವಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

English summary

7 Zodiac Signs Will Get A Love Declaration In 2019

As per the Astrology these 7 Zodiac Signs Will Get A Love Declaration In 2019...
Story first published: Wednesday, February 6, 2019, 17:34 [IST]
X
Desktop Bottom Promotion