ಪ್ರತಿಯೊಂದು ರಾಶಿಚಕ್ರದವರು ಕಲಿಯಲಿರುವ ಕಷ್ಟಕರವಾದ ಪಾಠ ಇದು

Posted By: Deepu
Subscribe to Boldsky

ಪ್ರತಿದಿನವು ವ್ಯಕ್ತಿ ಹೊಸ ಹೊಸ ವಿಚಾರ ಹಾಗೂ ಅನುಭವಗಳನ್ನು ಹೊಂದುತ್ತಿರುತ್ತಾನೆ. ಯಾಕೆಂದರೆ ಜೀವನ ಎನ್ನುವುದು ನಾವು ಅಂದುಕೊಂಡಂತೆ ಇರುವುದಿಲ್ಲ. ಬದಲಿಗೆ ಸನ್ನಿವೇಶಗಳು ಹೇಗೆ ಎದುರಾಗುತ್ತವೆ? ಎನ್ನುವುದರ ಆಧಾರದ ಮೇಲೆ ಜೀವನ ನಿಂತಿದೆ ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು. ನಮ್ಮ ಜೀವನ ಹೀಗೆ ಇರುವುದು ಅಥವಾ ಹೀಗೇ ಇರಬೇಕು ಎನ್ನುವುದು ಕಲ್ಪನೆಯ ಲೋಕ. ಅದು ಹೇಗಿರುತ್ತದೆ? ಏನನ್ನು ಅನುಭವಿಸುತ್ತಿದ್ದೇವೆ ಎನ್ನುವುದು ವಾಸ್ತವ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2018ರಲ್ಲಿ ಪ್ರತಿಯೊಂದು ರಾಶಿಚಕ್ರದವರು ಸಹ ವಿಶೇಷವಾದ ಪಾಠವನ್ನು ಕಲಿಯಲಿದ್ದಾರೆ. ಗ್ರಹಗತಿಗಳಿಂದ ಉಂಟಾಗುವ ಪರಿಸ್ಥಿತಿಗಳ ಬದಲಾವಣೆ ಜೀವನದಲ್ಲಿ ಅತ್ಯುತ್ತಮ ಪಾಠವನ್ನು ಕಲಿಸುವುದು ಎಂದು ಹೇಳಲಾಗುತ್ತದೆ. ನಿಮಗೂ ನಿಮ್ಮ ರಾಶಿಚಕ್ರದ ಅನುಸಾರ ಯಾವೆಲ್ಲಾ ಬದಲಾವಣೆಯನ್ನು ಅನುಭವಿಸಲಿದ್ದೀರಿ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ವೃಷಭ

ವೃಷಭ

ಇವರು ತಮ್ಮ ಭಾವನೆಯನ್ನು ಮರೆ ಮಾಚುವುದನ್ನು ಬಿಡುವಂತಹ ಪಾಠವನ್ನು ಕಲಿಯುತ್ತಾರೆ. ಕೆಲವು ನಂಬಿಕೆಗಳ ಬಗ್ಗೆ ಕೆಲವು ಆಳವಾದ ಭಾವನೆಯನ್ನು ಹೊಂದುತ್ತೀರಿ. ನೀವು ಅದರಲ್ಲಿ ಯಾವುದೇ ಬಗೆಯ ಮೋಸವನ್ನು ಮಾಡಬಾರದು. ಇದು ನಿಮಗೆ ಕಲಿಕೆಗೆ ಸೂಕ್ತ ಸಮಯ ಎನ್ನಬಹುದು.

ಮೇಷ

ಮೇಷ

ಈ ವರ್ಷ ಎದುರಿಸುತ್ತಿರುವ ಅತ್ಯಂತ ಕಷ್ಟಕರ ವಿಷಯವೆಂದರೆ ಈಗಿನ ಕ್ಷಣದಲ್ಲಿ ಹೇಗೆ ಬದುಕುವುದು ಎನ್ನುವುದನ್ನು ಕಲಿಯುತ್ತಾರೆ. ಇವರು ತಾವು ಇರುವ ಸಮಯ ಹಾಗೂ ಅದರ ವಿಶೇಷವನ್ನು ಅರಿಯಬೇಕಿದೆ. ಪ್ರಸ್ತುತ ಜೀವನದಲ್ಲಿ ಹೆಚ್ಚಿ ನಿರಾಶೆಯನ್ನು ಅನುಭವಿಸುವಿರಿ. ನಿಮ್ಮ ನಿರೀಕ್ಷೆಯಂತೆ ಏನು ನಡೆಯದೆ ಇರುವುದರಿಂದ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ.

