Latest Updates
-
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್!
ನೋಡಿ, ಈ ರಾಶಿಯವರು ತುಂಬಾ ಬೇಗನೆ ಪ್ರೀತಿಯಲ್ಲಿ ಮುಳುಗುವರು!
ಕೆಲವರು ಎಷ್ಟೇ ಹುಡುಗಿಯರ ಹಿಂದೆ ಬಿದ್ದರೂ ಅವರಿಗೆ ಪ್ರೀತಿ ಅನ್ನುವುದು ಸಿಗುವುದೇ ಇಲ್ಲ. ಇದಕ್ಕೆ ಮುಖ್ಯವಾಗಿ ಅದರ ರಾಶಿ ಚಕ್ರ ಕೂಡ ಕಾರಣವೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಹೌದು, ರಾಶಿಚಕ್ರದ ಅನುಗುಣವಾಗಿ ಕೆಲವರು ಬೇಗನೆ ಪ್ರೀತಿಯಲ್ಲಿ ಬಿದ್ದರೆ ಇನ್ನು ಕೆಲವರಿಗೆ ಪ್ರೀತಿಸಲು ತುಂಬಾ ಸಮಯಬೇಕಾಗುತ್ತದೆ.
ಪ್ರೀತಿಯಲ್ಲಿ ತುಂಬಾ ಬೇಗನೆ ಹೃದಯ ಕಳೆದುಕೊಳ್ಳುವಂತಹ ರಾಶಿಯನ್ನು ಕ್ರಮಬದ್ಧವಾಗಿ ನಿಮಗೆ ತಿಳಿಸಿಕೊಡಲಾಗುತ್ತಿದೆ. ಈ ರಾಶಿಯವರು ತುಂಬಾ ಬೇಗನೆ ಪ್ರೀತಿಯಲ್ಲಿ ಮುಳುಗುವರು. ಇದು ಯಾವುದು ಎಂದು ತಿಳಿಯಿರಿ ಮತ್ತು ಮುಂದೆ ನಿಮಗೆ ಯಾರಾದರೂ ಇಷ್ಟವಾದರೆ ಅವರ ರಾಶಿ ಮೊದಲು ಕೇಳಿದರೆ ಒಳ್ಳೆಯದು....

ಕರ್ಕಾಟಕ: ಜೂನ್21-ಜುಲೈ22
ಪ್ರೀತಿಯಲ್ಲಿ ಬೀಳದೆ ಇರುವ ಜನರು ತುಂಬಾ ಕಡಿಮೆ. ಈ ರಾಶಿಯವರು ತಮ್ಮ ಭಾವನೆಗಳ ಬಗ್ಗೆ ತುಂಬಾ ಮುಕ್ತ ಮನಸ್ಸಿನವರು, ತುಂಬಾ ಕರುಣೆ ಮತ್ತು ಅರ್ಥ ಮಾಡಿಕೊಳ್ಳುವಂತಹ ಸ್ವಭಾವದವರು. ಇಂತಹ ರಾಶಿಯವರೊಂದಿಗೆ ಪ್ರೀತಿಯಲ್ಲಿ ಬೀಳುವುದು ತುಂಬಾ ಸುಲಭ. ಯಾಕೆಂದರೆ ನೀವು ಏನು ಹೇಳಬಯಸುತ್ತೀರೋ ಅದನ್ನೇ ಅವರು ಭಾವಿಸುವರು. ಇವರನ್ನು ಜನರು ಸಂಪೂರ್ಣವಾಗಿ ನಂಬಹುದು. ಇವರನ್ನು ಪ್ರೀತಿಸುವುದು ಸುಲಭ. ನೀವು ಇಂತಹ ರಾಶಿಯವರೊಂದಿಗೆ ಯಾವಾಗಲಾದರೂ ಪ್ರೀತಿಯಲ್ಲಿ ಸಿಲುಕಿರಬಹುದು.

ವೃಷಭ ರಾಶಿ: ಎಪ್ರಿಲ್20-ಮೇ20
ಈ ರಾಶಿಯವರು ಪ್ರೀತಿಸುವರು ಮತ್ತು ಭಾವನೆಗಳನ್ನು ಆನಂದಿಸುವರು. ಇವರು ಸಂಬಂಧಕ್ಕೆ ಎಲ್ಲಕ್ಕಿಂತ ಮೊದಲ ಪ್ರಾಶಸ್ತ್ಯ ನೀಡುವರು ಮತ್ತು ಪ್ರೀತಿಯು ಮೊದಲ ಆದ್ಯತೆಯಾಗಿರುವುದು. ಅವರಿಗೆ ಏನು ಬೇಕೆಂದು ಸರಳವಾಗಿ ತಿಳಿದಿದೆ ಮತ್ತು ಇದರಿಂದ ಅವರು ಸಂತೋಷವಾಗಿರುವರು. ಇವರು ಪ್ರಾಮಾಣಿಕತೆ ಮತ್ತು ಬದ್ಧತೆಗೆ ಮೌಲ್ಯ ನೀಡುವರು. ಇದರಿಂದ ಜನರು ಇವರನ್ನು ಪ್ರೀತಿಸುವರು.

