For Quick Alerts
ALLOW NOTIFICATIONS  
For Daily Alerts

ಈ 5 ರಾಶಿಚಕ್ರದವರು ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರಂತೆ

|

ಸೌಂದರ್ಯ ಎನ್ನುವುದು ಪ್ರಕೃತಿಯ ಕೊಡುಗೆ. ಸುಂದರವಾದ ಸೌಂದರ್ಯ ಹೊಂದುವುದು ಒಂದು ಅದೃಷ್ಟದ ಸಂಗತಿ. ಯಾರು ಹೆಚ್ಚು ಸುಂದರವಾಗಿರುತ್ತಾರೆ ಅಥವಾ ಸೌಂದರ್ಯವನ್ನು ಹೊಂದಿರುತ್ತಾರೆ ಅಂತಹವರು ಸಹಜವಾಗಿಯೇ ಇತರರನ್ನು ಹೆಚ್ಚು ಆಕರ್ಷಿಸುತ್ತಾರೆ. ವ್ಯಕ್ತಿಯ ಸೌಂದರ್ಯವೇ ಫ್ಯಾಷನ್ ಲೋಕದಲ್ಲಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಏರಲು ಅನುಕೂಲ ಮಾಡಿಕೊಡುವುದು. ಅಲ್ಲದೆ ವ್ಯಕ್ತಿಯ ಸೌಂದರ್ಯವು ಅವನ ವೈಯಕ್ತಿಕ ಜೀವನಕ್ಕೂ ಹೆಚ್ಚು ಪ್ರಮುಖವಾಗಿರುತ್ತದೆ. ವ್ಯಕ್ತಿ ಸುಂದರವಾದ ಸೌಂದರ್ಯ ಹೊಂದಿದ್ದರೆ ಅವನಲ್ಲಿ ಆತ್ಮವಿಶ್ವಾಸ ಹಾಗೂ ತೃಪ್ತಿಯ ಭಾವನೆ ಹೆಚ್ಚಾಗಿ ಇರುತ್ತದೆ ಎಂದು ಹೇಳಲಾಗುವುದು.

ವ್ಯಕ್ತಿ ಹೊಂದಿರುವ ಕಣ್ಣು, ಕೇಶ, ತ್ವಚೆ, ಬಾಯಿ, ಹಲ್ಲು, ಮೂಗು, ಮುಖದ ಆಕಾರ ಹಾಗೂ ದೇಹ ಆಕಾರ ಎಲ್ಲವೂ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಇವುಗಳಲ್ಲಿ ಯಾವುದಾದರೂ ಒಂದು ಅಂಶ ಆಕರ್ಷಣೆಯಲ್ಲಿ ಕೊಂಚ ಕುಂದನ್ನು ಹೊಂದಿದೆ ಎಂದಾದರೆ ಅದು ಸೌಂದರ್ಯದ ಗುಣಮಟ್ಟವನ್ನು ಸ್ವಲ್ಪ ತಗ್ಗಿಸುವುದು. ಅದೇ ಕೆಲವೊಮ್ಮೆ ಆಕರ್ಷಕ ಕಣ್ಣುಗಳು ಹಾಗೂ ಆಕರ್ಷಕ ನಗುವನ್ನು ಹೊಂದಿದ್ದಾನೆ ಎಂದಾದರೆ ಅವನ ಸೌಂದರ್ಯವು ಅತ್ಯಂತ ಆಕರ್ಷಕವಾಗಿ ಕಾಣುವುದು...

