Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಪರಸ್ಪರ ಆಕರ್ಷಣೆಗೆ ಒಳಗಾಗಿ ದೂರವಾಗುವ ರಾಶಿಗಳು
ನಾವು ಯಾರನ್ನೋ ತುಂಬಾ ಇಷ್ಟಪಟ್ಟಿರುತ್ತೇವೆ. ಪ್ರತಿಯೊಂದು ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ. ಇದು ಸರಿಯಾದ ಜೋಡಿ ಎಂದು ಭಾವಿಸಲು ಆರಂಭಿಸಿದ ವೇಳೆ ಏನೋ ಕಾರಣಕ್ಕಾಗಿ ಇಬ್ಬರು ದೂರವಾಗುತ್ತೇವೆ. ಇದು ಕೇವಲ ಹೆಣ್ಣು ಮತ್ತು ಗಂಡು ಆಗಿರಬೇಕೆಂದಿಲ್ಲ. ಗೆಳತಿಯರು ಅಥವಾ ಗೆಳೆಯರ ಮಧ್ಯೆ ಕೂಡ ಹೀಗೆ ಆಗಬಹುದು. ಇದರಿಂದ ನಿಮಗೆ ಗೊಂದಲ ಮೂಡಿ ಎಲ್ಲವೂ ಸರಿಯಾಗಿಲ್ಲವಿಲ್ಲವೆನ್ನುವ ಭಾವನೆ ಮೂಡುವುದು.
ಆದರೆ ಇದೆಲ್ಲವೂ ನಡೆಯುವುದು ನಿಮ್ಮ ರಾಶಿಚಕ್ರದಿಂದಾಗಿ ಎಂದು ನಿಮಗೆ ತಿಳಿದಿದೆಯಾ? ಆರಂಭದಲ್ಲಿ ಪ್ರಾಣ ಸ್ನೇಹಿತರಂತೆ ಅಥವಾ ಅಮರ ಪ್ರೇಮಿಗಳಂತೆ ಇರುವ ರಾಶಿಚಕ್ರಗಳ ಹೊಂದಾಣಿಕೆ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದು ಆರಂಭದಲ್ಲಿ ಉತ್ತಮವಾಗಿದ್ದರೂ ಬಳಿಕ ಪ್ರೀತಿ ಕುಂದುಲಿದೆ. ಇದು ಹೇಗೆ ಎಂದು ತಿಳಿಯಿರಿ.
ಮೇಷ ಮತ್ತು ಕರ್ಕಾಟಕ
ಈ ರಾಶಿಗಳೆರಡು ಅತ್ಯುತ್ಸಾಹದಿಂದ ತುಂಬಿದ ತುಂಬಾ ಆಸಕ್ತಿದಾಯಕವಾದ ಸಂಬಂಧದಲ್ಲಿ ತೊಡಗಿಕೊಳ್ಳುವುದು. ಇವರ ಮೊದಲ ನೋಟದ ಪ್ರೀತಿ ಯಾವ ಮಟ್ಟದ್ದಾಗಿರುತ್ತದೆ ಎಂದರೆ ಅವರು ಒಂದು ದಿಢೀರ್ ನಿರ್ಧಾರ ತೆಗೆದುಕೊಂಡು, ಮದುವೆಯಾಗಿಬಿಡುವರು. ಆದರೆ ಇವರು ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಬೇಕು. ಯಾಕೆಂದರೆ ಪ್ರೀತಿಯು ಮೊದಲಿನಂತೆ ಇಲ್ಲವೆನ್ನುವುದು ಇವರಿಗೆ ಮನವರಿಕೆಯಾಗುವುದು. ಸಮಯ ಕಳೆದಂತೆ ಇವರಿಬ್ಬರ ಸಂಬಂಧದಲ್ಲಿ ಯಾವುದೇ ರೀತಿಯ ಆಕರ್ಷಣೆಯು ಉಳಿದಿಲ್ಲವೆನ್ನುವುದು ಇವರಿಗೆ ಮನವರಿಕೆಯಾಗುವುದು.

