For Quick Alerts
ALLOW NOTIFICATIONS  
For Daily Alerts

ಈ ನಾಲ್ಕು ರಾಶಿಯವರು, ತಪ್ಪು ಮಾಡಿದರೂ ಕ್ಷಮೆ ಮಾತ್ರ ಕೇಳಲ್ಲ!

By Hemanth
|

ತಪ್ಪು ಮಾಡದವರು ಯಾರೌರೇ? ತಪ್ಪೇ ಮಾಡದವರು ಎಲ್ಲ್ ಅವ್ರೆ....ಎನ್ನುವ ಹಾಡು ಈ ಲೇಖನಕ್ಕೆ ಸರಿಯಾಗಿ ಹೊಂದಿಕೆಯಾಗುವುದು. ತಪ್ಪು ಮಾಡದವರು ಈ ಜಗತ್ತಿನಲ್ಲೇ ಇರಲಿಕ್ಕಿಲ್ಲ. ಪ್ರತಿಯೊಬ್ಬರು ಒಂದಲ್ಲಾ ಒಂದು ತಪ್ಪು ಮಾಡಿಯೇ ಇರುತ್ತಾರೆ. ಆದರೆ ತಪ್ಪು ಮಾಡಿಯೂ ಕ್ಷಮೆ ಕೇಳದೆ ಇದ್ದರೆ ಅದು ಉದ್ಧಟತನವಾಗುವುದು.

ಕೆಲವರು ತಪ್ಪು ಮಾಡಿದರೂ ಸಹಿತ ತಮ್ಮಲ್ಲಿನ ಹಠಮಾರಿ ಧೋರಣೆಯಿಂದಾಗಿ ಕ್ಷಮೆ ಕೇಳಲು ತಯಾರಾಗಿರುವುದಿಲ್ಲ. ಇಂತಹ ಹಠಮಾರಿತನಕ್ಕೆ ಅವರ ರಾಶಿಚಕ್ರವು ಕಾರಣವಾಗಿರುವುದು. ಹೌದು, ಕೆಲವೊಂದು ರಾಶಿಚಕ್ರದವರು ತಪ್ಪು ಮಾಡಿಯೂ ಕ್ಷಮೆ ಕೇಳಲ್ಲ.

ಇಂತಹ ನಾಲ್ಕು ರಾಶಿಚಕ್ರಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಬೇರೆಯವರಲ್ಲಿ ಕ್ಷಮೆ ಕೇಳುವುದರಿಂದ ತಾವು ಸಣ್ಣವರಾಗಿ ಬಿಡುತ್ತೇವೆಂದು ಈ ರಾಶಿಯವರು ಭಾವಿಸುತ್ತಾರೆ. ತಮ್ಮ ಜಾಯಮಾನದಲ್ಲೇ ಇವರು ಕ್ಷಮೆ ಕೇಳಲು ಮುಂದಾಗುವುದಿಲ್ಲ. ಇಂತಹ ರಾಶಿಗಳ ಬಗ್ಗೆ ತಿಳಿಯಿರಿ....

ವೃಷಭ

ವೃಷಭ

ವೃಷಭ ರಾಶಿಯವರು ತಪ್ಪು ಒಪ್ಪಿಕೊಳ್ಳುವ ಮೊದಲು ಹಾಳಾಗುವರು. ಭೂಮಿಯ ಸಂಕೇತವಾಗಿರುವ ಈ ರಾಶಿಯವರು ತುಂಬಾ ಹಠಮಾರಿ ವ್ಯಕ್ತಿತ್ವದವರು ಎಂದು ಹೇಳಲಾಗುತ್ತದೆ. ವೃಷಭ ರಾಶಿಯವರ ಜತೆಗೆ ನೀವು ವಾದ ಮಾಡಲು ಹೋದರೆ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ನಿಮ್ಮನ್ನು ನೀವು ಸರಿಯೆಂದು ಸಾಬೀತುಮಾಡಲು ತುಂಬಾ ಕಠಿಣವಾಗುವುದು. ಅವರು ತಮ್ಮ ವಾದಕ್ಕೆ ಎಷ್ಟು ಅಂಟಿಕೊಂಡಿರುವರೆಂದರೆ ಬೇರೆಯವರ ಮಾತು ಕೇಳಲು ತಯಾರಾಗಿರುವುದಿಲ್ಲ.

