Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪ್ರತಿಯೊಂದು ರಾಶಿಚಕ್ರದವರು ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ ನೋಡಿ
ಪ್ರೀತಿ ಎನ್ನುವುದು ಒಂದು ಸುಂದರ ಅನುಭವ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದೇನಿದ್ದರೂ ಅನುಭವಿಸಬೇಕಷ್ಟೆ. ಅನುರಾಗ ಪ್ರೀತಿಯಿಂದಲೇ ವ್ಯಕ್ತಿಗೆ ಭರವಸೆ ಹಾಗೂ ಬದುಕಿನ ಬಗ್ಗೆ ಒಂದಿಷ್ಟು ಆಸೆ ಆಕಾಂಕ್ಷೆಗಳು ಹುಟ್ಟಿಕೊಳ್ಳುವುದು ಎಂದರೆ ತಪ್ಪಾಗಲಾರದು. ಪ್ರೀತಿ ಎನ್ನುವುದು ಎಲ್ಲರಿಗೂ ಒಂದೇ ಅನುಭವ ಹಾಗೂ ಭಾವನೆಯನ್ನು ನೀಡಬಹುದು ಆದರೆ ಅದನ್ನು ವ್ಯಕ್ತ ಪಡಿಸುವ ವಿಧಾನಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ.
ಜೀವನದಲ್ಲಿ ಸಂತೋಷದ ಜ್ಯೋತಿಯನ್ನು ಬೆಳಗಿಸುವುದು ಪ್ರೀತಿ. ಜೀವನದಲ್ಲಿ ಪ್ರೀತಿ ಸಿಗದ ವ್ಯಕ್ತಿಯು ಮಾನಸಿಕವಾಗಿ ಆರೋಗ್ಯವಂತನಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಇತರರಿಗೆ ಪ್ರೀತಿಯನ್ನು ಕೊಟ್ಟು ಪ್ರೀತಿಯನ್ನು ಪಡೆದುಕೊಳ್ಳುತ್ತಾನೆ. ಆಗಲೇ ಸ್ನೇಹ ಸಂಬಂಧ ಎನ್ನುವ ಬಾಂಧವ್ಯ ಭದ್ರವಾಗಿ ಉಳಿದು ಕೊಳ್ಳುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರೀತಿ ಎನ್ನುವುದು ಜೀವನದ ಅತ್ಯಗತ್ಯವಾದ ಸಂಗತಿ. ಇದನ್ನು ವ್ಯಕ್ತಿ ರಾಶಿಕ್ರದ ಪ್ರಭಾವದ ಆಧಾರದ ಮೇಲೆಯೇ ವ್ಯಕ್ತಪಡಿಸುತ್ತಾನೆ ಎನ್ನಲಾಗುವುದು. ಹಾಗಾದರೆ ಯಾವ ರಾಶಿಯವರು ಯಾವ ಬಗೆಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಎಂದು ನೋಡೋಣ ಬನ್ನಿ...

ಮೇಷ
ಮೇಷ ರಾಶಿಯವರು ಪ್ರಬಲ ವ್ಯಕ್ತಿಗಳಾಗಿರುತ್ತಾರೆ. ಇವರು ಯುದ್ಧದಲ್ಲಾಗಲೀ ಅಥವಾ ಪ್ರೀತಿಯಲ್ಲಿಯೇ ಆಗಿರಲಿ ತಮ್ಮ ಸಮರ್ಪಣೆಯನ್ನು ಉತ್ತಮವಾಗಿ ತೋರುತ್ತಾರೆ. ಜೊತೆಗೆ ಅದನ್ನು ಸೊಗಸಾದ ರೀತಿಯಲ್ಲಿ ನಿರ್ವಹಿಸುತ್ತಾರೆ. ಸ್ವಾಮ್ಯ ಸೂಚಕರಾದ ಇವರು ತಮ್ಮ ಪಾಲುದಾರರನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡದ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಪಾಲುದಾರರು ಅವರ ಸ್ನೇಹಿತರೊಂದಿಗೆ ಸಾಕಷ್ಟು ಸಮಯವನ್ನು ಕಳೆದರೂ ಇಷ್ಟಪಡುವುದಿಲ್ಲ. ಇವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ಇವರು ತಮ್ಮ ಪ್ರೀತಿಯನ್ನು ತೋರಿಸಲು ಕವಿತೆಯನ್ನು ಬರೆಯಬಹುದು. ಇಲ್ಲವೇ ಹಲವಾರು ಉಡುಗೊರೆಯನ್ನು ನೀಡಬಹುದು

