Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಈ ಮೂರು ರಾಶಿಯವರು ಜೀವನದಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿರುವವರು!
ಜೀವನದಲ್ಲಿ ಪರಿಪೂರ್ಣತೆ ಎನ್ನುವುದು ನಮ್ಮ ನಿರೀಕ್ಷೆಯ ಮೇಲೆ ನಿಂತಿರುತ್ತದೆ. ಜೀವನದಲ್ಲಿ ನಿರೀಕ್ಷೆಗಳು ಕಡಿಮೆ ಪ್ರಮಾಣದಲ್ಲಿ ಇದ್ದರೆ ಬಹುಬೇಗ ಪರಿಪೂರ್ಣತೆ ಎನ್ನುವ ಭಾವನೆಯನ್ನು ಹೊಂದುತ್ತಾರೆ. ಯಾರು ಹೆಚ್ಚಿನ ನಿರೀಕ್ಷೆ ಹೊಂದಿರುತ್ತಾರೋ ಅಂತಹವರಿಗೆ ಪರಿಪೂರ್ಣತೆ ಎನ್ನುವ ಭಾವನೆ ಅಷ್ಟು ಸುಲಭವಾಗಿ ಲಭಿಸದು. ಎಂದು ನಿರೀಕ್ಷೆಗಳು ಪೂರೈಸುವುದಿಲ್ಲವೋ ಆಗ ಕಹಿಯಾದ ಭಾವನೆ ಅಥವಾ ಜೀವನದಲ್ಲಿ ಬೇಸರ ಉಂಟಾಗುವುದು. ಅಲ್ಲದೆ ನಿರಂತರವಾಗಿ ದುಃಖಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ನಿರೀಕ್ಷೆಗಳು ಅಥವಾ ಅಪೇಕ್ಷೆಗಳು ಆತನ ರಾಶಿಚಕ್ರಕ್ಕೆ ಅನುಗುಣವಾಗಿರುತ್ತವೆ. ಕೆಲವು ರಾಶಿಚಕ್ರದವರಿಗೆ ಜೀವನದಲ್ಲಿ ಅತಿಯಾದ ನಿರೀಕ್ಷೆಗಳಿರುತ್ತವೆ. ಅವುಗಳನ್ನು ನೆರವೇರಿಸಿಕೊಳ್ಳಲು ಸಾಕಷ್ಟು ಶ್ರಮವನ್ನು ವಹಿಸುವರು. ಅಲ್ಲದೆ ಅವರ ನಿರೀಕ್ಷೆಗಳು ಬಹು ಎತ್ತರದ ನಿಲುವನ್ನು ಹೊಂದಿರುತ್ತವೆ ಎಂದು ಹೇಳಲಾಗುವುದು.
ನಿಮಗೂ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ಬಗೆಯ ನಿರೀಕ್ಷೆಗಳು ಇರುತ್ತವೆ? ಅಥವಾ ಬಹು ನಿರೀಕ್ಷೆ ಹೊಂದಿರುವ ವ್ಯಕ್ತಿಗಳಾಗಿದ್ದೀರೇ? ಎನ್ನುವುದನ್ನು ತಿಳಿಯಲು ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ.

1.ಕನ್ಯಾ
ಈ ರಾಶಿ ಚಕ್ರದವರು ಬಹು ನಿರೀಕ್ಷೆ ಹೊಂದಿರುವ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ. ಇವರು ಇತರರೊಂದಿಗೆ ಮಾತನಾಡಿ ಸಮಯ ಕಳೆಯುವ ಮೊದಲು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಬಯಸುತ್ತಾರೆ. ಇವರಲ್ಲಿ ಯಾವುದಾದರೂ ಸಮಸ್ಯೆ ಅಥವಾ ಕೆಲಸಗಳಿಗೆ ಸಲಹೆಯನ್ನು ಕೇಳಿದರೆ ಬಹು ಬೇಗ ಉತ್ತರ ಹಾಗೂ ಸಹಾಯ ದೊರೆಯುವುದು. ಇವರು ತಮ್ಮ ಜೀವನದ ಯೋಜನೆಗಳು ಹೀಗೇ ಇರಬೇಕು ಎನ್ನುವ ನಿಲುವನ್ನು ಹೊಂದಿರುತ್ತಾರೆ. ಇವರ ನಿರೀಕ್ಷೆಗಳು ಹಾಗೊಮ್ಮೆ ನೆರವೇರದೆ ಇದ್ದಾಗ ಸಾಕಷ್ಟು ನೋವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುವುದು.

