For Quick Alerts
ALLOW NOTIFICATIONS  
For Daily Alerts

ಈ 6 ರಾಶಿಯವರು ಸ್ವಲ್ಪ ಕಠಿಣ ವ್ಯಕ್ತಿಗಳಂತೆ ಕಾಣುತ್ತಾರೆ... ಆದರೆ ಬಹಳ ನಾಚಿಕೆ ಸ್ವಭಾವದವರಾಗಿರುತ್ತಾರೆ...

By Deepu
|

ಸಾಮಾನ್ಯವಾಗಿ ಹೆಚ್ಚಿನವರು ವ್ಯಕ್ತಿಯನ್ನು ನೋಡಿದಾಗ ಅವರ ಹಾವ-ಭಾವಗಳ ಆಧಾರದ ಮೇಲೆಯೇ ವ್ಯಕ್ತಿ ಏನೆಂದು ನಿರ್ಧರಿಸುತ್ತಾರೆ. ಆದರೆ ವ್ಯಕ್ತಿ ನಮ್ಮ ನಿರ್ಧಾರಗಳಿಗೆ ಸೂಕ್ತವಾಗಿದ್ದಾನೆಯೇ? ಇಲ್ಲವೇ? ಎನ್ನುವುದನ್ನು ಪರಿಗಣಿಸುವುದಿಲ್ಲ. ಮನೋವಿಜ್ಞಾನಗಳನ್ನು ಅರಿತಿರುವವರು ಹಾಗೂ ಸೂಕ್ಷ್ಮ ಪ್ರವೃತ್ತಿಯವರು ಮಾತ್ರ ವ್ಯಕ್ತಿಯ ವರ್ತನೆ ಹಾಗೂ ಆಳವಾದ ನಿಜ ಕಲ್ಪನೆಯ ಮೂಲಕ ವ್ಯಕ್ತಿತ್ವದ ನಿಜ ಮುಖವನ್ನು ಅರಿತಿರುತ್ತಾರೆ. ಅವರನ್ನು ಹೊರತು ಪಡಿಸಿದರೆ ಉಳಿದವರೆಲ್ಲಾ ಮೇಲ್ನೋಟದ ವಿಚಾರದಿಂದಲೇ ವ್ಯಕ್ತಿಯ ವ್ಯಕ್ತಿತ್ವವನ್ನು ಅಂದಾಜಿಸುತ್ತಾರೆ.

ಮನೋವಿಜ್ಞಾನದ ಪ್ರಕಾರ ಕೆಲವು ವ್ಯಕ್ತಿಗಳು ಮೇಲ್ನೋಟಕ್ಕೆ ಬಹಳ ಹಠಮಾರಿಗಳು ಅಥವಾ ಕಠಿಣ ವ್ಯಕ್ತಿಗಳಂತೆ ಕಂಡು ಬರುತ್ತಾರೆ. ಆದರೆ ವಾಸ್ತವದಲ್ಲಿ ಅವರು ಹಾಗೆ ಇರುವುದಿಲ್ಲ. ಹೊರ ಪ್ರಪಂಚಕ್ಕೆ ಕಾಣಿಸಿ ಕೊಳ್ಳುವುದಕ್ಕಿಂತ ವಿಭಿನ್ನ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಚಕ್ರದವರ ಬಾಹ್ಯ ವ್ಯಕ್ತಿತ್ವ ಒರಟಾಗಿರುವಂತೆ ಕಂಡು ಬಂದರೂ ಆಂತರ್ಯದಲ್ಲಿ ಬಹಳ ಮೃದು ಸ್ವಭಾವದವರಾಗಿರುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿ ಚಕ್ರಗಳು ಯಾವವು? ಅವರ ವ್ಯಕ್ತಿತ್ವ ಹೇಗಿರುತ್ತದೆ? ನಿಮ್ಮ ರಾಶಿಚಕ್ರವೂ ಈ ಪಟ್ಟಿಯಲ್ಲಿ ಇದೆಯೇ? ಎನ್ನುವುದನ್ನು ಪರಿಶೀಲಿಸಲು ಮುಂದಿರುವ ವಿವರಣೆಯನ್ನು ನೋಡಿ ಅರಿಯಿರಿ...

