ಈ ರಾಶಿಚಕ್ರದವರು ಪ್ರಚಂಡ ಮಾತುಗಾರರು... ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ಸಾಕು ಎಂದರೂ ನಿಲ್ಲಿಸದವರು!

ಮನುಷ್ಯನಿಗೆ ಇತರ ಪ್ರಾಣಿಗಳಿಗಿಂತ ವಿಭಿನ್ನವಾದ ಶಕ್ತಿ ಎಂದರೆ ಮಾತು. ಮಾತಿನ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ತನ್ನ ಮಾತಿನ ಶಕ್ತಿಯಿಂದಲೇ ಇಂದು ಅನೇಕ ಸಾಧನೆಗಳನ್ನು ಮಾಡಿದ್ದಾನೆ. ಒಂದು ಸಣ್ಣ ಮಾತು ಅಥವಾ ಚರ್ಚೆಯಿಂದಲೇ ದೊಡ್ಡ ಆಲೋಚನೆಗಳು ಮತ್ತು ಯೋಜನೆಗಳು ಹುಟ್ಟಿಕೊಳ್ಳುತ್ತವೆ. ಇಂದು ಮನುಷ್ಯ ಅನೇಕ ಸಾಧನೆಗಳನ್ನು ಮಾಡಿ, ಅದನ್ನು ಇತರರಿಗೆ ತಿಳಿಯುವಂತೆ ಮಾಡಿದ್ದಾನೆ ಎಂದರೆ ಅದು ಅವನ ಮಾತಿನ ಸಾಮಥ್ರ್ಯದಿಂದಲೇ ಎಂದು ಹೇಳಬಹುದು.

ಜಗತ್ತಿನಲ್ಲಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಭಾಷೆಗಳು ರೂಢಿಯಲ್ಲಿವೆ. ಅವುಗಳಿಂದಲೇ ವ್ಯಕ್ತಿ ನಿತ್ಯದ ಜೀವನ ನಡೆಸುತ್ತಾನೆ. ಉತ್ತಮ ಸಂವಹನದಿಂದ ವ್ಯಕ್ತಿ ಹಲವರನ್ನು ಸಂಧಿಸುತ್ತಾನೆ. ಸಂವಹನ ಎನ್ನುವುದು ಒಂದು ಕೌಶಲ್ಯ. ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು? ಯಾವ ರೀತಿಯ ಮಿತಿಯನ್ನು ಹೊಂದಿರಬೇಕು? ಎನ್ನುವುದನ್ನು ಯಾರು ತಿಳಿದಿರುತ್ತಾರೋ ಅವರು ಅತ್ಯುತ್ತಮ ಮಾತುಗಾರರಾಗಿರುತ್ತಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಬಂಧು-ಬಾಂಧವರನ್ನು ಮತ್ತು ಸ್ನೇಹಿತರನ್ನು ಹೊಂದಿರುತ್ತಾರೆ.

Zodiac Signs Who Never Stop Talking

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಮಿತ ಭಾಷಿಗಳಾಗಿರುತ್ತಾರೆ. ಇನ್ನೂ ಕೆಲವರು ಅತ್ಯುತ್ತಮ ಮಾತುಗಾರಿಕೆಯನ್ನು ಹೊಂದಿರುತ್ತಾರೆ. ಮಾತಿನ ಮೂಲಕವೇ ಇತರರನ್ನು ಆಕರ್ಷಿಸುತ್ತಾರೆ ಎನ್ನಲಾಗುವುದು. ಆದರೆ ಕೆಲವು ರಾಶಿಚಕ್ರದವರು ತಮ್ಮ ಮಾತಿನ ಮೇಲೆ ಹಿಡಿತವನ್ನು ಹೊಂದಿರುವುದಿಲ್ಲ. ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ಸಂಭಾಷಣೆ ಮುಂದುವರಿಯುತ್ತಲೇ ಹೋಗುತ್ತದೆ. ಅದರ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಅದಕ್ಕೆ ಕಾರಣ ಕೇವಲ ಅವರ ಹವ್ಯಾಸ ಅಥವಾ ರೂಢಿಯಲ್ಲ. ಅವರನ್ನು ಆಳುವ ಗ್ರಹಗತಿಗಳ ಪಾತ್ರವೂ ಇರುತ್ತವೆ ಎಂದು ಸಹ ಹೇಳಲಾಗುವುದು. ಯಾವ ರಾಶಿಚಕ್ರದವರು ಹೇಗೆ ಮಾತನಾಡುವರು ಎನ್ನುವುದನ್ನು ಅನುಕ್ರಮಗಳ ರೂಪದಲ್ಲಿ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.

