Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾರಿಗೆ ಪ್ರೀತಿಯಲ್ಲಿ ನಂಬಿಕೆಯಿದೆ? ಅದನ್ನು ರಾಶಿಚಕ್ರ ಹೇಳುತ್ತದೆ!
ಪ್ರೀತಿ ಎನ್ನುವುದು ಒಂದು ಅದ್ಭುತ ಶಕ್ತಿ. ಅದನ್ನು ಪಡೆದಾಗ ಜೀವನವು ಪರಿಪೂರ್ಣ ಎನಿಸುವುದು. ಅದೇ ಪ್ರೀತಿಯನ್ನು ಕಳೆದುಕೊಂಡಾಗ ಜೀವನ ನಶ್ವರ ಎನಿಸುವುದು. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿಗಾಗಿ ಹಂಬಲಿಸುತ್ತಾನೆ. ಪ್ರೀತಿ ಎನ್ನುವುದು ದೇವರು ಕೊಟ್ಟ ವರದಾನ ಎನ್ನಬಹುದು. ತಂದೆ ತಾಯಿಯ ಪ್ರೀತ, ಸ್ನೇಹಿತರ ಪ್ರೀತಿ, ಸಂಗಾತಿಯ ಪ್ರೀತಿ ಹಾಗೂ ಬಂಧು ಬಾಂಧವರ ಪ್ರೀತಿ ಹೀಗೆ ವಿವಿಧ ಬಗೆಯಲ್ಲಿ ನಾವು ಪ್ರೀತಿಯನ್ನು ಪಡೆದುಕೊಳ್ಳುತ್ತೇವೆ. ಅವೆಲ್ಲವೂ ಜೀವನಕ್ಕೊಂದು ಭರವೆಸೆ, ಸಂತೃಪ್ತಿ ಹಾಗೂ ಸಂತೋಷವನ್ನು ನೀಡುವ ಸಂಜೀವಿನಿ.
ಪ್ರಪಂಚದಲ್ಲಿ ಇರುವ ಈ ಪ್ರೀತಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ಬಗೆಯ ಅಭಿಪ್ರಾಯವನ್ನು ಹೊಂದಿರುತ್ತಾರೆ. ಕೆಲವರು ಪ್ರೀತಿ ಎನ್ನುವುದು ಕೇವಲ ಬೂಟಾಟಿಕೆ, ಅದರಿಂದ ಜೀವನದಲ್ಲಿ ಒಂದಿಷ್ಟು ನೋವನ್ನು ಅನುಭವಿಸುತ್ತೇವೆಯೇ ಹೊರತು ಖುಷಿಯನ್ನಲ್ಲ ಎಂದು ಹೇಳುತ್ತಾರೆ. ಇನ್ನೂ ಕೆಲವರು ಪ್ರಪಂಚದಲ್ಲಿ ಪ್ರೀತಿ ಎನ್ನುವುದು ಇಲ್ಲದೆ ಹೋದರೆ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಹೇಳುತ್ತಾರೆ. ಸನ್ನಿವೇಶ ಹಾಗೂ ಸಂದರ್ಭಗಳ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳು ಅವರದ್ದೇ ಆದ ಅಭಿಪ್ರಾಯಗಳನ್ನು ಹೊಂದಬಹುದು. ಆದರೆ ಪ್ರೀತಿ ಎನ್ನುವುದು ಮಾತ್ರ ವಿಶೇಷವಾಗಿ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿರುವುದು ನಿಜ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗಳಿಗೆ ಅನುಗುಣವಾಗಿ ವ್ಯಕ್ತಿ ಪ್ರೀತಿಯ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿರುತ್ತಾನೆ. ಅವನ ಅಭಿಪ್ರಾಯಗಳಿಗೆ ರಾಶಿಚಕ್ರದ ಪ್ರಭಾವದಿಂದ ಅನುಭವಿಸಿರುವ ಅನುಭವಗಳೇ ಆಗಿರುತ್ತವೆ ಎನ್ನಲಾಗುವುದು. ಇದೊಂದು ಕುತೂಹಲವಾದ ಸಂಗತಿ ಎನಿಸುತ್ತಿದ್ದರೆ ಈ ಮುಂದೆ ರಾಶಿಚಕ್ರಗಳ ಅಭಿಪ್ರಾಯಗಳು ಹೇಗಿರುತ್ತವೆ ಎನ್ನುವುದನ್ನು ವಿವರಿಸಲಾಗಿದೆ. ಅದನ್ನು ಪರಿಶೀಲಿಸಿ...