2. ಮಿಥುನ
ಜೀವನದಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರುವ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಇವರು ಅಂದುಕೊಂಡ ರೀತಿಯಲ್ಲಿಯೇ ಕೆಲಸ ನೆರವೇರಿದರೆ ಆಶ್ಚರ್ಯ ಹಾಗೂ ಸಂತೋಷಕ್ಕೆ ಒಳಗಾಗುವರು. ವ್ಯವಹಾರ ಹಾಗೂ ಕೆಲಸದ ಮಧ್ಯೆ ಸಾಕಷ್ಟು ವಿರಾಮವನ್ನು ಹೊಂದಲು ಬಯಸುವರು. ಕೆಲವು ನಿರೀಕ್ಷೆಗಳು ನೆರವೇರದೆ ಇದ್ದಾಗ ಯಾವುದೇ ರಾಜಿಯನ್ನು ಮಾಡಿ ಕೊಳ್ಳಲು ಸಿದ್ಧ ರಾಗಿರುವುದಿಲ್ಲ. ಬುದ್ಧಿವಂತರಾದ ಇವರು ತಮ್ಮ ನಿರೀಕ್ಷೆಗಳನ್ನು ಹೇಗೆ ಪೂರೈಸಿಕೊಳ್ಳಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಪಾಲುದಾರರಿಗಾಗಿ ಹೆಚ್ಚಿನ ಸಮಯ ವಿನಿಯೋಗಿಸಲು ತಮ್ಮ ಸಮಯವನ್ನು ಮೀಸಲಿಡುವರು.

3. ತುಲಾ
ವರು ಜೀವನದ ಪ್ರತಿಯೊಂದು ವಿಚಾರದಲ್ಲೂ ಬಹಳ ಪ್ರಣಯ ಪೂರಕ ಭಾವನೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಸಂಬಂಧಗಳು ಸಿನಿಮಾಗಳ ರೂಪದಲ್ಲಿ ಬರುವಂತೆ ಇರಬೇಕೆಂದು ಬಯಸುವರು. ಇವರು ಬಹುತೇಕ ಸಂದರ್ಭದಲ್ಲಿ ಕಾಲ್ಪನಿಕ ರೀತಿಯಲ್ಲಿ ತಮ್ಮ ನಿರೀಕ್ಷೆಗಳನ್ನು ಊಹಿಸಿಕೊಳ್ಳುವರು.

ತುಲಾ
ಕಾಲ್ಪನಿಕ ಕಥೆಯಂತೆ ಜೀವನ ಇರಬೇಕೆಂದು ಬಯಸುತ್ತಾರೆ. ಇವರ ನಿರೀಕ್ಷೆಯಂತೆ ಸಂದರ್ಭಗಳು ನೆರವೇರದೆ ಇದ್ದಾಗ ತಮ್ಮ ಜೀವನವು ಉತ್ತಮವಾಗಿಲ್ಲ ಎಂದು ಅಂದುಕೊಳ್ಳುತ್ತಾರೆ. ಆರೋಗ್ಯಕರವಾದ ವಾಸ್ತವಿಕ ಚಿಂತನೆಗಳನ್ನು ನಡೆಸಿದರೆ ಜೀವನದಲ್ಲಿ ಉತ್ತಮ ನಿರೀಕ್ಷೆಗಳನ್ನು ಹೊಂದಲು ಸಹಾಯವಾಗುವುದು ಎಂದು ಸಲಹೆ ನೀಡಲಾಗುವುದು.



Click it and Unblock the Notifications