For Quick Alerts
ALLOW NOTIFICATIONS  
For Daily Alerts

ರಾಶಿಗೆ ಅನುಗುಣವಾಗಿ ಕೆಲವು ಜೀವನ ಸೂತ್ರಗಳನ್ನು ಪಾಲಿಸಲೇಬೇಕು...

By Deepu
|

ಜೀವನದಲ್ಲಿ ಕೆಲವೊಂದು ನೀತಿ ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಕೆಲವೊಂದು ಸೂತ್ರಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಅನುಸಾರವಾಗಿ ನಾವು ಜೀವನದಲ್ಲಿ ಮುನ್ನಡೆದರೆ ಅದರಿಂದ ಯಶಸ್ಸು ಕೂಡ ಲಭ್ಯವಾಗುವುದು. ಜೀವನದಲ್ಲಿ ಧನಾತ್ಮಕತೆ ಮತ್ತು ಅನುಭವ ಪಡೆಯಬೇಕಾದರೆ ಕೆಲವು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು.

ಜೀವನದಲ್ಲಿ ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಸೂತ್ರಗಳನ್ನು ಪಾಲಿಸಿಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದೆ. ರಾಶಿಗೆ ಅನುಗುಣವಾಗಿ ಯಾವ ಸೂತ್ರಗಳನ್ನು ಪಾಲಿಸಿಕೊಂಡು ಹೋಗಬೇಕು ಎಂದು ನೀವು ತಿಳಿಯಲು ಮುಂದೆ ಓದುತ್ತಾ ಸಾಗಿ....

ಮೇಷ: ಮಾರ್ಚ್ 21-ಎಪ್ರಿಲ್ 19

ಮೇಷ: ಮಾರ್ಚ್ 21-ಎಪ್ರಿಲ್ 19

"ಏನಿದೆಯೋ ಅದನ್ನು ಸ್ವೀಕರಿಸಿ, ಏನಾಯಿತೋ ಅದನ್ನು ಬಿಟ್ಟುಬಿಡಿ ಮತ್ತು ಏನು ಆಗಲಿದೆಯೋ ಅದರ ಮೇಲೆ ನಂಬಿಕೆಯನ್ನಿಡಿ''

ಜೀವನದಲ್ಲಿ ಮುಂದುವರಿಯಿರಿ. ಜೀವನ ಒಂದೇ ಇರುವುದು. ಇದನ್ನು ನೀವು ಸಂಪೂರ್ಣವಾಗಿ ಆನಂದಿಸಬೇಕು. ಹಿಂದಿನದರ ಬಗ್ಗೆ ಚಿಂತಿಸಬೇಡಿ.

ವೃಷಭ: ಎಪ್ರಿಲ್ 20-ಮೇ 20

ವೃಷಭ: ಎಪ್ರಿಲ್ 20-ಮೇ 20

"ಯೋಗ್ಯವಾಗಿರುವುದು ಅಷ್ಟು ಸುಲಭವಾಗಿ ಸಿಗದು''

ನೀವು ತುಂಬಾ ಕಠಿಣವಾಗಿ ಕೆಲಸ ಮಾಡಬೇಕು. ನೀವು ಕಠಿಣ ಪರಿಶ್ರಮ ಯಾಕೆ ಪಡೆಬೇಕು ಎನ್ನುವ ಕಾರಣ ಯಾವಾಗಲೂ ನೆನಪಿನಲ್ಲಿಡಿ. ಕಠಿಣ ಪರಿಶ್ರಮವು ಖಂಡಿತವಾಗಿಯೂ ನಿಮಗೆ ಯಶಸ್ಸು ತಂದುಕೊಡುವುದು.