ವೃಷಭ

ವೃಷಭ

ಇವರು ತಮ್ಮ ಭಾವನೆಯನ್ನು ಮರೆ ಮಾಚುವುದನ್ನು ಬಿಡುವಂತಹ ಪಾಠವನ್ನು ಕಲಿಯುತ್ತಾರೆ. ಕೆಲವು ನಂಬಿಕೆಗಳ ಬಗ್ಗೆ ಕೆಲವು ಆಳವಾದ ಭಾವನೆಯನ್ನು ಹೊಂದುತ್ತೀರಿ. ನೀವು ಅದರಲ್ಲಿ ಯಾವುದೇ ಬಗೆಯ ಮೋಸವನ್ನು ಮಾಡಬಾರದು. ಇದು ನಿಮಗೆ ಕಲಿಕೆಗೆ ಸೂಕ್ತ ಸಮಯ ಎನ್ನಬಹುದು.

ಮಿಥುನ

ಮಿಥುನ

ಸಾಮಾಜಿಕವಾಗಿ ಹೆಚ್ಚು ಬೆರೆಯುವ ನಿಮಗೆ ಜನರೊಂದಿಗೆ ಹೇಗೆ ಬೆರೆಯುವುದು? ಸಂಬಂಧಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಕಲಿಯುವರು. ಈ ವರ್ಷ ನೀವು ಆಂತರಿಕ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವುದನ್ನು ಕಲಿಯಬೇಕು. ನೀವು ನಿಮ್ಮ ಜೀವನದಲ್ಲಿ ಯಾವುದು ಹೆಚ್ಚು ಸಂತೋಷವನ್ನು ನೀಡುತ್ತದೆಯೋ ಅದನ್ನು ನೀವು ಹೆಚ್ಚು ಪ್ರೀತಿಸಲು ಕಲಿಯಬೇಕಿದೆ.

ಕರ್ಕ

ಕರ್ಕ

ಈ ವರ್ಷ ನೀವು ಕಲಿಯಲಿರುವ ಪಾಠವೆಂದರೆ ನಿಮ್ಮ ಗುರಿಯ ಮೇಲೆ ನೀವು ಹೆಚ್ಚು ಕೇಂದ್ರೀಕರಿಸಬೇಕೆನ್ನುವ ವಿಚಾರವಾಗಿದೆ. ಈವರೆಗೆ ಯಾವುದೇ ನೈಜ ನಿರ್ದೇಶನ ಅಥವಾ ನೈಜ ರಚನೆಯನ್ನು ಹೊಂದಿರುವುದಿಲ್ಲ. ಆದರೆ ಇದೀಗ ಅದನ್ನು ಬದಲಿಸುವ ಮತ್ತು ರಚಿಸಬೇಕಾದ ಅಗತ್ಯವಿದೆ.

ಸಿಂಹ

ಸಿಂಹ

ಯಾವುದೇ ಸಂಬಂಧವು ದೀರ್ಘ ಸಮಯದವರೆಗೆ ಸೂಕ್ತ ಅರ್ಹತೆಯನ್ನು ಹೊಂದಿರುವುದಿಲ್ಲ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ಹಾಗೆ ಇತರರು ಸಹ ಹೆಚ್ಚಿನ ಪ್ರೀತಿಯನ್ನು ನಿಮಗೆ ತೋರಿಸುತ್ತಾರೆ ಎಂದು ನೀವು ತಕ್ಷಣದ ನಿರ್ಧಾರಕ್ಕೆ ಬರುತ್ತೀರಿ. ಆದರೆ ಅದು ಯಾವಾಗಲೂ ಸರ್ವಕಾಲಿಕವಾಗಿರುವುದಿಲ್ಲ. ಪ್ರೀತಿ ಎನ್ನುವುದು ಎಂದಿಗೂ ನಿಮ್ಮ ದಾರಿಯಲ್ಲಿ ಬರುವುದಿಲ್ಲ. ನೀವು ಅದರೊಂದಿಗೆ ಸೂಕ್ತ ರೀತಿಯಲ್ಲಿ ಮಾತುಕತೆ ನಡೆಸಬೇಕಾಗುವುದು ಎನ್ನುವುದನ್ನು ಪ್ರಾಯೋಗಿಕವಾಗಿ ಕಲಿಯಬೇಕಿದೆ.