ಮಿಥುನ

ಮಿಥುನ

ಬುಧ ಗ್ರಹದ ಆಳ್ವಿಕೆಯಲ್ಲಿ ನಡೆಯುವ ಈ ರಾಶಿಚಕ್ರದ ವ್ಯಕ್ತಿಗಳು ಹೆಚ್ಚು ಮಾತನಾಡುವ ವ್ಯಕ್ತಿಗಳಾಗಿರುತ್ತಾರೆ. ಇವರು ಮಾತೇ ಉಸಿರು ಎನ್ನುವಂತೆ ಇರುತ್ತಾರೆ. ಇವರು ಕೆಲವೊಮ್ಮೆ ಮಾತನಾಡಲು ಪ್ರಾರಂಭಿಸಿದರೆ ಅದಕ್ಕೊಂದು ಮಿತಿಯನ್ನು ಹೊಂದಬೇಕು. ಇವರಿಗೆ ಯಾರಾದರೂ ಪರಿಚಯ ಇರಬೇಕೆಂದೇನೂ ಇಲ್ಲ. ಯಾರಾದರೂ ಸರಿ ಸಿಕ್ಕವರ ಜೊತೆ ಮಾತನಾಡುತ್ತಾ ಸಮಯ ಕಳೆಯುವರು. ಕೆಲವೊಮ್ಮೆ ವಿಷಯದ ಬಗ್ಗೆ ತಮಗೇನು ತಿಳಿಯದಿದ್ದರೂ ಎಲ್ಲಾ ಬಲ್ಲವರಂತೆ ಚರ್ಚೆಗೆ ಭಾಗಿಯಾಗುತ್ತಾರೆ. ಸಾಮಾನ್ಯವಾಗಿ ಇವರನ್ನು ಮಾತಿನ ಮಲ್ಲರು ಎಂದು ಗುರುತಿಸುವ ಸಾಧ್ಯತೆಯೇ ಹೆಚ್ಚು.

ಮೇಷ

ಮೇಷ

ಈ ರಾಶಿಯ ವ್ಯಕ್ತಿಗಳು ಯಾವುದೇ ವಿಷಯದ ಬಗ್ಗೆಯೂ ಒಂದು ಹಿಡಿತ ಅಥವಾ ನಿಯಂತ್ರಣ ಹೊಂದಿರುವುದಿಲ್ಲ. ನಿರಂತರವಾಗಿ ಮಾತನಾಡುತ್ತಲೇ ಇರುತ್ತಾರೆ. ನಿರರ್ಗಳವಾಗಿ ಮಾತನಾಡುವ ಇವರು ಏನಾದರೂ ಇವರ ಪರವಾಗಿ ದೊರೆಯುತ್ತಿದೆ ಅಥವಾ ಸಾಗುತ್ತಿದೆ ಎಂದಾದರೆ ಮಾತು ಸಾಗುತ್ತಲೇ ಹೋಗುತ್ತದೆ. ಇವರು ಹೇಳುವ ಮಾತಿನಿಂದಲೇ ಇತರರನ್ನು ಚೆನ್ನಾಗಿ ನಂಬುವಂತೆ ಮಾಡುವುದು. ಏನಾದರೂ ಒಂದು ವಿಷಯ ದೊರೆಯಿತು ಎಂದಾದರೆ ನಿರಂತರವಾದ ಮಾತುಗಾರಿಕೆ ಮುಂದುವರಿಯುತ್ತಲೇ ಹೋಗುತ್ತದೆ.