ವೃಷಭ

ವೃಷಭ

ವೃಷಭ ರಾಶಿಯವರು ಜನ್ಮತಃ ಹೋರಾಟಗಾರರಲ್ಲ. ಯಾರಾದರೂ ಅವರನ್ನು ಪೀಡಿಸಿದರೆ ಮಾತ್ರ ಜಗಳ ಮಾಡುವರು. ತಾವಾಗಿಯೇ ಜಗಳಕ್ಕೆ ಹೋಗುವವರಲ್ಲ. ನಿಮಗೆ ಅವರೊಂದಿಗೆ ಯಾವುದೇ ರೀತಿಯ ಮನಸ್ತಾಪವಿದ್ದರೆ ಆಗ ನೀವು ಶಾಂತವಾಗಿರಿ. ತಾವು ತಪ್ಪು ಮಾಡಿದ್ದೇವೆಂದು ಅವರು ಯಾವಾಗ ಒಪ್ಪಿಕೊಳ್ಳುತ್ತಾರೆಂದು ಹೇಳುವುದು ಕಷ್ಟ. ಯಾಕೆಂದರೆ ತಾವು ತಪ್ಪು ಮಾಡುವುದೇ ಅಪರೂಪವೆಂದು ಅವರು ಭಾವಿಸಿರುವರು. ಇನ್ನೊಂದು ಬದಿಯಲ್ಲಿ ಅವರು ತಮ್ಮ ವಾದದಲ್ಲಿ ತುಂಬಾ ಆತ್ಮವಿಶ್ವಾಸದಿಂದ ಇರುವರು ಮತ್ತು ತಾವು ಮಾಡಿದ್ದು ಸರಿ ಎನ್ನಬಹುದು. ಇಂತಹ ರಾಶಿಯವರ ಜತೆಗೆ ವಾದ ಮಾಡುವಾಗ ಎಚ್ಚರ ವಹಿಸಿ. ಇನ್ನು ಈ ರಾಶಿಯವರು ವೃಷಭ ಚಿಹ್ನೆಯು ಮೊಂಡುತನ ಮತ್ತು ಅಸೂಯೆಗೆ ಹೆಸರುವಾಸಿಯಾಗಿದೆ. ಈ ರಾಶಿಚಕ್ರದ ಜನರು ಯಾವುದೇ ಬೆಲೆಗೆ ತಮ್ಮ ಸ್ಥಿತಿಯ ಭಾಗವನ್ನು ನಿರ್ವಹಿಸುತ್ತಾರೆ. ಇವರು ಆಳವಾಗಿ ನಿಷ್ಠರಾಗಿರುವ ಜನರೊಂದಿಗೆ ಅಗಾಧವಾಗಿ ವರ್ತಿಸುತ್ತಾರೆ.

