Latest Updates
-
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ?
ಈ ಐದು ರಾಶಿಚಕ್ರದ ವ್ಯಕ್ತಿಗಳು ಅತ್ಯಂತ ನಿಷ್ಠಾವಂತ ಸ್ನೇಹಿತರಾಗಿರುವರು
ಸ್ನೇಹ ಎನ್ನುವುದು ಅತ್ಯುತ್ತಮವಾದ ಬಂಧ. ಅಪರಿಚತವಾದ ವ್ಯಕ್ತಿಗಳು ಯಾವುದದೋ ಒಂದು ಭಾವನೆಗಳ ಆಕರ್ಷಣೆಗೆ ಅಥವಾ ಸಾಮ್ಯತೆಗೆ ಒಳಗಾಗಿ ಸಂಭವಿಸುವ ಗೆಳೆತನವೇ ಸ್ನೇಹ. ಜೀವನದ ಸಾಕಷ್ಟು ಸಂದರ್ಭದಲ್ಲಿ ನಮ್ಮ ಸಂಬಂಧಿಕರು ಮಾಡುವ ಸಹಾಯಕ್ಕಿಂತ ಹೆಚ್ಚಾಗಿ ಸ್ನೇಹಿತರು ಮಾಡಿರುತ್ತಾರೆ. ಅವರು ಸಂದರ್ಭಕ್ಕೆ ತಕ್ಕಂತೆ ಸ್ನೇಹಿತರು, ಆತ್ಮೀಯರು, ಸಹಾಯಕರು, ಮಾರ್ಗದರ್ಶಕರು, ಸಹಕಾರ ನೀಡುವವರು ಆಗಿ ಸಹಾಯ ಮಾಡುತ್ತಾರೆ. ಈ ನಿಟ್ಟಿನಲ್ಲಿ ಬಹುತೇಕ ಮಂದಿ ಮನೆಯಿಂದಾಚೆ ಇರುವ ಸ್ನೇಹಿತರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಬಯಸುತ್ತಾರೆ ಎನ್ನಬಹುದು.
ನಿತ್ಯವೂ ಸಿಗುವ ಅಪರಿಚಿತ ವ್ಯಕ್ತಿಗಳು ಪರಿಚಿತರಾಗಿ ಗೆಳಯ/ಗೆಳತಿಯಾಗುವುದೇ ಸ್ನೇಹ. ಜೀವನದ ಪ್ರತಿಯೊಂದು ಹಂತದಲ್ಲೂ ಸಾಕಷ್ಟು ಸ್ನೇಹಿತರು ದೊರೆಯುತ್ತಾರೆ. ಹಾಗೆಯೇ ಸಾಕಷ್ಟು ಸ್ನೇಹಿತರು ಬಾಂಧವ್ಯಗಳಿಂದಾಚೆ ಕಳಚಿಕೊಂಡು ಮರೆಯಾಗುತ್ತಾರೆ. ಅದೇ ಕೆಲವು ಸ್ನೇಹಿತರು ಮಾತ್ರ ಜೀವನದ ಕೊನೆಯ ಕಾಲದವರೆಗೂ ಸ್ನೇಹಿತರಾಗಿಯೇ ಉಳಿಯುತ್ತಾರೆ. ಅಂತಹ ಸ್ನೇಹದಲ್ಲಿ ನಿಷ್ಠೆ ಎನ್ನುವುದು ಅತ್ಯುತ್ತಮವಾಗಿ ಇರುತ್ತದೆ ಎನ್ನಬಹುದು. ನಮಗೆ ಸಾಕಷ್ಟು ಸ್ನೇಹಿತರು ಇರಬಹುದು. ಅವರಲ್ಲಿ ಎಲ್ಲಾ ಸ್ನೇಹಿತರು ನಿಕಟವರ್ತಿಗಳಾಗಿಯೇ ಉಳಿಯುತ್ತಾರೆ ಎನ್ನಲಾಗುವುದಿಲ್ಲ. ಇನ್ನೂ ಕೆಲವರು ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಆತ್ಮೀಯತೆಯನ್ನು ಹೊಂದಬಹುದು.

