For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ 2019ರ ನಿಮ್ಮ ಪ್ರೀತಿ-ಜೀವನ ಹೇಗಿರಲಿದೆ? ಇಲ್ಲಿದೆ ಫುಲ್ ಡಿಟೇಲ್ಸ್

|

ಪ್ರೀತಿ ಎನ್ನುವುದು ಜೀವಕ್ಕೊಂದು ಅಮೃತಧಾರೆ. ಅದು ಅಸಂಖ್ಯಾತ ಭಾವನೆಗಳಿಂದ ಕೂಡಿರುತ್ತದೆ. ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳು ಸಂವೇದನೆಯ ಮೂಲಕ ಸಂಧಿಸುವ ಒಂದು ಭಾವನೆ ಅಥವಾ ಅನುಭವ ಎನ್ನಬಹುದು. ಪ್ರೀತಿಯಲ್ಲಿ ಮುಗ್ಧತೆ, ಮಮತೆ, ಭಯ, ಮುನಿಸು, ಬಯಕೆ, ತ್ಯಾಗ ಎನ್ನುವ ಎಲ್ಲಾ ಭಾವನೆಗಳನ್ನು ಒಳಗೊಂಡಿರುತ್ತದೆ. ಯಾವ ವ್ಯಕ್ತಿಯ ಜೀವನದಲ್ಲಿ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ ಅಥವಾ ಪ್ರೀತಿಯಿಂದ ವಂಚಿತನಾಗಿರುತ್ತಾನೆ ಅವನನ್ನು ಅತ್ಯಂತ ದುರಾದೃಷ್ಟವಂತ ಎನ್ನಬಹುದು. ಜೀವನದಲ್ಲಿ ಆಸ್ತಿ, ಅಂತಸ್ತು ಇಲ್ಲದೆ ಬದುಕ ಬಹುದು. ಆದರೆ ಭಾವನೆಗಳಿಗೆ ಹಾಗೂ ಮನಸ್ಸಿಗೆ ಸಂತೋಷ ನೀಡುವ ಪ್ರೀತಿ ಇಲ್ಲದೆ ಬದುಕಲು ಕಷ್ಟ.

ಪ್ರೀತಿ ಎನ್ನುವುದು ಒಂದು ಗುಲಾಬಿ ಹೂವಿನಂತೆ ಅರಿತು ಮುಟ್ಟಿದರೆ ಹೂವು ನಮ್ಮ ಕೈಗೆ ತಗಲುವುದು. ಅದೇ ಅರಿಯದೇ ಮುಟ್ಟಿದರೆ ಹೂವಿಗಿರುವ ಮುಳ್ಳುಗಳು ಕೈಗೆ ಚುಚ್ಚುತ್ತವೆ. ಹಾಗಾಗಿ ಎಂದಿಗೂ ಪ್ರೀತಿಯ ವಿಷಯದಲ್ಲಿ ವ್ಯಕ್ತಿಗೆ ಮೋಸ ಮಾಡಬಾರದು ಎಂದು ಹೇಳಲಾಗುವುದು. ನಮ್ಮ ಹತ್ತಿರ ಸಾಧ್ಯವಾದರೆ ಸಹಾಯ ಹಾಗೂ ಪ್ರೀತಿಯನ್ನು ನೀಡಬೇಕು. ಹಾಗೊಮ್ಮೆ ಪ್ರೀತಿಯನ್ನು ನೀಡಲು ಸಾಧ್ಯವಿಲ್ಲ ಎಂದಾದರೆ ನೋವನ್ನು ಮಾತ್ರ ನೀಡಲು ಮುಂದಾಗಬಾರದು. ಅದು ಅಪರಾಧ ಹಾಗೂ ಮೋಸ ಎನ್ನುವುದನ್ನು ಸೂಚಿಸುತ್ತದೆ.

