Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಇವರು ಏಕಾಂಗಿತನದಲ್ಲಿಯೇ ಸಂತೋಷ ಕಾಣುವ ರಾಶಿಯವರು
ಕೆಲವು ಜನರನ್ನು ನೋಡಿದರೆ ಅವರು ಗುಂಪಿನಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಏಕಾಂಗಿಯಾಗಿರಲು ಬಯಸುವರು. ಕಚೇರಿಯಲ್ಲೂ ಹಾಗೆ ಇಂತಹ ವ್ಯಕ್ತಿಗಳಿಗೆ ಏಕಾಂಗಿತನವೇ ಇಷ್ಟವಾಗುವುದು. ಇಂತವರು ಏಕಾಂಗಿಯಾಗಿರುವಾಗಲೇ ಸಂತೋಷವಾಗಿರುವರು. ಇಂತಹ ವ್ಯಕ್ತಿಗಳೊಂದಿಗೆ ಬೇರೆಯವರು ಇದ್ದರೆ ಆಗ ಅವರಿಗೆ ಕಿರಿಕಿರಿ ಅನಿಸುವುದು.
ಬೇರೆಯವರು ಇವರನ್ನು ತುಂಬಾ ಬೋರಿಂಗ್ ವ್ಯಕ್ತಿಯೆಂದು ಕರೆಯಬಹುದು. ಆದರೆ ಇವರು ಬೇರೆಯವರೊಂದಿಗೆ ಬೆರೆಯುವುದಕ್ಕಿಂತ ಹೆಚ್ಚಾಗಿ ಏಕಾಂಗಿಯಾಗಿರುವಾಗಲೇ ತುಂಬಾ ಸಂತೋಷವಾಗಿರುವರು. ಹೀಗೆ ಏಕಾಂಗಿಯಾಗಲು ಇಷ್ಟಪಡುವಂತಹ ರಾಶಿಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದು ಯಾವುದೆಂದು ತಿಳಿಯಿರಿ.

ಕರ್ಕಾಟಕ: ಜೂನ್22-ಜುಲೈ22
ಕರ್ಕಾಟಕ ರಾಶಿಯವರು ಸ್ನೇಹಿತರ ಸಂಗವನ್ನು ಹೆಚ್ಚು ಇಷ್ಟಪಡುವರು. ಆದರೆ ಇದರರ್ಥ ಅವರು ಏಕಾಂಗಿಯಾಗಿರಲು ಸಾಧ್ಯವಿಲ್ಲವೆಂದಲ್ಲ. ಏಕಾಂಗಿಯಾಗಿರುವುದರಿಂದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬಹುದು ಎಂದು ಇವರು ಭಾವಿಸಿರುವರು.

ಕರ್ಕಾಟಕ
ಆಲೋಚನೆಗಳ ಸಾಗರವಾಗಿರುವ ಇವರಲ್ಲಿ ದಿನ 24 ಗಂಟೆಯೂ ಮಾಡಬೇಕಾದ ಕೆಲಸಗಳ ಪಟ್ಟಿಯು ತಿರುಗುತ್ತಲಿರುವುದು. ಇವರು ಏಕಾಂಗಿಯಾಗಿರುವಾಗ ತಮ್ಮ ಪಟ್ಟಿಯಲ್ಲಿರುವ ಕೆಲಸಗಳನ್ನು ಪೂರೈಸುವರು. ಇವರು ತುಂಬಾ ಸೂಕ್ಷ್ಮ ಸ್ವಭಾವದವರಾಗಿರುವ ಕಾರಣದಿಂದಾಗಿ ಇವರಿಗೆ ನೋವಾದಾಗ, ಏಕಾಂಗಿಯಾಗಿದ್ದರೆ ಬೇಗನೆ ಚೇತರಿಸುವರು.