ನಾವು ಯಾವಬಗೆಯ ಸ್ನೇಹಿತರನ್ನು ಹೊಂದಿದ್ದೇವೆ? ಅವರಲ್ಲಿ ಯಾರಾದರೂ ಸದಾ ನಮ್ಮ ಏಳು ಬೀಳುಗಳೊಂದಿಗೆ ಇರುತ್ತಾರೆಯೇ? ಅವರಿಂದಲೇ ನಮ್ಮ ಜೀವನದಲ್ಲಿ ಕೆಲವು ಅದೃಷ್ಟ ಹಾಗೂ ಯಶಸ್ಸನ್ನು ಪಡೆದುಕೊಂಡಿದ್ದೇವೆಯೇ ಎನ್ನುವುದೆಲ್ಲವೂ ನಮ್ಮ ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವದಿಂದ ಉಂಟಾಗುತ್ತದೆ ಎನ್ನಬಹುದು. ನಮ್ಮ ನಕ್ಷತ್ರ ಹಾಗೂ ರಾಶಿಚಕ್ರದ ಅನುಸಾರ ನಾವು ಅತ್ಯುತ್ತಮ ಅಥವಾ ನಿಷ್ಠಾವಂತ ಸ್ನೇಹಿತರಾಗಿರುತ್ತೇವೆ. ಅಲ್ಲದೆ ಅಂತಹ ಸ್ನೇಹಿತರೇ ನಮಗೆ ದೊರೆತಿರುತ್ತಾರೆ ಎನ್ನಬಹುದು. ನಿಮಗೂ ಯಾವ ರಾಶಿಚಕ್ರದವರು ಅತ್ಯಂತ ನಿಷ್ಠಾವಂತ ಸ್ನೇಹಿತರಾಗಿರುತ್ತಾರೆ? ಅಂತಹವರು ನಿಮ್ಮ ಸ್ನೇಹಿತರ ಬಳಗದಲ್ಲಿ ಇದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ವೃಷಭ
ಈ ರಾಶಿಚಕ್ರದ ವ್ಯಕ್ತಿಗಳು ಅತ್ಯಂತ ನಿಷ್ಠೆ ಹಾಗೂ ಬದ್ಧತೆಗೆ ಒಳಗಾದ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಸ್ನೇಹಿತರ ಭಾವನೆಗಳನ್ನು ಹಾಗೂ ಅವಶ್ಯಕತೆಗಳನ್ನು ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳುತ್ತಾರೆ. ಇವರು ಮೇಲ್ನೋಟಕ್ಕೆ ದಡ್ಡರಂತೆ ಅಥವಾ ಅನಿರೀಕ್ಷಿತ ವ್ಯಕ್ತಿಗಳಂತೆ ಕಾಣಬಹುದು. ಆದರೆ ತಮ್ಮ ಸ್ನೇಹಿತರಿಗೆ ಅಗತ್ಯವಿದೆ ಎಂದಾಗ ಮುಂದಾಗಿ ಬರುವರು. ಹಾಗಾಗಿಯೇ ಇವರನ್ನು ಅತ್ಯಂತ ನಿಷ್ಠಾವಂತ ವ್ಯಕ್ತಿಗಳು ಎಂದು ಕರೆಯಬಹುದು. ಇವರು ಸ್ನೇಹಿತರಿಗಾಗಿ, ಕುಟುಂಬದವರಿಗಾಗಿ ಹಾಗೂ ತಮ್ಮ ಪ್ರೀತಿಪಾತ್ರರಿಗಾಗಿ ಸದಾ ಸಕ್ರಿಯ ಪಾತ್ರದಾರಿಯಾಗಿರುತ್ತಾರೆ. ಅಲ್ಲದೆ ಸಂಬಂಧ ಹಾಗೂ ಸ್ನೇಹದಲ್ಲಿ ಸಮರ್ಪಣೆ ಹಾಗೂ ವಿಶ್ವಾಸಾರ್ಹ ವ್ಯಕ್ತಿಯಾಗಿ ಮಿಂಚುವರು.