ಮಿಥುನ: ಮೇ21-ಜೂನ್ 20

ಮಿಥುನ: ಮೇ21-ಜೂನ್ 20

"ಸರಿಯಲ್ಲದೆ ಇದ್ದರೆ ಅದನ್ನು ಮಾಡಬೇಡಿ. ಸತ್ಯವಲ್ಲದೆ ಇದ್ದರೆ ಅದನ್ನು ನುಡಿಯಬೇಡಿ''

ಸಾಮಾಜಿಕವಾಗಿ ತುಂಬಾ ಚಟುವಟಿಕೆಯಿಂದ ಇರುವ ನೀವು ಈ ಮಂತ್ರವನ್ನು ಪಾಲಿಸಿಕೊಂಡು ಹೋಗಬೇಕು. ನೀರಿನ ಹರಿವಿನೊಂದಿಗೆ ನೀವು ಹೋಗಬಾರದು ಎನ್ನುವುದನ್ನು ನೆನೆಪಿನಲ್ಲಿಡಿ. ನೀವು ಕೆಲವೊಂದನ್ನು ಇಷ್ಟಪಡಬಹುದು ಮತ್ತು ಇನ್ನು ಕೆಲವನ್ನು ಇಷ್ಟಪಡದೇ ಇರಬಹುದು. ಕೆಲವು ಸುಳ್ಳಾಗಿರಬಹುದು ಮತ್ತು ಇನ್ನು ಕೆಲವು ಸತ್ಯ. ನಿಮ್ಮ ಯೋಚನೆಗಳಂತೆ ಕೆಲಸ ಮಾಡಿ.

ಕರ್ಕಾಟಕ: ಜೂನ್ 21-ಜುಲೈ 22

ಕರ್ಕಾಟಕ: ಜೂನ್ 21-ಜುಲೈ 22

"ಭಾವನೆಗಳು ನಿಮ್ಮ ಬುದ್ಧಿವಂತಿಕೆಯನ್ನು ಮೀರದಿರಲಿ''

ಕೆಲವೊಂದು ಸಲ ನಿಮ್ಮನ್ನು ಊಹಿಸುವುದು ಕಷ್ಟ ಮತ್ತು ಭಾವನಾತ್ಮಕ ವಾಗಿರುವಿರಿ. ನೀವು ಯಾವಾಗಲೂ ಅಂತದೃಷ್ಟಿಯ ಭಾವನೆ ನೋಡುತ್ತಿರುತ್ತೀರಿ. ಆದರೆ ಕೆಲವೊಂದು ಸಲ ನೀವು ಪ್ರಾಯೋಗಿಕವಾಗಿಯೂ ಚಿಂತಿಸಬೇಕಾದ ಅಗತ್ಯವಿದೆ ಎನ್ನುವುದನ್ನು ತಿಳಿದುಕೊಳ್ಳಿ.

ಸಿಂಹ: ಜುಲೈ23-ಆಗಸ್ಟ್ 23

ಸಿಂಹ: ಜುಲೈ23-ಆಗಸ್ಟ್ 23

"ಎಲ್ಲವೂ ನಾನೇ ಅಲ್ಲ''

ನೀವು ತುಂಬಾ ಅಧಿಕಾರಯುತ ಸ್ವಭಾವದವರು ಮತ್ತು ವಿಶ್ವದಲ್ಲಿ ನೀವು ಒಬ್ಬರೇ ತುಂಬಾ ಪ್ರಾಮುಖ್ಯ ವ್ಯಕ್ತಿಯಲ್ಲ ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ನಡವಳಿಕೆ ಬದಲಾಯಿಸಿಕೊಳ್ಳಬೇಕು.