ಕನ್ಯಾ: ಆ.22-ಸೆ.23
ಕನ್ಯಾ ರಾಶಿಯವರು ಯಾವಾಗಲೂ ವ್ಯಸ್ತರಾಗಿರುವಂತವರು. ಇವರಿಗೆ ತಮ್ಮ ಸುತ್ತಲು ಯಾರಿದ್ದಾರೆಂದು ನೋಡಲು ಪುರುಸೊತ್ತಿರುವುದಿಲ್ಲ. ಸ್ನೇಹಿತರ ಗುಂಪಿನಲ್ಲಿ ಇರುವಾಗ ಕೂಡ ಇವರು ಕೇವಲ ದೈಹಿಕವಾಗಿ ಅಲ್ಲಿರಬಹುದು, ಮಾನಸಿವಾಗಿಯಲ್ಲ.

ಕನ್ಯಾ
ಇನ್ನು ಕಲೆ, ಓದುವುದು, ಅಡುಗೆ ಇತ್ಯಾದಿ ಇವರು ಏಕಾಂಗಿಯಾಗಿರುವಾಗ ಮಾಡಲು ಬಯಸುವ ಕೆಲಸಗಳು. ಕೆಲವು ಕನ್ಯಾ ರಾಶಿಯವರು ತುಂಬಾ ನಾಚಿಗೆಯವರಾಗಿರುವರು. ಸುತ್ತಲು ಜನರಿದ್ದರೆ ಅವರಿಗೆ ಮುಜುಗರವಾಗಬಹುದು. ಇದರಿಂದ ಅವರು ಏಕಾಂಗಿಯಾಗಿರಲು ಬಯಸುವರು.

ವೃಶ್ಚಿಕ: ಅ.24-ನ.22
ವೃಶ್ಚಿಕ ರಾಶಿಯವರು ಸ್ನೇಹಿತರೊಂದಿಗೆ ಇದ್ದು, ಸಂತೋಷವಾಗಿರಲು ಬಯಸುವಂತಹ ವ್ಯಕ್ತಿಗಳು. ಆದರೆ ಇವರು ಪ್ರತಿಯೊಂದು ವಿಚಾರದಲ್ಲೂ ಭಾವೋದ್ರೀಕ್ರರಾಗಿರುವರು. ಇದು ಕೆಲಸ ಅಥವಾ ಯಾವುದೇ ಆಲೋಚನೆಯಾಗಿರಲಿ, ಇವರು ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಂಡು ಅದಕ್ಕೊಂದು ರೂಪ ನೀಡಲು ಬಯಸುವರು.

ವೃಶ್ಚಿಕ
ಇಂತಹ ಸಮಯದಲ್ಲಿ ಇವರು ಕೆಲಸದಲ್ಲೇ ತಲ್ಲೀನರಾಗಿರುವರು. ಪ್ರೀತಿಪಾತ್ರರೊಂದಿಗೆ ಇರುವುದನ್ನು ಇಷ್ಟಪಡುವರು. ಆದರೆ ಇವರ ಕೈಯಲ್ಲಿ ಯಾವುದೇ ರೀತಿಯ ಕೆಲಸವಿಲ್ಲದೆ ಇರುವಾಗ ಮಾತ್ರ.

ಮಕರ: ಡಿ.23-ಜ.20
ತುಂಬಾ ಜಾಣ್ಮೆಯ ವ್ಯಕ್ತಿ ಪಾರ್ಟಿಯ ಸಂದರ್ಭದಲ್ಲಿ ಎಲ್ಲರೊಂದಿಗೆ ಬೆರೆತುಕೊಳ್ಳುವ, ಮತ್ತೊಂದು ದಿನ ಪಾರ್ಟಿಯಲ್ಲಿ ಒಂದು ಮೂಲೆಯಲ್ಲಿ ಕುಳಿತುಕೊಂಡು, ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುತ್ತಿರುವಂತಹ ವ್ಯಕ್ತಿಯು ನಿಮ್ಮ ಸ್ನೇಹಿತನಾಗಿದ್ದರೆ ಆತ ಖಂಡಿತವಾಗಿಯೂ ಮಕರ ರಾಶಿಯವನು.

