Latest Updates
-
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ
ಈ ರಾಶಿಚಕ್ರದವರು ಅತ್ಯುತ್ತಮ ಕೇಳುಗರು... ಹಾಗಾಗಿ ಇವರು ಯಾವುದಕ್ಕೂ ಹೆದರುವುದಿಲ್ಲ...
ಒಂದು ವಿಷಯದ ಬಗ್ಗೆ ಹೇಳುವಾಗ ಅಥವಾ ಒಬ್ಬ ವ್ಯಕ್ತಿ ಯಾವುದೋ ವಿಷಯದ ಬಗ್ಗೆ ಒಂದಿಷ್ಟು ಮಾತನಾಡುವಾಗ ಸರಿಯಾಗಿ ಕೇಳಿಸಿಕೊಳ್ಳುವುದು ಅತ್ಯುತ್ತ. ಏಕೆಂದರೆ ನಾವು ಏನು ಕೇಳಿರುತ್ತೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಜ್ಞಾನ ವೃದ್ಧಿಯಾಗುವುದು. ಉತ್ತಮ ಕೇಳುಗರಾದರೆ ಇತರರೊಂದಿಗೆ ಅತ್ಯುತ್ತಮ ಸಂಬಂಧ ಹಾಗೂ ಜ್ಞಾನವನ್ನು ಪಡೆದುಕೊಳ್ಳಲು ಸಹಾಯವಾಗುವುದು. ವಿಷಯವನ್ನು ಸರಿಯಾಗಿ ಕೇಳಿಸಿಕೊಳ್ಳದೆ ಹೋದರೆ ಜ್ಞಾನದಲ್ಲಿ ಶೂನ್ಯತೆ ಕಾಣಿಸುವುದು. ಅಲ್ಲದೆ ಇತರ ವ್ಯಕ್ತಿಗಳೊಂದಿಗೆ ಬೆರೆಯುವುದು ಕಷ್ಟವಾಗಬಹುದು. ಉತ್ತಮ ಕೇಳುಗರಾದರೆ ಜ್ಞಾನದ ವೃದ್ಧಿಯೊಂದಿಗೆ ಸಮಸ್ಯೆಗಳನ್ನು ಅರಿಯಲು ಹಾಗೂ ಅದಕ್ಕೆ ಸೂಕ್ತ ಪರಿಹಾರಕಂಡುಕೊಳ್ಳಲು ಸಹಾಯವಾಗುವುದು.
ಕೇಳಿಸಿಕೊಳ್ಳುವ ಸಹನೆ ಅಥವಾ ತಾಳ್ಮೆ ಇದ್ದರೆ ಸಂಬಂಧಗಳಲ್ಲಿ ಸಾಕಷ್ಟು ಅನುಕೂಲವಾಗುವುದು. ಸಂಗಾತಿ ಏನು ಹೇಳುತ್ತಾಳೆ/ನೆ ಎನ್ನುವುದುನ್ನು ಕೇಳಿಸಿಕೊಳ್ಳುವುದರಿಂದ ಅವರ ಭಾವನೆಗೆ ಪರಸ್ಪರ ಗೌರವ ನೀಡುವುದರ ಜೊತೆಗೆ ಸಮಸ್ಯೆಗಳಿದ್ದರೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುವುದು. ಅತ್ಯುತ್ತಮ ಕೇಳುಗರಾಗಿದ್ದರೆ ನಾಲ್ಕು ಮಂದಿಯ ಮುಂದೆ ಉತ್ತಮವಾಗಿ ಮಾತನಾಡುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ವಿಷಯಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದರೆ ವ್ಯಕ್ತಿ ಉತ್ತಮ ಸಂವಹನಕಾರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕೇಳಿಸಿಕೊಳ್ಳುವ ಉತ್ತಮ ಸಾಮರ್ಥ್ಯ ಔದ್ಯೋಗಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರ ಅನುಕೂಲ ಉಂಟಾಗುವುದು ಎಂದಲ್ಲ. ಸಂಬಂಧಗಳ ವಿಚಾರದಲ್ಲೂ ಸಾಕಷ್ಟು ಅನುಕೂಲವಾಗುವುದು. ಈ ಹಿನ್ನೆಲೆಯಲ್ಲಿಯೇ ಸಂಬಂಧಗಳ ಅಡಿಪಾಯ ಗಟ್ಟಿಯಾಗಿರುತ್ತದೆ. ಸಂಗಾತಿಗಳ ನಡುವೆಯೂ ಪರಸ್ಪರ ಗೌರವ, ಪ್ರೀತಿ-ವಿಶ್ವಾಸ ಮೂಡುವುದು. ಹಾಗಾಗಿ ಕೇಳಿಸಿಕೊಳ್ಳುವ ಸಾಮಥ್ರ್ಯ ಒಂದು ಕೌಶಲ್ಯ. ಅದು ಎಲ್ಲರಿಗೂ ಒಲಿಯುವುದಿಲ್ಲ ಎಂದು ಹೇಳಲಾಗುವುದು.
ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರಲ್ಲಿ ಮಾತ್ರ ಕೇಳುವ ಸಾಮಥ್ರ್ಯ ಉತ್ತಮವಾಗಿದೆ. ಹಾಗಾಗಿಯೇ ಅವರು ಯಾವ ಕೆಲಸಕ್ಕೂ ಹಿಂಜರಿಯುವುದಿಲ್ಲ. ತಾವು ಉತ್ತಮ ಕೇಳುಗರಾಗಿ ಸಾಕಷ್ಟು ಜ್ಞಾನ ಹಾಗೂ ವಿಷಯವನ್ನು ಅರಿತುಕೊಳ್ಳುವರು. ಎದುರಾದ ಸಮಸ್ಯೆಗಳಿಗೆ ಅಥವಾ ಭಿನ್ನಾಭಿಪ್ರಾಯಗಳಿಗೆ ಬಹುಬೇಗ ನಿರ್ಣಯವನ್ನು ಕೊಡುವರು ಹಾಗೂ ಅತ್ಯುತ್ತಮ ತೀರ್ಪುಗಾರರಾಗಬಲ್ಲರು. ನಿಮಗೂ ನಿಮ್ಮಲ್ಲಿ ಕೇಳುವ ಸಾಮರ್ಥ್ಯ ಇದೆಯೇ? ಅಥವಾ ನಿಮ್ಮವರು ಅತ್ಯುತ್ತಮ ಕೇಳುಗರೇ? ಎನ್ನುವುದನ್ನು ಅರಿಯಲು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಚಕ್ರಗಳ ವಿವರಣೆಯನ್ನು ಪರಿಶೀಲಿಸಿ.