ಪ್ರಾಯಕ್ಕೆ ಬಂದ ಪ್ರತಿಯೊಬ್ಬ ಜೀವಿಯೂ ತನ್ನ ವಿರುದ್ಧ ಲಿಂಗದವರಿಂದ ಪ್ರೀತಿಯನ್ನು ಬಯಸುವುದು ಸಹಜ. ಆದರೆ ಆ ಪ್ರೀತಿಯನ್ನು ಪಡೆಯಬೇಕು ಮತ್ತು ಶಾಶ್ವತವಾಗಿ ಉಳಿಸಿಕೊಳ್ಳಬೇಕು ಎಂದಾದರೆ ಸಾಕಷ್ಟು ತ್ಯಾಗ ಹಾಗೂ ಹೊಂದಾಣಿಕೆ ಎನ್ನುವುದು ನಮ್ಮ ನಡತೆ ಹಾಗೂ ವ್ಯಕ್ತಿತ್ವದಲ್ಲಿ ಕರಗತವಾಗಿರಬೇಕಾಗುತ್ತದೆ. ಆಗಲೇ ಪರಸ್ಪರ ಸ್ನೇಹ-ಪ್ರೀತಿಯಿಂದ ಒಬ್ಬರಿಗೊಬ್ಬರು ಅರಿತು ಬಾಳಬಹುದು. ಜೀವನವೂ ಸುಂದರವಾಗಿ ಸಾಗುವುದು. ಅದೇ ವಂಚನೆ ಹಾಗೂ ಹೊಂದಾಣಿಕೆ ಇಲ್ಲದೆ ಕೇವಲ ಸ್ವಾರ್ಥ ಭಾವನೆಯಿಂದ ಜೀವನ ನಡೆಸುತ್ತಾರೆ ಎಂದಾದರೆ ಅಲ್ಲಿ ಪ್ರೀತಿ ಎನ್ನುವುದು ಹೆಚ್ಚುಕಾಲ ಉಳಿಯುವುದಿಲ್ಲ. ಬಹುಬೇಗ ಸಂಬಂಧಗಳಲ್ಲಿ ಬೇಸರ, ಅನುಮಾನ, ಕಲಹ ಹಾಗೂ ಭಿನ್ಯಾಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ. ಜೊತೆಗೆ ಸಂಬಂಧಗಳು ಮುರಿದು ಬೀಳುವ ಸಾಧ್ಯತೆಗಳು ಇರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭವಿಷ್ಯ ಎಲ್ಲವೂ ಗ್ರಹಗತಿಗಳಿಗೆ ಹಾಗೂ ರಾಶಿಚಕ್ರಗಳಿಗೆ ಅನುಸಾರವಾಗಿ ನಡೆಯುತ್ತವೆ. ಆಯಾ ರಾಶಿಚಕ್ರಗಳಿಗೆ ಅನುಗುಣವಾಗಿ ಪ್ರೀತಿಗೆ ಸಂಬಂಧಿಸಿದಂತೆ ವಿಭಿನ್ನವಾದ ಭಾವನೆ ಹಾಗೂ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅದರಂತೆಯೇ ತಮ್ಮ ಸಂಗಾತಿ ಅಥವಾ ಪ್ರೀತಿ ಪಾತ್ರರೊಂದಿಗೆ ವರ್ತಿಸುತ್ತಾರೆ ಎನ್ನಲಾಗುವುದು. ಜೊತೆಗೆ ಆಯಾ ವರ್ಷಕ್ಕೆ ಅನುಗುಣವಾಗಿ ಬದಲಾಗುವ ಗ್ರಹಗಳ ಸ್ಥಾನ ಮತ್ತು ಸಂಚಾರದ ಪರಿಯು ವ್ಯಕ್ತಿಯ ಕೌಟುಂಬಿಕ ಮತ್ತು ಪ್ರೀತಿಯ ಜೀವನದ ಮೇಲೆ ಸಾಕಷ್ಟು ಗಂಭೀರವಾದ ಪ್ರಭಾವ ಉಂಟಾಗುವುದು. ಈ ಹಿನ್ನೆಲೆಯಲ್ಲಿಯೇ ವ್ಯಕ್ತಿ ತನ್ನ ಸಂಬಂಧದಲ್ಲಿ ನೋವು ಹಾಗೂ ನಲಿವನ್ನು ಅನುಭವಿಸುತ್ತಾನೆ ಎಂದು ಹೇಳಲಾಗುವುದು. 2019ರಲ್ಲಿ ಉಂಟಾಗುವ ಗ್ರಹಗತಿಗಳ ಸಂಚಾರ ಹಾಗೂ ಬದಲಾವಣೆಯು ಪ್ರತಿ ರಾಶಿಚಕ್ರಗಳ ಮೇಲೂ ತನ್ನದೇ ಆದ ಪ್ರಮುಖ ಬದಲವಾವಣೆಯು ನಡೆಯುತ್ತದೆ. ಅವುಗಳ ಆಧಾರದ ಮೇಲೆಯೂ ಪ್ರೀತಿಯ ಜೀವನದಲ್ಲಿ ಸುಖ ಸಂತೋಷವನ್ನು ಅನುಭವಿಸಲಿದ್ದಾರೆ ಎಂದು ಹೇಳಲಾಗುವುದು. ನಿಮಗೆ ನಿಮ್ಮ ಪ್ರೀತಿಯ ಜೀವನ ಹೊಸ ವರ್ಷದಲ್ಲಿ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾದ ರಾಶಿಚಕ್ರದ ವಿವರಣೆಯನ್ನು ಅರಿಯಿರಿ.