ವೃಷಭ
ಇವರು ತಮ್ಮ ಪಾಲುದಾರರ ಭಕ್ತರಾಗಿರುತ್ತಾರೆ. ತಮ್ಮ ಪ್ರೀತಿಯನ್ನು ಬಹಳ ಸರಳ ರೂಪದಲ್ಲಿ ತೋರಿಸಿಕೊಳ್ಳುವರು. ತಮ್ಮ ಜೀವನದಲ್ಲಿ ಪ್ರೀತಿಯನ್ನು ಒಪ್ಪಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವರು. ಪ್ರೀತಿಯ ವಿಚಾರದಲ್ಲಿ ಇವರು ಅತ್ಯುತ್ತಮ ನಿಷ್ಠಾವಂತರು. ಇವರು ಪ್ರಣಯ ಮತ್ತು ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸುವರು. ಇವರು ವ್ಯಕ್ತಿಯ ಪ್ರೀತಿಯ ಸಿಲುಕೊಂಡರೆ ಬಹು ತಲ್ಲೀನರಾಗಿರುತ್ತಾರೆ.

ಮಿಥುನ
ಈ ರಾಶಿಯ ವ್ಯಕ್ತಿಗಳು ತಮ್ಮ ಭಾವನೆಗಳ ಮೇಲೆ ಸಾಕಷ್ಟು ನಿಯಂತ್ರಣವನ್ನು ಇಟ್ಟುಕೊಂಡಿರುತ್ತಾರೆ. ತಮ್ಮ ಪ್ರೀತಿಯ ಭಾವನೆಯು ಖಚಿತವಾಗಿರುವಾಗ ಮಾತ್ರ ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ. ಇವರು ನಿಜಕ್ಕೂನಿರಾಸೆಯನ್ನು ಅನುಭವಿಸಲಾರರು. ತಮ್ಮ ಪ್ರೀತಿಪಾತ್ರರಿಗೆ ಅಡುಗೆ ಮಾಡಿಕೊಡಲು ಮತ್ತು ಚಲನಚಿತ್ರ ನೋಡಲು ಕರೆದೊಯ್ಯಬಹುದು. ತಮ್ಮ ಪ್ರೀತಿಯ ವ್ಯಕ್ತಿಯೊಂದಿಗೆ ಕತ್ತಲಾದ ಮುಸ್ಸಂಜೆಯಲ್ಲಿ ವಾಕ್ ಹೋಗಲು ಬಯಸುತ್ತಾರೆ.

ಕರ್ಕ
ಕರ್ಕ ರಾಶಿಯವರು ಇತರರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ. ಇವರಿಗೆ ಒಂದು ಸೀಮಿತ ವಲಯದ ಸ್ನೇಹಿತರಿರುತ್ತಾರೆ. ತಮ್ಮ ಭಾವನೆಗಳನ್ನು ಬಹಳ ರಹಸ್ಯವಾಗಿ ಇಟ್ಟುಕೊಳ್ಳುತ್ತಾರೆ. ಅವರು ವ್ಯಕ್ತಿಯ ಬಗ್ಗೆ ಚೆನ್ನಾಗಿ ತಿಳಿದ ಬಳಿಕ ಭಾವನೆಯನ್ನು ಹೊರಹಾಕುವರು. ಪತ್ರಗಳ ಮೂಲಕ ಹಾಗೂ ಮೋಂಬತ್ತಿಯ ಬೆಳಕಿನಲ್ಲಿ ಊಟಮಾಡಲು ಆಹ್ವಾನಿಸಬಹುದು. ಅವರು ವ್ಯಕ್ತಿಯ ಪ್ರೀತಿಗಾಗಿ ಹಂಬಲಿಸುವಾಗ ನೃತ್ಯಕ್ಕೆ ಆಹ್ವಾನಿಸುವರು.