ಸಿಂಹ

ಸಿಂಹ

ಸಿಂಹ ರಾಶಿಯವರು ಒಳ್ಳೆಯ ಆತ್ಮವೆಂದು ಪರಿಗಣಿಸಲಾಗಿದೆ. ಈ ರಾಶಿಯವರು ತಮ್ಮನ್ನು ತಾವು ದೊಡ್ಡ ನಾಯಕ ಅಥವಾ ಎಲ್ಲರನ್ನು ಉಳಿಸುವವ ಎಂದು ಭಾವಿಸಿರುವರು. ಇವರು ತಮ್ಮ ಕೆಟ್ಟ ಕನಸಿನಲ್ಲಿ ಕೂಡ ತಾವೊಬ್ಬ ಕೆಟ್ಟ ವ್ಯಕ್ತಿಯೆಂದು ಕಲ್ಪನೆ ಮಾಡಿಕೊಳ್ಳಲಾರರು. ತಮ್ಮ ನಕಾರಾತ್ಮಕ ನಡವಳಿಕೆಯು ಇದನ್ನು ಸಾಬೀತುಮಾಡುವುದು ಎಂದು ಅವರು ನಂಬಿದ್ದಾರೆ ಮತ್ತು ಇದರಿಂದ ಅವರು ಯಾವತ್ತೂ ಕ್ಷಮೆ ಕೇಳಲ್ಲ. ಅವರ ದಿನವನ್ನು ಉತ್ತಮ ಪಡಿಸಲು ಕಥೆಯಲ್ಲಿ ಇನ್ನೊಂದು ಪಾತ್ರವೂ ಇದೆ ಎನ್ನುವುದನ್ನು ಅವರು ಮರೆಯುವರು.

ಸಿಂಹ

ಸಿಂಹ

ಇವರು ತುಂಬಾ ಸಿಡಿದುಬೀಳುವವರು. ಇವರು ನಿಮ್ಮ ಗೆಳೆಯರಾಗಿದ್ದರೂ ಸಹಿತ ಒಂದು ವಿಧದಲ್ಲಿ ಇವರು ನಿಮ್ಮ ಶತ್ರುಗಳಾಗಿರುವರು. ನಿಮಗೆ ಅವರೊಂದಿಗೆ

ಯಾವುದೇ ರೀತಿಯ ಮನಸ್ತಾಪವಿದ್ದರೆ, ಅದನ್ನು ಸುಲಭವಾಗಿ ಪರಿಹರಿಸ ಬಹುದಾಗಿದ್ದರೂ ಈ ರಾಶಿಯವರು ಮಾತ್ರ ಅದನ್ನು ಬಹುದೊಡ್ಡ ವಿಷಯವೆಂದು ವಾದಿಸುವರು. ಇವರೊಂದಿಗೆ ಮಾತನಾಡುವಾಗ ನೀವು ಬೈಗುಳ ಎದುರಿಸಬಹುದು ಅಥವಾ ಮುಖದ ಮೇಲೆ ಹೊಡೆದಂತೆ ಮಾತನಾಡಬಹುದು. ನಿಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚು ಪ್ರಯತ್ನಿಸಿದಷ್ಟು ಈ ವಾದವು ಮತ್ತಷ್ಟು ಕ್ಲಿಷ್ಟವಾಗುತ್ತಾ ಹೋಗುವುದು. ಅವರೊಂದಿಗೆ ಮಾತನಾಡುವಾಗ ನಿಮ್ಮ ಭಾವನೆಗಳನ್ನು ಕಟ್ಟಿಹಾಕಿಕೊಳ್ಳಬೇಕು ಮತ್ತು ಮುಂದಿನ ಸಲ ಇಂತಹ ವಾಗ್ವಾದ ಎದುರಾಗದಂತೆ ನೋಡಿಕೊಳ್ಳಬೇಕು. ಇನ್ನು ಚತುರತೆಯ ರಾಜ ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ. ಅವರು ಉತ್ತಮ ಭಾಷಣಕಾರರು ಮತ್ತು ರಾಜಕಾರಣಿಗಳು ಆಗಿರುತ್ತಾರೆ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರಿಂದ ನೀವು ಕ್ಷಮೆ ನಿರೀಕ್ಷಿಸುತ್ತಾ ಇದ್ದರೆ ನೀವು ಕನಸು ಕಾಣುತ್ತಿದ್ದೀರಿ ಎಂದರ್ಥ. ವೃಶ್ಚಿಕ ರಾಶಿಯವರು ಏನೂ ಮಾಡಲು ಹೋಗಲ್ಲ ಮತ್ತು ತಮ್ಮಿಂದಾಗಿ ಸಮಸ್ಯೆಗಳು ಅಥವಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಒಪ್ಪಿಕೊಳ್ಳಲು ಅವರು ತಯಾರಿರುವುದಿಲ್ಲ. ಇವರು ತುಂಬಾ ಕುತಂತ್ರ ಹಾಗೂ ಲೆಕ್ಕಾಚಾರದ ವ್ಯಕ್ತಿಗಳು. ಇದರಿಂದಾಗಿ ಅವರು ತಮ್ಮ ತಪ್ಪನ್ನು ಸರಿಯೆಂದು ಹೇಳಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿಕೊಳ್ಳುವರು. ಅವರ ತಪ್ಪಿನಿಂದಾಗಿ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅವರು ಆ ಪರಿಸ್ಥಿತಿಯನ್ನೇ ಬದಲಾಯಿಸುವರು. ಆದರೂ ಅವರು ತಮ್ಮ ತಪ್ಪು ಒಪ್ಪಿಕೊಳ್ಳಲ್ಲ.

