For Quick Alerts
ALLOW NOTIFICATIONS  
For Daily Alerts

ಈ ಮೂರು ರಾಶಿಚಕ್ರದವರು ಸೆಕ್ಸ್ ಬಳಿಕ ತುಂಬಾನೇ ದುಃಖಿಸುವರು!!

|

ಸೆಕ್ಸ್ ಎನ್ನುವುದು ಪ್ರಾಯಕ್ಕೆ ಬಂದ ಪ್ರತಿಯೊಂದು ಜೀವಿಯು ಅನುಭವಿಸುವ ನೈಸರ್ಗಿಕ ಕ್ರಿಯೆ. ಇದು ಮೇಲ್ನೋಟಕ್ಕೆ ನೈಸರ್ಗಿಕ ಕ್ರಿಯೆ ಎನಿಸಿಕೊಂಡರೂ ಇದಕ್ಕೆ ಅದರದ್ದೇ ಆದ ಕಾನೂನು ನಿಬಂಧನೆಗಳು ಇವೆ. ಈ ಹಿನ್ನೆಲೆಯಲ್ಲಿಯೇ ವಿವಾಹ ಎನ್ನುವ ಬಂಧನಕ್ಕೆ ವ್ಯಕ್ತಿ ಒಳಗಾಗುತ್ತಾನೆ. ಜೊತೆಗೆ ಸಂಸಾರ ಎನ್ನುವ ಚೌಕಟ್ಟಿನಲ್ಲಿ ತನ್ನ ಜೀವನವನ್ನು ನಡೆಸುತ್ತಾ ಸಮಾಜದ ಸೃಷ್ಟಿಗೆ ಕಾರಣನಾಗುತ್ತಾನೆ. ತಮ್ಮ ಪಾಲುದಾರರೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಬಯಸುವುದು ಸಾಮಾನ್ಯವಾದ ಸಂಗತಿ.

ಸಂಗಾತಿಯೊಂದಿಗೆ ಕಳೆಯುವ ಸಮಯದಲ್ಲಿ ಸಾಕಷ್ಟು ಜಂಜಾಟಗಳನ್ನು ಮರೆತು ಮಾನಸಿಕವಾಗಿ ಒಂದಿಷ್ಟು ನಿರಾಳತೆಯನ್ನು ಅನುಭವಿಸಬೇಕು ಎನ್ನುವ ಹಂಬಲವೂ ಇರುತ್ತವೆ. ಆದರೆ ಕೆಲವೊಬ್ಬರಲ್ಲಿ ಈ ಭಾವನೆಗಳು ತದ್ವಿರುದ್ಧವಾಗಿರುತ್ತವೆ ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಭೋಗ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಒಂದೇ ಬಗೆಯ ಭಾವನೆಯನ್ನು ನೀಡುವುದಿಲ್ಲ. ಕೆಲವರಿಗೆ ನಿರಾಳ ಭಾವ ನೀಡಿದರೆ, ಇನ್ನೂ ಕೆಲವರು ಒಂದಿಷ್ಟು ಒತ್ತಡ ಹಾಗೂ ದುಃಖಕ್ಕೆ ಒಳಗಾಗಬಹುದು ಎಂದು ಹೇಳುತ್ತದೆ.

ಸಂಭೋಗ ಹೊಂದುವುದರಿಂದ ಜೀವನದಲ್ಲಿ ಸಾಕಷ್ಟು ಕಳೆದುಕೊಂಡೆವು, ಜೀವನ ಇಷ್ಟೇ ಎನ್ನುವಂತಹ ದುಃಖದ ಭಾವಕ್ಕೆ ಒಳಗಾಗುತ್ತಾರೆ. ಇದು ಅವರ ರಾಶಿಚಕ್ರಗಳು ಹಾಗೂ ಗ್ರಹಗತಿಗಳು ನೀಡುವ ಪ್ರಭಾವ ಎಂದು ಸಹ ಹೇಳಲಾಗುವುದು. ಹಾಗಾದರೆ ಯಾವ ರಾಶಿಯವರು ಸಾಮಾನ್ಯವಾಗಿ ಸಂಭೋಗದ ನಂತರ ದುಃಖಕ್ಕೆ ಒಳಗಾಗುತ್ತಾರೆ? ಅವರ ಮನಃ ಸ್ಥಿತಿ ಹೇಗೆ ಬದಲಾವಣೆ ಕಾಣುವುದು? ಎನ್ನುವಂತಹ ವಿಚಾರಗಳ ಬಗ್ಗೆ ಸೂಕ್ತ ವಿವರಣೆಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ....