ಐದು ರಾಶಿಚಕ್ರದವರು ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರಂತೆ

ಐದು ರಾಶಿಚಕ್ರದವರು ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರಂತೆ

ಸಾಮಾನ್ಯವಾಗಿ ವ್ಯಕ್ತಿ ಹೊಂದಿರುವ ಸೌಂದರ್ಯ ಆತನ ತಂದೆ-ತಾಯಿ ಅಥವಾ ಆನುವಂಶಿಕವಾಗಿ ಬಂದಿರುವ ಸಂಪತ್ತು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹೊಂದಿರುವ ದೈಹಿಕ ಮತ್ತು ಮಾನಸಿಕ ಗುಣಗಳು ಅವನ ಜಾತಕ, ಕುಂಟಲಿ ಹಾಗೂ ರಾಶಿಚಕ್ರಗಳಿಗೆ ಅನುಗುಣವಾಗಿ ಇರುತ್ತದೆ ಎಂದು ಹೇಳಲಾಗುವುದು. ವ್ಯಕ್ತಿ ಹುಟ್ಟುವ ಸಂದರ್ಭದಲ್ಲಿ ಅವನ ಗ್ರಹಗತಿಗಳು ಯಾವ ಸ್ಥಾನದಲ್ಲಿದ್ದವು ಎನ್ನುವುದನ್ನು ಅನುಸರಿಸಿ ದೇಹ ಮತ್ತು ಮಾನಸಿಕ ಸ್ಥಿತಿಯ ರಚನೆಯಾಗಿರುತ್ತದೆ ಎನ್ನಲಾಗುವುದು. ಒಂದು ಅಂದಾಜಿನ ಪ್ರಕಾರ ಹನ್ನೆರಡು ರಾಶಿಚಕ್ರದವರಲ್ಲಿ ಐದು ರಾಶಿಚಕ್ರದವರು ಹುಟ್ಟಿನಿಂದಲೇ ಸುಂದರವಾದ ದೇಹ ಸೌಂದರ್ಯವನ್ನು ಹೊಂದಿರುತ್ತಾರೆ. ಅವರ ಸೌಂದರ್ಯಕ್ಕೆ ರಾಶಿಚಕ್ರಗಳೇ ಕಾರಣವಾಗಿರುತ್ತವೆ ಎಂದು ಸಹ ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಯಾವ ರಾಶಿಚಕ್ರಗಳಲ್ಲಿ ಜನಿಸಿದವರ ಸೌಂದರ್ಯ ಹೇಗೆ ಆಕರ್ಷಣೀಯ ಆಗಿರುತ್ತದೆ ಎನ್ನುವುದನ್ನು ತಿಳಿಯಲು ಬೋಲ್ಡ್ ಸ್ಕೈ ಈ ಮುಂದೆ

ವಿವರಿಸಿರುವ ವಿವರಣೆಯನ್ನು ಅರಿಯಿರಿ.

ಕುಂಭ

ಕುಂಭ

ಸೌಂದರ್ಯ ಎನ್ನುವುದು ವ್ಯಕ್ತಿಯ ಬಾಹ್ಯ ಮತ್ತು ಆಂತರಿಕ ಗುಣವನ್ನು ಹೊಂದಿರುತ್ತದೆ. ಅಂತಹ ಎರಡು ಗುಣಗಳಲ್ಲೂ ಅತ್ಯುತ್ತಮ ಸ್ಥಿತಿ ಅಥವಾ ಗುಣವನ್ನು ಹೊಂದಿರುವ ರಾಶಿಯೆಂದರೆ ಕುಂಭರಾಶಿಯ ವ್ಯಕ್ತಿಗಳು. ಇವರ ಭಾಹ್ಯ ಸೌಂದರ್ಯವೂ ಅತ್ಯುತ್ತಮವಾಗಿರುತ್ತದೆ. ಅಂತೆಯೇ ಆಂತರಿಕ ಸೌಂದರ್ಯವು ಅತ್ಯುತ್ತಮ ರೀತಿಯಲ್ಲಿ ಆಕರ್ಷಣೀಯ ರೀತಿಯಲ್ಲಿ ಇರುತ್ತದೆ.

ಕುಂಭ

ಕುಂಭ

ಇವರು ಸದಾ ತಮ್ಮದೇ ಆದ ಸ್ವಾತಂತ್ರ್ಯ ಮತ್ತು ಕೆಲಸದಲ್ಲಿ ತೊಡಗಿರುತ್ತಾರೆ. ಅವರ ಆ ಗುಣಗಳು ಅವರ ಹೊಳಪನ್ನು ಹೆಚ್ಚಿಸುವುದು. ಯಾರು ಅಂತಹ ಎರಡು ರೀತಿಯಲ್ಲೂ ಅತ್ಯುತ್ತಮ ಸೌಂದರ್ಯವನ್ನು ಹೊಂದಿದ್ದಾರೆಎನ್ನುವುದನ್ನು ಹುಡುಕುತ್ತಿದ್ದರೆ ಅಂತಹವರಿಗೆ ಕುಂಭ ರಾಶಿಯವರು ಅತ್ಯುತ್ತಮ ಉದಾಹರಣೆ ಯಾಗಿರುತ್ತಾರೆ. ಇವರಲ್ಲಿರುವ ಪರೋಪಕಾರದ ಗುಣ, ಮಾನವೀಯತೆಯ ಗುಣ ಹಾಗೂ ಮೌನವಾದ ಚಿತ್ತಗಳು ಇವರ ಸೌಂದರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ತುಲಾ