ಧನು: ನವಂಬರ್ 23-ಡಿಸೆಂಬರ್ 22
ಈ ರಾಶಿಯವರು ತುಂಬಾ ಅವಕಾಶವಾದಿಗಳಾಗಿರುವರು ಮತ್ತು ಇವರಲ್ಲಿ ಹಾಸ್ಯ ಪ್ರವೃತ್ತಿಯಿರುವುದು. ಇವರು ಯಾವಾಗಲೂ ಧನಾತ್ಮಕ ಮತ್ತು ಒಳ್ಳೆಯ ಮನಸ್ಥಿತಿಯಲ್ಲಿರುವರು. ಜನರು ಅವರನ್ನು ಪ್ರೀತಿಸದೆ ಇರುವುದು ಅಸಾಧ್ಯ. ಇವರ ಸುತ್ತಲು ಜನರು ಸಮಯ ಕಳೆಯುವರು ಮತ್ತು ಅವರು ಬೇಗನೆ ಬೇರೆಯವರೊಂದಿಗೆ ಪ್ರೀತಿಗೆ ಸಿಲುಕುವರು. ಪ್ರಾಮಾಣಿಕ, ನೇರನುಡಿಯ ಮತ್ತು ಜನರಿಗೆ ಗೌರವ ನೀಡುವ ಸ್ವಭಾವವು ಇವರಲ್ಲಿ ಇರುವುದು.

ತುಲಾ: ಸಪ್ಟೆಂಬರ್ 24-ಅಕ್ಟೋಬರ್ 23
ಇವರಲ್ಲಿ ಇರುವಂತಹ ಕೆಲವು ಆಕರ್ಷಣೆಯನ್ನು ಯಾರು ಕೂಡ ನಿರಾಕರಿಸಲು ಸಾಧ್ಯವಿಲ್ಲ. ಇವರು ಎಷ್ಟು ಮಹತ್ವದ ವ್ಯಕ್ತಿ ಎಂದು ಇವರ ಸುತ್ತಲಿನವರಿಗೂ ಮನವರಿಕೆ ಮಾಡಿಕೊಡುವರು. ಇವರು ಯಾವಾಗಲೂ ತಯಾಷೆಯಾಗಿರುವರು ಮತ್ತು ಇದರಿಂದಾಗಿ ಜನರು ಇವರನ್ನು ಪ್ರೀತಿಸುವರು. ಇವರ ಧನಾತ್ಮಕತೆಯು ಜನರು ಇವರನ್ನು ಪ್ರೀತಿಸುವಂತೆ ಮಾಡುವುದು. ಅವರು ಜನರನ್ನು ಪ್ರೀತಿಸುವರು.

ಮೇಷ: ಮಾರ್ಚ್ 21-ಎಪ್ರಿಲ್ 19
ಈ ರಾಶಿಯ ಜನರಲ್ಲಿ ಬೇರೆ ವ್ಯಕ್ತಿಯೊಂದಿಗೆ ಜೀವನ ಸಾಗಿಸುವ ಮತ್ತು ಬದ್ಧತೆ ಪ್ರದರ್ಶಿಸುವ ಬಗ್ಗೆ ಭೀತಿ ಹಾಗೂ ಸಮಸ್ಯೆಯಿರುವುದು. ಇವರ ಸ್ಪೂರ್ತಿಯುತ ಸ್ವಭಾವ ಮತ್ತು ಶಕ್ತಿಯು ತುಂಬಾ ಸುಲಭವಾಗಿ ಪ್ರೀತಿಯಲ್ಲಿ ಬೀಳುವಂತೆ ಮಾಡುವುದು.