ಧನು

ಧನು

ಪ್ರಾಮಾಣಿಕರು, ಉತ್ಸಾಹಿಗಳು ಮತ್ತು ಧೈರ್ಯ ಶಾಲಿಯವರು ಆದ ಧನುರಾಶಿಯ ವ್ಯಕ್ತಿಗಳು ಒಂದು ವಿಷಯದ ಬಗ್ಗೆ ಗಂಟೆಗಳ ಕಾಲ ಮಾತನಾಡುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಉತ್ತಮ ಶಿಕ್ಷಕನಾಗಬಲ್ಲ ಎಂದು ಹೇಳಲಾಗುವುದು. ಇವರು ತಮ್ಮ ಮಾತುಗಾರಿಕೆಯಿಂದಲೇ ಹೆಚ್ಚು ಆಕರ್ಷಕರಾಗುತ್ತಾರೆ. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವ ವ್ಯಕ್ತಿಗಳಾದ ಇವರು ಮಾತಿನಲ್ಲೂ ಅವುಗಳನ್ನು ಅಳವಡಿಸಿಕೊಳ್ಳುತ್ತಾರೆ. ಇತರರಿಗೂ ಅವುಗಳನ್ನು ಹಂಚುವ ಪ್ರಯತ್ನ ಮಾಡುವರು.

ಮೀನ

ಮೀನ

ಅತ್ಯಂತ ಭಾವನಾತ್ಮಕ ಮತ್ತು ಪ್ರಜ್ಞಾಪೂರ್ವಕ ಚಿಹ್ನೆಗಳಾದ ಇವರು ಪ್ರೀತಿಯನ್ನು ತೋರುವರು. ಇವರು ನೈಸರ್ಗಿಕವಾಗಿಯೇ ಉತ್ತಮ ಮಾತುಗಾರರು ಎನ್ನಲಾಗುವುದು. ಭಾವನಾತ್ಮಕ ಮಾತುಗಳಿಂದಲೇ ಎಲ್ಲರನ್ನೂ ಆಕರ್ಷಿಸುವರು. ಬಹಳಷ್ಟು ಭಾವನೆಗಳಿಂದ ಕೂಡಿರುವ ಈ ವ್ಯಕ್ತಿಗಳಿಗೆ ಯಾವುದಾದರೂ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ನೀಡಿದರೆ ಇವರ ಮಾತು ನಿಯಂತ್ರಣ ಇಲ್ಲದೆ ಸಾಗುತ್ತಲೇ ಹೋಗುತ್ತವೆ. ಕೆಲವೊಮ್ಮೆ ಕಲ್ಪನೆಯ ಮೂಲಕವೂ ಮಾತನಾಡುವ ಚಾಣಾಕ್ಷರು ಎನ್ನಬಹುದು.

ಸಿಂಹ

ಸಿಂಹ

ಇವರು ಪ್ರದರ್ಶನವನ್ನು ಬಯಸುವ ವ್ಯಕ್ತಿಗಳು. ಕಥೆಯನ್ನು ಹೇಳುವ ರೀತಿಯಲ್ಲಿ ವಿಷಯಗಳನ್ನು ಹೇಳುತ್ತಾರೆ. ಸಾಮಾಜಿಕವಾಗಿ ಹೆಚ್ಚು ತೆರೆದುಕೊಳ್ಳುವ ವ್ಯಕ್ತಿಗಳು ಇವರು. ಘೋಷಣೆಯ ಮೂಲಕವು ಸಾಕಷ್ಟು ಮಾತನ್ನಾಡುತ್ತಾರೆ. ಇವರಿಗೆ ಒಮ್ಮೆ ಮಾತನಾಡಲು ಅವಕಾಶ ಕಲ್ಪಿಸಿ ಕೊಟ್ಟರೆ ಮಾತನ್ನು ಮುಂದುವರಿಸುತ್ತಲೇ ಸಾಗುತ್ತಾರೆ. ಇವರಿಗೆ ಒಮ್ಮೆ ಮಾತನಾಡಲು ಅವಕಾಶ ಕೊಟ್ಟರೆ ಉಳಿದವರು ಸರದಿಗಾಗಿ ಕಾಯ್ದು ಕುಳಿತುಕೊಳ್ಳಬೇಕಾಗುವುದು.