ವೃಷಭ ಮತ್ತು ಧನು
ಇವರು ತುಂಬಾ ಭಿನ್ನವಾಗಿರುವ ಹಿನ್ನೆಲೆಯಲ್ಲಿ ಆರಂಭದಲ್ಲಿ ಇವರು ಪರಸ್ಪರ ಆಕರ್ಷಣೆಗೆ ಒಳಗಾಗುವರು. ಇವರಿಬ್ಬರ ನಡುವಿನ ಭಿನ್ನ ಗುಣಗಳು ಇವರನ್ನು ಆರಂಭದಲ್ಲಿ ತುಂಬಾ ಆಕರ್ಷಣೆಗೆ ಒಳಗಾಗುವಂತೆ ಮಾಡುವುದು. ಆದರೆ ಕೆಲವೇ ಸಮಯದಲ್ಲಿ ಈ ಆಕರ್ಷಣೆ ಕಡಿಮೆಯಾಗುವುದು. ಯಾಕೆಂದರೆ ಧನು ರಾಶಿಯವರು ಅನಿರೀಕ್ಷಿತ ಮತ್ತು ಸಾಹಸಪ್ರವೃತ್ತಿಯವರು. ವೃಷಭ ರಾಶಿಯವರು ತುಂಬಾ ಸರಳ ಹಾಗೂ ಸ್ಥಿರ ವ್ಯಕ್ತಿಗಳು. ವೃಷಭ ರಾಶಿಯವರು ಧನು ರಾಶಿಯವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವರು. ಆದರೆ ಯಾವುದು ಕೂಡ ಧನು ರಾಶಿಯವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಇದೇ ಇವರ ಸಂಬಂಧದಲ್ಲಿ ಬಿರುಕು ಉಂಟು ಮಾಡುವುದು.
ಮಿಥುನ ಮತ್ತು ಮೀನ
ಮೀನ ರಾಶಿಯವರು ತುಂಬಾ ಭಾವೋದ್ವೇಗಿಗಳು ಎಂದು ಹೇಳಬಹುದು. ಅದೇ ರೀತಿ ಮಿಥುನ ರಾಶಿಯವರು ತುಂಬಾ ಸಂತೋಷ ಮತ್ತು ಅದೃಷ್ಟದಿಂದ ಇರಲು ಬಯಸುವವರು. ಮಿಥುನ ರಾಶಿಯವರು ಮೀನ ರಾಶಿಯವರಲ್ಲಿ ಆಸಕ್ತಿ ತೋರಿಸಬಹುದು. ಇದು ಅವರ ಒಳಗಿನ ಕ್ರಿಯಾತ್ಮಕತೆಯಿಂದ. ಇದು ದೀರ್ಘಕಾಲದ ತನಕ ಉಳಿಯುವುದಿಲ್ಲ. ಮಿಥುನ ರಾಶಿಯವರ ಮುಕ್ತಸ್ಪೂರ್ತಿಯ ಸ್ವಭಾವವು ಮೀನ ರಾಶಿಯವರಿಗೆ ಹಿಡಿಸಲ್ಲ. ಯಾಕೆಂದರೆ ಮೀನ ರಾಶಿಯವರು ಬೇಗನೆ ಹೊಟ್ಟೆಕಿಚ್ಚು ಪಡುವರು.
ಕರ್ಕಾಟಕ ಮತ್ತು ಮಕರ
ಈ ಎರಡು ರಾಶಿಯಗಳು ತುಂಬಾ ಉತ್ಸಾಹದಿಂದ ಆಕರ್ಷಣೆಗೆ ಒಳಗಾಗುವರು. ಲೈಂಗಿಕ ಹೊಂದಾಣಿಕೆಯ ಉತ್ಸಾಹ ಮತ್ತು ಭರವಸೆಯು ಈ ಎರಡು ರಾಶಿಗಳು ಆಕರ್ಷಣೆಗೆ ಒಳಗಾಗುವಂತೆ ಮಾಡುವುದು. ಆದರೆ ಸಮಯ ಕಳೆದಂತೆ ಇವರಿಬ್ಬರ ನಡುವಿನ ಆಕರ್ಷಣೆಯು ಕೇವಲ ಚರ್ಮಕ್ಕೆ ಮಾತ್ರ ಸೀಮಿತ, ಯಾವುದೇ ರೀತಿಯ ಸಾಮಾನ್ಯ ಹೊಂದಾಣಿಕೆ ಇಲ್ಲವೆಂದು ತಿಳಿದುಬರುವುದು. ಇದನ್ನು ಹೊರತುಪಡಿಸಿ, ಇವರು ಯಾವಾಗಲೂ ಹಾರ್ಮೋನುಗಳ ಉಲ್ಬಣದಿಂದ ಸವಾರಿ ಮಾಡದೆ ಇರುವ ಕಾರಣದಿಂದಾಗಿ ಇವರ ಜೀವನಶೈಲಿ ಮತ್ತು ಹೊಂದಾಣಿಕೆಯು ಪರಸ್ಪರರಿಗೆ ಹೊಂದಾಣಿಕೆಯಾಗುವುದು ಎಂದುಕೊಳ್ಳುವರು.