ಸಿಂಹ
ಆತ್ಮ ವಿಶ್ವಾಸವನ್ನು ಹೊಂದಿರುವ ಈ ವ್ಯಕ್ತಿಗಳು ತಮ್ಮ ಭಾವನೆಗಳ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿರುವರು. ತಮ್ಮ ಭಾವನೆಗಳು ಖಚಿತವಾಗಿದೆ ಎನ್ನುವುದು ದೃಢಪಡಿಸಿಕೊಂಡ ಬಳಿಕವೇ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ತಮ್ಮ ಭಾವನೆಗಳನ್ನು ತಪ್ಪಿಸಿಕೊಳ್ಳುವುದನ್ನು ಸಹ ತಿಳಿದಿರುತ್ತಾರೆ. ಒಮ್ಮೆ ಇವರು ನಿಮ್ಮ ಪ್ರೀತಿಯನ್ನು ಒಪ್ಪಿಕೊಂಡರೆ ನಿಮ್ಮೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತಾರೆ. ಅಧಿಕ ಉಡುಗೊರೆ ಯನ್ನು ತಂದುಕೊಡುವುದರ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಕನ್ಯಾ
ಪ್ರಣಯವನ್ನು ಬಯಸುವ ಇವರು ಬಹುಬೇಗ ಪ್ರೀತಿಯಲ್ಲಿ ಬೀಳುವರು. ಇವರು ಪ್ರೀತಿಸುವ ಜನರಿಗಾಗಿ ಉತ್ತಮ ವೇದಿಕೆಯನ್ನು ಸಂಘಟಿಸುವುದರ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಉತ್ತಮ ಯೋಜನೆಯೊಂದಿಗೆ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾರೆ. ತಮ್ಮ ಪ್ರೀತಿ ಪಾತ್ರರಿಗಾಗಿ ತಾವೇ ವಿನ್ಯಾಸಗೊಳಿಸಿದ ಅಡುಗೆಯನ್ನು ಮಾಡಿ ತರಬಹುದು.

ತುಲಾ
ಇವರು ಅತ್ಯುತ್ತಮ ಸ್ವಭಾವದ ವ್ಯಕ್ತಿಗಳು ಎನ್ನಲಾಗುವುದು. ಇವರು ಎಲ್ಲರಿಗೂ ನೀಡುವ ತಮ್ಮ ನಗು ಕೆಲವರಿಗೆ ಗೊಂದಲವನ್ನುಂಟುಮಾಡಬಹುದು. ಇವರು ಪ್ರೀತಿಯಲ್ಲಿ ಇದ್ದಾರೆಯೇ? ಅಥವಾ ಇಲ್ಲವೇ? ಎನ್ನುವುದನ್ನು ತಿಳಿಯಲು ಕಷ್ಟವಾಗುವುದು. ಇವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸ್ವಲ್ಪ ನಾಚಿಕೆಯನ್ನು ವ್ಯಕ್ತಪಡಿಸುತ್ತಾರೆ. ತಮ್ಮ ಪ್ರೀತಿ ಪಾತ್ರರನ್ನು ಚಲನಚಿತ್ರಕ್ಕೆ ಕರೆದೊಯ್ಯುವುದು ಹಾಗೂ ಅವರಿಗಾಗಿ ಅಡುಗೆಯನ್ನು ಮಾಡಿಕೊಡುವರು.

ವೃಶ್ಚಿಕ
ಇವರು ತಮ್ಮ ಪ್ರೀತಿಯ ಭಾವನೆಯನ್ನು ಮರೆಮಾಚಲು ಬಯಸುತ್ತಾರೆ. ಪ್ರಣಯದ ಬಗ್ಗೆ ಭಾವೋದ್ರಿಕ್ತರಾಗಿದ್ದರೂ ಕೆಲವೊಮ್ಮೆ ಹೇಡಿಯಂತೆ ವರ್ತಿಸಬಹುದು. ಇವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಅಥವಾ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ ಎಂದಾದರೆ ಅವರಿಗಾಗಿ ರೊಮ್ಯಾಂಟಿಕ್ ಚಿತ್ರಕ್ಕೆ ಟಿಕೆಟ್ ಖರೀದಿಸುತ್ತಾರೆ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಾಗ ತಮ್ಮ ಮೊಣಕಾಲನ್ನು ಊರಿ ವಿಚಾರವನ್ನು ವ್ಯಕ್ತಪಡಿಸುವರು.