ಮೀನ
ಇವರು ಪ್ರೀತಿಯ ಪರಿಕಲ್ಪನೆಯನ್ನು ನಂಬುವುದಿಲ್ಲ. ಇವರು ಪ್ರೀತಿಯ ಬಗ್ಗೆ ಮಾತನಾಡುವುದನ್ನು ಲೆಕ್ಕಿಸುವುದಿಲ್ಲ ಎನ್ನಬಹುದು. ಆದರೆ ಪ್ರೀತಿಗಾಗಿ ಕಣ್ಣಲ್ಲಿ ಹೊಳಪು ಹಾಗೂ ಹೃದಯದಲ್ಲಿ ಸ್ಪರ್ಧೆಗಳು ಇರುತ್ತವೆ ಎಂದು ಹೇಳಲಾಗುವುದು. ಸಣ್ಣ ಸಂಗತಿಗಳಲ್ಲೂ ಪ್ರೀತಿಯನ್ನು ಕಾಣಲು ಬಯಸುತ್ತಾರೆ. ಹಾಗಾಗಿ ಪ್ರೀತಿಯ ಬಗ್ಗೆ ಹೆಚ್ಚಿನ ಅಭಿಲಾಶೆಯನ್ನು ಹೊಂದಲು ಬಯಸುವರು. ಅದು ನೆರವೇರದೆ ಇದ್ದಾಗ ಅದರ ಬಗ್ಗೆ ನಕಾರಾತ್ಮಕ ಭಾವನೆ ತಳೆಯುವರು.

ವೃಷಭ
ಇವರು ಪ್ರೀತಿಯ ಬಗ್ಗೆ ಅಗಾದ ವಾದ ನಂಬಿಕೆಯನ್ನು ಇರಿಸುತ್ತಾರೆ. ನಿಜವಾದ ಮತ್ತು ಶುದ್ಧ ಪ್ರೀತಿಯನ್ನು ಅನುಸರಿಸುವವರ ನಡುವೆ ಇರಲು ಪ್ರಯತ್ನಿಸುತ್ತಾರೆ. ಇವರು ಹೆಚ್ಚು ಕಾಳಜಿ ವಹಿಸುವ ಜನರು ಹಾಗೂ ಆಳವಾದ ಪ್ರೀತಿಯನ್ನು ಹಂಚಿಕೊಳ್ಳುವುದನ್ನು ಇಷ್ಟಪಡುವವರು. ಹಾಗಾಗಿಯೇ ಇವರು ತಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ ಎನ್ನಲಾಗುವುದು.

ಕರ್ಕ
ಇವರು ಯಾವಾಗಲೂ ತಮ್ಮ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇವರು ತಮ್ಮ ಸಂಗಾತಿಯಾಗುವವರ ಜೊತೆ ಆಳವಾದ ಪ್ರೀತಿಯನ್ನು ಹೊಂದುವುದರ ಮೂಲಕ ಉತ್ತಮ ಕುಟುಂಬವನ್ನು ಸ್ಥಾಪಿಸಲು ಬಯಸುವರು. ಇವರು ಸಾಮಾನ್ಯವಾಗಿ ಎಲ್ಲಾ ವಿಚಾರದಲ್ಲೂ ಪ್ರೀತಿಯಿಂದ ಇರಲು ಅಥವಾ ಪ್ರೀತಿಯನ್ನು ಕಾಣಲು ಬಯಸುತ್ತಾರೆ. ಈ ಬಗೆಯಿಂದ ಜನರು ಇವರನ್ನು ಸ್ಫೂರ್ತಿದಾಯಕವಾಗಿಯೇ ಕಾಣಲು ಬಯಸುವರು.