ಮಕರ
ಮಕರ ರಾಶಿಯವರು ಹೆಚ್ಚಾಗಿ ಜಾಣ ವ್ಯಕ್ತಿಗಳು. ಇವರು ಕೆಲವೊಂದು ಸಲ ಎಲ್ಲರೊಂದಿಗೆ ಬೆರೆತರೆ, ಇನ್ನು ಕೆಲವೊಮ್ಮೆ ಏಕಾಂಗಿಯಾಗಿರಲು ಬಯಸುವರು. ಇವರು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲು ಬಯಸಲ್ಲ. ಆದರೆ ಇದಕ್ಕಿದ್ದ ಹಾಗೆ ಸ್ನೇಹಿತರೊಂದಿಗೆ ಹೊರಗಡೆ ಹೋಗಿ ತುಂಬಾ ಮೋಜುಮಸ್ತಿ ಮಾಡುವಂತಹ ವ್ಯಕ್ತಿಗಳು ಕೂಡ ಇವರೇ.

ಕುಂಭ: ಜ.21-ಫೆ.19
ಪ್ರವಾಸ, ಸಿನಿಮಾಗೆ ಹೋಗುವುದು ಅಥವಾ ಮನೆಯಲ್ಲಿ ಇದ್ದುಕೊಂಡು ಪ್ರಾಜೆಕ್ಟ್ ಪೂರ್ತಿಗೊಳಿಸುವುದು ಹೀಗೆ ಏನೇ ಇರಲಿ, ಕುಂಭ ರಾಶಿಯವರು ಸ್ವತಂತ್ರವಾಗಿರಲು ಬಯಸುವರು. ಗುಂಪಿನಲ್ಲಿರುವ ಜನರಿಗಿಂತ ಇವರ ಅಭಿಪ್ರಾಯವು ತುಂಬಾ ಭಿನ್ನವಾಗಿರುವುದು. ಪ್ರಯಾಣಿಸುವ ವೇಳೆ ಇವರು ಯಾವಾಗಲೂ ಓದುತ್ತಲಿರುವರು, ಏಕಾಂಗಿಯಾಗಿಯೇ ಯಾವುದೇ ಸ್ಥಳಕ್ಕೆ ಭೇಟಿ ನೀಡುವರು ಮತ್ತು ರೆಸ್ಟೋರೆಂಟ್ ಗೂ ಒಬ್ಬರೇ ಹೋಗುವರು. ಬೇರೆಯವರ ಬೇಡಿಕೆಗಳ ಬಗ್ಗೆ ಚಿಂತೆ ಮಾಡುವ ಬದಲು ಇವರು ತಮ್ಮ ಬಗ್ಗೆ ಚಿಂತೆ ಮಾಡಿಕೊಂಡು ಸಂತೋಷವಾಗಿರುವರು.

ಮೀನ: ಫೆ.20-ಮಾ.20
ಮೀನ ರಾಶಿಯವರು ತಮ್ಮದೇ ಆದ ಪ್ರಪಂಚದಲ್ಲಿ ಜೀವಿಸುವರು. ತಮ್ಮ ಸುತ್ತಲು ಇರುವವರು ಅಭಿಪ್ರಾಯ ಮಂಡಿಸಿ, ಭೀತಿ ಮೂಡಿಸುವ ಬದಲು ಇವರು ಏಕಾಂಗಿಯಾಗಿಯೇ ಮನೆಯಲ್ಲಿದ್ದುಕೊಂಡು ಆರಾಮವಾಗಿ ನಿದ್ರಿಸಲು ಬಯಸುವರು. ಹೆಚ್ಚಿನ ಮೀನ ರಾಶಿಯವರು ಕನಸುಗಾರರು. ಇದರಿಂದ ತಮ್ಮ ಸುತ್ತಲು ಜನರು ಇರುವುದನ್ನು ಬಯಸಲ್ಲ. ತಮ್ಮ ಸುತ್ತಲು ಯಾರನ್ನಾದರೂ ಇಟ್ಟುಕೊಳ್ಳಲು ಬಯಸಿದರೆ ಅವರೊಂದಿಗೆ ಎಲ್ಲವನ್ನು ಹಂಚಿಕೊಳ್ಳುವರು ಮತ್ತು ಸ್ವಲ್ಪ ಸಮಯ ಅವರೊಂದಿಗೆ ಇರುವರು. ಮೀನ ರಾಶಿಯವರು ಸ್ವತೃಪ್ತಿ ಹಾಗೂ ಸಂತೋಷವಾಗಿರುವರು.



Click it and Unblock the Notifications