ಕುಂಭ
ಈ ರಾಶಿಚಕ್ರದ ವ್ಯಕ್ತಿಗಳು ಅತ್ಯುತ್ತಮ ಕೇಳುಗರು ಎನ್ನಲಾಗುತ್ತದೆ. ಇವರು ವಿಷಯಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ಪಡೆದುಕೊಳ್ಳಲು ಬಯಸುತ್ತಾರೆ. ಹಾಗಾಗಿಯೇ ಯಾವುದೇ ವಿಷಯಗಳನ್ನು ಕೇಳುವಾಗ ಇವರ ಮೆದುಳು ಶಾಂತ ಚಿತ್ತದಿಂದ ಆಲಿಸುವುದು. ಜೊತೆಗೆ ವಿಷಯಗಳ ಹುಡುಕಾಟದಲ್ಲಿ ಮೆದುಳು ಅತಿ ವೇಗದಲ್ಲಿ ಓಡುವುದು. ಅಲ್ಲದೆ ವಿಷಯವನ್ನು ಸೂಕ್ತವಾಗಿ ಕೇಳಿಸಿಕೊಳ್ಳುವುದರಿಂದ ನಿರ್ಣಯಗಳನ್ನು ಅಥವಾ ಒಂದು ನಿರ್ಧಾರವನ್ನು ಬಹುಬೇಗ ಪಡೆದುಕೊಳ್ಳುವರು.