ಮಿಥುನ ರಾಶಿ

ಮಿಥುನ ರಾಶಿ

ಇವರು ತಮ್ಮ ಸಂಗಾತಿಯೊಂದಿಗೆ ಮಲಗುವಾಗ ಎರಡು ಮನಸ್ಸನ್ನು ಹೊಂದಿರುತ್ತಾರೆ. ಪಾಲುದಾರರೊಂದಿಗೆ ಸಂಪರ್ಕವನ್ನು ಅವರು ಹಂಬಲಿಸುವಾಗ ಮಾತಿನ ಮೂಲಕ ಅಥವಾ ಸಂವಹನದ ಮೂಲಕ ವ್ಯಕ್ತಪಡಿಸಬೇಕು ಎನ್ನುವುದಕ್ಕೆ ಹೆಚ್ಚು ಆದ್ಯತೆ ನೀಡುವರು. ಕೆಲವೊಮ್ಮೆ ಬರಹಗಳ ರೂಪದಲ್ಲಿಯೂ ಇವರು ವ್ಯಕ್ತಪಡಿಸುವರು. ಇವರಲ್ಲಿ ಭಯ ಹಾಗೂ ಆತಂಕಗಳು ಹೆಚ್ಚಾಗಿರುತ್ತವೆ.

ಮಿಥುನ ರಾಶಿ

ಮಿಥುನ ರಾಶಿ

ಇವರು ಮಲಗುವ ಮುನ್ನ ಸಾಕಷ್ಟು ನಿಕಟತೆ ಹಾಗೂ ಸುರಕ್ಷತೆ ಇರಬೇಕು ಎಂದು ಬಯಸುವರು. ಇವರು ತಾವು ಪ್ರೀತಿಸುವ ವ್ಯಕ್ತಿಗಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇವರ ಆದ್ಯತೆಗಳು ಈಡೇರದೆ ಇದ್ದಾಗ ಒಂದಿಷ್ಟು ಬೇಸರಕ್ಕೆ ಒಳಗಾಗುವರು.

ಧನು ರಾಶಿ

ಧನು ರಾಶಿ

ಇವರು ವೈಯಕ್ತಿಕವಾಗಿ ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಇವರು ತಾವು ಸಂಭೋಗ ಹೊಂದುವ ಸಂಬಂಧಗಳು ಹೆಚ್ಚು ಸುರಕ್ಷಿತವಾಗಿರಬೇಕು ಎಂದು ಬಯಸುವರು. ಇವರಲ್ಲಿ ಒಂದು ಬಗೆಯ ಸಿಕ್ಕಿ ಬೀಳಬಹುದು ಎನ್ನುವ ಭಯವಿರುತ್ತದೆ. ಕೆಲವೊಮ್ಮೆ ಸಂಗಾತಿಯು ತಮ್ಮ ಪ್ರೀತಿಯನ್ನು ಹಿಂತೆಗೆದು ಕೊಳ್ಳುತ್ತಾರೆ ಎನ್ನುವ ಭಯಕ್ಕೂ ಒಳಗಾಗುವುದುಂಟು.