ಕುಂಭ

ಕುಂಭ

ವಾಯು ಚಿಹ್ನೆಯನ್ನು ಹೊಂದಿರುವ ರಾಶಿಚಕ್ರಗಳಲ್ಲಿ ಇದು ಒಂದು. ಇವರು ಹೆಚ್ಚಾಗಿ ವೇದಿಕೆಯ ಮೇಲೆ ಕಾಣಿಸಿಕೊಳ್ಳಲು ಬಯಸುತ್ತಾರೆ. ಕೆಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರೇಕ್ಷಕರಿಗೆ ಅರಿವು ಮೂಡುವಂತೆ ಮಾತನಾಡುತ್ತಾರೆ. ಕೆಲವೊಮ್ಮೆ ವೈಯಕ್ತಿಕ ವಿಷಯಗಳ ಬಗ್ಗೆಯೂ ಮಾತನಾಡುವರು. ಇವರು ವಿಷಯಗಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಬಲ್ಲರು. ವಿಷಯಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ಇವರು ವಿಷಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವವರೆಗೂ ವಿಶ್ರಾಂತಿಯನ್ನು ಪಡೆದುಕೊಳ್ಳುವುದಿಲ್ಲ. ಮಾತನ್ನು ಸೂಕ್ತ ರೀತಿಯಲ್ಲಿಯೇ ಮುಂದುವರಿಸಿಕೊಂಡು ಸಾಗುತ್ತಾರೆ.

ತುಲಾ

ತುಲಾ

ವಾಯುವಿನ ಚಿಹ್ನೆಯನ್ನು ಹೊಂದಿರುವ ಇವರು ಮೃದು ಭಾಷಿಗಳಾಗಿರುತ್ತಾರೆ. ಯಾವಾಗ ಹೇಗೆ ಮಾತನಾಡಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಎದುರಿನ ವ್ಯಕ್ತಿಗಳ ಬಗ್ಗೆ ಸೂಕ್ತ ಅರಿವನ್ನು ಹೊಂದುವ ಇವರು ಉತ್ತಮ ಸಮಾಲೋಚಕರು ಎನ್ನಬಹುದು. ಇವರು ಸಾಕಷ್ಟು ಸಂಗತಿಗಳನ್ನು ಹೇಳುತ್ತಾರೆ. ಆದರೆ ಅವು ಯಾವುದೇ ರೀತಿಯಲ್ಲೂ ಅತಿರೇಕ ಎನಿಸಿಕೊಳ್ಳದು. ಅಗತ್ಯಕ್ಕೆ ತಕ್ಕಂತೆ ಮಾತನ್ನು ಮುಂದುವರಿಸುವ ವ್ಯಕ್ತಿಗಳು ಇವರು ಎನ್ನಬಹುದು. ಇವರಿಗೆ ತಮ್ಮ ಮಾತಿನ ಮೇಲೆ ಹೇಗೆ ನಿಯಂತ್ರಣ ಹೊಂದಬೇಕು, ಯಾವ ವಿಷಯದಲ್ಲಿ ತಿರುವನ್ನು ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಬಲ್ಲರು.

