Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಈ 5 ರಾಶಿಯವರು ತಮ್ಮ ಮಾಜಿ ಪ್ರೇಮಿ ಜತೆ ಸ್ನೇಹಿತರಾಗಿರಲ್ಲ!
ಜೀವನದಲ್ಲಿ ಪ್ರೀತಿ ಸಿಕ್ಕಿದ ಮೇಲೆ ಅಲ್ಲಿ ನೋವು ಕೂಡ ಇದ್ದೇ ಇರುವುದು. ಪ್ರೀತಿಸಿದ ಪ್ರತಿಯೊಬ್ಬರಿಗೂ ಪ್ರೀತಿ ಸಿಕ್ಕಿರಲ್ಲ. ಒಂದಲ್ಲಾ ಒಂದು ಕಾರಣಕ್ಕಾಗಿ ಪ್ರೇಮಿಗಳು ದೂರವಾಗುವರು. ಇದನ್ನು ಕೆಲವರು ಮರೆತರೆ, ಉಳಿದವರು ನೋವನ್ನು ಮನಸ್ಸಿನಲ್ಲಿ ಹಾಗೆ ಇಟ್ಟುಕೊಳ್ಳುವರು. ಕಾಲೇಜು, ಕಚೇರಿ ಹೀಗೆ ಎಲ್ಲಿ ಬೇಕಾದರೂ ಪ್ರೀತಿ ಮೂಡಬಹುದು.
ಇಂತಹ ಸಂದರ್ಭದಲ್ಲಿ ಪ್ರೀತಿ ಮುಂದುವರಿದು ಮುಂದೊಂದು ದಿನ ಅದು ಅಂತ್ಯ ಕಾಣಬಹುದು. ಹೀಗಾದಾಗ ಕೆಲವರು ಪರಸ್ಪರ ಸ್ನೇಹಿತರಾಗಿಯೇ ಮುಂದುವರಿಯುವರು. ಆದರೆ ಜೋತಿಷ್ಯದ ಪ್ರಕಾರ ಕೆಲವು ರಾಶಿಯವರು ಪ್ರೇಮ ವೈಫಲ್ಯಕ್ಕೆ ಒಳಗಾದ ಬಳಿಕ ಅವರು ತಮ್ಮ ಜತೆಗಾರರೊಂದಿಗೆ ಸ್ನೇಹಿತರಾಗಿ ಎಂದಿಗೂ ಇರುವುದಿಲ್ಲ. ತಮ್ಮ ಮಾಜಿ ಜತೆಗೆ ಸ್ನೇಹಿತರಾಗಿ ಇರದ ರಾಶಿಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಓದುತ್ತಾ ಸಾಗಿ...

ಕುಂಭ: ಜ.21-ಫೆ18
ಯಾರೊಂದಿಗಾದರೂ ಸಂಬಂಧ ಕಡಿದುಕೊಂಡರೆ ತುಂಬಾ ನಿಷ್ಕ್ರೀಯವಾಗಿರುವ ರಾಶಿಗಳಲ್ಲಿ ಕುಂಭ ಮೊದಲ ಸ್ಥಾನದಲ್ಲಿದೆ. ಇವರು ಮಾಜಿಗಳೊಂದಿಗೆ ಸ್ನೇಹಿತರಾಗಿರಲು ಬಯಸುವುದು ಕಡಿಮೆ. ಮಾಜಿಗಳೊಂದಿಗೆ ಸ್ನೇಹಿತರಾಗಿದ್ದುಕೊಂಡು ನೋವನ್ನು ಮುಂದುವರಿಸಲು ಬಯಸಲ್ಲ ಮತ್ತು ಹಿಂದಿನದನ್ನು ಮರೆತುಬಿಟ್ಟು, ಭವಿಷ್ಯದ ಕಡೆಗೆ ಗಮನಹರಿಸಲು ಬಯಸುವರು.

ಮಕರ: ಡಿ.23-ಜ.20
ಮಕರ ರಾಶಿಯವರು ಕ್ಷಮಿಸುವವರಲ್ಲ ಎನ್ನುವುದು ತಿಳಿದಿರುವಂತಹ ವಿಚಾರ. ಪ್ರೇಮಿ ಜತೆಗೆ ಸಂಬಂಧ ಕಡಿದು ಕೊಂಡು ಅವರು ಸ್ನೇಹಿತರಾಗಿ ಇರಲು ಬಯಸಲ್ಲ. ನೀವು ಈ ರಾಶಿಯವರ ಹೃದಯ ಮುರಿದಿದ್ದರೆ ಆಗ ಅವರು ನಿಮ್ಮನ್ನು ಕ್ಷಮಿಸುವುದಿಲ್ಲ ಮತ್ತು ಮರೆಯುವುದಿಲ್ಲ. ಇವರು ಯಾವುದೇ ಸಂದರ್ಭದಲ್ಲೂ ತಮ್ಮ ಮಾಜಿ ಜತೆಗೆ ಸ್ನೇಹಿತರಾಗಿರಲ್ಲ.