ಧನು ರಾಶಿ

ಧನು ರಾಶಿ

ಒಮ್ಮೆ ಇವರು ಪ್ರೀತಿಯಲ್ಲಿ ಬಿದ್ದರೆ ಇವರು ತಮ್ಮ ಸ್ಥಾನದ ಅಗತ್ಯತೆಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಇವರ ಪ್ರಣಯದ ಕಲ್ಪನೆ ಹಾಗೂ ಪಾಲುದಾರರೊಂದಿಗೆ ಹಂಚಿಕೊಳ್ಳುವ ಪ್ರೀತಿಯ ಪರಿ ತಮಾಷೆಯಿಂದ ಕೂಡಿರುವಂತೆ ಇರುತ್ತದೆ. ಆದರೆ ಇವರ ಕಲ್ಪನೆಯಂತೆ ಸಂಭೋಗ ಕ್ರಿಯೆ ನಡೆಯದೆ ಇರುವಾಗ ಸಾಕಷ್ಟು ಬೇಸರಕ್ಕೆ ಒಳಗಾಗುವರು.

ಕುಂಭ

ಕುಂಭ

ಈ ವ್ಯಕ್ತಿಗಳು ಭಾವನಾತ್ಮಕ ವ್ಯಕ್ತಿಗಳು ಎಂದು ಹೇಳಲಾಗುತ್ತದೆ. ಜೊತೆಗೆ ಸಾಕಷ್ಟು ಒಂಟಿಯಾಗಿರಲು ಬಯಸುವರು. ಇವರು ತಮ್ಮ ಸಂಗಾತಿಯೊಂದಿಗೆ ಇರಲು ಬಯಸುತ್ತಾರೆ ಆದರೂ ಅನೇಕ ಕಾರಣಗಳಿಂದ ಸಂಬಂಧಗಳಿಂದ ದೂರ ಉಳಿಯುವ ಪ್ರಯತ್ನ ಮಾಡುವುದು ಉಂಟು. ವಾಸ್ತವವಾಗಿ ತಮ್ಮ ಪ್ರೀತಿಪಾತ್ರರನ್ನು ಅಥವಾ ಸಂಗಾತಿಯನ್ನು ಅತ್ಯಂತ ಗಾಢವಾಗಿ ಪ್ರೀತಿಸುತ್ತಾರೆ. ಆದರೆ ಕೆಲವು ಸನ್ನಿವೇಶಗಳಿಂದ ಸುಲಭವಾಗಿ ಸಿಟ್ಟಿಗೇಳುತ್ತಾರೆ.

ಕುಂಭ

ಕುಂಭ

ಇವರಿಗೆ ತಾಳ್ಮೆಯು ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇವರು ಅಂದುಕೊಂಡಿದ್ದು ಕೊಂಚ ತಡವಾದರೂ ಬಹಳ ಸಿಟ್ಟನ್ನು ತೋರುವರು. ಜೊತೆಗೆ ತಮ್ಮ ಸಂಗಾತಿಯೊಂದಿಗೆ ಸಂಭೋಗ ಹೊಂದುವ ವಿಚಾರದಲ್ಲೂ ನಿರೀಕ್ಷೆಗಳು ಸೂಕ್ತ ರೀತಿಯಲ್ಲಿ ನೆರವೇರದೆ ಇದ್ದಾಗ ಸಾಕಷ್ಟು ಮನನೊಂದುಕೊಳ್ಳುವರು. ಕೆಲವೊಮ್ಮೆ ಅದನ್ನೇ ಅವರು ಸವಾಲಾಗಿಯೂ ಸ್ವೀಕರಿಸುವ ಸಾಧ್ಯತೆಗಳಿರುತ್ತವೆ.

English summary

zodiacs-who-hate-to-cuddle-after-sex

The best thing a partner expects after a good session of romping is a cuddle and a sound sleep. But what if your partner is not willing to do that and seems to be least interested in sleeping over with you, cuddling, after the session? Well, there are chances that this can be due to the zodiac sign of your partner, as astrologers reveal about the zodiac signs the individuals of which hate to cuddle after sex!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more