ಧನು
ಇವರು ಬಹಳ ಸ್ವತಂತ್ರ ಹಾಗೂ ತೆರೆದ ಮನಸ್ಸಿನವರು ಎನ್ನಬಹುದು. ಇವರಿಗೆ ಮನಸ್ಸಿಗೆ ತೋಚಿದ್ದನ್ನು ಹಾಗೆಯೇ ಹೇಳಿ ಬಿಡುತ್ತಾರೆ. ಅದು ಎಂತಹದ್ದೇ ಸಂಗತಿಯಾಗಿರಬಹುದು. ತಮ್ಮ ಪ್ರೀತಿಯ ವಿಚಾರದಲ್ಲಿ ಹೆಚ್ಚು ಕಾಳಜಿಯನ್ನು ವಹಿಸುವರು. ತಮ್ಮ ಪ್ರೀತಿಪಾತ್ರರಿಗೆ ನೋವುಂಟಾಗದಂತೆ ನೋಡಿಕೊಳ್ಳುತ್ತಾರೆ. ಅಲ್ಲದೆ ಇವರ ಪ್ರಕಾರ ಪ್ರೀತಿ ಎನ್ನುವುದು ಒಂದು ಸಾಹಸ. ತಮ್ಮ ಪ್ರೀತಿಯ ವ್ಯಕ್ತಿಗಳೊಂದಿಗೆ ಪ್ರವಾಸ ಕೈಗೊಳ್ಳಲು ಬಯಸುವರು.

ಮಕರ
ಇವರು ಜೀವನದ ಬಗ್ಗೆ ಹೆಚ್ಚು ಗಂಭೀರತೆಯನ್ನು ಹೊಂದಿರುತ್ತಾರೆ. ಇವರು ಬಲು ಸುಲಭವಾಗಿ ವ್ಯಕ್ತಿಯನ್ನು ಆಕರ್ಷಿಸಬಹುದಾಗಿದ್ದರು ತಮ್ಮ ಪ್ರೀತಿಯನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸರು. ತಮ್ಮ ಪ್ರೀತಿಯನ್ನು ಒಮ್ಮೆ ಒಪ್ಪಿಕೊಂಡ ಬಳಿಕ ಅಧಿಕ ಉಡುಗೊರೆಯನ್ನು ನೀಡಲು ಬಯಸುತ್ತಾರೆ. ನಂತರ ದೀರ್ಘ ಸಮಯದ ಡ್ರೈವಿಂಗ್ ನೋಂದಿಗೆ ಹೋಗುತ್ತಾರೆ.

ಕುಂಭ
ಇವರು ಬಟ್ಟೆ, ಒಡವೆ ಸೇರಿದಂತೆ ಕೆಲವು ಪ್ರಮುಖ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿ ವ್ಯಕ್ತಪಡಿಸುತ್ತಾರೆ. ಇವರು ನಿಮ್ಮ ಇಷ್ಟದ ಬಟ್ಟೆಗಳನ್ನು ತೊಟ್ಟಿಕೊಳ್ಳುತ್ತಾರೆ ಅಥವಾ ನಿಮಗೆ ಬೇಕಾದ ರೀತಿಯಲ್ಲಿ ತಮ್ಮ ಕೆಲಸಗಳ ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆ ಎಂದರೆ ಇವರು ನಿಮ್ಮ ಪ್ರೀತಿಯಲ್ಲಿ ಇದ್ದಾರೆ ಎಂದು ತಿಳಿಯಬಹುದು. ತಮ್ಮ ಪ್ರೀತಿಯ ವ್ಯಕ್ತಿಗೆ ಹೆಚ್ಚು ಬದ್ಧರಾಗಿರುತ್ತಾರೆ.

ಮೀನ
ಇವರು ಕೆಲವು ಸಂದರ್ಭದಲ್ಲಿ ಹತಾಶೆಯ ರೂಪದ ಪ್ರಣಯ ಜೀವನವನ್ನು ತೋರುವರು. ಇವರು ತಮ್ಮ ಪ್ರೀತಿಯನ್ನು ತೋರಿಸಿಕೊಳ್ಳದಿದ್ದರೂ ಸಂಬಂಧವನ್ನು ದೀರ್ಘಕಾಲದ ವರೆಗೆ ಉಳಿಸಿಕೊಳ್ಳಲು ಬಯಸುವರು. ಇವರು ಬಯಸಿದರೆ ಮುಂಜಾನೆ 3 ಗಂಟೆಯ ಸಮಯದಲ್ಲೂ ಸಂದೇಶವನ್ನು ನೀಡಬಲ್ಲರು. ಜೊತೆಗೆ ನಿಮ್ಮ ಗಮನವನ್ನು ಸೆಳೆಯಲು ಕೆಲವು ನಾಟಕವನ್ನು ಮಾಡಬಹುದು.



Click it and Unblock the Notifications