ವೃಶ್ಚಿಕ: ಅ.24-ನ.22
ಇವರು ಮಾಡುವ ಪ್ರತಿಯೊಂದು ಕೆಲಸದ ಬಗ್ಗೆ ಹೊಟ್ಟೆ ಉರಿಸಿಕೊಳ್ಳುವರು. ಇದು ಇವರ ಸಂಬಂಧದಲ್ಲೂ ನೆರವಾಗಲ್ಲ ಮತ್ತು ಮಾಜಿಯೊಂದಿಗೆ ಸ್ನೇಹಿತರಾಗಿರುವುದು ದೂರದ ಮಾತು. ಇವರಲ್ಲಿ ಕೆಲವೊಂದು ಅದ್ಭುತವಾಗಿರುವ ಗುಣಗಳು ಇವೆಯಾದರೂ ತುಂಬಾ ಹೊಟ್ಟೆಕಿಚ್ಚು ಪಟ್ಟುಕೊಳ್ಳುವವರು ಆಗಿರುವರು. ತನ್ನ ಮಾಜಿ ಬೇರೆಯವರನ್ನು ಪ್ರೀತಿಸದರೆ ಆಗ ತುಂಬಾ ಹೊಟ್ಟೆ ಕಿಚ್ಚು ಪಡುವರು. ಇವರು ಸ್ನೇಹಿತರಾಗಿರಲು ಪ್ರಯತ್ನಿಸಿದರೂ ಸಹಿತ ಅವರು ಬೇರೆಯವರ ಮುಂದೆ ನಿಮ್ಮ ಮನಕರಗುವಂತೆ ಮಾಡಲು ಪ್ರಯತ್ನಿಸಬಹುದು.

ಸಿಂಹ: ಜುಲೈ 23-ಆ.23
ಪ್ರೀತಿಯನ್ನು ಪೂಜಿಸಬೇಕೆಂದು ಬಯಸುವವರು ಸಿಂಹ ರಾಶಿಯವರು. ಹೀಗಾಗಿ ತಮ್ಮ ಮಾಜಿಯು ಬೇರೆಯವರೊಂದಿಗೆ ಇರುವುದನ್ನು ನೋಡಲು ಇವರಿಂದ ಸಾಧ್ಯವಾಗಲ್ಲ. ಮಾಜಿ ಜತೆಗೆ ಸ್ನೇಹ ಬೆಳೆಸಿಕೊಂಡರೂ ಇವರು ತಮ್ಮ ಮಾಜಿಯ ಹೊಸ ಸಂಬಂಧದ ಬಗ್ಗೆ ತಿಳಿಯುವ ಕುತೂಹಲದಿಂದ ಇರಬಹುದು. ಇವರ ಹಠಮಾರಿ ಧೋರಣೆಯಿಂದಾಗಿ ಇವರು ತಮ್ಮ ಮಾಜಿ ಜತೆಗೆ ಸ್ನೇಹದಿಂದ ಇರಲ್ಲ. ಮಾಜಿಯು ಇವರಿಗೆ ಮೋಸ ಮಾಡಿದ್ದರೆ ಆಗ ಇವರು ಬೇಗನೆ ಅದನ್ನು ಮರೆತುಬಿಡುವವರಲ್ಲ.

ಮೇಷ: ಮಾರ್ಚ್ 21-ಎಪ್ರಿಲ್ 19
ಮೇಷ ರಾಶಿಯವರದ್ದು ತುಂಬಾ ಸ್ಪರ್ಧಾತ್ಮಕವಾದ ಗುಣ. ಇದರಿಂದಾಗಿ ಇವರು ತಮ್ಮ ಮಾಜಿ ಜತೆಗೆ ಸ್ನೇಹಿತರಾಗಿ ಉಳಿದಿಕೊಳ್ಳಲು ಆಸಕ್ತಿ ತೋರಿಸಲ್ಲ. ಯಾಕೆಂದರೆ ಇವರು ತಮ್ಮೊಂದಿಗೆ ಸ್ಪರ್ಧೆ ನಡೆಸುತ್ತಾ ಮತ್ತಷ್ಟು ಉತ್ತಮವಾಗಲು ಬಯಸುವರು. ತಮ್ಮ ಸಾಮಾಜಿಕ ಜಾಲತಾಣಗಳಿಗೆ ಮಾಜಿಯು ಬಂದು ತನ್ನ ಜೀವನದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನೋಡಿದರೆ ಅವರಿಗೆ ಬೇಸರವಿಲ್ಲ. ಯಾಕೆಂದರೆ ಇವರಿಗೆ ತಮ್ಮ ಮಾಜಿಗೆ ನೋವು ನೀಡಬೇಕಿರುತ್ತದೆ. ನಿಮ್ಮ ಮಾಜಿಯ ರಾಶಿ ಯಾವುದು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯಬೇಡಿ.



Click it and Unblock the Notifications