ಕುಂಭ
ಇವರು ಸಾಮಾನ್ಯವಾಗಿ ಮಾತುಗಾರರಲ್ಲ. ಆದರೆ ಒಂದು ವಿಷಯ ಅಥವಾ ವಸ್ತುಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ನಿರರ್ಗಳವಾಗಿ ಹೇಳಬಲ್ಲರು. ಇವರು ತಮ್ಮಲ್ಲಿರುವ ಅತ್ಯುತ್ತಮ ಕೇಳುವ ಸಾಮಥ್ರ್ಯದಿಂದಲೇ ಕೌಶಲ್ಯ ವೃದ್ಧಿ ಹಾಗೂ ಯಶಸ್ಸು ಕಂಡುಕೊಳ್ಳುವರು. ಅಲ್ಲದೆ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಕಂಡುಕೊಳ್ಳುವರು ಎನ್ನಲಾಗುವುದು.

ಧನು
ಈ ರಾಶಿಯ ವ್ಯಕ್ತಿಗಳು ಅತ್ಯುತ್ತಮ ಸಂವಹನ ಕಾರರು ಎನ್ನಲಾಗುವುದು. ಇದಕ್ಕೆ ಪ್ರಮುಖ ಕಾರಣವೆಂದರೆ ಇವರಲ್ಲಿರುವ ಅತ್ಯುತ್ತಮ ಕೇಳುವ ಸಾಮಥ್ರ್ಯ. ಇವರು ವಸ್ತು ವಿಷಯಗಳನ್ನು ಬಹಳ ಆಳವಾಗಿ ಕೇಳುವುದು ಹಾಗೂ ಗ್ರಹಿಸುವ ಸಾಮಥ್ರ್ಯವನ್ನು ಪಡೆದುಕೊಂಡಿದ್ದಾರೆ. ಸದಾ ಹೊಸತನದ ಹುಡುಕಾಟ ಹಾಗೂ ಸಾಹಸ ಕ್ರಿಯೆಗಳಲ್ಲಿ ಭಾಗಿಯಾಗಲು ಬಯಸುವ ವ್ಯಕ್ತಿಗಳು ಇವರು. ಇವರ ಈ ಸಾಮಥ್ರ್ಯ ವೃದ್ಧಿಗೆ ಇವರಲ್ಲಿರುವ ಕೇಳುವ ಕೌಶಲ್ಯ ಎಂದು ಸಹ ಹೇಳಲಾಗುವುದು.

ಧನು
ಇವರಲ್ಲಿ ವಿಷಯವನ್ನು ಉತ್ತಮ ರೀತಿಯಲ್ಲಿ ಕೇಳುವ ಸಾಮಥ್ರ್ಯ ಇರುವುದರಿಂದ ಬಹುಬೇಗ ಎಂತಹ ಕೆಲಸವನ್ನಾದರೂ ಮಾಡಲು ಸಿದ್ಧರಾಗುತ್ತಾರೆ. ಯಾವುದೇ ಕೆಲಸ ಕೈಗೊಳ್ಳಲು ಹಿಂಜರಿಕೆಯನ್ನು ತೋರುವುದಿಲ್ಲ ಎಂದು ಹೇಳಲಾಗುವುದು. ಸಂಗಾತಿಯ ಭಾವನೆಗಳನ್ನು ಅತ್ಯುತ್ತಮ ರೀತಿಯಲ್ಲಿ ಆಲಿಸುವುದರಿಂದ ಉತ್ತಮ ಸಮಬಂಧ ಹೊಂದಲು ಯಶಸ್ವಿಯಾಗುತ್ತಾರೆ.