ಮೀನ: ಫೆ. 19-ಮಾರ್ಚ್20
ಈ ರಾಶಿ ಚಕ್ರದಲ್ಲಿರುವ ಜನರು ತುಂಬಾ ಭಾವನಾತ್ಮಕ, ಸೂಕ್ಷ್ಮ ಹಾಗೂ ಕರುಣೆ ಹೊಂದಿರುವ ವ್ಯಕ್ತಿಯಾಗಿರುವರು. ಇವರು ಪ್ರೀತಿಯಲ್ಲಿ ತುಂಬಾ ಬೇಗನೆ ಬೀಳುವರು. ಈ ಸ್ವಭಾವದಿಂದಾಗಿಯೇ ಅವರು ಆರಂಭಿಕ ಹಂತದಲ್ಲಿ ಸ್ವಲ್ಪ ಹಿಂಜರಿಯುವರು. ಇವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಠಿಣ ಮತ್ತು ಜನರು ಇವರೊಂದಿಗೆ ಹೇಗೆ ಹೊಂದಿಕೊಳ್ಳುವರು ಎನ್ನುವುದೇ ದೊಡ್ಡ ಅಂಶ.

ಸಿಂಹ: ಜುಲೈ23-ಅಗಸ್ಟ್ 23
ಇವರು ಯಾವುದೇ ವಿಚಾರದ ಬಗ್ಗೆ ತುಂಬಾ ಕುತೂಹಲಕಾರಿ ಹಾಗೂ ಚುರುಕುಬುದ್ಧಿಯವರಾಗಿರುವರು. ಇವರ ಒಳ್ಳೆಯ ಹೃದಯವು ಬೇರೆಯವರು ಪ್ರೀತಿಯಲ್ಲಿ ಬೀಳುವಂತೆ ಮಾಡುವುದು. ಆದರೆ ಇವರ ಅಹಂ ಮತ್ತು ತಾನೇ ದೊಡ್ಡ ವ್ಯಕ್ತಿ ಎನ್ನುವಂತಹ ಭಾವನೆಯು ಜನರು ಇವರೊಂದಿಗೆ ಪ್ರೀತಿಯಲ್ಲಿ ಬೀಳುವುದರಿಂದ ದೂರ ಹೋಗುವಂತೆ ಮಾಡುವುದು.

ಕನ್ಯಾ: ಅಗಸ್ಟ್ 24-ಸಪ್ಟೆಂಬರ್ 23
ಇವರು ತುಂಬಾ ಖಾಸಗಿ ವ್ಯಕ್ತಿಗಳಾಗಿರುವರು ಮತ್ತು ಯಾರೊಂದಿಗೂ ಮುಕ್ತವಾಗಿ ಮಾತನಾಡಲ್ಲ. ಇವರೊಂದಿಗೆ ನಿಜವಾಗಿಯೂ ಯಾರು ಕೂಡ ಪ್ರೀತಿಯಲ್ಲಿ ಬೀಳಲು ಸಾಧ್ಯವಿಲ್ಲ. ಯಾಕೆಂದರೆ ಇವರು ತಮ್ಮನ್ನು ಮಾತ್ರ ಪ್ರೀತಿಸುವರು. ಇಂತಹ ರಾಶಿಯವರನ್ನು ನಿಜವಾಗಿಯೂ ಪ್ರೀತಿಸುವಂತಹ ಜನರು ಸಿಗುವುದು ತುಂಬಾ ಅಪರೂಪ.

ವೃಶ್ಚಿಕ: ಅಕ್ಟೋಬರ್ 24-ನವಂಬರ್ 22
ಈ ರಾಶಿಯವರಿಗೆ ಜೀವನದಲ್ಲಿ ಏನು ಬೇಕಿದೆ ಎಂದು ತಿಳಿದಿದೆ. ಇವರು ಪ್ರೀತಿಯಲ್ಲಿ ಬೀಳುವರು. ಆದರೆ ತಮಗೆ ಧನಾತ್ಮಕ ಉತ್ತರ ಬರುವ ಬಗ್ಗೆ ದೃಢಪಡಿಸಿಕೊಳ್ಳುವ ತನಕ ಅದನ್ನು ಹೇಳಲ್ಲ. ಈ ರಾಶಿಯವರ ಜತೆಗೆ ಕಳೆಯುವಂತಹ ಪ್ರತಿಯೊಂದು ಕ್ಷಣವು ತುಂಬಾ ಅದ್ಭುತವಾಗಿರುವುದು. ಆದರೆ ಇನ್ನೊಂದು ಬದಯಲ್ಲಿ ಈ ರಾಶಿಯವರಿಗೆ ಹುಚ್ಚುತನದ ಹೊಟ್ಟೆಕಿಚ್ಚು, ರಹಸ್ಯವಾಗಿರುವ ವಿಷಯಗಳ ಬಗ್ಗೆ ಗೀಳು ಇರುವುದು. ಇವರ ಮನಸ್ಥಿತಿಯು ಬೇಗನೆ ಬದಲಾಗುತ್ತಿರುವುದು.