ಕನ್ಯಾ

ಕನ್ಯಾ

ಬುಧ ಗ್ರಹದ ಆಳ್ವಿಕೆಯ ರಾಶಿ ಇದು. ಇವರು ತಮ್ಮ ಮನಸ್ಸಿನಲ್ಲಿ ಸಾಕಷ್ಟು ವಿಷಯಗಳನ್ನು ಇಟ್ಟುಕೊಂಡಿರುತ್ತಾರೆ. ಇವರಿಗೆ ಕೆಲವು ವಿಚಾರಗಳ ಬಗ್ಗೆ ಹೆಚ್ಚು ಮಾತನಾಡಲು ಆಸಕ್ತಿ ಹಾಗೂ ಕೆಚ್ಚೆದೆಯ ಧೈರ್ಯ ಇರುತ್ತದೆ. ಇವರು ಹೇಳುವ ವಿಷಯಗಳ ಮೇಲೆ ಸ್ವಲ್ಪ ಗಮನ ಇರಿಸಬೇಕು. ಇಲ್ಲವಾದರೆ ಕೆಲವೊಮ್ಮೆ ಅದು ತಪ್ಪು ಅಥವಾ ಸುಳ್ಳು ವಿಚಾರಗಳು ಸೇರಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇವರು ಸೂಕ್ತ ವಿಷಯಗಳ ಬಗ್ಗೆ ವಿಮರ್ಶೆ ನಡೆಸಲು ಪ್ರಾರಂಭಿಸಿದರೆ ಇವರಿಗೆ ಸರಿಸಾಟಿ ಯಾರು ಇರುವುದಿಲ್ಲ ಎಂದು ಹೇಳಲಾಗುವುದು.

ವೃಷಭ

ವೃಷಭ

ಈ ರಾಶಿಚಕ್ರದವರು ಮಿತ ಮಾತುಗಾರರು ಎನ್ನಬಹುದು. ಇವರು ಮೂರ್ಖತನದ ಹಾಸ್ಯ, ಅಶ್ಲೀಲ ವಿಷಯಗಳ ಬಗ್ಗೆ ಮಾತನಾಡರು. ಇವರು ತಮ್ಮ ಇಷ್ಟದ ವಿಚಾರವಾದ ಕಲೆ, ಸಂಪತ್ತು ಸೇರಿದಂತೆ ಇನ್ನಿತರ ವಿಚಾರಗಳು ಸಿಕ್ಕರೆ ಗಂಟೆಗಳ ಕಾಲ ಮಾತನಾಡಬಲ್ಲರು. ದೈಹಿಕ ಕೆಲಸಗಳಿಗೆ ಹೆಚ್ಚು ಆಕರ್ಷಿತರಾಗುವ ಇವರು ಮಾತನಾಡುವ ಬದಲು ಮಾತನ್ನು ಕೇಳುವುದರಲ್ಲಿ ಹೆಚ್ಚಿನ ಸಂತೋಷವನ್ನು ಹೊಂದುತ್ತಾರೆ ಎನ್ನಲಾಗುವುದು. ಮಾತಿನ ವಿಷಯಗಳನ್ನು ಹೊರತು ಪಡಿಸಿ ಇನ್ನಿತರ ವಿಷಯಗಳ ಬಗ್ಗೆ ಹೆಚ್ಚಿನ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

ಕರ್ಕ

ಕರ್ಕ

ಇವರು ತಮ್ಮ ಕೆಲವು ವಿಚಾರಗಳನ್ನು ಹೆಚ್ಚು ಗೌಪ್ಯವಾಗಿ ಇಡಲು ಬಯಸುತ್ತಾರೆ. ಅಲ್ಲದೆ ತಮ್ಮ ಆಲೋಚನೆಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುತ್ತಾರೆ. ಕುಟುಂಬ ಹಾಗೂ ಸಂಗಾತಿಗಳ ಬಗ್ಗೆ ಹೆಚ್ಚು ಆಸಕ್ತರು ಹಾಗೂ ರಕ್ಷಣಾತ್ಮಕ ಭಾವವನ್ನು ಹೊಂದಿರುವುದರಿಂದ ಅವುಗಳಿಗೆ ಸಂಬಂಧಿಸಿದ ಅನಗತ್ಯ ಮಾತುಗಳನ್ನು ಇವರು ಆಡಲಾರರು. ಇವರು ವಿಶ್ವಾಸವನ್ನು ಹೊಂದಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವರು. ಆದರೆ ಒಮ್ಮೆ ಅವರ ವಿಶ್ವಾಸ ಅಥವಾ ಗೌರವಕ್ಕೆ ಪಾತ್ರರಾದರೆ ಅವರಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುವರು.