ತುಲಾ

ಉತ್ತಮ ದೇಹ ಸೌಂದರ್ಯ ಹಾಗೂ ಮಾನಸಿಕ ಚಿಂತನೆಗಳಲ್ಲಿ ಸ್ಥಿರತೆ ಹಾಗೂ ಸಮಾನತೆಯನ್ನು ತೋರುವ ವ್ಯಕ್ತಿಗಳು ಎಂದರೆ ತುಲಾ ರಾಶಿಯವರು. ಇವರು ಹುಟ್ಟಿನಿಂದಲೇ ಸಮಾನತೆಯ ಗುಣ, ಸಮತೋಲನವನ್ನು ಕಂಡುಕೊಳ್ಳುವುದು ಹಾಗೂ ನ್ಯಾಯ ಪರವಾಗಿರುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರ ಉತ್ತಮ ದೈಹಿಕ ಸೌಂದರ್ಯ ಹಾಗೂ ಮಾನಸಿಕ ಸ್ಥಿತಿಯು ಬಹುಕಾಂತೀಯ ಜೀವಿಗಳಂತೆ ಆಕರ್ಷಿಸುತ್ತಾರೆ. ಬಾಹ್ಯವಾಗಿ ತುಲಾ ರಾಶಿಯವರು ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತಾರೆ.

ತುಲಾ

ತುಲಾ

ಇವರ ಮಾನಸಿಕ ಚಿಂತನೆಗಳು ಬಾಹ್ಯ ಸೌಂದರ್ಯದಂತೆ ಇತರರನ್ನು ಆಕರ್ಷಿಸುವುದು. ಇವರಲ್ಲಿ ಇರುವ ಉತ್ತಮ ಗುಣಗಳಿಂದಲೇ ತಮ್ಮ ಸುತ್ತಲಿನ ಪರಿಸರ ಅಥವಾ ಪ್ರಪಂಚವನ್ನು ನೋಡುತ್ತಾರೆ. ಇವರ ಉತ್ತಮ ಚಿಂತನೆಯಲ್ಲಿ ಕಾಣುವ ಪ್ರಪಂಚವೆಲ್ಲವೂ ಸುಂದರವಾಗಿ ಕಾಣುವುದು. ಎಲ್ಲಾ ಸಂಗತಿಯಲ್ಲೂ ಧನಾತ್ಮಕ ಹಾಗೂ ಸೌಂದರ್ಯದಿಂದಲೇ ಗುರುತಿಸುತ್ತಾರೆ ಎಂದು ಹೇಳಲಾಗುವುದು. ಹಾಗಾಗಿಯೇ ಇವರು ಕೈಗೊಳ್ಳುವ ಕೆಲಸ ಕಾರ್ಯಗಳು ಸಹ ಅಷ್ಟೇ ಸುಂದರವಾಗಿ ಯಶಸ್ವಿಯಾಗುವುದು.

ಕನ್ಯಾ

ಕನ್ಯಾ

ಕನ್ಯ ರಾಶಿಯವರು ಸಾಮಾನ್ಯವಾಗಿ ಅತ್ಯಂತ ಮುಗ್ಧತೆ ಹಾಗೂ ಸುಂದರವಾದ ಬಾಹ್ಯ ಸೌಂದರ್ಯವನ್ನು ಹೊಂದಿರುತ್ತಾರೆ. ಇವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಕರ್ಷಕ ವ್ಯಕ್ತಿತ್ವದವರು. ಮಾನವೀಯತೆ ಹಾಗೂ ಸಹಾನುಭೂತಿಯ ಗುಣವು ಇವರ ದೈಹಿಕ ಸೌಂದರ್ಯವನ್ನು ಹೆಚ್ಚು ಆಕರ್ಷಿಸುವಂತೆ ಮಾಡುವುದು. ಇತರರೊಂದಿಗೆ ಹೊಂದಿಕೊಳ್ಳುವುದು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಮುಂದೆ ನಿಲ್ಲುವುದು ಎಲ್ಲವೂ ಇವರ ಆಂತರಿಕ ಸೌಂದರ್ಯವನ್ನು ಪ್ರದರ್ಶಿಸುವುದು. ಹಾಗೆಯೇ ದೈಹಿಕವಾಗಿಯೂ ನೈಸರ್ಗಿಕವಾದ ಉತ್ತಮ ಸೌಂದರ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಕನ್ಯಾ