ಕನ್ಯಾ

ಕನ್ಯಾ

ನಿಮಗಾಗಿಯೇ ಮೀಸಲಾಗಿಲ್ಲದ ಕೆಲವು ವಿಷಯಗಳಿವೆ ಎನ್ನುವುದನ್ನು ನೀವು ತಿಳಿಯಬೇಕು. ಗಳಿಸುವ ಪ್ರಯತ್ನದಲ್ಲಿ ಹೆದರಿಕೆಯಿಲ್ಲದ ಒಬ್ಬ ಶ್ರಮ ಜೀವಿ ನೀವಾಗಿರುತ್ತೀರಿ. ಯಾವುದು ಉತ್ತಮವಾಗಿಲ್ಲ ಎಂಬ ಸತ್ಯವನ್ನು ಸ್ವೀಕರಿಸುವಲ್ಲಿ ನಿಮಗೆ ಕಷ್ಟವಾಗುವುದು. ಆದರೆ ಅದನ್ನು ಕಲಿಯಬೇಕಾದ ಸ್ಥಿತಿ ಈ ವರ್ಷ ಒದಗಿ ಬರುವುದು.

ತುಲಾ

ತುಲಾ

ಈ ವರ್ಷ ನಿಮಗಾಗಿ ಒಂದು ದೊಡ್ಡ ವಿಚಾರವನ್ನು ನೀವೇ ತಯಾರುಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮಾರ್ಗದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳು ಉಂಟಾಗುವವು. ಇಷ್ಟು ವರ್ಷ ನಡೆಸಿಕೊಂಡು ಬಂದ ಕೆಲವು ಅನುಚಿತ ಕೆಲಸ ಕಾರ್ಯಗಳನ್ನು ಹಾಗೂ ಸಲಕರಣೆಗಳನ್ನು ಬಿಟ್ಟು ಬಿಡಲು ಈ ವರ್ಷ ಕಲಿಯುವಿರಿ.

ವೃಶ್ಚಿಕ

ವೃಶ್ಚಿಕ

ಈ ವರ್ಷ ನೀವು ಕೆಲವು ವಿಚಾರದಲ್ಲಿ ಇತರರನ್ನು ಹೇಗೆ ನಂಬಬಹುದು ಎನ್ನುವುದನ್ನು ತಿಳಿದುಕೊಳ್ಳುವಿರಿ. ಇವರು ಸಾಮಾನ್ಯವಾಗಿ ತಮ್ಮ ಭಾವನೆ ಹಾಗೂ ವಿಚಾರಗಳನ್ನು ಹೆಚ್ಚು ಗೌಪ್ಯವಾಗಿಡಲು ಪ್ರಯತ್ನಿಸುತ್ತಾರೆ. ಇತರರಿಗೆ ಅದನ್ನು ತೋರಿಸಿಕೊಡಲು ಬಯಸುವುದಿಲ್ಲ. ಈ ವರ್ಷ ಈ ಗುಣಗಳಿಂದ ನೀವು ಹೊರಬರುವುದು ಹಾಗೂ ಇತರರಿಗೆ ಅವಕಾಶ ಹಾಗೂ ಮೌಲ್ಯವನ್ನು ನೀಡುವುದನ್ನು ಕಲಿಯುವಿರಿ.