ಮೇಷ

ಮೇಷ

ಮೇಷ ರಾಶಿಯವರು ಸಾಮಾನ್ಯವಾಗಿ ಕೆಚ್ಚೆದೆಯ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ.. ತಮ್ಮ ಕೆಲಸಕ್ಕಾಗಿ ಇತರರ ಮೇಲೆ ಅವಲಂಬಿತರಾಗಿರುವುದಿಲ್ಲ. ಹಾಗಾಗಿ ಇವರು ಹೊರ ನೋಟದಲ್ಲಿ ಬಹಳ ಕಠಿಣ ವ್ಯಕ್ತಿಗಳಂತೆ ತೋರುತ್ತಾರೆ. ಇವರು ಕೆಲವೊಮ್ಮೆ ಕಟ್ಟು ನಿಟ್ಟಿನ ನಿರ್ಧಾರಗಳನ್ನು ವ್ಯಕ್ತಪಡಿಸುತ್ತಾರೆ. ನೇರವಾದ ನಡೆ ನುಡಿಗಳು ಕೆಲವೊಮ್ಮೆ ಗೊಂದಲವನ್ನುಂಟುಮಾಡಬಹುದು. ಆದರೆ ನೈಜ ಅಂತರಾಳದ ಭಾವನೆಯಲ್ಲಿ ಇವರು ಹೃದಯವಂತರು. ತಮ್ಮ ಸ್ನೇಹಿತರು ಹಾಗೂ ಕುಟುಂಬದವರು ಎನ್ನುವ ವಿಷಯ ಬಂದಾಗ ಉತ್ತಮ ಕಾವಲುಗಾರರಾಗಿ ನಿಲ್ಲುತ್ತಾರೆ. ತಮ್ಮ ಮನಸ್ಸಿನಲ್ಲಿ ಬಹಳಷ್ಟು ಭಾವನೆಗಳನ್ನು ಇಟ್ಟು ಕೊಂಡಿರುತ್ತಾರೆ. ಇತರರಿಗೆ ತೊಂದರೆ ಉಂಟಾದಾಗ ಇವರ ಕಣ್ಣಲ್ಲಿ ನೀರು ಬರುವುದು. ಹಾಗಾಗಿ ಇವರನ್ನು ಬಹಳ ಸೂಕ್ಷ್ಮ ಪ್ರವೃತ್ತಿಯವರು ಎಂದು ಹೇಳಬಹುದು.