ಮಕರ: ಡಿಸೆಂಬರ್ 23-ಜನವರಿ 20
ಈ ರಾಶಿಯವರು ತಮ್ಮ ವೃತ್ತಿ ಬದುಕಿನ ಬಗ್ಗೆ ಹೆಚ್ಚಿನ ಗಮನಹರಿಸುವರು. ಇವರು ಸ್ವಪ್ರೇರಣೆ ಮತ್ತು ಗುರಿಯೆಡೆಗೆ ದೃಷ್ಟಿ ಹರಿಸುವವರು ಮತ್ತು ಜೀವನದಲ್ಲಿ ದೊಡ್ಡ ಮಹತ್ವಾಕಾಂಕ್ಷೆ ಹೊಂದಿರುವರು. ಇವರು ತುಂಬಾ ತಮಾಷೆಯ ವ್ಯಕ್ತಿಗಳು. ಪ್ರೀತಿಯ ವಿಷಯಕ್ಕೆ ಬಂದರೆ ಇವರು ತಮ್ಮನ್ನು ಹಾಗೂ ತಮ್ಮ ಭಾವನೆಗಳನ್ನು ತುಂಬಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವರು. ಯಾಕೆಂದರೆ ಇವರು ನೋವಾಗುವ ಭೀತಿಯಿರುವುದು. ಕೆಟ್ಟದು ಏನಾದರೂ ಆಗಲಿದೆ ಮತ್ತು ಸಂಬಂಧವು ಕೆಲಸ ಮಾಡಲ್ಲವೆಂದು ಅವರಿಗೆ ಅನಿಸುತ್ತಾ ಇರುವುದು. ಇದರಿಂದಾಗಿ ಅವರು ಪ್ರೀತಿಯಲ್ಲಿ ಬೀಳುವುದರಿಂದ ದೂರ ಓಡುವರು.

ಮಿಥುನ:ಮೇ 21-ಜೂನ್ 20
ಇವರ ಒಳ್ಳೆಯ ಗುಣಗಳನ್ನು ನೋಡಿ ಜನರು ಪ್ರೀತಿಯಲ್ಲಿ ಬೀಳುವರು. ಆದರೆ ಪ್ರೀತಿಯ ವಿಚಾರದಲ್ಲಿ ಇವರು ತುಂಬಾ ಧೈರ್ಯಗೆಡುವರು ಮತ್ತು ಆತಂಕಕ್ಕೆ ಒಳಗಾಗುವರು. ಇವರ ಜೀವನದ ನಿಜವಾದ ಭಾಗವನ್ನು ಜನರು ನೋಡಬಾರದು ಎಂದು ಭಾವಿಸುತ್ತಾ ಇರುವರು. ಇವರೊಂದಿಗೆ ಪ್ರೀತಿಯಲ್ಲಿ ಬೀಳುವುದು ತುಂಬಾ ಕಠಿಣ. ಯಾಕೆಂದರೆ ಇವರನ್ನು ಅರ್ಥ ಮಾಡಿಕೊಳ್ಳಲು ಆಗಲ್ಲ. ಇವರು ತುಂಬಾ ನಿಗೂಢ, ಸ್ವಯಂನಿರ್ವಾಹನ ಮತ್ತು ಅಸುರಕ್ಷಿತರಾಗಿರುವರು.

ಕುಂಭ: ಜನವರಿ 21-ಫೆ.18
ರಾಶಿಚಕ್ರಗಳ ಪ್ರಕಾರ ಈ ರಾಶಿಯವರೊಂದಿಗೆ ಪ್ರೀತಿಯಲ್ಲಿ ಬೀಳುವುದು ತುಂಬಾ ಕಠಿಣ ಕೆಲಸ. ಇವರು ತುಂಬಾ ಪ್ರಾಮಾಣಿಕ, ನಿಷ್ಠಾವಂತ ಮತ್ತು ನಂಬಿಕಸ್ಥರಾಗಿರುವರು. ಇವರು ತಮ್ಮ ಭಾವನೆಗಳನ್ನು ಹತ್ತಿಕೊಳ್ಳಲು ತಮ್ಮ ಸುತ್ತಲು ಇರುವ ವ್ಯಕ್ತಿಗಳೊಂದಿಗೆ ಇದನ್ನು ಹಂಚಿಕೊಳ್ಳಲು ಹೋಗುವುದಿಲ್ಲ. ಇದರಿಂದಾಗಿ ಅವರು ಹೆಚ್ಚು ಜನರೊಂದಿಗೆ ಬೆರೆಯಲ್ಲ.



Click it and Unblock the Notifications