ಮೇಷ
ಈ ರಾಶಿಯವರಲ್ಲಿ ಕೇಳುವ ಸಾಮಥ್ರ್ಯ ಉತ್ತಮವಾಗಿದೆ. ಅದರೊಟ್ಟಿಗೆ ಕೆಲವು ಸಮಸ್ಯೆಗಳನ್ನು ಎದುರಿಸುವರು ಎನ್ನಲಾಗುವುದು. ಏಕೆಂದರೆ ಇವರು ಒಂದೇ ಸಮಯದಲ್ಲಿ ಹಲವಾರು ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಜೊತೆಗೆ ನಿರ್ಣಯಕ್ಕೆ ಬರುತ್ತಾರೆ. ಈ ಕಾರಣದಿಂದಲೇ ಅವರನ್ನು ಕೆಲವೊಮ್ಮೆ ಉತ್ತಮ ಕೇಳುಗರಲ್ಲ ಎಂದು ಸಹ ಭಾವಿಸಲಾಗುವುದು.

ಮೇಷ
ಇವರು ವ್ಯಕ್ತಿ ಯಾಕೆ ಹೇಳುತ್ತಿದ್ದಾನೆ ಎನ್ನುವುದಕ್ಕಿಂತ ಏನನ್ನು ಹೇಳುತ್ತಿದ್ದಾನೆ ಎನ್ನುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು ನಂತರ ಅದನ್ನು ಕೇಳುವ ರೂಢಿಯನ್ನು ಹೊಂದಿರುತ್ತಾರೆ. ಸಂಗಾತಿಯ ಭಾವನೆ ಹಾಗೂ ವಿಷಯಗಳನ್ನು ಸಾಕಷ್ಟು ಕಾಳಜಿ ಹಾಗೂ ಏಕಾಗ್ರತೆಯಿಂದ ಕೇಳುವುದರಿಂದ ಸಂಬಂಧವೂ ಉತ್ತಮವಾಗಿರುತ್ತದೆ ಎನ್ನಲಾಗುವುದು.

ವೃಷಭ
ಇವರು ಏನನ್ನೂ ತಪ್ಪು ಮಾಡಲು ಇಷ್ಟಪಡುವುದಿಲ್ಲ. ಇದು ಅವರ ಸಂಭಾಷಣೆಯ ವಿಚಾರದಲ್ಲೂ ಅನ್ವಯಿಸುತ್ತದೆ. ವಿಷಯಗಳನ್ನು ಉದ್ದೇಶ ಪೂರ್ವಕವಾಗಿ ಕೇಳುವುದರ ಜೊತೆಗೆ ಅದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕು ಎನ್ನುವುದರ ಬಗ್ಗೆಯೂ ಸಾಕಷ್ಟು ಯೋಚಿಸುತ್ತಾರೆ. ಇವರು ಇತರರು ಏನು ಮಾತನಾಡುತ್ತಿದ್ದಾರೆ ಎನ್ನುವ ಸೂಕ್ಷ್ಮತೆಯನ್ನು ಅರಿಯುವುದಿಲ್ಲ. ಆದರೆ ವಿಷಯಗಳನ್ನು ಉತ್ತಮ ಚಿಂತನೆಗೆ ಒಳಪಡಿಸುತ್ತಾರೆ.

ವೃಷಭ
ಇವರು ಯಾವುದೇ ಅನಗತ್ಯ ವಿಷಯಗಳಿಗೆ ಅಧಿಕ ಚಿಂತನೆ ನಡೆಸುವುದಿಲ್ಲ. ಬದಲಿಗೆ ತಮಗೆ ಸಂಬಂಧಿಸಿದ ವಿಷಯ ಅಥವಾ ತಮ್ಮವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಆಸಕ್ತರು ಹಾಗೂ ಕೇಳುಗರು ಆಗಿ ಇರುತ್ತಾರೆ. ಈ ಸ್ವಭಾವದಿಂದ ಇವರ ಸಂಗಾತಿಯ ಬಗ್ಗೆ ಸಾಕಷ್ಟು ಕಾಳಜಿ ಹಾಗೂ ಉತ್ತಮ ಸಂಬಂಧ ಹೊಂದಲು ಸಹಾಯವಾಗುವುದು.