ಕನ್ಯಾ: ಆಗಸ್ಟ್ 24- ಸಪ್ಟೆಂಬರ್ 23

ಕನ್ಯಾ: ಆಗಸ್ಟ್ 24- ಸಪ್ಟೆಂಬರ್ 23

"ನಾನೇ ಸಾಕು''

ನೀವು ನಿಮ್ಮ ಬಗ್ಗೆ ಯೋಚಿಸುವುದನ್ನು ಮೊದಲು ಆರಂಭಿಸಬೇಕು. ನಿಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಾರೆ ಎನ್ನುವುದನ್ನೇ ನೀವು ಯಾವಾಗಲೂ ಚಿಂತಿಸುತ್ತಿರುತ್ತೀರಿ. ನೀವು ಏನಾದರೂ ಮಾಡಿದರೆ ಅವರು ಏನು ಭಾವಿಸುತ್ತಾರೆಯಾ ಎನ್ನುವ ಚಿಂತೆ ನಿಮಗೆ. ಇದಕ್ಕೆ ಬದಲಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

ತುಲಾ: ಸಪ್ಟೆಂಬರ್ 24-ಅಕ್ಟೋಬರ್ 23

ತುಲಾ: ಸಪ್ಟೆಂಬರ್ 24-ಅಕ್ಟೋಬರ್ 23

"ಹೃದಯದ ಮಾತು ಕೇಳಿ ಆದರೆ ಬುದ್ಧಿ ಕೂಡ ನಿಮ್ಮೊಂದಿಗಿರಲಿ''

ಒಳಜ್ಞಾನವು ತುಂಬಾ ಶ್ರೇಷ್ಠ ಶಕ್ತಿ. ನೀವು ಯಾವಾಗಲೂ ತುಂಬಾ ಪ್ರಾಯೋಗಿಕವಾಗಿ ಕಲಿಯಬೇಕು ಮತ್ತು ಹೃದಯ ಏನು ಹೇಳುತ್ತದೆ ಎನ್ನುವುದನ್ನು ಕೇಳಬೇಕು. ಆದರೆ ಅಂತಿಮವಾಗಿ ನಿಮ್ಮ ಹೃದಯದ ಬದಲಿಗೆ ಮೆದುಳಿನ ಮಾತನ್ನು ಕೇಳುವುದು ಅತೀ ಅಗತ್ಯ.

ವೃಶ್ಚಿಕ: ಅಕ್ಟೋಬರ್ 24-ನವಂಬರ್ 22

ವೃಶ್ಚಿಕ: ಅಕ್ಟೋಬರ್ 24-ನವಂಬರ್ 22

"ದಯೆಯಿಂದ ಅವುಗಳನ್ನು ಕೊಂದುಬಿಡಿ ಮತ್ತು ನಗುವಿನಿಂದ ಧಪನ ಮಾಡಿ''

ಆಕ್ರಮಣಶೀಲತೆಯು ತುಂಬಾ ದೊಡ್ಡ ಸಮಸ್ಯೆ. ನಿಮ್ಮ ಕೋಪವನ್ನು ತಡೆದುಕೊಳ್ಳಬೇಕು ಮತ್ತು ದಯೆಯಿಂದ ಅವುಗಳನ್ನು ಕೊಲ್ಲಬೇಕು.

ಧನು: ನವಂಬರ್ 23-ಡಿಸೆಂಬರ್ 22

ಧನು: ನವಂಬರ್ 23-ಡಿಸೆಂಬರ್ 22

"ಇತರರು ಹೇಳುವುದನ್ನು ಕೇಳಿ ಮತ್ತು ಕಲಿಸುವಂತವರಾಗಿ. ಪ್ರತಿಯೊಂದರ ಬಗ್ಗೆಯೂ ನೀವು ಸರಿಯಾದ ವ್ಯಕ್ತಿಯಲ್ಲ. ಯಾರೂ ಕೂಡ ಹಾಗೆ ಇರಲ್ಲ''

ನೀವು ಜಾಣ್ಮೆಯ ಮತ್ತು ಯಾವಾಗಲೂ ನೀವೇ ಸರಿಯೆಂದು ಯೋಚಿಸುತ್ತೀರಿ. ಇದನ್ನು ನೀವು ಈಗಲೇ ನಿಲ್ಲಿಸಬೇಕು. ನೀವು ಸರಿಯಾದ ಹಾದಿಯಲ್ಲಿ ಇಲ್ಲವೆನ್ನುವುದನ್ನು ಅರ್ಥ ಮಾಡಿಕೊಳ್ಳಿ. ಬೇರೆಯವರಿಂದಲೂ ನೀವು ಕಲಿಯಬೇಕಾಗಿದೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

