ಮುಂಬರಲಿರುವ ದಿನಗಳಲ್ಲಿ ಈ 2 ರಾಶಿಯವರು ಮುಟ್ಟಿದ್ದೆಲ್ಲಾ ಸೋಲಾಗಲಿದೆ!

Posted By: Deepu
Subscribe to Boldsky

ಗ್ರಹಗಳು ತಮ್ಮ ಕಕ್ಷೆಯಿಂದ ಸಂಚಾರವನ್ನು ನಿರಂತರವಾಗಿ ನಡೆಸುತ್ತಲೇ ಇರುತ್ತವೆ. ಇವುಗಳ ಸಂಚಾರದ ಪ್ರಭಾವದಿಂದ ರಾಶಿಚಕ್ರಗಳ ಮೇಲೆ ಗಣನೀಯವಾದ ಪ್ರಭಾವ ಬೀರುತ್ತಲೇ ಇರುತ್ತವೆ. ಅವು ಧನಾತ್ಮಕವಾಗಿಯೇ ಇರಬಹುದು ಅಥವಾ ಋಣಾತ್ಮಕ ಪರಿಣಾಮಗಳೇ ಇರಬಹುದು. ಅದರಂತೆಯೇ ಬುಧ ಗ್ರಹವು ಸಾಮಾನ್ಯವಾಗಿ ಸೂರ್ಯನ ಸುತ್ತ ಸುತ್ತುವಾಗ ರಾಶಿಚಕ್ರಗಳ ಮೇಲೆ ಅಗಾಧವಾದ ಪ್ರಭಾವ ಬೀರುವುದು ಎಂದು ಹೇಳಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರ ಹಾಗೂ ವಕ್ರ ದೃಷ್ಟಿಗಳು ವ್ಯಕ್ತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದು. ಈ ಬಾರಿಯ ಬುಧನ ಹಿಮ್ಮುಖ ಚಲನೆಯಿಂದ ಎರಡು ರಾಶಿಯವರ ಮೇಲೆ ಅಗಾಧವಾದ ಬದಲಾವಣೆ ಅಥವಾ ಪರಿಣಾಮವನ್ನುಂಟುಮಾಡುವುದು. ಹಾಗಾದರೆ ಆ ಎರಡು ರಾಶಿಗಳು ಯಾವವು? ಅವುಗಳ ಪರಿಣಾಮ ಏನು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಈ ರಾಶಿಯವರು ಉತ್ತಮ ಶಕ್ತಿಯಿಂದ ತುಳುಕುವ ಸಾಧ್ಯತೆಗಳಿವೆ. ಯಾವುದೇ ಅಂಜಿಕೆ ಅಥವಾ ಹಿಂಜರಿಕೆ ಇಲ್ಲದೆ ಬಯಸಿದ ಕೆಲಸವನ್ನು ಮಾಡಲು ಮುಂದಾಗುವರು. ಅದರಲ್ಲಿ ಅವರು ಸೋಲುತ್ತಾರೆ ಎಂದು ಅನಿಸಿದರೂ ಮುಂದೆ ಸಾಗಲು ಪ್ರಯತ್ನಿಸುತ್ತಾರೆ. ಇವರ ಕೆಲವು ವರ್ತನೆಗಳಿಂದಾಗಿ ಜನರು ಇವರಿಂದ ದೂರ ಹೋಗುವ ಸಾಧ್ಯತೆಗಳಿವೆ. ಇದು ಅನಗತ್ಯ ಅವ್ಯವಸ್ಥೆ ಹಾಗೂ ಸುತ್ತಲಿನ ಜನರಿಗೆ ತೊಂದರೆಯನ್ನುಂಟುಮಾಡುವುದು.

ಮೇಷ: (ಮುಂದುವರಿದ ಭಾಗ)

ಮೇಷ: (ಮುಂದುವರಿದ ಭಾಗ)

ಇವರಿಗೆ ತಪ್ಪಾದ ಗ್ರಹಿಕೆ ಉಂಟಾದಾಗ ಇವರು ಮಾಡಬಹುದಾದ ಉತ್ತಮ ವಿಷಯವೆಂದರೆ ವಿರಾಮ ಮತ್ತು ಅದರ ಆಲೋಚನೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದರೂ ಚರ್ಚೆಯ ನಿಜವಾದ ಅರ್ಥವನ್ನು ಹೆಚ್ಚು ಸ್ಪಷ್ಟತೆಯೊಂದಿಗೆ ತಲುಪುತ್ತದೆ ಎಂದು ಹೇಳಲಾಗುವುದು.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಬುಧನ ಪರಿವರ್ತನೆಯ ಪರಿಣಾಮವನ್ನು ಇತರ ರಾಶಿಚಕ್ರದವರಿಗೆ ಹೋಲಿಸಿದರೆ ಈ ರಾಶಿಯವರಿಗೆ ಹೆಚ್ಚು ಕಠಿಣವಾದ ಪ್ರಭಾವ ಬೀರುವನು ಎಂದು ಹೇಳಲಾಗುತ್ತದೆ. ಇವರ 11ನೇ ಮನೆಯ ಸ್ನೇಹಕ್ಕಾಗಿ ಸಹ ಸಂಭವಿಸುವುದು. ಇದರ ಪರಿಣಾಮವಾಗಿ ಅಧಿಕ ಪ್ರಮಾಣದ ಅವ್ಯವಸ್ಥೆಯನ್ನು ಇವರು ಅನುಭವಿಸುತ್ತಾರೆ. ಇವರು ಕೆಲವು ವಿಚಾರದಲ್ಲಿ ಅಲೆದಾಟ ಹಾಗೂ ಸೋಲನ್ನು ಅನುಭವಿಸಬೇಕಾಗುವುದು.

ಮಿಥುನ: (ಮುಂದುವರಿದ ಭಾಗ)

ಮಿಥುನ: (ಮುಂದುವರಿದ ಭಾಗ)

ಕೆಲವು ವಾರಗಳ ಕಾಲ ನಿಮಗೆ ಕಠಿಣವಾದ ಸಮಯ ಮತ್ತು ಕಲ್ಲು ಹೂವಿನಂತಹ ಪರಿಸ್ಥಿತಿ ಎದುರಾಗುವುದು. ಆದರೆ ಒಂದಿಷ್ಟು ಸಮಯದ ನಂತರ ಸಮಸ್ಯೆ ದೂರಾಗುವುದು. ಇವರು ತಮ್ಮ ಸ್ನೇಹಿತರೊಂದಿಗೆ ಸಂಭಾಷಣೆ ನಡೆಸುವುದು ಸೂಕ್ತ. ಗರಿಷ್ಟ ಪ್ರಮಾಣದ ಕರುಣೆ ಮತ್ತು ಸಾಂತ್ವನವನ್ನು ಪಡೆಯಬಹುದು. ಇವರು ನಿರಾಶೆಯ ಭಾವದಲ್ಲಿರುವಾಗ ಅನಗತ್ಯವಾದ ಚರ್ಚೆಯಲ್ಲಿ ಭಾಗವಹಿಸದಿರುವಂತೆ ಎಚ್ಚರಿಕೆ ವಹಿಸುವುದು ಸೂಕ್ತ.

English summary

zodiacs-that-will-have-the-worst-mercury-retrograde

When Mercury is said to roll back into its orbit around the sun, there is said to be a lot of exchanging of information that is known to take place, which will be jeopardized and this will lead to a lot of misunderstandings galore. Here, in this article, we are revealing to you the set of zodiac signs that will be affected by the Mercury retrograde the most. Find out if your zodiac sign is listed among the two...