ಸಿಂಹ ಮತ್ತು ಕನ್ಯಾ
ಇತರರನ್ನು ಸೆಳೆಯುವುದು ಸಿಂಹ ರಾಶಿಯವರಿಗೆ ತುಂಬಾ ಸುಲಭ. ಯಾಕೆಂದರೆ ಇವರ ವ್ಯಕ್ತಿತ್ವವು ಆತ್ಮವಿಶ್ವಾಸ ಮತ್ತು ಬೆಡಗಿನಿಂದ ಕೂಡಿರುವುದು. ಕನ್ಯಾ ರಾಶಿಯವರು ಕಠಿಣ ಪರಿಶ್ರಮಿಗಳು ಮತ್ತು ಶ್ರದ್ಧೆಯಿಂದ ಇರುವವರು. ಇತರರು ಕೆಲಸ ಮಾಡುವುದನ್ನು ಸಿಂಹ ರಾಶಿಯವರು ಇಷ್ಟಪಡುವರು. ಕನ್ಯಾ ರಾಶಿಯವರು ಬಗ್ಗಲು ನಿರಾಕರಿಸುವಾಗ ಮತ್ತು ಸಿಂಹದ ತಪ್ಪುಗಳನ್ನು ಹುಡುಕಿದಾಗ ಇವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವುದು. ಬೇರೆಯವರು ತಮ್ಮ ತಪ್ಪುಗಳ ಬಗ್ಗೆ ಮಾತನಾಡುವುದು ಸಿಂಹ ರಾಶಿಯವರಿಗೆ ಯಾವತ್ತೂ ಇಷ್ಟವಾದು. ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವುದು.
ಕನ್ಯಾ ಮತ್ತು ಮೇಷ
ಕನ್ಯಾ ರಾಶಿಯವರು ಬಂಡಾಯ ಮತ್ತು ಸಾಹಸಪ್ರವೃತ್ತಿಯವರು. ಇನ್ನೊಂದು ಕಡೆಯಲ್ಲಿ ಮೇಷ ರಾಶಿಯವರು ತುಂಬಾ ಉತ್ತೇಜಿಸುವವರು. ಕನ್ಯಾ ರಾಶಿಯವರು ಮೇಷ ರಾಶಿಯವರ ಆಕರ್ಷಣೆಗೆ ತುಂಬಾ ಕಠಿಣ ಮತ್ತು ಬೇಗನೆ ಬೀಳುವರು. ಆದರೆ ಕ್ರಮೇಣ ಮೇಷ ರಾಶಿಯ ಸ್ವಾಭಾವಿಕತೆಯು ಇವರಿಬ್ಬರ ಜೀವನದ ತತ್ವಗಳಿಗೆ ಹೊಂದಿಕೊಳ್ಳುವುದಿಲ್ಲವೆಂದು ತಿಳಿಯುತ್ತದೆ. ಕನ್ಯಾ ರಾಶಿಯವರು ತುಂಬಾ ಸಂಶೋಧನೆ ಮಾಡುವರು ಮತ್ತು ಸರಿಯಾಗಿ ತಯಾರಿ ನಡೆಸುವರು. ಅದೇ ಮೇಷ ರಾಶಿಯವರು ಜೀವನವನ್ನು ಬಂದಂತೆ ಸ್ವೀಕರಿಸುವರು.