ಮಕರ
ಈ ರಾಶಿಯ ವ್ಯಕ್ತಿಗಳು ಅದ್ಭುತ ಕೇಳುಗರು ಎಂದು ಹೇಳಲಾಗುವುದು. ಇತರರಿಂದ ಬಂದ ವಿಷಯ ಹಾಗೂ ಸಲಹೆಗಳನ್ನು ಅದ್ಭುತ ರೀತಿಯಲ್ಲಿ ಸ್ವೀಕರಿಸುವರು. ಸಾಕಷ್ಟು ಶ್ರಮ ಜೀವಿಗಳಾದ ಇವರು ತಮ್ಮ ಕೇಳುವ ಕೌಶಲ್ಯದಿಂದಲೇ ಸಾಕಷ್ಟು ಸಾಧನೆ ಹಾಗೂ ನಿರ್ಧಾರಗಳನ್ನು ಕೈಗೊಳ್ಳುವರು.

ಮಕರ
ಇವರು ಇತರರು ಏನು ಯೋಚಿಸುತ್ತಾರೆ ಅಥವಾ ಹೇಳುತ್ತಾರೆ ಎನ್ನುವುದರ ಬಗ್ಗೆ ಚಿಂತನೆ ನಡೆಸುವುದಿಲ್ಲ.
ಜ್ಞಾನ ಹೊಂದುವ ದಾಹ ಮಾತ್ರ ಇವರಿಗೆ ಹೆಚ್ಚಾಗಿರುತ್ತದೆ. ಉತ್ತಮ ಕೇಳುಗರಾಗಿರುವುದರಿಂದ ಇವರು ಸಾಕಷ್ಟು ಜ್ಞಾನ ಹೊಂದಿರುತ್ತಾರೆ. ಜೀವನದಲ್ಲಿ ಬರುವ ಎಂತಹದ್ದೇ ಸಮಸ್ಯೆಗಳನ್ನಾದರೂ ಎದುರಿಸಿ ಮುಂದೆ ಸಾಗುವ ವ್ಯಕ್ತಿಗಳಾಗಿರುತ್ತಾರೆ. ತತ್‍ಕ್ಷಣದಲ್ಲಿಯೇ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎನ್ನಲಾಗುವುದು.

ಮೀನ
ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ಕನಸು ಹಾಗೂ ಆಸೆಯನ್ನು ಹೊಂದಿರುತ್ತಾರೆ. ಅಂತಹ ಒಂದು ಅದ್ಭುತ ಆಸೆ, ಕನಸುಗಳನ್ನು ಕಾಣುವ ವ್ಯಕ್ತಿಗಳು ಎಂದರೆ ಮೀನ ರಾಶಿಯ ವ್ಯಕ್ತಿಗಳು. ಇವರು ಸಾಕಷ್ಟು ಸಮಯ ಕನಸಿನ ಲೀಕದಲ್ಲಿಯೇ ಸಂಚರಿಸುತ್ತಿರುತ್ತಾರೆ. ಹೊಸ ಆಲೋಚನೆ ಹಾಗೂ ಆಸೆಗಳು ಇವರನ್ನು ಉತ್ತಮ ಕೇಳುಗರನ್ನಾಗಿ ಮಾಡುವುದು. ಅಲ್ಲದೆ ಸಾಕಷ್ಟು ಜ್ಞಾನ ಹೊಂದಲು ಪ್ರೇರೇಪಿಸುವುದು. ತಮ್ಮ ಜ್ಞಾನ ಹಾಗೂ ಸಂಭಾಷಣೆಯ ಮೂಲಕ ಇತರರನ್ನು ಆಕರ್ಷಿಸಬೇಕು ಎಂದು ಬಯಸುವ ವ್ಯಕ್ತಿಗಳು ಇವರು ಹಾಗಾಗಿಯೇ ವಿಷಯಗಳನ್ನು ತಿಳಿದುಕೊಳ್ಳುವಾಗ ಸಾಕಷ್ಟು ಕಾಳಜಿ ಹಾಗೂ ಉತ್ತಮ ಕೇಳುಗರಾಗಿ ಇರುತ್ತಾರೆ. ಇವರ ಈ ಸಾಮಥ್ರ್ಯದಿಂದಲೇ ಸಂಬಂಧವನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಬಲ್ಲರು.



Click it and Unblock the Notifications