"ಚಿಂತೆಯು ಫಲಿತಾಂಶವನ್ನು ಬದಲಾಯಿಸದು''

ನೀವು ಪ್ರತಿಯೊಂದರ ಬಗ್ಗೆ ಮತ್ತು ಎಲ್ಲದರ ಬಗ್ಗೆ ಚಿಂತೆ ಮಾಡುವುದನ್ನು ಬಿಡಬೇಕು. ನೀವು ಪ್ರತಿಯೊಂದರ ಬಗ್ಗೆ ಚಿಂತಿಸುತ್ತೀರಿ. ನೀವು ತುಂಬಾ ಕಠಿಣ ಕೆಲಸಗಾರ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚಿಂತೆ ಮಾಡುವುದನ್ನು ಬಿಟ್ಟುಬಿಡಿ.

ಕುಂಭ: ಜನವರಿ 21-ಫೆಬ್ರವರಿ 18

ಕುಂಭ: ಜನವರಿ 21-ಫೆಬ್ರವರಿ 18

"ಮುಕ್ತ ಮನಸ್ಸು ಹಾಗೂ ಹೃದಯವು ನಿಮ್ಮದಾಗಿರಲಿ''

ನೀವು ತುಂಬಾ ಬಿಗುಮಾನದ ವ್ಯಕ್ತಿ. ಆದರೆ ಕೆಲವೊಂದು ಸಲ ನೀವು ಮುಕ್ತರಾಗಬೇಕು ಮತ್ತು ಎಲ್ಲರು ನಿಮ್ಮನ್ನು ಗುರುತಿಸುವಂತಾಗಬೇಕು. ಇದೇ ವೇಳೆ ನೀವು ತೆರೆದ ಹೃದಯದವರಾಗಬೇಕು.

ಮೀನ: ಫೆಬ್ರವರಿ 19- ಮಾರ್ಚ್ 20

ಮೀನ: ಫೆಬ್ರವರಿ 19- ಮಾರ್ಚ್ 20

"ಅತಿಯಾಗಿ ಯೋಚಿಸಬೇಡಿ, ಅದನ್ನು ಬಿಟ್ಟುಬಿಡಿ''

ನೀವು ತುಂಬಾ ಜಾಣ್ಮೆಯ ವ್ಯಕ್ತಿ ಮತ್ತು ತುಂಬಾ ಸಣ್ಣ ವಿಚಾರವನ್ನು ವಿಶ್ಲೇಷಣೆ ಮಾಡುತ್ತೀರಿ. ಆದರೆ ಅತಿಯಾಗಿ ಚಿಂತೆ ಮಾಡಬಾರದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಕೆಲವೊಂದು ಸಲ ವಿಚಾರಗಳನ್ನು ಅದರಷ್ಟಕ್ಕೆ ಹೋಗಲು ಬಿಡಬೇಕು. ನಿಮ್ಮ ಜೀವನದ ಸೂತ್ರ ಯಾವುದು? ಕಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಅನಿಸಿಕೆ ತಿಳಿಸಲು ಮರೆಯಬೇಡಿ.

English summary

Zodiac Updates: Life Mantras That You Need To Follow

Most of us have certain mantras that we follow in our lives. Apart from looking at the positive side of life and its experiences, we have certain things that we need to follow. Here, in this article, we bring to you the list of mantras that you need to follow according to your zodiac signs. Following the right kind of mantras as per your zodiac sign will not only help you to improve your luck but will also help you to become a better person. So, find out the best mantra that you need to remember and follow, which is as per your zodiac sign.
X
Desktop Bottom Promotion