ತುಲಾ ಮತ್ತು ಮಕರ
ತುಲಾ ಮತ್ತು ಮಕರ ರಾಶಿಯವರ ಆಕರ್ಷಣೆಯು ಪರಸ್ಪರದ್ದಾಗಿರುವುದು. ಆದರೆ ದೀರ್ಘಕಾಲದ ಯೋಜನೆಗಳಲ್ಲಿ ಇವರ ಬಗ್ಗೆ ಹೊಂದಾಣಿಕೆ ಬರುವುದಿಲ್ಲ. ತುಲಾ ರಾಶಿಯವರು ಯಾವಾಗಲೂ ಉದಾಸೀನ ಪ್ರವೃತ್ತಿಯವರು. ತುಂಬಾ ವ್ಯವಸ್ಥಿತವಾಗಿರುವಂತಹ ಮಕರ ರಾಶಿಯವರಿಗಾಗಿ ತುಲಾ ರಾಶಿಯವರು ಬದಲಾವಣೆ ಮಾಡಿಕೊಳ್ಳಲ್ಲ. ಇದರಿಂದ ಇವರಿಬ್ಬರ ನಡುವೆ ಹೊಂದಾಣಿಕೆ ಕೊರತೆ ಬಂದು ಜಗಳವಾಗುವುದು. ಬೇರ್ಪಡುವುದೇ ಇವರಿಗೆ ಸರಿಯಾದ ಮಾರ್ಗ.
ವೃಶ್ಚಿಕ ಮತ್ತು ಧನು
ಈ ರಾಶಿಗಳೆರಡು ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೆ ತೂರಿ ಮತ್ತು ತಮ್ಮ ಸ್ನೇಹಿತರು ಹಾಗೂ ಹಿತೈಷಿಗಳ ಸಲಹೆಗಳಿಗೆ ಕಿವಿಗೊಡದೆ ಒಂದಾಗುವರು. ವೃಶ್ಚಿಕ ರಾಶಿಯವರು ಸ್ವಾಮ್ಯಸೂಚಕವಾಗಿರುವ ಕಾರಣದಿಂದಾಗಿ ಇವರಿಗೆ ಮನೆಯೆಂದರೆ ತುಂಬಾ ಇಷ್ಟ. ಇವರು ಕುಟುಂಬಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗಿಯಾಗುವರು ಮತ್ತು ತನ್ನ ಜತೆಗಾರರಿಂದ ಕೂಡ ಇದನ್ನೇ ಬಯಸುವರು. ಆದರೆ ಅಲೆಮಾರಿ ಸ್ವಭಾವ ಹೊಂದಿರುವಂತಹ ಧನು ರಾಶಿಯವರಿಗೆ ಇದು ಸರಿಯಾಗಿ ಹೊಂದಲ್ಲ. ಇವರಿಗೆ ಇದು ಕಟ್ಟಿಹಾಕಿದಂತೆ ಆಗಬಹುದು.
ಧನು ಮತ್ತು ಕರ್ಕಾಟಕ
ಈ ಜೋಡಿಯು ತಮ್ಮ ಸ್ನೇಹಿತರ ವಲಯದಲ್ಲಿ ತುಂಬಾ ಗಾಸಿಪ್ ಮತ್ತು ನಾಟಕವನ್ನು ಸೃಷ್ಟಿ ಮಾಡುವುದು. ಎರಡು ರಾಶಿಗಳಲ್ಲಿ ಬಂಡಾಯದ ಗುಣವಿರುವುದು ಮತ್ತು ಒಬ್ಬರು ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇವರಲ್ಲಿ ನಿಜವಾದ ತೀವ್ರತೆ ಮತ್ತು ಉಲ್ಲಾಸದ ಕ್ಷಣಗಳನ್ನು ಜತೆಯಾಗಿ ಕಳೆದಿರುವ ಕಾರಣ ಈ ಸಂಬಂಧದಿಂದ ದೂರವಾಗುವುದು ಮತ್ತು ಮೋಸ ಮಾಡುವುದು ಅವರ ಸಂಬಂಧದ ಮೇಲೆ ಪರಿಣಾಮ ಬೀರಲಿದೆ. ಇವರು ಜೀವನದ ಭಿನ್ನವಾದ ದಾರಿಯಲ್ಲಿ ನಡೆಯಲಿದ್ದಾರೆ.