ವೃಶ್ಚಿಕ

ವೃಶ್ಚಿಕ

ಇವರು ದೊಡ್ಡ ಹೋರಾಟಗಾರರಲ್ಲ. ಆದರೆ ಅವರಿಗೆ ನಿವೇನಾದರೂ ತಪ್ಪು ಮಾಡಿದ್ದೀರಿ ಅಥವಾ ರಕ್ಷಣಾ ವಲಯದ ಮೇಲೆ ದಾಳಿ ಮಾಡಿದ್ದೀರಿ ಎಂದು ಅನಿಸಿದರೆ ಆಗ ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂದು ನಿಮಗೆ ಮನವರಿಕೆ ಮಾಡಿಕೊಡುವರು. ನೀವು ತಪ್ಪು ಮಾಡಿದ್ದೀರಿ ಎಂದು ಮನವರಿಕೆ ಮಾಡಿಕೊಳ್ಳುವ ಮೊದಲೇ ಅವರ ವಾದವು ಶೂನ್ಯದಿಂದ 60ರ ತನಕ ತಲುಪುವುದು. ನೀವು ವಾದ ಕೊನೆಗೊಳಿಸುವಂತೆ ಅವರು ಮಾಡಬಹುದು. ಇದರಿಂದ ನಿಮಗೆ ತುಂಬಾ ನೋವಾಗಲೂ ಬಹುದು. ನೀವೇನಾದರೂ ತಪ್ಪು ಮಾಡಿದ್ದರೆ ಆಗ ಶಾಂತವಾಗಿರುವುದೇ ಒಳ್ಳೆಯದು. ಇನ್ನು ವೃಶ್ಚಿಕ ರಾಶಿಯವರು ತುಂಬಾ ಬದ್ಧತೆ ಇರುವವರು ಮತ್ತು ಅವರಿಗೆ ತಮ್ಮ ಕೆಲಸದ ಬಗ್ಗೆ ಉತ್ಸಾಹ ಇರುವುದು. ಅವರು ಮಾಡುವಂತಹ ಯಾವುದೇ ಕೆಲಸದಲ್ಲಾದರೂ ಅವರು ಭಾವನಾತ್ಮಕವಾಗಿ ತೊಡಗಿಕೊಳ್ಳುವರು. ಇದರಿಂದಾಗಿ ಅವರು ಮಾಡುವಂತಹ ಪ್ರತಿಯೊಂದು ಕೆಲಸವು ಅದ್ಭುತವಾಗಿರುವುದು. ಅವರಲ್ಲಿ ಯಾವತ್ತೂ ಹೋರಾಡುವಂತಹ ಛಾತಿ ಇರುವುದು. ಸೋಲೊಪ್ಪಿಕೊಳ್ಳುವುದು ಅವರ ಜಾಯಮಾನದಲ್ಲೇ ಇಲ್ಲ. ತಮ್ಮ ಗುರಿ ಮುಟ್ಟಲು ಅವರಿಗೆ ವಿಳಂಬ ಅಥವಾ ಅಡೆತಡೆಯುಂಟಾದರೆ ಅವರು ಚಿಂತಿಸಲ್ಲ. ಅವರು ಯಾವಾಗಲೂ ತಮ್ಮ ಗುರಿ ತಲುಪಲು ಪ್ರಯತ್ನಿಸುತ್ತಲೇ ಇರುವರು. ಈ ರಾಶಿಯವರನ್ನು ಒಂದೇ ಪದದಲ್ಲಿ ಹೇಳುವುದಾದರೆ ಇವರು ತುಂಬಾ ಸ್ವಾವಲಂಬಿಗಳು. ಈ ರಾಶಿಯವರು ತಮ್ಮ ಕೆಲಸಕ್ಕಾಗಿ ಬೇರೆ ಯಾರನ್ನೂ ನಂಬಿ ಕೂರಲ್ಲ. ಅವರು ತಾವಾಗಿಯೇ ಕೆಲಸ ಮಾಡುವರು ಮತ್ತು ತಮಗೆ ಸಾಧ್ಯವಿರುವುದನ್ನು ಸಾಧಿಸಿಯೇ ತೀರುವರು.