ಮೇಷ

ಮೇಷ

ತಮ್ಮ ಜೀವನ ಹಾಗೂ ಕೆಲಸ ಕಾರ್ಯಗಳಲ್ಲಿ ವಿಶೇಷ ಚಿಂತನೆ ಹಾಗೂ ಅಭಿಪ್ರಾಯವನ್ನು ಹೊಂದಿರುವವರು ಮೇಷ ರಾಶಿಯ ವ್ಯಕ್ತಿಗಳು. ಇವರು 2019ರಲ್ಲಿ ಸಾಕಷ್ಟು ಧನಾತ್ಮಕ ಪ್ರಭಾವವನ್ನು ಅಥವಾ ಪ್ರತಿಫಲವನ್ನು ಪಡೆದುಕೊಳ್ಳುವರು. ಅದರಂತೆಯೇ ತಮ್ಮ ಪ್ರೀತಿಯ ಜೀವನದಲ್ಲೂ ಸಹ ಉತ್ತಮ ಸ್ಥಿತಿಯನ್ನು ಕಾಣುವರು. ಸಂಗಾತಿ ಅಥವಾ ಪ್ರೀತಿ ಪಾತ್ರರೊಂದಿಗೆ ಅತ್ಯುತ್ತಮವಾದ ಬೆಸುಗೆಯನ್ನು ಪಡೆದುಕೊಳ್ಳುವರು. ಸಂಗಾತಿಯೊಂದಿಗಿನ ಸಂಬಂಧವನ್ನು ನಿಭಾಯಿಸುವಲ್ಲಿ ಅತ್ಯಂತ ಪ್ರೌಢ ವ್ಯಕ್ತಿಯಂತೆ ವರ್ತಿಸುವಿರಿ. ಜೊತೆಗೆ ಎಂತಹ ಸನ್ನಿವೇಶಗಳನ್ನಾದರೂ ಸುಂದರವಾಗಿ ಅಥವಾ ಬುದ್ಧಿವಂತಿಕೆಯಿಂದ ನಿಭಾಯಿಸುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

Most Read: 2019ರಲ್ಲಿ ಐದು ರಾಶಿಯವರ ಬದುಕಿನಲ್ಲಿ ಮಹತ್ತರ ಬದಲಾವಣೆ ಕಾಣಲಿದೆಯಂತೆ!