ಮಕರ ಮತ್ತು ಮೀನ
ಈ ರಾಶಿಗಳೆರಡು ಅದ್ಭುತವಾದ ಜೋಡಿಯಾಗಲಿದ್ದಾರೆ. ಪ್ರತಿಯೊಬ್ಬರು ಇವರನ್ನು ನೋಡುತ್ತಲಿರುವರು. ಸಮಾಜದಲ್ಲಿ ಈ ಜೋಡಿಗೆ ಹೆಚ್ಚಿನ ಗೌರವ ಮತ್ತು ಪ್ರೀತಿಯು ಸಿಗುವುದು. ಲೌಕಿಕವಾಗಿರುವ ಮಕರ ರಾಶಿಯವರನ್ನು ಸಮತೋಲನದಲ್ಲಿ ಇಡುವುದು ಮುಖ್ಯ. ಮೀನ ರಾಶಿಯವರು ತುಂಬಾ ವಿಚಿತ್ರ ಮತ್ತು ಕ್ರಿಯಾತ್ಮಕ ವ್ಯಕ್ತಿಗಳು. ಈ ಗುಣಗಳೇ ಇವೆರಡು ರಾಶಿಯವರನ್ನು ಜತೆಯಾಗಿರುವಂತೆ ಮಾಡಿದೆ. ಸರಿಯಾದ ಸಮತೋಲವಿಲ್ಲದೆ ಇದ್ದರೆ ಇವರ ಸಂಬಂಧದಲ್ಲಿ ಬಿರುಕು ಬರುವುದು.
ಕುಂಭ ಮತ್ತು ಸಿಂಹ
ಈ ಜೋಡಿ ಕೂಡ ತುಂಬಾ ಪ್ರಭಾವಿಯಾಗಿರುವುದು. ಎರಡು ರಾಶಿಯವರಲ್ಲಿ ನೈಸರ್ಗಿಕವಾಗಿ ಸೆಳೆಯುವಂತಹ ಚರಿಷ್ಮಾ ಇರುವುದು. ಸಿಂಹ ರಾಶಿಯವರು ಯಾವಾಗಲೂ ತಾವು ಆಕರ್ಷಣೆಯ ಕೇಂದ್ರ ಬಿಂದುವಾಗಿರಬೇಕೆಂದು ಬಯಸುವರು. ಅದೇ ಕುಂಭ ರಾಶಿಯವರು ವಿರಳತೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವರು. ಸಮಯ ಸಾಗಿದಂತೆ ಈ ಸಂಬಂಧಲ್ಲಿ ಕೂಡ ಸಮಸ್ಯೆಗಳು ಕಂಡುಬರುವುದು. ಯಾಕೆಂದರೆ ಜೀವನದ ಕಡೆಗೆ ಇವರಿಬ್ಬರ ದೃಷ್ಟಿಕೋನವು ಭಿನ್ನವಾಗಿರುವುದು.
ಮೀನ ಮತ್ತು ಮೇಷ
ಮೀನ ರಾಶಿಯವರು ತುಮಬಾ ಸೂಕ್ಷ್ಮ ಹಾಗೂ ಕಾಳಜಿ ಇರುವ ವ್ಯಕ್ತಿಗಳು. ಮೇಷ ರಾಶಿಯವರು ಮೊಂಡು ಹಾಗೂ ನೇರವ್ಯಕ್ತಿತ್ವದವರು. ಈ ನಡವಳಿಕೆಗಳೇ ಇವರಿಬ್ಬರ ಸಂಬಂಧದಲ್ಲಿ ಬಿರುಕು ಉಂಟುಮಾಡುವುದು. ಒಬ್ಬ ವ್ಯಕ್ತಿಯ ಚಿಂತನೆಯನ್ನು ಮತ್ತೊಬ್ಬರು ಒಪ್ಪಿಕೊಳ್ಳದೇ ಇರುವಾಗ ಸಮಸ್ಯೆಗಳು ತಾನಾಗಿಯೇ ಬರುವುದು.



Click it and Unblock the Notifications











