Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ದೈಹಿಕ ಸ್ಪರ್ಶದಿಂದ ಪ್ರೀತಿ ವ್ಯಕ್ತಪಡಿಸುವ ರಾಶಿಯವರು
ಪ್ರೇಮ ನಿವೇದನೆ ಮಾಡಲು ಹಲವಾರು ವಿಧಾನಗಳು ಇವೆ. ಇದರಲ್ಲಿ ಮುಖ್ಯವಾಗಿ ಪಾತ್ರ ವಹಿಸುವುದು ಕಣ್ಣುಗಳು. ಮೊದಲ ನೋಟದಲ್ಲೇ ಕೆಲವರಿಗೆ ಪ್ರೀತಿ ಮೊಳಕೆಯೊಡೆಯುವುದು. ಇನ್ನು ಕೆಲವರಿಗೆ ಇದನ್ನು ಹೇಳಲು ತುಂಬಾ ಸಮಯ ಬೇಕಾಗುತ್ತದೆ. ಜ್ಯೋತಿಷ್ಯದಿಂದ ನಿಮ್ಮ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ತಿಳಿಯಬಹುದು.

ಅದೇ ರೀತಿಯಲ್ಲಿ ನಿಮ್ಮ ನಡವಳಿಕೆ ಕೂಡ ಇದರಿಂದ ತಿಳಿಯಬಹುದು. ಕೆಲವೇ ನಿಮಿಷ ಮಾತನಾಡಿದರೂ ಅವರಲ್ಲಿ ಪ್ರೀತಿ ಮೂಡುವುದು. ಇನ್ನು ಕೆಲವರಿಗೆ ಅವರನ್ನು ಅಪ್ಪಿಕೊಂಡರೆ ಪ್ರೀತಿ ಮೂಡುವುದು. ಕಣ್ಣುಗಳ ಭಾಷೆ ಕೂಡ ಪ್ರೀತಿ ವ್ಯಕ್ತಪಡಿಸುವುದು. ಇನ್ನು ಕೆಲವು ಸಲ ದೈಹಿಕ ಸ್ಪರ್ಶವು ಪ್ರೀತಿಯನ್ನು ತೋರಿಸುವುದು. ರಾಶಿಚಕ್ರಕ್ಕೆ ಅನುಗುಣವಾಗಿ ಸ್ಪರ್ಶವು ನಿಮ್ಮ ಪ್ರೀತಿ ವ್ಯಕ್ತಪಡಿಸುವ ಭಾಷೆಯ ಎಂದು ತಿಳಿಯಿರಿ.

ಮೇಷ
ಇವರಿಗೆ ಮಾತಿಗಿಂತ ಹೆಚ್ಚು ಸ್ಪರ್ಶದಲ್ಲಿ ಅರ್ಥವಾಗುವುದು. ಇವರು ತಮ್ಮ ಹೆಚ್ಚಿನ ಭಾವನಾತ್ಮಕವಾದ ಸಂದೇಶವನ್ನು ದೈಹಿಕ ಸ್ಪರ್ಶದ ಮೂಲಕವಾಗಿ ತೋರಿಸುವರು. ಇದು ಅವರಿಗೆ ರಕ್ತಗತವಾಗಿಯೇ ಬಂದಿರುವುದು. ಅವರು ನಿಮ್ಮೊಂದಿಗೆ ಮಾತನಾಡುವಾಗ ಭುಜ ಅಥವಾ ಕೈಯನ್ನು ಸ್ಪರ್ಶಿಸುವರು. ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಇದು ತುಂಬಾ ನಿಜವಾಗಿರುವುದು. ರಾತ್ರಿ ವೇಳೆ ಹೋಟೆಲ್ ಗೆ ಊಟಕ್ಕೆ ಹೋಗುವಾಗ ಅಥವಾ ಬೆಳಗ್ಗೆ ಜಾಗಿಂಗ್ ಗೆ ಹೋಗುವಾಗ ಇವರು ಕೈಯನ್ನು ಹಿಡಿದುಕೊಂಡಿರುವರು. ಮೇಷ ರಾಶಿಯವರು ಪ್ರೀತಿಯ ಭಾವನೆ ವ್ಯಕ್ತಪಡಿಸುವರು.

