Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ನಾಲ್ಕು ರಾಶಿಯವರಿಗೆ, ಮದುವೆ ಸಮಯದಲ್ಲಿ ಸಮಸ್ಯೆ ಕಾಡಲಿದೆ...
ನಾಳೆ ಅಂದರೆ ಪ್ರೇಮಿಗಳ ದಿನ... ಪ್ರತಿಯೊಬ್ಬ ಪ್ರೇಮಿ ಕೂಡ ಪ್ರಿಯತಮೆಗೆ ಏನಾದರೂ ಉಡುಗೊರೆ ನೀಡಬೇಕು ಮತ್ತು ಆಕೆಯ ಮನಗೆಲ್ಲಬೇಕು ಎಂದು ಬಯಸುತ್ತಾ ಇರುತ್ತಾನೆ. ಇಂತಹ ಸಮಯದಲ್ಲಿ ಕೆಲವು ಮಂದಿ ಪ್ರೇಮಿಗಳ ದಿನದಂದು ಮೊದಲ ಸಲ ತಮ್ಮ ಪ್ರೇಮ ನಿವೇದನೆ ಮಾಡಲು ಮುಂದಾಗಿರಬಹುದು. ಇನ್ನು ಈಗಾಗಲೇ ಪ್ರೀತಿಸುತ್ತಿರುವವರು ಮದುವೆ ಬಗ್ಗೆ ಆಲೋಚನೆ ಮಾಡಬಹುದು. ಇಂತಹವರು ತಮ್ಮ ಪ್ರೀತಿಯ ಜೀವನದ ಬಗ್ಗೆ ರಾಶಿಚಕ್ರದ ಮೂಲಕ ತಿಳಿದುಕೊಂಡರೆ ಪ್ರೇಮಿಗಳ ದಿನದಂದು ನಿರಾಶೆಯಾಗುವುದು ತಪ್ಪುವುದು.
ಈ ನಾಲ್ಕು ರಾಶಿಗಳಲ್ಲಿ ಒಂದು ರಾಶಿಯವರು ನಿಮ್ಮ ಪ್ರೇಮಿಯಾಗಿದ್ದರೆ ಅವರು ಖಂಡಿತವಾಗಿಯೂ ಮದುವೆಗೆ ನಿರಾಕರಿಸುವರು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯವರು ಯಾವತ್ತೂ ಮದುವೆಯಾಗಲು ಅಥವಾ ಜೀವನದಲ್ಲಿ ನೆಲೆ ಕಂಡುಕೊಳ್ಳಲು ಬಯಸುವುದಿಲ್ಲ....

ಮೇಷ: ಮಾರ್ಚ್ 21-ಎಪ್ರಿಲ್ 19
ಈ ರಾಶಿಚಕ್ರದಲ್ಲಿ ಹುಟ್ಟಿರುವ ವ್ಯಕ್ತಿಗಳು ತಮ್ಮದೇ ನಿಯಮ ಪಾಲಿಸುವರು ಮತ್ತು ಜೀವನದಲ್ಲಿ ತಮ್ಮದೇ ಆದ ರೀತಿಯಲ್ಲಿ ವಾಸಿಸಲು ಬಯಸುವರು. ಇವರು ತುಂಬಾ ಬೇಡಿಕೆಯುಳ್ಳವರು ಮತ್ತು ತಮ್ಮ ನಿಯಮಗಳಿಗೆ ಯಾವತ್ತೂ ರಾಜಿ ಮಾಡಿಕೊಂಡವರಲ್ಲ.

ಮೇಷ: ಮಾರ್ಚ್ 21-ಎಪ್ರಿಲ್ 19
ಇತರರ ಅಭಿಪ್ರಾಯವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಕಷ್ಟವಾಗುವುದು. ಅವರ ಗುಣಮಟ್ಟಕ್ಕೆ ಹೊಂದಿಕೊಳ್ಳದೆ ಇರುವಂತಹ ವಿಚಾರವನ್ನು ಅವರು ಸುಲಭವಾಗಿ ಬಿಟ್ಟುಬಿಡುವರು. ಇದರಿಂದಾಗಿ ಅವರು ಸಂಬಂಧದಿಂದ ದೂರ ಉಳಿಯುವರು.

ಮಿಥುನ
ಈ ರಾಶಿಯವರನ್ನು ತುಂಬಾ ಸ್ನೇಹಮಹಿ ಹಾಗೂ ಸಂವಹನಶೀಲರು ಎಂದು ತಿಳಿಯಲಾಗುತ್ತದೆ. ಕೆಲವೊಂದು ಸಲ ಇವರು ಗೊಂದಲಕ್ಕೆ ಸಿಲುಕುವರು. ಇವರಲ್ಲಿ ಎರಡು ನಿಲುವುಗಳಿರುವುದು. ಅದೇನೆಂದರೆ ಮೊದಲನೇಯದಾಗಿ ತನ್ನ ಪ್ರೇಮಿ ಜತೆ ಕಾಲ ಕಳೆಯಲು ಬಯಸುವರು. ಆದರೆ ಮದುವೆಯಾಗಲು ಅಥವಾ ಜೀವನಪೂರ್ತಿ ಅವರೊಂದಿಗೆ ಕಳೆಯುವುದು ಇಷ್ಟವಾಗಲ್ಲ.