ಮೇಷ
ಮೇಷ ರಾಶಿಯವರು ಪ್ರೀತಿಯಲ್ಲಿ ನಂಬಿಕೆ ಇಡುತ್ತಾರೆ. ಇವರು ಬಯಸುವ ಪ್ರೀತಿಯು ಮೃದು ಹಾಗೂ ಸೌಮ್ಯವಾದ ರೀತಿಯಲ್ಲಿಯೇ ಇರಬೇಕು ಎಂದು ಬಯಸುವುದಿಲ್ಲ. ಇವರು ಸದಾ ಸಾಂಪ್ರದಾಯಿಕ ರೀತಿಯಲ್ಲಿ ಪ್ರಣಯವನ್ನು ಹೊಂದಲು ಬಯಸುವರು. ಆದರೆ ಇದು ಎಲ್ಲಾ ಸಂದರ್ಭದಲ್ಲೂ ನಡೆಯಬೇಕು ಎಂದು ಪರಿಗಣಿಸುವುದು ತಪ್ಪಾಗಬಹುದು. ಭಾವೋದ್ರಿಕ್ತಕ್ಕೆ ಒಳಗಾದ ಸಂದರ್ಭದಲ್ಲಿ ಪ್ರಾಣಿಯ ರೀತಿಯಲ್ಲಿ ಪ್ರಣಯವನ್ನು ಹೊಂದಲು ಬಯಸಬಹುದು.

ವೃಶ್ಚಿಕ
ಇವರು ಭಾವೋದ್ರಿಕ್ತ ರೀತಿಯ ಪ್ರೀತಿಯನ್ನು ನಂಬುವ ವ್ಯಕ್ತಿಗಳಾಗಿರುತ್ತಾರೆ. ಏಕೆಂದರೆ ಇವರು ಪ್ರೀತಿಯ ವಿಚಾರದಲ್ಲಿ ಬಹಳ ಮುಕ್ತವಾಗಿರುತ್ತಾರೆ. ಇದರ ಅರ್ಥ ಯಾರೊಂದಿಗಾದರೂ ಬಹಳ ಸುಲಭವಾಗಿ ಪ್ರೀತಿಯಲ್ಲಿ ಮುಳುಗುತ್ತಾರೆ ಅಥವಾ ಪಸ್ತಾಪವನ್ನು ಇಡುತ್ತಾರೆ ಎಂದರ್ಥವಲ್ಲ. ಇವರು ಜೀವನದಲ್ಲಿ ವಾಸ್ತವಿಕತೆಗೆ ತಕ್ಕಂತೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಲು ಬಯಸುತ್ತಾರೆ ಎಂದು ಹೇಳಬಹುದು. ಆದರೆ ಪ್ರೀತಿಯ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುವುದು ಹಾಗೂ ನಂಬಿಕೆಯಿಂದ ಇರುವುದು ಉತ್ತಮ ಎನ್ನುವುದನ್ನು ಅರಿತಿರಬೇಕು.

ಸಿಂಹ
ಇವರು ಪ್ರೀತಿಯನ್ನು ನಂಬುತ್ತಾರೆ. ಆದರೆ ಅದು ದುಃಖಕರವಾದ ರೀತಿಯಲ್ಲಿ ಅಥವಾ ಅಶ್ಲೀಲತೆಯ ರೀತಿಯಲ್ಲಲ್ಲಾ ಎನ್ನಬಹುದು. ಪ್ರೀತಿಯ ಹೊರತಾಗಿ ಬದುಕಲು ಸಾಧ್ಯವಿಲ್ಲ ಎಂಬ ಪ್ರಕಾರದವರು ಇವರು. ಆಳವಾಗಿ ಭಾವೋದ್ವೇಗದಂತಹ ಪ್ರೀತಯನ್ನು ಸಹ ಇಷ್ಟಪಡುವರು ಇವರು. ಸ್ವಯಂ ಪ್ರೀತಿಯ ಬಗ್ಗೆ ತಿಳಿದಿರುವ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿರುತ್ತಾರೆ. ಹಾಗಾಗಿ ಇವರು ನಿಷ್ಕಪಟವಾದ ಪ್ರೌಢ ಪ್ರೀತಿಯನ್ನು ಬಯಸುತ್ತಾರೆ.