ವೃಷಭ
ವೃಷಭ ರಾಶಿಯವರು ಯಾವಾಗಲೂ ತುಂಬಾ ಗಂಭೀರವಾಗಿರುವವರು ಮತ್ತು ಅವರ ಮುಖವನ್ನು ನೀವು ಸ್ವಲ್ಪ ಮಟ್ಟಿಗೆ ದಿಟ್ಟಿಸಿಕೊಂಡು ವೈಯಕ್ತಿಕ ಬದುಕಿನ ಬಗ್ಗೆ ಆಲೋಚಿಸಲು ಸಾಧ್ಯವಿಲ್ಲ. ಇವರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಭಾವನೆ ವ್ಯಕ್ತಪಡಿಸಲ್ಲ ಮತ್ತು ಅದನ್ನು ಹೇಳಿಕೊಳ್ಳಲ್ಲ. ಇವರಿಗೆ ಕಡೆಗಣಿಸುವಂತಹ ಕಲೆಯು ತುಂಬಾ ಚೆನ್ನಾಗಿ ತಿಳಿದಿದೆ ಎಂದು ನಮಗನಿಸುವುದು. ಇದರಿಂದಾಗಿ ಹೆಚ್ಚಿನ ಜನರು ಇವರನ್ನು ಆಕರ್ಷಿಸಲು ವಿಫಲವಾಗುವರು. ಆದರೆ ಇವರ ಪ್ರೀತಿಯ ಸಂಗಾತಿಯ ವಿಚಾರಕ್ಕೆ ಬಂದರೆ ಅವರ ಸ್ಪರ್ಶದ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿರುವುದು.

ವೃಶ್ಚಿಕ
ವೃಶ್ಚಿಕ ರಾಶಿಯವರನ್ನು ಮಾತನಾಡುವ ಕಲೆ ತಿಳಿದಿರುವ ವ್ಯಕ್ತಿಗಳೆಂದು ಹೇಳಲಾಗುತ್ತದೆ. ಆದರೆ ಇವರು ಪ್ರೀತಿ ವ್ಯಕ್ತಪಡಿಸುವ ವೇಳೆ ದೈಹಿಕ ಸ್ಪರ್ಶದ ಮೂಲಕ ಅದನ್ನು ತಿಳಿಸುವರು. ಇವರು ಲೈಂಗಿಕವಾಗಿಯು ಉತ್ತಮವಾಗಿರುವರು. ಇವರು ತಮ್ಮ ಕೈಗಳು ಹಾಗೂ ದೇಹದ ಮೂಲಕ ತಮ್ಮ ಭಾವನೆಗಳನ್ನು ಈ ವೇಳೆ ವ್ಯಕ್ತಪಡಿಸುವರು. ದೈಹಿಕ ಸ್ಪರ್ಶದಿಂದಾಗಿ ಇವರು ತಮ್ಮ ಪ್ರೀತಿ ತೋರಿಸುವರು ಮತ್ತು ಇದು ಅವರು ಪ್ರೀತಿ ವ್ಯಕ್ತಪಡಿಸುವ ಮಾರ್ಗವಾಗಿರುವುದು.

ಧನು
ಧನು ರಾಶಿಯವರು ನೀವು ಅವರಿಗೆ ತುಂಬಾ ವಿಶೇಷವೆನ್ನುವ ಭಾವನೆ ವ್ಯಕ್ತಪಡಿಸಲು ದೈಹಿಕ ಸ್ಪರ್ಶದ ಮೊರೆ ಹೋಗುವರು. ಇವರು ದೀರ್ಘವಾಗಿ ಮಾತನಾಡಬಲ್ಲರು ಮತ್ತು ಚರ್ಚೆಯಲ್ಲಿ ನಿಮ್ಮನ್ನು ಸೋಲಿಸಬಲ್ಲರು. ಇದರಿಂದ ವೃಶ್ಚಿಕ ರಾಶಿಯವರಿಗೆ ಒಳ್ಳೆಯ ಸ್ಪರ್ಧೆ ನೀಡುವರು. ಆದರೆ ಪ್ರೀತಿ ವ್ಯಕ್ತಪಡಿಸುವ ವೇಳೆ ಅವರ ಮೇಲೆ ಅಧಿಕಾರ ಸಾಧಿಸಲು ಅವಕಾಶ ನೀಡುವರು. ಇವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವೇಳೆ ದೈಹಿಕವಾಗಿ ಅದನ್ನು ವ್ಯಕ್ತಪಡಿಸುವರು. ಇದು ಅವರ ಭಾವನೆಯಲ್ಲ. ಆದರೆ ಅವರ ಆಕರ್ಷಣೆ ಕೂಡ ಪ್ರಮುಖವಾಗಿರುವುದು.



Click it and Unblock the Notifications