ಮಿಥುನ
ಅವರ ಉತ್ಸಾಹಭರಿತ ವ್ಯಕ್ತಿತ್ವವು ನಿಮ್ಮನ್ನು ವಿಸ್ಮಯಗೊಳಿಸುವುದು ಅಥವಾ ಒಳಸಂಚಿಗೊಳಿಸುವುದು ಎನ್ನಲಾಗಿದೆ. ಅವರು ಮದುವೆ ಅಥವಾ ಗಂಭೀರ ಸಂಬಂಧದ ಬಗ್ಗೆ ಚರ್ಚೆ ಮಾಡಿದಾಗ ಅದು ನಿಮಗೆ ಸಂಬಂಧಿಸಿದ್ದು ಆಗಿರುವುದಿಲ್ಲ. ಅವರು ತಮ್ಮ ಸ್ವತಂತ್ರವನ್ನು ಎಷ್ಟು ಆನಂದಿಸುತ್ತಾರೆ ಎಂದರೆ ಅದನ್ನು ಸುಲಭವಾಗಿ ಬಿಟ್ಟುಕೊಡಲು ಒಪ್ಪರು.

ಧನುರಾಶಿ
ಈ ರಾಶಿಚಕ್ರದವರು ತಮ್ಮ ಸ್ವತಂತ್ರ ಬದುಕನ್ನು ತುಂಬಾ ಇಷ್ಟಪಡುವ ಕಾರಣದಿಂದಾಗಿ ಮದುವೆಯಿಂದ ದೂರ ಉಳಿಯುವರು. ಸಂಬಂಧಕ್ಕಾಗಿ ತಮ್ಮ ಸ್ವತಂತ್ರವನ್ನು ಬಿಟ್ಟುಕೊಡಲು ಈ ರಾಶಿಯವರು ಬಯಸಲ್ಲ. ಇವರಿಗೆ ಹೆಚ್ಚಿನ ಸ್ನೇಹಿತರ ಬಳಗವಿರುವುದು ಮತ್ತು ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವರು. ನೀವು ಬೇಗನೆ ಅವರನ್ನು ಸಂಬಂಧಕ್ಕೆ ಸಿಲುಕಿಸಿದರೆ ನಿಮ್ಮಿಂದ ದೂರ ಓಡಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕುಂಭ ರಾಶಿ
ಈ ರಾಶಿಯವರು ತಮ್ಮ ಭಾವನೆಗಳನ್ನು ತೋರಿಸಿಕೊಡಲ್ಲ. ದೀರ್ಘಕಾಲದ ಸಂಬಂಧದಲ್ಲಿ ಇವರು ತಮ್ಮ ಭಾವನೆಗಳನ್ನು ತೋರಿಸಿಕೊಡಲು ಕಷ್ಟಪಡುವರು. ಆರಂಭದಲ್ಲಿ ಇವರಲ್ಲಿ ದೀರ್ಘವಾದ ಭಾವನೆಗಳಿವೆ ಎಂದು ನಿಮಗೆ ಅನಿಸಬಹುದು. ಆದರೆ ಈ ಭಾವನೆಗಳು ಕಳೆದುಹೋಗಿ ಕೇವಲ ಮೌನ ಉಳಿಯಬಹುದು.

ಕುಂಭ ರಾಶಿ
ಇನ್ನೊಂದು ಕಡೆಯಲ್ಲಿ ಇವರು ತಮ್ಮ ಭಾವನೆಗಳನ್ನು ಯಾವಾಗಲೂ ಅದುಮಿಟ್ಟಿಕೊಳ್ಳುವರು. ಇದು ಸಂಬಂಧದಲ್ಲಿ ಒಳ್ಳೆಯ ವಿಚಾರವಲ್ಲ. ಇದರಿಂದಾಗಿ ಅವರು ಮದುವೆಯಿಂದ ದೂರ ಉಳಿಯುವರು. ಈ ರಾಶಿಯವರನ್ನು ಪ್ರೀತಿಸುತ್ತಾ ಇದ್ದೀರಾ? ಹಾಗಾದರೆ ನಮಗೆ ಕಮೆಂಟ್ ಮಾಡಲು ಮರೆಯಬೇಡಿ.



Click it and Unblock the Notifications