ವೃಷಭ

ವೃಷಭ

ಸ್ಥಿರ ಭಾವನೆಯನ್ನು ಹೊಂದಿರುವ ರಾಶಿಚಕ್ರದವರಾದ ವೃಷಭ ರಾಶಿಯವರು ತಮ್ಮ ಪ್ರೀತಿ ಹಾಗೂ ಕುಟುಂಬದ ಜೀವನಕ್ಕೆ ಹೆಚ್ಚಿನ ಆಧ್ಯತೆ ನೀಡುವರು. 2019ರಲ್ಲಿ ಕೆಲವು ಸನ್ನಿವೇಶಗಳು ಹಾಗೂ ಕೆಲಸಿನ ಒತ್ತಡದಿಂದ ಕುಟುಂಬಕ್ಕೆ ಅಥವಾ ವೈಯಕ್ತಿಕ ಜೀವನಕ್ಕೆ ಸಾಕಷ್ಟು ಸಮಯವನ್ನು ವಿನಿಯೋಗಿಸಲು ಸಾಧ್ಯವಾಗದೆ ಇರಬಹುದು. ಈ ಹಿನ್ನೆಲೆಯಲ್ಲಿಯೇ ಸಾಕಷ್ಟು ಕುಟುಂಬದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಈ ರಾಶಿಯವರು ಬಯಸಿದ ಸಂಬಂಧ ಅಥವಾ ಪ್ರೀತಿಯ ಬಗ್ಗೆ ಕುಟುಂಬದಲ್ಲಿ ಒಪ್ಪಿಗೆ ನೀಡುವರು. ಅಲ್ಲದೆ ಸಂಗಾತಿಯಾಗಿ ತರಲು ಸಹ ಅನುಮತಿ ನೀಡುವರು. ಹಾಗಾಗಿ 2019ರಲ್ಲಿ ವೃಷಭ ರಾಶಿಯವರ ಸಂಬಂಧವು ಸಕಾರಾತ್ಮಕ ರೀತಿಯಲ್ಲಿ ಅರಳುವುದು ಎಂದು ಹೇಳಲಾಗುವುದು.

ಮಿಥುನ

ಮಿಥುನ

ದ್ವಿಮುಖ ವ್ಯಕ್ತಿತ್ವವನ್ನು ಹೊಂದಿರುವವರು ಮಿಥುನ ರಾಶಿಯವರು. ಇವರು ಪ್ರೀತಿ ಹಾಗೂ ಸೌಂದರ್ಯದ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. 2019ರ ವರ್ಷವು ಇವರಿಗೆ ಪ್ರೀತಿಗೆ ಸಂಬಂಧಿಸಿದಂತೆ ಉತ್ತಮ ಸಮಯವನ್ನು ಹಾಗೂ ಅವಕಾಶವನ್ನು ಕಲ್ಪಿಸಿಕೊಡುವುದು ಎಂದು ಹೇಳಲಾಗುವುದು. ಈ ವರ್ಷ ನೀವು ಪ್ರೀತಿಯಲ್ಲಿ ಬೀಳಲು ಹಾಗೂ ಅದನ್ನು ಬೆಳೆಸಲು ಅತ್ಯುತ್ತಮವಾದ ಸಮಯ. ಅಲ್ಲದೆ ಸಂದರ್ಭಗಳು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡುವುದು. ಅವಿವಾಹಿತರು ವಿವಾಹವಾಗಲು ಅಥವಾ ಪ್ರೇಮಿಗಳು ತಮ್ಮ ಪ್ರೀತಿಯನ್ನು ಸಂಗಾತಿಯ ರೂಪದಲ್ಲಿ ಪಡೆಯಲು 2019ರ ವರ್ಷ ಅತ್ಯುತ್ತಮವಾದದ್ದು ಎಂದು ಹೇಳಲಾಗುವುದು.