ಕರ್ಕ
ಸೂಕ್ಷ್ಮ ಪ್ರವೃತ್ತಿ ಹಾಗೂ ಭಾವನಾತ್ಮಕ ಜೀವಿಗಳು ಕರ್ಕ ರಾಶಿಯ ವ್ಯಕ್ತಿಗಳು ಎನ್ನಬಹುದು. ಇವರು ಸದಾ ತಮ್ಮ ಜೀವನದ ಅಗತ್ಯತೆ ಮತ್ತು ಗುರಿಗಳಿಗೆ ಶ್ರಮಿಸುವರು. ಅಲ್ಲದೆ ಪ್ರಬುದ್ಧ ತಿಳುವಳಿಕೆಯಿಂದ ತಮ್ಮನ್ನು ತಾವು ತೋರ್ಪಡಿಸಿಕೊಳ್ಳುವರು. ಇವರಿಗೆ ತಮ್ಮವರ ಹಾಗೂ ಸ್ನೇಹಿತರ ಸ್ಥಿತಿಯನ್ನು ಬಹುಬೇಗ ಅರ್ಥಮಾಡಿಕೊಳ್ಳುವ ಸಾಮಥ್ರ್ಯ ಇರುತ್ತದೆ. ಒಂದೇ ಪದಗಳಿಂದ ಸನ್ನಿವೇಶ ಅಥವಾ ವಿಷಯವನ್ನು ಅರ್ಥಮಾಡಿಕೊಳ್ಲುವ ಶಕ್ತಿಯಿದೆ ಎನ್ನಬಹುದು. ಮೇಲ್ನೋಟಕ್ಕೆ ಇವರು ವಿಷಯವನ್ನು ಅಥವಾ ಸನ್ನಿವೇಶವನ್ನು ಬಹಳ ಹಗುರವಾಗಿ ಪರಿಗಣಿಸುತ್ತಾರೆ ಎಂದು ಅನಿಸಬಹುದು. ಆದರೆ ಅವರಲ್ಲಿ ಅತ್ಯುತ್ತಮವಾದ ಕಾಳಜಿ ನೀಡುವ ಹೃದಯವಿದೆ. ತಮ್ಮ ಗೆಳೆಯರ ಅಗತ್ಯತೆಗೆ ಸದಾ ಸಿದ್ಧರಾಗಿರುತ್ತಾರೆ. ಅಲ್ಲದೆ ಮಿತ್ರರಿಗಾಗಿ ನಿಷ್ಠೆಯ ವ್ಯಕ್ತಿಗಳಾಗಿ ನಿಲ್ಲುವರು.

ಕನ್ಯಾ
ಪ್ರಾಮಾಣಿಕತೆ ಹಾಗೂ ಅತ್ಯುತ್ತಮ ರೀತಿಯ ನಿಸ್ವಾರ್ಥ ಪ್ರೀತಿಯನ್ನು ನೀಡುವ ವ್ಯಕ್ತಿಗಳು ಇವರು ಎಂದು ಹೇಳಬಹುದು. ಇವರು ಕೆಲವೊಮ್ಮೆ ತಮ್ಮ ವೈರಿಗಳಾಗಿದ್ದರೂ ಅವರಿಗೆ ಕಾಳಜಿಯನ್ನು ತೋರಿಸುವ ಅಥವಾ ಕೆಲವು ಹಂತದಲ್ಲಿ ಸಹಕಾರ ನೀಡುವ ಸ್ನೇಹಿತರಾಗಿ ನಿಲ್ಲುವರು. ಇವರು ಅತ್ಯಂತ ಭಾವುಕ ಹಾಗೂ ಕಾಳಜಿ ಹೊಂದಿರುವ ಮನಸ್ಸು ಮತ್ತು ಹೃದಯ ಹೊಂದಿರುವುದರಿಂದ ಇತರರನ್ನು ಸುಲಭವಾಗಿ ಕ್ಷಮಿಸುತ್ತಾರೆ. ತಮ್ಮವರಿಗೆ ಅಥವಾ ಸ್ನೇಹಿತರಿಗೆ ತನ್ನ ಅಥವಾ ತನ್ನಿಂದಾಗುವ ಸಹಾಯದ ಅಗತ್ಯವಿದೆ ಎಂದಾಗ ನಿಷ್ಠೆಯಿಂದ ನಿರ್ವಹಿಸುತ್ತಾರೆ. ಸ್ನೇಹಿತರಿಗಾಗಿ, ಕುಟುಂಬಕ್ಕಾಗಿ ಹಾಗೂ ತಮ್ಮ ಭಾವನೆಗಳಿಗೆ ವಿಶ್ವಾಸ ನೀಡುವ ವ್ಯಕ್ತಿಗಳು ಎಂದು ಪರಿಗಣಿಸಿದಾಗ ಸಾಕಷ್ಟು ತ್ಯಾಗ ಹಾಗೂ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ.