ತುಲಾ
ಇವರು ಕಾಲ್ಪನಿಕ ರೀತಿಯಲ್ಲಿ ಬರುವ ಪ್ರೀತಿಯನ್ನು ನಂಬುತ್ತಾರೆ. ಇವರು ತಾವು ಪ್ರೀತಿಯಲ್ಲಿ ನಿಷ್ಠೆಯನ್ನು ತೋರುವಂತೆ ಇತರರು ಸಹ ಇರಬೇಕು ಎಂದು ಬಯಸುವವರು. ಇವರ ನಿರೀಕ್ಷೆಯಂತೆ ಪ್ರೀತಿಯು ದೊರೆಯದಿದ್ದರೆ ಏಕಾಂಗಿಯಾಗಿಯೂ ಇರಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಲಾಗುವುದು. ಪ್ರೀತಿ, ಸಂಬಂಧ ಹಾಗೂ ಪಾಲುದಾರರ ವಿಚಾರದಲ್ಲಿ ಬಂದಾಗ ನಿಮ್ಮ ಪ್ರೀತಿಯನ್ನು ಹೇಗೆ ತೋರಿಸಬೇಕು ಎನ್ನುವುದನ್ನು ಮರೆತುಬಿಡುತ್ತಾರೆ. ಹಾಗಾಗಿ ಜೀವನದಲ್ಲಿ
ಯಾವುದು ಬಹುಮುಖ್ಯ ಎನ್ನುವುದುನ್ನು ಮೊದಲು ನಿರ್ಣಯಿಸಿಕೊಳ್ಳುವ ಅಗತ್ಯವಿದೆ.

ಧನು
ಇವರು ಸಾಮಾನ್ಯವಾಗಿ ವಾಸ್ತವಿಕತೆಯ ಬಗ್ಗೆ ಹೆಚ್ಚು ನಂಬಿಕೆ ಇಡುತ್ತಾರೆ. ಬದ್ಧತೆ, ಸಮರ್ಪಕತೆಯ ವಿಚಾರ ಎದುರಾದಾಗ ಇವರು ಮುಕ್ತ ಪ್ರೀತಿಯ ಆಳ ಹಾಗೂ ಅದರ ಅರ್ಥವನ್ನು ತಿಳಿದುಕೊಳ್ಳಬೇಕಾಗುವುದು. ಅನಗತ್ಯ ವಿಚಾರಗಳ ಮೇಲೆ ಹೆಚ್ಚಿನ ನಿರೀಕ್ಷೆ ಹಾಗೂ ಶ್ರಮವನ್ನು ವ್ಯಯಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.

ಮಕರ
ಇವರು ನಿಜವಾದ ಪ್ರೀತಿಯನ್ನು ನಂಬುವರು. ಅಂತೆಯೇ ತಾವು ಸಹ ನಿಸ್ವಾರ್ಥ ಪ್ರೀತಿಯನ್ನು ತೋರುವರು. ಆದರೆ ಹೆಚ್ಚಿನ ಸಂದರ್ಭದಲ್ಲಿ ನೀವು ಅಂದು ಕೊಂಡಂತಹ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಎಡವಬಹುದು. ಏಕೆಂದರೆ ನೀವು ನಿಮ್ಮ ವೃತ್ತಿ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಥವಾ ಕೆಲಸದಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವುದಾಗಿರಬಹುದು. ನೀವು ನಿಮ್ಮ ಜೀವನದಲ್ಲಿ ಆಯ್ಕೆಗಳು ಹಾಗೂ ಪ್ರೀತಿಯ ವಿಚಾರದಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕಾಗುವುದು. ಭಾವನೆಗಳನ್ನು ಮತ್ತು ಅವಕಾಶಗಳ ವಿಚಾರದಲ್ಲಿ ನಿರ್ಲಿಪ್ತತೆ ತೋರದಿರಿ.