ಕರ್ಕ

ಕರ್ಕ

ಸಂಬಂಧ ಹಾಗೂ ಭಾವನಾತ್ಮಕ ವಿಷಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ಹಾಗೂ ಬೆಲೆಯನ್ನು ನೀಡುವ ವ್ಯಕ್ತಿಗಳು ಇವರು. ಈ ಹಿಂದೆ ಮುರಿದ ಸಂಬಂಧ ಅಥವಾ ಕಳೆದುಕೊಂಡ ಪ್ರೀತಿಯನ್ನು ಪಡೆದುಕೊಳ್ಳಲು ಅತ್ಯುತ್ತಮ ಸಮಯವಾಗಿರುತ್ತದೆ. 2019ರಲ್ಲಿ ನೀವು ಊಹಿಸಿದಂತೆ ನಿಮ್ಮ ಪ್ರೀತಿಯು ನಿಮ್ಮ ದಾರಿಗೆ ಬರುವುದು. ನೀವು ಸಾಮಾಜಿಕ ಮಾಧ್ಯಮಗಳ ಮೂಲಕ ನಿಮ್ಮ ಪ್ರೀತಿಯನ್ನು ಸಂಪರ್ಕಿಸಲು ಪ್ರಯತ್ನಿಸುವಿರಿ. ನಿಮ್ಮ ಸಂಗಾತಿಯನ್ನು ಭೇಟಿಯಾದಾಗ ಈ ವಿಚಾರವು ನಿಮಗೆ ಮಸಾಲೆಯ ರೂಪದಲ್ಲಿ ಉತ್ತೇಜನ ಹಾಗೂ ಸಂತೋಷವನ್ನು ನೀಡುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಸಿಂಹ

ಸಿಂಹ

ನಾಯಕತ್ವದ ಗುಣವನ್ನು ಹೊಂದಿರುವ ಇವರಿಗೆ ಪ್ರೀತಿಯ ಸಂಗತಿಗಳು ಅತ್ಯುತ್ತಮವಾಗಿರುತ್ತದೆ. ಈ ವರ್ಷ ನೀವು ನಿಮ್ಮ ಜೀವನದ ಪ್ರೀತಿಯನ್ನು ಕಂಡುಕೊಳ್ಳುವಿರಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 219ರಲ್ಲಿ ಸಿಂಹ ರಾಶಿಯವರ ಪ್ರೀತಿ ಹಗೂ ವೈವಾಹಿಕ ಜೀವನವು ಅತ್ಯಂತ ಉತ್ತಮ ಮಟ್ಟದಲ್ಲಿ ಇರುತ್ತದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಂತೋಷ ಹಾಗೂ ಸಂತೃಪ್ತಿಯ ಭಾವವನ್ನು ನೀಡುವುದು.

Most Read: 2019ರ ಮಕರ ಸಂಕ್ರಾಂತಿ: ಮೂರು ರಾಶಿಯವರು ಕಠಿಣ ಸಮಯವನ್ನು ಎದುರಿಸಬೇಕಾಗಬಹುದು!

ಕನ್ಯಾ

ಕನ್ಯಾ

ಬಹಳ ಸೂಕ್ಷ್ಮ ಹಾಗೂ ಸಹಾನುಭೂತಿಯ ಮನಃಸ್ಥಿತಿಯವರು ಕನ್ಯಾ ರಾಶಿಯ ವ್ಯಕ್ತಿಗಳು. ಈ ಹಿಂದೆ ಮುರಿದ ಸಂಬಂಧ ಅಥವಾ ಮುನಿಸಿನಿಂದ ದೂರವಾಗಿದ್ದರೆ ಅದನ್ನು ಸರಿಪಡಿಸಲು ಅತ್ಯುತ್ತಮವಾದ ಸಮಯ. 2019ರಲ್ಲಿ ನೀವು ನಿಮ್ಮ ಪ್ರೀತಿಯ ಜೀವನದಲ್ಲಿ ಸಾಕಷ್ಟು ಸಂತೋಷ ಹಾಗೂ ಸಕಾರಾತ್ಮಕ ಬದಲಾವಣೆಯನ್ನು ಪಡೆದುಕೊಳ್ಳಲು ಅತ್ಯುತ್ತಮ ಸಮಯವಾಗುವುದು. ನಿಮ್ಮ ಸಂಬಂಧವನ್ನು ಉತ್ತಮ ಪಡಿಸಲು ನಿರಂತರ ಪ್ರಯತ್ನವನ್ನು ಮಾಡಬೇಕಾಗುವುದು. ನಿಮ್ಮ ಸಂಬಂಧವನ್ನು ಉತ್ತಮ ಗೊಳಿಸಲು ನೀವು ಮಾಡುವ ನಿರಂತರ ಪ್ರಯತ್ನವು ಈ ವರ್ಷದಲ್ಲಿ ಪ್ರತಿಫಲ ನೀಡುವುದು. ಪ್ರೀತಿಯ ಜೀವನದಲ್ಲಿ ಕನ್ಯಾ ರಾಶಿಯವರು ಉತ್ತಮ ವಿಷಯಗಳನ್ನು ನೋಡುತ್ತಾರೆ ಎಂದು ಹೇಳಲಾಗುವುದು.