ಧನು

ಧನು

ನಿಮ್ಮೊಂದಿಗೆ ನೀವು ಪ್ರಾಮಾಣಿಕವಾಗಿರಲು ಕಲಿಯಬೇಕಿದೆ. ನೀವು ಎಲ್ಲಿದ್ದೀರಿ? ನಿಮ್ಮ ಪ್ರಸ್ತುತ ಜೀವನ ಎಷ್ಟು ವಿಷಯಗಳೊಂದಿಗೆ ಪ್ರಾಮಾಣಿಕವಾಗಿರಬೇಕು ಎನ್ನುವುದನ್ನು ಕಲಿಯಬೇಕು. ಪ್ರಸ್ತುತ ಜೀವನವನ್ನು ನೀವು ಅರ್ಥಮಾಡಿಕೊಳ್ಳಬೇಕು. ಉತ್ತರ ನಿಮಗೆ ತೃಪ್ತಿಗೊಳಿಸದಿದ್ದರೆ ನೀವೇ ನಿಮ್ಮ ಸ್ವಂತ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.

ಮಕರ

ಮಕರ

ಈ ವರ್ಷ ನೀವು ನಿಮ್ಮ ಜೀವನದಲ್ಲಿ ಕೆಲವು ವಿಷಯಗಳನ್ನು ಬದಲಾಯಿಸಿಕೊಳ್ಳಬೇಕು. ವಿಶೇಷವಾಗಿ ನೀವು ಏನನ್ನು ಬಯಸುತ್ತೀರೋ ಅದು ನಿಮ್ಮ ರೀತಿಯಲ್ಲಿ ನಡೆಯದೇ ಇದ್ದಾಗ. ನಿಮಗಾಗಿ ಕೆಲವು ಕೆಲಸಗಳು ನಡೆಯದೇ ಇದ್ದಾಗ ವಿಷಯವನ್ನು ನೀವು ಹೊರತೆಗೆಯಬೇಕು.

ಕುಂಭ

ಕುಂಭ

ಈ ವರ್ಷ ನೀವು ಹೊಂದಾಣಿಕೆ ಜೀವನ ನಡೆಸುವುದನ್ನು ಕಲಿತುಕೊಳ್ಳಬೇಕಾಗುವುದು. ನೀವು ಈ ವರ್ಷ ಕೆಲವು ರೀತಿಯ ಲಯವನ್ನು ಅಭಿವೃದ್ಧಿಪಡಿಸಬೇಕು. ನಿಮ್ಮ ಮಾರ್ಗದಲ್ಲಿ ನೀವು ಬಹಳಷ್ಟು ಯಶಸ್ಸನ್ನು ಹೊಂದಿದ್ದೀರಿ. ಅನಿರೀಕ್ಷಿತ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗದ ವಿಚಾರಗಳಿಗೆ ಹೆಚ್ಚು ಜಾಗರೂಕರಾಗಿರಲು ಕಲಿಯಬೇಕು.

ಮೀನ

ಮೀನ

ಈ ರಾಶಿಯವರು ಸಾಮಾನ್ಯವಾಗಿ ಸದಾ ಕಲ್ಪನೆಯ ಲೋಕದಲ್ಲಿ ಇರುತ್ತಾರೆ. ತಮ್ಮ ಕಲ್ಪನೆಯ ಕನಸಿನಲ್ಲಿಯೇ ಜೀವನವನ್ನು ನಡೆಸಲು ಬಯಸುತ್ತಾರೆ. ಆದರೆ ಈ ವರ್ಷ ಇವರು ತಮ್ಮ ಕನಸಿನಿಂದ ಒಂದು ಹೆಜ್ಜೆ ಹೊರ ಬಂದು ಭೂಮಿಯ ಮೇಲೆ ಕಾಲನ್ನು ಇಡುವುದರ ಮೂಲಕ ವಾಸ್ತವಕ್ಕೆ ಹತ್ತಿರವಾಗುವಂತೆ ಜೀವನವನ್ನು ನಡೆಸಬೇಕಾಗುವುದು.

English summary

zodiac-signs-that-will-learn-a-tough-lesson-this-year

What is the biggest lesson that you have learnt this year? Well, according to astrology, there are certain hard lessons that each zodiac sign will learn this year. Check on to find out about the hard lessons that you will learn according to your zodiac sign.Learning of these tough lessons coming our way can help us be prepared for the tough situations in life. So, check out on what is in store as per your zodiac sign.