ವೃಶ್ಚಿಕ
ಈ ರಾಶಿಯ ವ್ಯಕ್ತಿಗಳು ಕೆಲವೊಮ್ಮೆ ದೃಢ ನಿಶ್ಚಯದಿಂದ ಕೂಡಿದ ವ್ಯಕ್ತಿಗಳು ಎಂದು ತೋರುವುದು. ಅಲ್ಲದೆ ಇವರು ಅತ್ಯುತ್ತಮ ಸ್ನೇಹಿತರಾಗಿ ಸಂಬಂಧವನ್ನು ನಿರ್ವಹಿಸಲು ಸಾಧ್ಯವಿಲ್ಲ ಎನ್ನುವಂತಹ ಭಾವನೆಯೂ ಮೂಡಬಹುದು. ಆದರೆ ತೊಂದರೆಗೆ ಒಳಗಾದ ವ್ಯಕ್ತಿಗೆ ಅಥವಾ ಸ್ನೇಹಿತರಿಗೆ ಮೊದಲು ಬಂದು ನಿಲ್ಲುವ ವ್ಯಕ್ತಿಗಳಾಗಿರುತ್ತಾರೆ ಎನ್ನಲಾಗುವುದು. ಸ್ನೇಹ ಮಾಡಿಕೊಳ್ಳುವುದರಲ್ಲಿ, ಸಹಾಯಕ್ಕೆ ನಿಲ್ಲುವುದರಲ್ಲಿ ಹಾಗೂ ಸಂಬಂಧ ಮತ್ತು ಸ್ನೇಹದ ವಿಚಾರದಲ್ಲಿ ತ್ಯಾಗ ಮತ್ತು ನಿಷ್ಠೆಯನ್ನು ಮೆರೆಯುವ ವ್ಯಕ್ತಿಗಳಾಗಿ ನಿಲ್ಲುವರು. ಇವರ ಸ್ನೇಹ ಹಾಗೂ ನಿಷ್ಠೆಗೆ ಇವರು ಸದಾ ಬದ್ಧರಾಗಿ ನಿಲ್ಲುವರು. ಇವರ ಸಹಾಯ ಹಾಗೂ ಸಹಕಾರಕ್ಕೆ ಯಾರೂ ಬೆರಳು ತೋರಿಸುವಂತೆ ಇರುವುದಿಲ್ಲ ಎಂದು ಹೇಳಲಾಗುವುದು.

ಮೀನ
ಮೀನ ರಾಶಿಯ ವ್ಯಕ್ತಿಗಳು ಅತ್ಯುತ್ತಮ ಉದಾರವಾದ ಹೃದಯವಂತರು ಎನ್ನಲಾಗುವುದು. ಇವರು ತೋರುವ ಪ್ರೀತಿ ಹಾಗೂ ವಾತ್ಸಲ್ಯಕ್ಕೆ ಯಾವುದೇ ಸರಿಸಾಟಿಯಾಗಿ ಯಾವುದೂ ನಿಲ್ಲದು. ಇವರು ತೋರುವ ಕಾಳಜಿ ಹಾಗೂ ಸ್ನೇಹಕ್ಕೆ ತಮ್ಮ ಸ್ವಂತ ಮನಸ್ಸಿಗೆ ನೋವುಂಟಾದರೂ ಸಹಿಸಿಕೊಳ್ಳುವರು. ತಮಗೆ ಕೆಡುಕುಂಟಾದರೂ ಅವರನ್ನು ರಕ್ಷಿಸುವ ಗುಣ ಅವರಲ್ಲಿ ಇರುತ್ತದೆ. ಇವರು ತಮ್ಮ ಮನಸ್ಸಿಗೆ ಇಷ್ಟವಾದ ವ್ಯಕ್ತಿಗಳೊಂದಿಗೆ ಅತಿಯಾದ ಸ್ನೇಹವನ್ನು ಹೊಂದುವರು. ಇವರು ತಮ್ಮ ಕುಟುಂಬ, ಸ್ನೇಹ ಹಾಗೂ ಪ್ರೀತಿಗಾಗಿ ಸದಾ ನಿಷ್ಠಾವಂತ ವ್ಯಕ್ತಿಗಳಾಗಿರುತ್ತಾರೆ. ಅವರ ಸಹಾಯದ ಮನೋಭಾವವು ದೇವರ ಕೊಡುಗೆ ಎಂದು ಭಾವಿಸಬಹುದು. ಇವರ ನಿಷ್ಠೆಯೇ ಇವರ ಸ್ನೇಹವನ್ನು ಕಾಪಾಡಿಕೊಳ್ಳುವುದು.



Click it and Unblock the Notifications