ತುಲಾ

ತುಲಾ

ತುಲಾ ರಾಶಿಯ ವ್ಯಕ್ತಿಗಳಿಗೆ 2019ರ ವರ್ಷದಲ್ಲಿ ಪ್ರೀತಿಯ ಜೀವನ ಅತ್ಯುತ್ತಮವಾಗಿ ಬೆಳಗುವುದು. ಹಿಂದೆ ಕಳೆದುಕೊಂಡ ಪ್ರೀತಿಯನ್ನು ಪಡೆದುಕೊಳ್ಳಲು ಸೂಕ್ತವಾದ ಸಮಯವಾಗಿರುತ್ತದೆ. ಪ್ರೀತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳು ನಿಮ್ಮ ರೀತಿಯಲ್ಲಿ ನಡೆಯುತ್ತದೆ. 2019ರಲ್ಲಿ ಸಾಕಷ್ಟು ಸುಂದರ ಕನಸುಗಳು ಅರಳುತ್ತವೆ. ಜೊತೆಗೆ ವರ್ಣರಂಜಿತ ದಿನಗಳು ನಿಮ್ಮನ್ನು ಎಚ್ಚರಿಸುತ್ತದೆ. ಈ ಸಮಯದಲ್ಲಿ ತುಂಬಾ ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯ ಶಾಸ್ತ್ರವನ್ನು ಎಚ್ಚರಿಸುತ್ತದೆ.

ವೃಶ್ಚಿಕ

ವೃಶ್ಚಿಕ

ಅಧಿಕ ಸಮಯವನ್ನು ಕೆಲಸದಲ್ಲಿ ವಿನಿಯೋಗಿಸುವ ನೀವು ಸಂಗಾತಿಗೆ ಹೆಚ್ಚಿನ ಸಮಯವನ್ನು ನೀಡಲು ಮುಂದೆ ನೋಡಿ. ಇದರ ಪರಿಣಾಮದಿಂದಾಗಿ ಪ್ರೀತಿಯ ಜೀವನವನ್ನು ಬಲಪಡಿಸಲು ಸಾಧ್ಯವಾಗುವುದು ಎಂದು ಸಲಹೆ ನೀಡಲಾಗುವುದು. ನೀವು ನಿಮ್ಮ ಸಂಬಂಧ ಹಾಗೂ ಪ್ರೀತಿಯನ್ನು ಕಾಪಾಡಿಕೊಳ್ಳಲು ಅನಗತ್ಯವಾದ ವಾದ ಮತ್ತು ಚರ್ಚೆಯಿಂದ ದೂರವಿರಿ.

ಧನು

ಧನು

ಹೆಚ್ಚು ಸ್ವಾತಂತ್ರ್ಯ ಬಯಸುವ ಹಾಗೂ ದೂರ ಪ್ರಯಾಣದಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವ ಬದಲು ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸಿ. 2019ರ ಸಮಯವು ನಿಮಗೆ ಪ್ರೀತಿಯ ಜೀವನಕ್ಕೆ ಅನುಕೂಲವನ್ನು ಕಲ್ಪಿಸಿಕೊಡುವುದು. ಹೊಸ ಸಂಬಂಧವನ್ನು ಹೊಂದುವ ಬಯಕೆಯನ್ನು ಹೊಂದಿದ್ದರೂ ನಿಮಗೆ ಈ ವರ್ಷ ಉತ್ತಮ ಸಮಯವನ್ನು ಕಲ್ಪಿಸಿಕೊಡುವುದು.

