Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ 5 ರಾಶಿಯವರ ಬಗ್ಗೆ ಯಾರು ಏನೇ ಅಂದರೂ, ಪ್ರೀತಿಯ ವಿಷಯದಲ್ಲಿ ಮೋಸ ಮಾಡಲ್ಲ!

ಒಂದು ಸಂಬಂಧದಲ್ಲಿ ಇರುವುದು ಎಂದರೆ ಅದು ಅಷ್ಟು ಸುಲಭದ ವಿಚಾರವಲ್ಲ. ಪ್ರತಿಯೊಂದು ಸಣ್ಣ ಪುಟ್ಟ ವಿಚಾರದಲ್ಲೂ ಹೊಂದಾಣಿಕೆಯಿರಬೇಕು. ಅನೇಕ ಬಾರಿ ತಮ್ಮ ಸಂಗಾತಿ ಅಥವಾ ಪ್ರೇಮಿಗಾಗಿ ತ್ಯಾಗ ಮಾಡಬೇಕಾಗುವುದು. ಅಂತಹ ತ್ಯಾಗದ ಮನೋಭಾವ ಇದ್ದಾಗ ಮಾತ್ರ ಸಂಬಂಧ ಶಾಶ್ವತವಾಗಿ ಉಳಿಯುತ್ತದೆ.
ಇಂತಹ ತ್ಯಾಗದ ಗುಣ ಎಲ್ಲರಲ್ಲೂ ಇರುವುದಿಲ್ಲ. ಕೆಲವರು ಮಾತ್ರ ಅಂದರೆ ಯಾರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಬೇಕು ಅಥವಾ ಸಂಗಾತಿಯೊಂದಿಗೆ ಉತ್ತಮ ಜೀವನ ನಡೆಸಬೇಕು ಅಂದುಕೊಳ್ಳುತ್ತಾರೋ ಅಂತಹವರು ಮಾತ್ರ ಉತ್ತಮ ಪ್ರೇಮಿಯಾಗಿ ಉಳಿದುಕೊಳ್ಳುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಉತ್ತಮ ಪ್ರೇಮಿಯಾಗಿ ಉಳಿದುಕೊಳ್ಳುತ್ತಾರೆ. ತಮ್ಮ ಸಂಗಾತಿಗಾಗಿ, ಅವರ ಅಗತ್ಯತೆಗಳಿಗೆ ಅನುಗುಣವಾಗಿ ಅಥವಾ ಪೂರಕವಾಗಿ ವರ್ತಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರದವರು ಯಾರು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.....

ಮೇಷ
ಎಲ್ಲಾ ರಾಶಿಯವರಿಗಿಂತ ಅತ್ಯಂತ ಉತ್ತಮ ಪ್ರೇಮಿಯಾಗಿ ಉಳಿಯುವ ರಾಶಿಚಕ್ರವಾಗಿದೆ. ಈ ರಾಶಿಯವರಿಗೆ ತಮ್ಮ ಭಾವನೆಯನ್ನು ಹೇಳಿಕೊಳ್ಳಲು ಆರಂಭದಲ್ಲಿ ಕಷ್ಟಪಡುತ್ತಾರೆ ಆದರೂ ತಮ್ಮ ಎಲ್ಲಾ ವಿಚಾರಗಳನ್ನೂ ವ್ಯಕ್ತಪಡಿಸುತ್ತಾರೆ. ಇವರು ಸದಾ ಪ್ರೀತಿಯನ್ನು ನೀಡುವ ಹಾಗೂ ಪ್ರೀತಿಯನ್ನು ಉಳಿಸಿಕೊಳ್ಳುವ ವ್ಯಕ್ತಿಗಳಾಗಿ ಉಳಿಯುತ್ತಾರೆ. ಜೊತೆಗೆ ಅತ್ಯುತ್ತಮ ಅನುಭವವನ್ನು ಹೊಂದುತ್ತಾರೆ. ಈ ರಾಶಿಯವರು ತಮ್ಮ ರಹಸ್ಯವನ್ನು ಬಹಳ ಗೌಪ್ಯವಾಗಿ ಇಟ್ಟುಕೊಂಡಿರುತ್ತಾರೆ.