ಮಕರ

ಮಕರ

ಕ್ಷುಲ್ಲಕ ಕಾರಣ ಅಥವಾ ವಿಷಯಗಳ ಬಗ್ಗೆ ಮಾತನಾಡಿ ಸಮಯವನ್ನು ವ್ಯರ್ಥಮಾಡಲು ಬಯಸದ ವ್ಯಕ್ತಿಗಳು ಇವರು. ಹೆಚ್ಚು ಕಾಲ ಕೆಲಸದಲ್ಲಿಯೇ ಮಗ್ನರಾಗುವ ಇವರು ಅನಗತ್ಯ ಮಾತುಗಾರಿಕೆಯಲ್ಲಿ ತೊಡಗಲು ಮುಂದಾಗದೆ ಇರುವರು. ಇವರು ಮಾತುಗಾರಿಕೆಗಿಂತ ಅತ್ಯುತ್ತಮ ಬರಹಗಾರರು ಎನ್ನಬಹುದು. ತಮ್ಮ ಕಲ್ಪನೆ ಅಥವಾ ಜ್ಞಾನದ ಮಾತುಗಳನ್ನು ಬಹಳ ಸುಂದರವಾಗಿ ಬರಹ ರೂಪದಲ್ಲಿ ವ್ಯಕ್ತಪಡಿಸಬಲ್ಲ ಚತುರರಾಗಿರುತ್ತಾರೆ.

ವೃಶ್ಚಿಕ

ವೃಶ್ಚಿಕ

ಅತ್ಯುತ್ತಮ ಕೇಳುಗರಾದ ಇವರು ಮಾತನಾಡುವುದಕ್ಕಿಂತ ಹೆಚ್ಚು ಕೇಳುವುದರಿಂದಲೇ ಜ್ಞಾನ ವೃದ್ಧಿಯಾಗುವುದು ಎಂದು ಭಾವಿಸುವರು. ಇವರು ತಮ್ಮ ವಿಷಯಗಳನ್ನು ಸಾಕಷ್ಟು ಗೌಪ್ಯವಾಗಿಯೇ ಇಟ್ಟಿರುತ್ತಾರೆ. ಯಾವುದನ್ನೂ ಅನಗತ್ಯವಾಗಿ ಹೇಳುವುದರ ಮೂಲಕ ಬಹಿರಂಗ ಪಡಿಸರು. ಇವರು ಯಾವ ವ್ಯಕ್ತಿ ಅಥವಾ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಮನಸ್ಸಿಗೆ ಬಂದಂತೆ ಮಾತನಾಡರು. ಇವರಿಗೆ ಎಷ್ಟು ಬೇಕೋ ಅಷ್ಟೇ ಮಾತನಾಡುವ ಕೌಶಲ್ಯ ತಿಳಿದಿದೆ ಎಂದು ಹೇಳಬಹುದು.

English summary

Zodiac Signs Who Never Stop Talking

In an astrology chart, the third house rules speech and communication, so you might want to see which zodiac sign rules that section of your chart. Look for your natal Mercury’s position, too. This planet is named after the god of eloquence and its location in your chart will show where your own gift of gab will serve you best. Don’t forget to check your daily horoscope, too, to see if you speak your mind today or just keep your mouth shut.
X
Desktop Bottom Promotion