ಮಕರ

ಮಕರ

ಮಕರ ರಾಶಿಯವರು ತಮ್ಮ ಪ್ರೀತಿಯಲ್ಲಿ ಹೆಚ್ಚಿನ ಆನಂದ ಹಾಗೂ ಸುಂದರ ದಿನವನ್ನು ಕಳೆಯುತ್ತಿದ್ದೀರಿ ಎಂದಾದರೂ ಪ್ರೀತಿಯ ಆಳವನ್ನು ಭದ್ರಪಡಿಸಲು ನಿಮಗೆ ಉತ್ತಮ ಅವಕಾಶ ದೊರೆಯುವುದು. ನಿಮ್ಮ ಪಾಲುದಾರರು ಯಾವುದಾದರೂ ತಪ್ಪು ಕಲ್ಪನೆ ಅಥವಾ ಅಭಿಪ್ರಾಯವನ್ನು ಹೊಂದಿದ್ದರೆ ಅದನ್ನು ನಬಹುಬೇಗ ಬಗೆಹರಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ನಡುವೆ ಹೆಚ್ಚಿನ ಅನ್ಯೋನ್ಯತೆ ಬೆಳೆಯುವುದು. ಆಗ ಒಬ್ಬರನ್ನು ಬಿಟ್ಟು ಒಬ್ಬರು ದೂರ ಇರುವುದು ತಪ್ಪುವುದು.

ಕುಂಭ

ಕುಂಭ

ಈ ವರ್ಷ ನೀವು ಸಾಕಷ್ಟು ಪ್ರವಾಸವನ್ನು ಕೈಗೊಳ್ಳುವುದರ ಮೂಲಕ ನಿಮ್ಮ ಪ್ರೀತಿಯನ್ನು ಬೆಳಗಿಸುವಿರಿ. ಸಂಗಾತಿಯೊಂದಿಗೆ ಪ್ರೀತಿಯ ಜೀವನವನ್ನು ಬೆಳಗಿಸಲು ನೀವು ಕೈಗೊಳ್ಳುವ ಪ್ರವಾಸವು ಪ್ರೀತಿಯ ಮಳೆ ಸುರಿಸುವುದು. ಜೊತೆಗೆ ಪರಸ್ಪರ ಪ್ರೀತಿ ಹೆಚ್ಚುವುದು. ಈ ವರ್ಷ ಅತ್ಯುತ್ತಮ ಪ್ರೀತಿಯ ಜೀವನವನ್ನು ಕಾಣುವಿರಿ.

Most Read: 2019ರಲ್ಲಿ ಯಾವ್ಯಾವ ರಾಶಿಯವರಿಗೆ ಯಾವ ತಿಂಗಳು ಅದೃಷ್ಟ ತರಲಿದೆ? ಇಲ್ಲಿದೆ ಡಿಟೇಲ್ಸ್

ಮೀನ

ಮೀನ

ಜೂನ್ 2019ರ ನಿಮ್ಮ ಪ್ರೀತಿಯ ಜೀವನ ಸಾಹಸ ಮತ್ತು ರೋಮಾಂಚಕ ಅನುಭವವನ್ನು ತೆರೆದಿಡುವುದು. ಸಂಗಾತಿಯನ್ನು ಪ್ರವಾಸಕ್ಕೆ ಕರೆದೊಯ್ಯುವುದರಿಂದ ಸಂಗಾತಿಯೊಂದಿಗೆ ಹೆಚ್ಚಿನ ಸಂಪರ್ಕವನ್ನು ಕಲ್ಪಿಸಿಕೊಡುವುದು. ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಂಧವನ್ನು ಹೊಂದಿದ್ದರೆ ಅದನ್ನು ಅಲ್ಲಾಡಿಸಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. 2019ರ ವರ್ಷವು ನಿಮಗೆ ಉತ್ತಮ ಸಂಬಂಧವನ್ನು ಕಲ್ಪಿಸುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

English summary

2019 Love Life Predictions as per Your Zodiac

Love Horoscope 2019 gives you the predictions about your love life. Humans are curious creatures who want to know everything beforehand, and love is definitely one of the priorities on their list. The Love Horoscope 2019 gives the predictions of all the Zodiac Signs. This year is going to be the best for Aries love life in 2019; this will help you in making the bond stronger. You will grow more mature and smart in handling situations this year.
Story first published: Friday, January 11, 2019, 17:27 [IST]
X
Desktop Bottom Promotion