ಕನ್ಯಾ
ಇವರು ಆಳವಾದ ಪ್ರೀತಿಯಲ್ಲಿ ಸಾಕಷ್ಟು ನಂಬಿಕೆಯನ್ನು ಇಡುತ್ತಾರೆ. ಇವರು ನಿತ್ಯದ ವಾಸ್ತವಿಕ ಜೀವನದಲ್ಲಿ ಹೇಗೆ ಇರುತ್ತಾರೆ ಎನ್ನುವುದನ್ನು ಸಹ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಕೆಲವು ಸನ್ನಿವೇಶಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಹಾಗೂ ಸರಿಯಾದ ಹರಿವಿನೊಂದಿಗೆ ಸಾಗುವುದು ಉತ್ತಮ ಎಂದು ಹೇಳಬಹುದು. ಪ್ರೀತಿಗೆ ಇವರು ಉತ್ತಮ ಸ್ಥಾನವನ್ನು ನೀಡುವುದರ ಜೊತೆಗೆ ಅದರ ನಿರ್ವಹಣೆಯಲ್ಲೂ ಮುಂದಾಗುವರು.

ಮಿಥುನ
ಇವರು ಬದ್ಧತೆಗಳಿಗೆ ಅನುಗುಣವಾಗಿ ವಿಷಯಗಳನ್ನು ಪ್ರಚೋದಿಸಲು ಬಯಸುತ್ತಾರೆ. ಒಂದು ಭಾಗದಲ್ಲಿ ಒಂದೇ ವ್ಯಕ್ತಿಯ ಮೇಲೆ ಹೆಚ್ಚಿನ ಗಮನವನ್ನು ಇಟ್ಟುಕೊಳ್ಳಲು ನೀವು ಆಶಿಸುವಿರಿ. ಇವರು ಬಯಕೆ ಉಂಟಾದಾಗಲೆಲ್ಲಾ ಡೇಟಿಂಗ್ ಮಾಡುತ್ತಾರೆ. ಇವರು ತಮ್ಮ ಭಾವನೆಗಳಲ್ಲಿ ಮುಕ್ತತೆ ಹೊಂದುವುರಿಂದ ಒಂದಿಷ್ಟು ಒಳ್ಳೆಯ ಸಮಯವನ್ನು ಅನುಭವಿಸಬಹುದು. ಕೆಲವೊಮ್ಮೆ ನೀವು ನಿಮ್ಮ ಅಭಿಪ್ರಾಯಗಳಿಂದ ಹೊರಬಂದು ಪ್ರೀತಿಯನ್ನು ಅನುಭವಿಸಿ.

ಕುಂಭ
ಇವರು ಪ್ರೀತಿಯ ಬಗ್ಗೆ ಒಂದಿಷ್ಟು ವಿರೋಧ ಭಾವನೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಮುಂಗೋಪಿಗಳಾದ ಇವರು ಸಾಕಷ್ಟು ಸಮಯದಲ್ಲಿ ಏಕಾಂಗಿಯಾಗಿರಲು ಬಯಸುತ್ತಾರೆ. ನಿಜವಾದ ಪ್ರೀತಿಯೆಂದರೆ ಅವರ ಕಲ್ಪನೆಯಂತೆ ಇರಬೇಕು ಎಂದು ಭಾವಿಸುವರು. ಇವರು ವಾಸ್ತವದಲ್ಲಿ ತಮ್ಮದೇ ಆದ ಮಾರ್ಗವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಇವರು ತಮ್ಮ ಮನಸ್ಸನ್ನು ಬದಲಾಯಿಸಿ ಪ್ರೀತಿಯ ಶಕ್ತಿ ಪ್ರಬಲವಾದದ್ದು ಎನ್ನುವುದನ್ನು ಅರಿಯಬೇಕು.



Click it and Unblock the Notifications