ಸಿಂಹ

ಸಿಂಹ

ಈ ರಾಶಿಯವರು ಕಪ್ಪೆ ಚಿಪ್ಪಿನಷ್ಟು ಕಠಿಣ ಮನಸ್ಸಿನವರು ಎಂದು ಹೇಳಲಾಗುವುದು. ವಿರಳವಾದ ಕಿರುನಗೆಯನ್ನು ಹೊಂದುವ ಇವರಲ್ಲಿ ಮೃದು ಸ್ವಭಾವವನ್ನು ಹುಡುಕಬೇಕು ಎನ್ನುವಂತೆ ಇರುತ್ತಾರೆ. ಇವರ ಬಹುತೇಕ ನಿರ್ಧಾರಗಳು ಹಾಗೂ ಮಾತುಗಳು ನೇರವಾಗಿಯೇ ಇರುತ್ತವೆ. ಅದರಿಂದ ಇತರರ ಮೇಲೆ ಹೇಗೆ ಪ್ರಭಾವ ಬೀರುವುದು ಎನ್ನುವುದುನ್ನು ಯೋಚಿಸದವರು ಎಂದು ಹೇಳಲಾಗುವುದು. ಇವರು ಮೇಲ್ನೋಟಕ್ಕೆ ಸೊಕ್ಕಿನ ವ್ಯಕ್ತಿ ಹಾಗೂ ನಾಯಕತ್ವ ಬಯಸುವವರು ಎನ್ನುವ ರೀತಿಯಲ್ಲಿ ಕಂಡು ಬಂದರೂ ಆಂತರ್ಯದಲ್ಲಿ ಬಹಳ ಮೃದು ಸ್ವಭಾವದವರಾಗಿರುತ್ತಾರೆ. ತನ್ನವರಿಗೆ ಇವರು ಸಾಕಷ್ಟು ಸಹಾಯ ಹಾಗೂ ಆಧಾರ ಸ್ತಂಭದಂತೆ ಇರುತ್ತಾರೆ. ಇವರು ವಿರಳವಾದ ಕಿರುನಗೆಯನ್ನು ಬೀರುವವರಾದರೂ ತಮ್ಮವರ ಕಷ್ಟಗಳನ್ನು ಅರಿತು ಅವರ ಸಂತೋಷಕ್ಕೆ ಕಾರಣರಾಗುವರು. ತಮ್ಮವರಿಗಾಗಿ ಸಾಕಷ್ಟು ತ್ಯಾಗ ಹಾಗೂ ಪ್ರೋತ್ಸಾಹವನ್ನು ನೀಡುವ ವ್ಯಕ್ತಿಗಳು ಇವರಾಗಿರುತ್ತಾರೆ.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರು ಮೋಜಿನ ಪ್ರೇಮಿಗಳು ಎಂದು ಹೇಳಲಾಗುವುದು. ತಮ್ಮ ನಗು ಹಾಗೂ ಕಠಿಣ ಸ್ವಭಾವದ ಮೂಲಕವೇ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುವವರು ಎಂದು ಹೇಳಲಾಗುತ್ತದೆ. ಇವರು ಯಾವುದೇ ವಿಚಾರವನ್ನಾದರೂ ಹೆಚ್ಚು ವಿಮರ್ಶಾತ್ಮಕ ಕಣ್ಣಿನಿಂದ ನೋಡುತ್ತಾರೆ ಎಂದು ಹೇಳಲಾಗುವುದು. ನೇರ ನುಡಿಯನ್ನು ಹೊಂದಿರುವ ಇವರು ಅತ್ಯಂತ ಕಠಿಣ ಹಾಘೂ ಸೊಕ್ಕಿನ ವ್ಯಕ್ತಿಗಳಂತೆ ತೋರುತ್ತಾರೆ. ಆದರೆ ಇವರ ಇನ್ನೊಂದು ಮುಖವು ಬಹಳ ಮೃದು ಗುಣದಿಂದ ಕೂಡಿದೆ. ತಮ್ಮವರು ಹಾಗೂ ಸ್ನೇಹಿತರಿಗಾಗಿ ಇವರ ಹೃದಯವು ಕರಗುವುದು. ಕಷ್ಟದಲ್ಲಿ ಇರುವವರಿಗೆ ದಾನ ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಇವರು ವಿನೋದ ಪ್ರೀತಿಯ ಮನಸ್ಥಿತಿಯನ್ನು ಹೊಂದಿರುತ್ತಾರೆ. ಬಹುಬೇಗ ಕ್ಷಮಿಸುವ ಪ್ರವೃತ್ತಿಯನ್ನು ಹೊಂದಿರುವ ಇವರು ತಮ್ಮ ತಪ್ಪುಗಳನ್ನು ಬಹುಬೇಗ ತಿದ್ದಿಕೊಳ್ಳುವವರು.

ವೃಶ್ಚಿಕ

ವೃಶ್ಚಿಕ

ಬಹಳ ಗಂಭೀರ ಪ್ರವೃತ್ತಿಯನ್ನು ಹೊಂದಿದ ಇವರು ಶ್ರಮಜೀವಿಗಳು. ಅಧಿಕ ಸಮಯವನ್ನು ತಮ್ಮ ಕೆಲಸದಲ್ಲಿಯೇ ಕಳೆಯುವ ಇವರು ಮಿತ ಮಾತುಗಾರರು ಎನ್ನಬಹುದು. ಗಂಭೀರ ಹಾಗೂ ಮೌನ ಪ್ರವೃತ್ತಿಯನ್ನು ಹೊಂದಿದವರಾಗಿದ್ದರೂ ಸಮುದ್ರದಷ್ಟು ಭಾವನೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ತಮ್ಮ ಭಾವನೆಗಳನ್ನು ಇತರರಿಗೆ ತೋರಿಸಿಕೊಳ್ಳುವುದಿಲ್ಲ. ಹಾಗೆಯೇ ಇತರರ ಭಾವನೆಗಳನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ. ಹಾಗಾಗಿಯೇ ಇವರು ಕಠಿಣ ಮನಸ್ಸಿನವರು ಎಮದು ಭಾವಿಸಲಾಗುವುದು. ತಮ್ಮವರಿಗಾಗಿ ಹೆಚ್ಚಿನ ರಕ್ಷಣೆ ಹಾಗೂ ಪ್ರೀತಿಯನ್ನು ನೀಡುವ ವ್ಯಕ್ತಿಗಳು ಇವರು.