ಕನ್ಯಾ

ಇವರ ಈ ಸುಂದರ ಸ್ವಭಾವ ಹಾಗೂ ವಿಷಯವು ಸಾಮಾಜಿಕವಾಗಿ ಅಥವಾ ಒಂದು ಸಮೂಹದಲ್ಲಿ ಇರುವಾಗ ಹೆಚ್ಚು ಆಕರ್ಷಣೆಗೆ ಒಳಗಾಗುವಂತೆ ಮಾಡುವುದು. ಕುಂಭ ರಾಶಿಯ ವ್ಯಕ್ತಿಗಳಂತೆ ಇವರು ಸಹ ಆಂತರಿಕ ಹಾಗೂ ಭಾಹ್ಯ ಸೌಂದರ್ಯದಿಂದ ಇತರರಿಗಿಂತ ಸುಂದರವಾಗಿ ಹೊಳೆಯುವರು ಎಂದು ಹೇಳಲಾಗುವುದು.

ಮಿಥುನ

ಮಿಥುನ

ತುಲಾ ರಾಶಿಯವರಂತೆ ಇವರು ಸಹ ಸುಂದರ ದೇಹಕಾಯ ಹಾಗೂ ಮಾನಸಿಕ ಸ್ಥಿರತೆಯನ್ನು ಹೊಂದಿರುತ್ತಾರೆ. ಮಿಥುನ ರಾಶಿಯವರು ಮಾನಸಿಕವಾಗಿ ಬುದ್ಧಿ ಜೀವಿಗಳು. ಇವರ ಬುದ್ಧಿವಂತಿಕೆಯು ಕೆಲಸದಲ್ಲಿ ಉತ್ತಮವಾಗಿ ಶ್ರಮಿಸುವಂತೆ ಮಾಡುವುದು. ಇವರು ಸೌಂದರ್ಯದ ಬಗ್ಗೆ ಹೆಚ್ಚು ಗೀಳನ್ನು ಹೊಂದಿರುತ್ತಾರೆ ಎಂದು ಸಹ ಹೇಳಲಾಗುವುದು.

ಮಿಥುನ

ಮಿಥುನ

ಇವರು ತಮ್ಮ ಬಾಹ್ಯ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ತಮ್ಮ ಕೆಲಸದಲ್ಲೂ ಹೆಚ್ಚಿನ ಏಕಾಗ್ರತೆಯನ್ನು ಹೊಂದುವುದರ ಮೂಲಕ ಮಾನಸಿಕ ಸ್ಥಿರತೆ ಹಾಗೂ ಏಕಾಗ್ರತೆಯ ಬಗ್ಗೆ ಬಹಿರಂಗಪಡಿಸುವರು. ದೈಹಿಕ ಮತ್ತು ಮಾನಸಿಕವಾಗಿ ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತಾರೆ.

ವೃಷಭ

ವೃಷಭ

ಭುಮಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಅತ್ಯಂತ ಸುಂದರವಾದ ದೈಹಿಕ ಸೌಂದರ್ಯ ಹಾಗೂ ಮಾನಸಿಕ ಸೌಂದರ್ಯವನ್ನು ಹೊಂದಿರುತ್ತಾರೆ. ಸದಾ ಸ್ಥಿರವಾದ ಮಾನಸಿಕ ಚಿಂತನೆಗಳನ್ನು ಹೊಂದುವುದರ ಮೂಲಕ ಹೆಚ್ಚು ಪ್ರಣಯ ಪೂರಕ ವ್ಯಕ್ತಿಯಂತೆ ಆಕರ್ಷಣೆಯನ್ನು ಪಡೆದುಕೊಳ್ಳುವರು.

ವೃಷಭ

ವೃಷಭ

ಕೆಲವು ವಿಚಾರದಲ್ಲಿ ತಮ್ಮದೇ ಆದ ಚಿಂತನೆಯನ್ನು ಹೊಂದಿರುತ್ತಾರೆ. ಜೊತೆಗೆ ಕೆಲಸದಲ್ಲಿ ಸಾಕಷ್ಟು ಏಕಾಗ್ರತೆಯನ್ನು ಹೊಂದುವುದರ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಇತರರ ನಡುವೆ ಹೆಚ್ಚು ಆಕರ್ಷಣೀಯ ವ್ಯಕ್ತಿಯಂತೆ ಶೋಭಿತರಾಗುವರು.

English summary

5 Attractive Zodiac Signs That Exude Beauty

While some will say that beauty is only skin-deep, does it really matter? If someone is more than easy on the eyes, to the point of being gorgeous, shouldn’t we admire that beauty, even if it truly is only physical?
X
Desktop Bottom Promotion