ಕರ್ಕ
ಈ ರಾಶಿಯವರು ವೈಕ್ತಿಕವಾಗಿ ಉತ್ತಮ ವ್ಯಕ್ತಿಗಳು. ಇವರಲ್ಲಿ ಭಾವನೆಗಳ ಏರಿಳಿತಗಳು ಇರುತ್ತವೆ. ಏಡಿಯಂತೆ ಚಲಿಸುತ್ತಾರೆ. ಏಡಿ ಮರೆಯಾಗುವಂತೆ ಇವರು ಸಹ ಕೆಲವು ವಿಚಾರದಲ್ಲಿ ಮೆರೆಯಾಗುತ್ತಾರೆ. ಸಾಮಾನ್ಯವಾಗಿ ತೀವ್ರವಾದ ಪ್ರೀತಿಯನ್ನು ತೋರುತ್ತಾರೆ. ಇವರ ಪ್ರೀತಿ, ಭಾವನೆ ಹಾಗೂ ಕಲ್ಪನೆಗಳು ಅವರ ರೀತಿಯಲ್ಲಿಯೇ ಸಾಗುವುದು.

ವೃಷಭ
ಈ ವ್ಯಕ್ತಿಗಳು ಅತ್ಯಂತ ಶಕ್ತಿಶಾಲಿ ಹಾಗೂ ವಿಶ್ವಾಸಾರ್ಹರಾಗಿರುತ್ತಾರೆ. ಪ್ರೀತಿಯ ವಿಷಯದಲ್ಲಿ ಇವರು ಸುಂದರವಾದ ಹಾಗೂ ದೋಷರಹಿತವಾದ ಭಾವನೆಗಳನ್ನು ನೀಡುತ್ತಾರೆ. ಇವರು ತಾವು ಪ್ರೀತಿಸುವವರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಇವರು ತಮ್ಮ ವೈಯಕ್ತಿಕ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುತ್ತಾರೆ.

ತುಲಾ
ಈ ವ್ಯಕ್ತಿಗಳು ತಮ್ಮ ಸುತ್ತಲಿರುವ ಎಲ್ಲರೂ ಸಮಾನವಾಗಿರಲು ಬಯಸುತ್ತಾರೆ. ಇನ್ನೊಂದೆಡೆ ಇವರು ಸ್ನೇಹ ಪರರಾಗಿ ಇರುತ್ತಾರೆ. ತಮ್ಮ ಪ್ರೀತಿಪಾತ್ರರ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಇವರು ಘರ್ಷಣೆಯನ್ನು ದ್ವೇಷಿಸುತ್ತಾರೆ. ಇವರ ಏಕೈಕ ಗುರಿ ಎಂದರೆ ಸರಳವಾಗಿ ಪ್ರೀತಿಸುವುದು ಮತ್ತು ಅದನ್ನು ಉಳಿಸಿಕೊಳ್ಳುವುದು. ಇವರು ಪ್ರೀತಿ ನೀಡಲು ಯಾವುದೇ ಮಿತಿಯನ್ನು ಹೊಂದಿರುವುದಿಲ್ಲ.

ವೃಶ್ಚಿಕ
ವೈಯಕ್ತಿಕವಾಗಿ ಇವರು ಅತ್ಯುತ್ತಮ ಪ್ರೇಮಿಗಳಾಗಿರುತ್ತಾರೆ. ಇವರು ಕಷ್ಟಕರವಾದ ಲೈಂಗಿಕ ಆಕರ್ಷಣೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಪ್ರೀತಿ ಮತ್ತು ಭಾವೋದ್ರೇಕಕ್ಕೆ ಶರಣಾಗುತ್ತಾರೆ. ಮಲಗುವ ಕೋಣೆಯಲ್ಲಿ ಹೊಸ ಬಗೆಯಲ್ಲಿ ಅನುಭವವನ್ನು ಹೊಂದಲು ಬಯಸುತ್ತಾರೆ. ಇವರು ಸಂಗಾತಿಯೊಂದಿಗೆ ಎಂದಿಗೂ ಬೇಸರವನ್ನು ಹೊಂದುವುದಿಲ್ಲ. ಇನ್ನೊಂದೆಡೆ ಇವರು ಅತ್ಯಂತ ಅಸೂಯೆ ಮತ್ತು ನರಕದಂತೆ ಸ್ವಾಧೀನಪಡಿಸಿಕೊಳ್ಳುತ್ತಾರೆ ಎನ್ನಬಹುದು.



Click it and Unblock the Notifications