ಧನು

ಧನು

ಈ ರಾಶಿಯವರು ಮೊಂಡು ಸ್ವಭಾವದ ವ್ಯಕ್ತಿಗಳು ಹಾಗೂ ಹೆಚ್ಚು ಮಾತುಕತೆಯನ್ನು ತೋರುವುದಿಲ್ಲ. ಶೀಘ್ರದಲ್ಲಿಯೇ ಕೋಪಕ್ಕೆ ಒಳಗಾಗುವುದು ಹಾಗೂ ಸುಲಭವಾಗಿ ಹಾನಿಯುಂಟುಮಾಡುವ ಗುಣವನ್ನು ಹೊಂದಿರುತ್ತಾರೆ. ಇತರರನ್ನು ಅಷ್ಟು ಸುಲಭವಾಗಿ ನಂಬದ ವ್ಯಕ್ತಿಗಳಾಗಿರುತ್ತಾರೆ. ಸತ್ಯದ ಪ್ರವೃತ್ತಿಯವರಾದ ಇವರು ಬಹುತೇಕ ಸಂದರ್ಭದಲ್ಲಿ ಕಠಿಣ ವ್ಯಕ್ತಿಗಳಂತೆ ತೋರುತ್ತಾರೆ. ಆದರೆ ಆಂತರ್ಯದಲ್ಲಿ ಉತ್ತಮ ಬಾವನೆಗಳು ಹಾಗೂ ಮೃದು ಸ್ವಭಾವ ಇರುತ್ತದೆ. ಕಿರುನಗೆ ನೀಡುವುದರ ಜೊತೆಗೆ ಸಣ್ಣ ಹಾಸ್ಯ ಹಾಗೂ ಬಹುಬೇಗ ಹೃದಯವನ್ನು ಗೆಲ್ಲುವ ಗುಣವನ್ನು ಹೊಂದಿರುತ್ತಾರೆ.

ಮೀನ

ಮೀನ

ಇವರು ಮಿತ ಮಾತುಗಾರಿಕೆಯನ್ನು ಹೊಂದಿರುವ ವ್ಯಕ್ತಿಗಳು. ಇವರು ತಮ್ಮ ಎಲ್ಲಾ ಭಾವನೆಗಳನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ಆದರೆ ಹೆಚ್ಚು ವಿಷಯಗಳನ್ನು ತಮ್ಮ ಹೃದಯಕ್ಕೆ ತೆಗೆದುಕೊಳ್ಳುತ್ತಾರೆ. ಹಾಗೊಮ್ಮೆ ನೀವು ಮೀನ ರಾಶಿಯವರ ಬಳಿ ಮಾತನಾಡಲು ಬಯಸಿದರೆ ಅವರ ಮನಸ್ಸಿನಲ್ಲಿ ಅನೇಕ ಭಾವನೆಗಳಿವೆ ಎನ್ನುವುದು ಅರ್ಥವಾಗುತ್ತದೆ. ಸಹಾಯವನ್ನು ಮಾಡುವ ಇವರು ಕರುಣಾ ಮಯಿಗಳು. ಕಷ್ಟ ಎಂದವರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ.

English summary

Zodiacs That Are Really 'Touch Me Nots'

Zodiac signs make it so easy for us when we have to know about the personality of a person. More so when some people seem something on the outside but are actually much different on the inner self. Aries, Leo, Virgo, Sagittarius and Pisces are the zodiac signs that seem tough but are actually 'touch me nots'.
X
Desktop Bottom Promotion