ಕುಂಭ

ಕುಂಭ

ನಿಮಗೆ ಕುಂಭ ರಾಶಿಯವರ ಬಗ್ಗೆ ತಿಳಿದಿದ್ದರೆ ಆಗ ಅವರಿಂದ ಮೊದಲು ಕ್ಷಮೆ ಕೇಳುವಂತೆ ಮಾಡಲು ನಿಮಗೆ ಸಾಧ್ಯವಾಗದು. ನಿಮಗೆ ಅವರೇನಾದರೂ ತಪ್ಪನ್ನು ಮಾಡಿದ್ದರೆ ಆಗ ಅದಕ್ಕೆ ಕ್ಷಮೆ ಕೇಳುವಂತೆ ಮಾಡಲು ನೀವು ತುಂಬಾ ದೀರ್ಘ ಹಾದಿ ಸವೆಸಬೇಕು. ಯಾಕೆಂದರೆ ಅವರು ಬೇಗನೆ ಕ್ಷಮೆ ಕೇಳುವಂತಹ ಜಾಯಮಾನದವರಲ್ಲ. ತಪ್ಪನ್ನು ಎದುರಿಸುವುದು ಅವರ ದೊಡ್ಡ ಭೀತಿಗಳಲ್ಲಿ ಒಂದು. ತಮ್ಮ ತಪ್ಪಿನ ಬಗ್ಗೆ ಹೆಚ್ಚು ಸಮಯ ಕಳೆದುಹೋದರೆ ಆಗ ಜನರು ಎಲ್ಲವನ್ನು

ಮರೆಯುತ್ತಾರೆ ಎಂದು ತಿಳಿದಿರುವರು. ನಿಮ್ಮಲ್ಲಿ ಕ್ಷಮೆ ಕೇಳಬೇಕೆಂದು ಅವರಿಗೆ ಮನಸ್ಸಿನಾಳದಲ್ಲಿ ತಿಳಿದಿದ್ದರೂ ಸಹಿತ ಅವರು ಕ್ಷಮೆ ಮಾತ್ರ ಕೇಳಲ್ಲ. ಈ ಲೇಖನ ನಿಮಗೆ ಇಷ್ಟವಾಗಿದೆಯಾ? ಹಾಗಾದರೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ. ಇನ್ನಷ್ಟು ರಾಶಿಚಕ್ರಗಳ ಬಗ್ಗೆ ತಿಳಿಯಲು ಇದೇ ಸೆಕ್ಷನ್ ನಲ್ಲಿ ನೋಡುತ್ತಲಿರಿ.

English summary

zodiac-signs-which-are-known-to-never-agree-their-mistakes

According to astrology, even this nature of humans can be related to their zodiac signs. These signs have a great role to play. Here, in this article, we have listed the 4 zodiac signs, the individuals of which are never apologetic about what they do in life. These people come across as being cold shouldered ones when it comes to being sorry for doing something wrong. They never feel the need to apologise as that is something that is not in their nature at all! Check them out...
X
Desktop Bottom Promotion